For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯ ನಿಮ್ಮದಾಗಬೇಕಾದರೆ ಈ ವಾಸ್ತು ಸಲಹೆಗಳನ್ನು ಪಾಲಿಸಿ..

|

ಆರೋಗ್ಯ ಭಾಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ. ಆರೋಗ್ಯ ಸರಿಯಿದ್ದರೆ ಮಾತ್ರ ಆಸ್ತಿ, ಪಾಸ್ತಿ ಎಲ್ಲವೂ. ಕೋಟಿ ಕೋಟಿ ಇದ್ದು, ಆರೋಗ್ಯವೇ ಸರಿಯಿಲ್ಲದಿದ್ದರೆ ಏನು ಪ್ರಯೋಜನ ಅಲ್ವಾ?. ವಾಸಿಸುವ ಸ್ಥಳದ ವಾಸ್ತು ಎಂದರೆ ಉತ್ತಮ ಆರೋಗ್ಯ ಮತ್ತು ಸರ್ವತೋಮುಖ ಸಮೃದ್ಧಿಯನ್ನು ಸಂಪಾದಿಸುವುದಾಗಿದೆ.

ನಿಖರವಾಗಿ ವಾಸ್ತು ನಿಯಮಗಳ ಆಧಾರದ ಮೇಲೆ ನಿರ್ಮಿಸಲಾದ ಮನೆ ಜೀವನದ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯನ್ನು ಪಡೆಯುತ್ತದೆ. ವಾಸ್ತು ಅನುಗುಣವಾದ ರಚನೆಯು ನಿಮಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಆರೋಗ್ಯ, ಸಂಪತ್ತು ಮತ್ತು ಸಾಮರಸ್ಯವನ್ನು ನೀಡುತ್ತದೆ. ಸಾಮಾನ್ಯವಾಗಿ ವಾಸ್ತುವಿನ ತತ್ವಗಳನ್ನು ಅನುಸರಿಸಲಾಗುತ್ತದೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ನಿವಾಸಿಗಳು ನಿವೇಶನ ಬದಲಾಯಿಸಿದ ತಕ್ಷಣ ನೈಸರ್ಗಿಕವಾಗಿ ಗುಣವಾಗಿರುವಂಥಹ ಅನೇಕ ನಿದರ್ಶನಗಳು ಸಿಗುತ್ತವೆ.

Vastu Tips For Good Health Of You And Your Family

ಪ್ರತಿಯೊಂದು ಮನೆಯಲ್ಲೂ ಒಂದಲ್ಲ ಒಂದು ರೀತಿಯ ವಾಸ್ತು ದೋಷ ಇರುತ್ತದೆ. ಈ ವಿಚಾರ ತಿಳಿಯದ ಆ ಮನೆಯ ನಿವಾಸಿಗಳು ಅಲ್ಲೇ ವಾಸಿಸುತ್ತಿರುತ್ತಾರೆ, ಅಷ್ಟೇ ಅಲ್ಲ ಹಲವಾರು ಸಮಸ್ಯೆಗಳಿಗೆ ಗುರಿಯಾಗಿರುತ್ತಾರೆ. ಈ ಸಮಸ್ಯೆಗೆ ವಾಸ್ತು ಕಾರಣ ಎಂಬುದನ್ನು ಅರಿತುಕೊಳ್ಳಲು ಅವರಿಗೆ ಕಷ್ಟವಾಗುತ್ತದೆ.

ತ್ವರಿತ ಚೇತರಿಕೆ ಮತ್ತು ದೀರ್ಘಕಾಲದ ಕಾಯಿಲೆಯನ್ನು ಎದುರಿಸಲು ವಾಸ್ತು ಕ್ರಮಗಳು ಅನುಕೂಲಕರವಾಗಿವೆ. ಉತ್ತಮ ಆರೋಗ್ಯ ಮತ್ತು ಸಂಪತ್ತನ್ನು ಸಾಧಿಸಲು ಮನೆಯಲ್ಲಿ ಅನುಸರಿಸಬೇಕಾದ ಕೆಲವು ನಿಗದಿತ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಕೆಲವು ವಾಸ್ತು ಸಲಹೆಗಳು:

ವಾಸ್ತು ಪ್ರಕಾರ ಎಲ್ಲಿ ಮಲಗಬಾರದು

ವಾಸ್ತು ಪ್ರಕಾರ ಎಲ್ಲಿ ಮಲಗಬಾರದು

ಯಾವಾಗಲೂ ದಕ್ಷಿಣ ಅಥವಾ ಪೂರ್ವದ ಕಡೆಗೆ ತಲೆ ಹಾಕಿ ಮಲಗಿಕೊಳ್ಳಿ.

ತುಂಬಾ ಬೆಳಕಿನ ಕೆಳಗಡೆ ಕುಳಿತುಕೊಳ್ಳಬೇಡಿ ಅಥವಾ ಮಲಗಬೇಡಿ.

ನೀವು ಊಟ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ.

ಅಡುಗೆ ಮನೆ

ಅಡುಗೆ ಮನೆ

ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಉತ್ತಮ.

ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಕಾರಣ ಈಶಾನ್ಯದಲ್ಲಿ ಅಡುಗೆ ಮನೆ ಮಾಡಬೇಡಿ.

ಈಶಾನ್ಯವು ಹರಿಯುವ ನೀರಿಗೆ ಮೂಲೆಯಾಗಿದೆ, ಆದ್ದರಿಂದ ನೀರಿನ ಮೂಲವನ್ನು ಇಲ್ಲಿ ಇರಿಸಿ.

ನಿದ್ದೆ

ನಿದ್ದೆ

ನೈಋತ್ಯ ದಿಕ್ಕನ್ನು ವಯಸ್ಸಾದವರಿಗೆ ಅಥವಾ ಮನೆಯ ಮುಖ್ಯ ಮಾಲೀಕರಿಗೆ ಉತ್ತಮ ಆರೋಗ್ಯದಿಂದಿರಲು ಬಿಟ್ಟು ಕೊಡಬೇಕು.

ಉತ್ತಮ ನಿದ್ರೆ ಹೊಂದಲು, ಮೊಬೈಲ್ ಫೋನ್ ಮತ್ತು ಇತರ ಯಾವುದೇ ಗ್ಯಾಜೆಟ್ ಗಳನ್ನು ಹಾಸಿಗೆಯಿಂದ ದೂರವಿಡಿ. ಹಾಸಿಗೆಯ ಕೆಳಗೆ ಕಬ್ಬಿಣದ ವಸ್ತುಗಳನ್ನು ಇಡುವುದರಿಂದ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಬಿದಿರು ಗಿಡ ಬೆಳೆಸಬೇಡಿ

ಬಿದಿರು ಗಿಡ ಬೆಳೆಸಬೇಡಿ

ಮನೆಯಲ್ಲಿ ಬಿದಿರಿನ ಗಿಡಗಳನ್ನು ಬೆಳೆಸುವುದು ಅಶುಭ. ಆದ್ದರಿಂದ ಅದನ್ನು ತಪ್ಪಿಸಿ.

ಮನೆಯಲ್ಲಿ ಟಿವಿ ನೋಡಿದ ಬಳಿಕ ಕವರ್ ಮಾಡಿ ಇಡಿ, ಲ್ಯಾಪ್‌ಟಾಪ್, ಕಂಪ್ಯೂಟರ್ ಪರದೆ ಮುಚ್ಚಿಡಿ.

ಅಡುಗೆ ಮನೆ ಮತ್ತು ಶೌಚಾಲಯವನ್ನು ಒಟ್ಟಿಗೆ ನಿರ್ಮಿಸುವುದನ್ನು ತಪ್ಪಿಸಿ ಮತ್ತು ಎರಡೂ ಸ್ಥಳಗಳು ಪರಸ್ಪರ ಗರಿಷ್ಠ ಅಂತರವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಅಡುಗೆ ಮನೆ ಮತ್ತು ಶೌಚಾಲಯದ ಮೇಲೆ ಕೋಣೆ ಇರಬಾರದು

ಅಡುಗೆ ಮನೆ ಮತ್ತು ಶೌಚಾಲಯದ ಮೇಲೆ ಕೋಣೆ ಇರಬಾರದು

ಮೆಟ್ಟಿಲಿನ ಕೆಳಗಿರುವ ಸ್ಥಳವನ್ನು ಶೇಖರಣೆಗಾಗಿ ಬಳಸಬೇಕು ಆದರೆ ಅಡುಗೆಮನೆ, ಶೌಚಾಲಯ ಮುಂತಾದ ಸ್ಥಳವನ್ನು ಇಲ್ಲಿ ಇರದಂತೆ ನೋಡಿಕೊಳ್ಳಿ. ಅಡಿಗೆ ಮತ್ತು ಶೌಚಾಲಯದ ಮೇಲೆ ಅಥವಾ ಕೆಳಗೆ ಯಾವುದೇ ಕೊಠಡಿ ಇರಬಾರದು.

ಹಾಸಿಗೆಯನ್ನು ಗೋಡೆಯಿಂದ ಮೂರು ಇಂಚು ದೂರದಲ್ಲಿ ಇರಿಸಿ.

Read more about: vastu family
English summary

Vastu Tips For Good Health Of You And Your Family

Vastu follows some prescribed norms that must be followed in a house to achieve good health and wealth. Here are enumerated some Vastu principles to keep your health in good condition, have a look
X
Desktop Bottom Promotion