For Quick Alerts
ALLOW NOTIFICATIONS  
For Daily Alerts

ಕರ್ಕರಾಶಿಗೆ ಸಂಚರಿಸಿದ ಶುಕ್ರ ಗ್ರಹ: 12 ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ

|

ಶುಕ್ರ ಗ್ರಹವನ್ನು ಪ್ರೀತಿ, ಸಂಬಂಧ, ಸೌಂದರ್ಯ ಮತ್ತು ಸಂತೋಷದ ಗ್ರಹ ಎಂದು ಹೇಳಲಾಗುವುದು. ಶುಕ್ರನ ಸ್ಥಾನವು ನಮ್ಮ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಶುಕ್ರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪ್ರಭಾವ ಆಯಾ ರಾಶಿಯ ಮೇಲಿರುತ್ತದೆ, ಕೆಲವರಿಗೆ ಅದು ಒಳ್ಳೆಯ ಸಮಯವಾದರೆ, ಇನ್ನು ಕೆಲವರಿಗೆ ಅದು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಸಮಯವಾಗಿರುತ್ತದೆ.

ಇದೀಗ ಶುಕ್ರ ಮಿಥುನ ರಾಶಿಯಿಂದ ಕರ್ಕ ರಾಶಿಗೆ ಜೂನ್‌ 22, ಮಧ್ಯಾಹ್ನ 2;07ಕ್ಕೆ ಪ್ರವೇಶಿಸಿದ್ದಾನೆ. ಜುಲೈ 17ರವರೆಗೆ ಶುಕ್ರ ಇದೇ ರಾಶಿಯಲ್ಲಿರಲಿದ್ದಾನೆ. ಇದರಿಂದಾಗಿ ನಿಮ್ಮ ರಾಶಿಯ ಮೇಲೆ ಬೀರಿರುವ ಪ್ರಭಾವವೇನು ಯಾವ ರಾಶಿಗಳಿಗೆ ಶುಭ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ ನೋಡಿ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯಲ್ಲಿ ಶುಕ್ರನು ನಾಲ್ಕನೇ ಮನೆಗೆ ಸಂಚರಿಸಿದ್ದಾನೆ. ಈ ಸಾಗಣೆಯ ಸಮಯದಲ್ಲಿ, ಮೇಷ ರಾಶಿಯವರು ಶಾಂತಿಯುತ ವಾತಾವರಣಕ್ಕಾಗಿ ಹಂಬಲಿಸುತ್ತಾರೆ ಮತ್ತು ಸಾಮಾಜಿಕವಾಗಿ ಸಕ್ರಿಯರಾಗಿರುವುದಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಆರ್ಥಿಕವಾಗಿ, ಈ ಅವಧಿಯಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ, ಮನೆಯ ಪ್ರಮುಖ ಕೆಲಸಗಳಿಗೆ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನೀವು ಕಾಳಜಿ ವಹಿಸುವಿರಿ ಮತ್ತು ನೀವು ಸಹ ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ನಿಮ್ಮ ವೃತ್ತಿಪರ ಜೀವನವನ್ನು ನೋಡಿದಾಗ ಕಾರ್ಯ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಬರಬಹುದು, ಈ ಸಮಯದಲ್ಲಿ ನೀವು ಲಾಭ ಗಳಿಸಲು ಸಾಧ್ಯವಾಗುತ್ತದೆ.ಈ ಅವಧಿಯಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಪ್ರೇಮಿಯಾಗಿದ್ದರೆ ಪ್ರೀತಿಯ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗುತ್ತದೆ. ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ.

ಪರಿಹಾರ: ಇತರರಿಂದ ಉಡುಗೊರೆಗಳನ್ನು ಅಥವಾ ಯಾವುದನ್ನೂ ಉಚಿತವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಿ.

ವೃಷಭ ರಾಶಿ

ವೃಷಭ ರಾಶಿ

ವೃ‍ಷಭ ರಾಶಿಯಲ್ಲಿ ಶುಕ್ರನು ಮೂರನೇ ಮನೆಗೆ ಸಂಚರಿಸಿದೆ. ಪ್ರೀತಿಯ ಸಂಬಂಧ ಖುಷಿಯಾಗಿರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಈ ಸಾಗಣೆ ಅನುಕೂಲಕರವಾಗಿದೆ.ಈ ಅವಧಿಯಲ್ಲಿ ನೀವು ತುಂಬಾ ಮಹತ್ವಾಕಾಂಕ್ಷಿಯಾಗುವುದನ್ನು ತಪ್ಪಿಸಬೇಕು, ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ ಮತ್ತು ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸುವುದರ ಮೂಲಕವೂ ನೀವು ಲಾಭವನ್ನು ಗಳಿಸಬಹುದು. ಮೂರನೇ ಮನೆಯಲ್ಲಿ ಶುಕ್ರನ ಸಾಗಣೆ ನಿಮ್ಮಲ್ಲಿ ಸ್ವಲ್ಪ ಗೊಂದಲವನ್ನು ಉಂಟುಮಾಡುತ್ತದೆ.

ಈ ಅವಧಿಯಲ್ಲಿ ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ತುಂಬಾ ಉತ್ತಮವಾಗಿರುತ್ತದೆ . ಈ ಅವಧಿಯಲ್ಲಿ ವೃಷಭ ರಾಶಿಯ ವ್ಯಾಪಾರಿಗಳು ಲಾಭ ಗಳಿಸುವ ಸಾಧ್ಯತೆಯಿದೆ. ವಿದ್ಯಾರ್ರಥಿಗಳಿಗೆ ತಮ್ಮ ಶಿಕ್ಷಣದ ಕಡೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಪರಿಹಾರ: ಶುದ್ಧ ಹಸುವಿನ ತುಪ್ಪವನ್ನು ಯಾವುದೇ ಧಾರ್ಮಿಕ ಸ್ಥಳಕ್ಕೆ ದಾನ ಮಾಡಿ ಹಾಗೂ ಅದನ್ನು ನಿಮ್ಮ ಅಡುಗೆಮನೆಯಲ್ಲಿ ನಿಯಮಿತವಾಗಿ ಬಳಸಲು ಪ್ರಾರಂಭಿಸಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಶುಕ್ರನು ಎರಡನೇ ಮನೆಗೆ ಸಂಚರಿಸಿದೆ. ಈ ಸಾಗಣೆ ಕುಟುಂಬ ಜೀವನಕ್ಕೆ ಅನುಕೂಲಕರವಾಗಿದೆ, ನೀವು ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವಿದ್ಯಾರ್ಥಿಗಳಿಗೂ ಉತ್ತಮ ಫಲಿತಾಂಶಗಳನ್ನು ತರಬಹುದು . ಪ್ರೀತಿ ಸಂಬಂಧದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವ ಸಾಧ್ಯತೆಯಿದೆ, ವಿವಾಹಿತರು ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ರಾಶಿಚಕ್ರದ ವ್ಯಾಪಾರಿಗಳು ಮತ್ತು ವಿಶೇಷವಾಗಿ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಈ ಸಾಗಣೆಯ ಸಮಯದಲ್ಲಿ ಮಿಥುನ ರಾಶಿಯವರು ಸಣ್ಣ ಟ್ರಿಪ್ ಕೂಡ ಮಾಡಬಹುದು, ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಪರಿಹಾರ: ನಕಾರಾತ್ಮಕತೆಯನ್ನು ತೊಡೆದುಹಾಕಲು, ಮನೆಯೊಳಗೆ ಪ್ರತಿದಿನ ಸಂಜೆ ಕರ್ಪೂರ ಬೆಳಗಿ

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಗೆ ಶುಕ್ರ ಸಂಚಾರವಾಗುತ್ತಿದೆ. ಶುಕ್ರನು ಕರ್ಕ ರಾಶಿಯವರ ಮೊದಲನೇ ಮನೆಯಲ್ಲಿ ಇರುವುದರಿಂದ ಈ ಸಾಗಣೆಯ ಸಮಯದಲ್ಲಿ ನಿಮ್ಮ ಬೌದ್ಧಿಕ ಸಾಮರ್ಥ್ಯ ಮತ್ತಷ್ಟು ಸುಧಾರಿಸುವುದು . ಆರ್ಥಿಕವಾಗಿಈ ಅವಧಿಯಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಈ ಸಮಯದಲ್ಲಿ ಅನಗ್ಯತ ಖರ್ಚು ತಪ್ಪಿಸಿ ಹಾಗೂ ಹಣವನ್ನು ಹೂಡಿಕೆ ಮಾಡುವುದಾದರೆ ನೀವು ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳಬೇಕು. ವೃತ್ತಿಪರವಾಗಿ ನೀವು ವಿದೇಶಿ ಸಹಕಾರದಿಂದ ಲಾಭ ಪಡೆಯಬಹುದು. ಈ ಅವಧಿ ವ್ಯವಹಾರ ಮತ್ತು ಸಹಭಾಗಿತ್ವಕ್ಕೂ ಅನುಕೂಲಕರವಾಗಿರುತ್ತದೆ. ನೀವು ಆಸ್ತಿ ಅಥವಾ ಹಳೆಯ ವಸ್ತುಗಳ ಮೇಲೆ ಯಾವುದೇ ಹೂಡಿಕೆ ಮಾಡಿದ್ದರೆ ಈ ಸಾಗಣೆಯ ಸಮಯದಲ್ಲಿ ನೀವು ಸಾಕಷ್ಟು ಲಾಭವನ್ನು ಗಳಿಸುವಿರಿ. ವಿವಾಹಿತರ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿದರೆ ಎಲ್ಲಾ ಸರೊ ಹೋಗುವುದು. ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ ಮತ್ತು ಆಹಾರದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಪರಿಹಾರ: ಶುಕ್ರವನ್ನು ಬಲಪಡಿಸಲು, ಬಿಳಿ ಹೂವುಗಳನ್ನು ನದಿಯಲ್ಲಿ ಬಿಡುವುದು ಪ್ರಯೋಜನಕಾರಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ 12ನೇ ಮನೆಗೆ ಶುಕ್ರ ಸಂಚಾರವಾಗಿದೆ. ವಿದೇಶದಲ್ಲಿ ಅಥವಾ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರು ಈ ಸಾಗಣೆಯ ಸಮಯದಲ್ಲಿ ಲಾಭ ಪಡೆಯುವ ನಿರೀಕ್ಷೆಯಿದೆ. ಈ ರಾಶಿಯ ಕೆಲವರು ವಿದೇಶ ಪ್ರವಾಸಕ್ಕೆ ಸಹ ಅವಕಾಶವನ್ನು ಪಡೆಯಬಹುದು ಮತ್ತು ಇದರಿಂದ ಅವರು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸಿನ ದೃಷ್ಟಿಯಿಂದ ಹೇಳುವುದಾದರೆ ಸಾಧ್ಯವಾದಷ್ಟೂ ಕಡಿಮೆ ಖರ್ಚು ಮಾಡಲು ಪ್ರಯತ್ನಿಸಿ. ಹಣಕಾಸಿನ ಲಾಭದ ಸಾಧ್ಯತೆಯಿದೆ ಆದರೆ ವೆಚ್ಚಗಳು ಸಹ ಹೆಚ್ಚಾಗುವುದರಿಂದ ಪರಿಸ್ಥಿತಿಯನ್ನು ಸಮತೋಲನಗೊಳಿಸುವುದು ಕಷ್ಟವಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ, ನೀವು ಎಲ್ಲೆಡೆ ನಕಾರಾತ್ಮಕತೆಯಿಂದ ಸುತ್ತುವರೆದಿರುವಿರಿ ಮತ್ತು ಕುಟುಂಬ ಜೀವನದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗಿನ ವಿವಾದಗಳನ್ನು ಸಹ ನೀವು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಚೆನ್ನಾಗಿ ಕಾಳಜಿ ವಹಿಸಿ ಯಾವುದೇ ಸಮಸ್ಯೆ ಇದ್ದರೆ ಸೂಕ್ತ ತಜ್ಞರನ್ನು ಕಾಣಿ.

ಪರಿಹಾರ: ಓಂ ಶುಕ್ರೇ ನಮಃ ಎಂದು ಪ್ರತಿದಿನ ಪಠಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾರಾಶಿಯವರಲ್ಲಿ ಹನ್ನೊಂದನೇ ಮನೆಗೆ ಸಂಚರಿಸಿದೆ. ಈ ಸಾಗಣೆಯ ಸಮಯದಲ್ಲಿ, ನಿಮ್ಮ ಹಿರಿಯ ಸಹೋದರರಿಂದ ನೀವು ಸ್ವಲ್ಪ ಒತ್ತಡವನ್ನು ಅನುಭವಿಸಬಹುದು. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಮತ್ತುಅದರಲ್ಲಿ ಬಹುಮಾನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಸಾಮಾಜಿಕವಾಗಿ ಸಕ್ರೀಯರಾಗಿರುತ್ತೀರಿ. ಆರ್ಥಿಕವಾಗಿ ಹೇಳುವುದಾದರೆ ಆದಾಯದಲ್ಲಿ ಸ್ಥಿರವಾದ ಹೆಚ್ಚಳವನ್ನು ಪಡೆಯಬಹುದು. ಈ ಸಮಯವು ಪ್ರೀತಿ ಮತ್ತು ವಿವಾಹಿತ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.

ಪರಿಹಾರ: ಶುಕ್ರವಾರ ಸುಗಂಧ ದ್ರವ್ಯ ಮತ್ತು ಬೆಳ್ಳಿ ಆಭರಣಗಳನ್ನು ಬಳಸಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ 10ನೇ ಮನೆಗೆ ಶುಕ್ರ ಸಂಚರಿಸಿದೆ. ಈ ಸಾಗಣೆಯ ಸಮಯದಲ್ಲಿ ನೀವು ಕೆಲವು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಹಾಗೂ ಜೀವನದಲ್ಲಿ ಇತರ ಕೆಲವು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕವಾಗಿ ನೀವು ಹಣದ ಕೊರತೆಯನ್ನು ಎದುರಿಸಬಹುದು ಮತ್ತು ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ವೃತ್ತಿಪರವಾಗಿ ನಿಮ್ಮ ಕೆಲಸದಲ್ಲಿ ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದು ಒಳ್ಳೆಯದು. ಸಂಬಂಧದ ವಿಷಯದಲ್ಲಿ ವಿವಾದವನ್ನು ಹೊಂದಿರಬಹುದು. ಈ ಸಾಗಣೆಯ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನದ ಹೊರತಾಗಿ ಬೇರೆ ಕೆಲವು ಕೆಲಸಗಳಲ್ಲಿ ನಿರತರಾಗಿರುತ್ತಾರೆ, ಇದರಿಂದಾಗಿ ಅವರು ಅಧ್ಯಯನಗಳತ್ತ ಗಮನ ಹರಿಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಪರಿಹಾರ: ಶುಕ್ರವಾರ ಸುಗಂಧ ದ್ರವ್ಯ ದಾನ ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಶುಕ್ರ ಒಂಭತ್ತನೇ ಮನೆಗೆ ಸಾಗಿದೆ. ನೀವು ವಿದೇಶಿ ಸಂಬಂಧಗಳ ಮೂಲಕ ಲಾಭ ಗಳಿಸಬಹುದು ಹಾಗೂ ಧಾರ್ಮಿಕ ಚಟುವಟಿಕೆಗಳತ್ತ ಒಲವು ತೋರುತ್ತೀರಿ. ಈ ಸಮಯದಲ್ಲಿ ನೀವು ಇತರರಿಗೆ ಸಹಾಯ ಮಾಡಲು ಸಹ ಮುಂದೆ ಬರುತ್ತೀರಿ. ಶುಕ್ರನ ಈ ಸಾಗಣೆಯ ಸಮಯದಲ್ಲಿ ಆತ್ಮಾವಲೋಕನ ಕೂಡ ಮಾಡುವಿರಿ ಹಾಗೂ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತೀರಿ. ಉದ್ಯಮಿಗಳು ವ್ಯವಹಾರದಲ್ಲಿ ಹೊಸ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಮಾಡುವ ಮೂಲಕ ಲಾಭ ಗಳಿಸಬಹುದು ಮತ್ತು ಉದ್ಯೋಗಿಗಳಿಗೆ ಈ ಅವಧಿಯಲ್ಲಿ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಈ ಅವಧಿಯಲ್ಲಿ ಚರ್ಮದ ಸೋಂಕಿನ ಸಮಸ್ಯೆ ಬರಬಹುದು.

ಪರಿಹಾರ: ಶುಕ್ರ ಬೀಜ ಮಂತ್ರ ಜಪಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಶುಕ್ರ 8ನೇ ಮನೆಗೆ ಸಂಚರಿಸಿದೆ. ಈ ಸಾಗಣೆಯ ಸಮಯದಲ್ಲಿ ಕಲಿ ಸ್ನೇಹಿತರು ಮತ್ತು ವಿರೋಧಿಗಳಿಂದ ಮೋಸ ಹೋಗದಂತೆ ಬಹಳ ಜಾಗರೂಕರಾಗಿರಬೇಕು. ಹಠಾತ್ ಲಾಭ ಅಥವಾ ನಷ್ಟದ ಸಾಧ್ಯತೆಯಿದೆ. ಮನೆಯಲ್ಲಿ, ಜನರ ವರ್ತನೆ ಸ್ವಲ್ಪ ಭಿನ್ನವಾಗಿರುತ್ತದೆ, ಈ ಕಾರಣದಿಂದಾಗಿ ನೀವು ಅವರೊಂದಿಗೆ ಹೊಂದಾಣಿಕೆ ಮಾಡಲು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಶಿಕ್ಷಣವನ್ನು ಪಡೆಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಲು ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ, ಇದಲ್ಲದೆ ಈ ಸಾಗಣೆಯ ಸಮಯದಲ್ಲಿ ನೀವು ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಬೇಕು; ಇಲ್ಲದಿದ್ದರೆ, ನೀವು ಆ ಮೊತ್ತವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ಈ ರಾಶಿಚಕ್ರದ ಜನರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಂಗಾತಿಯ ಆರೋಗ್ಯದ ಕಡೆಯೂ ಗಮನ ಹರಿಸಬೇಕು.

ಪರಿಹಾರ: ಲಲಿತ ಸಹಸ್ರನಾಮ ಪಠಣ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಶುಕ್ರ ಏಳನೇ ಮನೆಗೆ ಸಾಗಿದೆ. ಈ ಸಾಗಣೆಯ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನವು ಗಮನಾರ್ಹವಾಗಿ ಸುಧಾರಿಸುತ್ತದೆ, ಪ್ರೇಮಿಗಳಿಗೂ ಸಮಯ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ವೃತ್ತಿಪರ ಜೀವನದಲ್ಲಿಯೂ ಅನುಕೂಲಕರ ಬದಲಾವಣೆಗಳು ಬರಲಿವೆ ಹಾಗೂ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕವಾಗಿ, ನಿಮ್ಮ ಜೀವನದಲ್ಲಿ ಸ್ಥಿರತೆ ಇರುತ್ತದೆ ಮತ್ತು ಇತ್ತೀಚಿನ ಹೂಡಿಕೆಗಳು ನಿಮಗೆ ಲಾಭವನ್ನು ನೀಡಬಹುದು. ಈ ಅವಧಿಯಲ್ಲಿ ಉದ್ವಿಗ್ನತೆ ಮತ್ತು ಗೊಂದಲವು ಹೆಚ್ಚಾಗುವುದರಿಂದ ವಿದ್ಯಾರ್ಥಿಗಳು ಈ ಸಾಗಣೆಯ ಸಮಯದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಒಲವು ತೋರುತ್ತೀರಿ. ಇದಲ್ಲದೆ, ಕಲೆ ಮತ್ತು ಸೃಜನಶೀಲತೆ ಕ್ಷೇತ್ರದಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಬಗ್ಗೆ ಹೇಳುವುದಾದರೆ ಏನೂ ದೊಡ್ಡ ತೊಂದರೆಯಿಲ್ಲ, ಆರೋಗ್ಯಕರ ಜೀವನಶೈಲಿ ಪಾಲಿಸಿ.

ಪರಿಹಾರ: ಹೆಣ್ಮಕ್ಕಳ ಶಿಕ್ಷಣಕ್ಕೆ ಅಥವಾ ಮದುವೆಗೆ ದಾನ ಮಾಡಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯಲ್ಲಿ ಶುಕ್ರನು 6 ನೇ ಮನೆಗೆ ಸಂಚರಿಸಿದೆ. ಈ ಸಾಗಣೆಯ ಸಮಯದಲ್ಲಿ ನೀವು ತುಂಬಾ ಶ್ರಮವಹಿಸಬೇಕಾಗಿದೆ, ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಕೆಲವು ಹೊಸ ಅವಕಾಶಗಳು ಬರಬಹುದು. ನೀವು ಕಾರ್ಯನಿರತರಾಗಿರುತ್ತೀರಿ. ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ, ಏನಾದರೂ ಸಮಸ್ಯೆ ಇದ್ದರೆ ಅದನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಪ್ರಯತ್ನಿಸಿ. ಪ್ರೀತಿಯಲ್ಲಿ ಇರುವವರಿಗೆ ಈ ಅವಧಿ ಒಳ್ಳೆಯದು ಎಂದು ಹೇಳಲಾಗುವುದಿಲ್ಲ, ಏಕೆಂದರೆ ಈ ಅವಧಿಯಲ್ಲಿ ಜಗಳಗಳು ಹೆಚ್ಚಾಗಬಹುದು ಮತ್ತು ಮನೆಯಲ್ಲಿ ಉದ್ವಿಗ್ನತೆಯಿಂದಾಗಿ ನೀವು ಅಶಾಂತಿಯನ್ನು ಸಹ ಅನುಭವಿಸಬಹುದು. ಹಣಕಾಸಿನ ದೃಷ್ಟಿಯಿಂದ ನೋಡಿದರೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಆದ್ದರಿಂದ ಅನಗತ್ಯ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಹಣವನ್ನು ಉಳಿಸಲು ಉತ್ತಮ ಬಜೆಟ್ ಅನ್ನು ಯೋಜಿಸಿ. ಆರೋಗ್ಯವಾಗಿರಲು ದೈಹಿಕವಗಿ ಚಟುವಟಿಕೆಯಿಂದ ಇರಿ,

ಪರಿಹಾರ: ಶುಕ್ರವಾರ ಬಡವರಿಗೆ ಹಾಲು ದಾನ ಮಾಡುವುದರಿಂದ ನಿಮಗೆ ತುಂಬಾ ಪ್ರಯೋಜನವಾಗುತ್ತದೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯಲ್ಲಿ ಶುಕ್ರನು 5ನೇ ಮನೆಗೆ ಸಂಚರಿಸಿದೆ. ಈ ಅವಧಿಯು ಮೀನ ರಾಶಿಯ ಜನರಿಗೆ ಅನುಕೂಲಕರವಾಗಿರುತ್ತದೆ ಏಕೆಂದರೆ ಈ ರಾಶಿಯವರು ಲಾಭ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ, ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ವೈವಾಹಿಕ ಹಾಗೂ ಪ್ರಣಯ ಜೀವನಕ್ಕೆ ಅನುಕೂಲಕರವಾಗಿದೆ. ಆರ್ಥಿಕವಾಗಿ, ಈ ಅವಧಿಯಲ್ಲಿ ನೀವು ಉತ್ತಮ ಲಾಭಗಳನ್ನು ಗಳಿಸಬಹುದು ಮತ್ತು ನಿಮ್ಮ ವೆಚ್ಚಗಳು ಸಹ ನಿಯಂತ್ರಣದಲ್ಲಿರುತ್ತದೆ. ಉದ್ಯೋಗಸ್ಥರು ಸಮಯಕ್ಕೆ ಅನುಗುಣವಾಗಿ ತಮ್ಮ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಕೆಲವು ಆಸ್ತಿ ಸಂಬಂಧಿತ ವಿವಾದಗಳು ಇರಬಹುದು ಅಥವಾ ಕೆಲವು ಕುಟುಂಬ ಸದಸ್ಯರ ಹಠಮಾರಿ ವರ್ತನೆಯಿಂದ ನೀವು ಅಸಮಾಧಾನಗೊಳ್ಳಬಹುದು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.

ಪರಿಹಾರ: ಸಕಾರಾತ್ಮಕ ಫಲಿತಾಂಶಕ್ಕಾಗಿ ಶುಕ್ರವಾರ ಶ್ರೀಗಂಧವನ್ನು ಹಣೆಗೆ ಹಚ್ಚಿ.

English summary

Venus Transit in Cancer On 22 June 2021 Effects on Zodiac Signs in kannada

Venus Transit in Cancer Effects on Zodiac Signs in kannada: The Venus Transit in Cancer will take place on 22 June 2021. Learn about remedies to perform in kannada
Story first published: Tuesday, June 22, 2021, 19:30 [IST]
X