For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ

|

ಮಕ್ಕಳ ಕೋಣೆ ಎಂಬುದು ಮನೋರಂಜನೆ, ವಿನೋದ ಮತ್ತು ಉಲ್ಲಾಸದ ಕೇಂದ್ರವಾಗಿದೆ. ಆದರೆ ನಿಮ್ಮ ಮಗುವನ್ನು ಆಲ್ ರೌಂಡರ್ ಮಾಡಲು ಕೆಲವು ಮೂಲಭೂತ ವಿಷಯಗಳ ಕಡೆಗೆ ಗಮನಹರಿಸಬೆಕು. ಸ್ಟಡಿ ಟೇಬಲ್, ಹಾಸಿಗೆ, ಸ್ನಾನಗೃಹ, ಗಡಿಯಾರ, ಕಿಟಕಿಗಳು, ಬಾಗಿಲು ಮುಂತಾದವುಗಳು ಸರಿಯಾದ ಜಾಗದಲ್ಲಿ ಇರುವಂತೆ ವಾಸ್ತುವು ಸೂಚಿಸುತ್ತದೆ.

ಈ ಎಲ್ಲಾ ವಿಷಯಗಳನ್ನು ಸರಿಯಾಗಿ ಇಡುವುದರಿಂದ ಮಕ್ಕಳ ಮನಸ್ಸಿನಲ್ಲಿ ಹೆಚ್ಚು ಧನಾತ್ಮಕತೆ ಮೂಡಿ, ಅಧ್ಯಯನಕ್ಕೆ ಸಹಾಯ ಆಗುತ್ತದೆ. ಪೋಷಕರು ತಮ್ಮ ಪ್ರಗತಿಯನ್ನು ನೋಡಲು ಸದಾ ಕಾತುರದಲ್ಲಿರುತ್ತಾರೆ. ಆಅದರೆ ಮಕ್ಕಳ ಕೋಣೆಯಲ್ಲಿರುವ ವಾಸ್ತು ದೋಷವು ಮಕ್ಕಳ ಮನಸ್ಸಲ್ಲಿ ನಕಾರಾತ್ಮಕತೆ ಉಂಟಾಗಲು ಕಾರಣವಾಗುತ್ತದೆ.

ಆದ್ದರಿಂದ ನಿಮ್ಮ ಮಕ್ಕಳ ಕೋಣೆಯು ವಾಸ್ತು ಪ್ರಕಾರ ಇದೆಯಾ ಎಂಬುದನ್ನು ನೋಡಿಕೊಳ್ಳಿ. ಇದರಿಂದ ನಿಮ್ಮ ಮಗು ಉತ್ತಮವಾಗಿ ಅಭಿವೃದ್ಧಿ ಆಗುವುದನ್ನು ನೀವೆ ನೋಡಬಹುದು.

ಮಕ್ಕಳ ಕೋಣೆಗೆ ವಾಸ್ತುವಿನ ಕೆಲವು ಸಲಹೆಗಳು ಹೀಗಿವೆ:

 Vastu Tips For Children Room In Kannada

1. ಮಕ್ಕಳ ಕೋಣೆಗೆ ಪ್ರಮುಖ ಹಾಗೂ ಸೂಕ್ತ ದಿಕ್ಕುಗಳೆಂದರೆ ಉತ್ತರ, ಪೂರ್ವ. ಈ ದಿಕ್ಕಿನಲ್ಲಿ ನಿಮ್ಮ ಮಗುವಿನ ಕೋನೆ ನಿರ್ಮಿಸಿ.
2. ಕೋಣೆಯ ನೈಋತ್ಯ ಭಾಗದಲ್ಲಿ ಹಾಸಿಗೆಯನ್ನು ಇರಿಸಿ ಮತ್ತು ನಿಮ್ಮ ಮಗುವಿಗೆ ಮನಸ್ಸಿನ ಶಾಂತಿಗಾಗಿ ದಕ್ಷಿಣ ಹಾಗೂ ಪೂರ್ವದ ಕಡೆಗೆ ತಲೆ ಹಾಕಿ ಮಲಗುವಂತೆ ಹೇಳಿ.
3. ಸ್ಟಡಿ ಟೇಬಲ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಇಡಬೇಕು.

4. ಓದುವ ಜಾಗ ವಿಶಾಲವಾಗಿರಬೇಕು, ಅಲ್ಲಿ ಯಾವುದೇ ಗೊಂದಲಗಳಿರಬಾರದು. ಏಕೆಂದರೆ ಅದು ಏಕಾಗ್ರತೆಗೆ ಧಕ್ಕೆ ಉಂಟು ಮಾಡುತ್ತದೆ.
5. ಮಕ್ಕಳ ಕೋಣೆಯ ಬಾಗಿಲುಗಳು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಮಕ್ಕಳ ಕೋಣೆಯ ಬಾಗಿಲು ನೇರವಾಗಿ ಹಾಸಿಗೆಯನ್ನು ನೋಡುವಂತೆ ಇರಬಾರದು.
6. ಪೀಠೋಪಕರಣಗಳನ್ನು ಇರಿಸಲು ನೈಋತ್ಯ ದಿಕ್ಕು ಉತ್ತಮ. ಆದರೆ ಕೋಣೆಯ ಮಧ್ಯದಲ್ಲಿ ಇಡುವುದನ್ನು ತಪ್ಪಿಸಿ. ಇದು ಮಕ್ಕಳ ಮನಸ್ಸಿಗೆ ಅಡಚಣೆಯನ್ನು ಉಂಟು ಮಾಡುತ್ತದೆ.

7. ಮಕ್ಕಳ ಏಕಾಗ್ರತೆಗೆ ಪರಿಣಾಮ ಬೀರುವ ಕಾರಣ ಟಿವಿ ಮತ್ತು ಕಂಪ್ಯೂಟರ್ / ಲ್ಯಾಪ್‌ಟಾಪ್ ಅನ್ನು ಮಕ್ಕಳ ಕೋಣೆಯಲ್ಲಿ ಇಡಬಾರದು. ಆದರೆ ಇಂದಿನ ಕಾಲದಲ್ಲಿ ಇವುಗಳ ಅತ್ಯವಶ್ಯಕವಾಗಿರುವುದರಿಂದ ಕಂಪ್ಯೂಟರ್ ಉತ್ತರ ದಿಕ್ಕಿನಲ್ಲಿ ಹಾಗೂ ಟಿ.ವಿಯನ್ನು ಆಗ್ನೇಯ ದಿಕ್ಕಿನಲ್ಲಿಡಬೇಕು.
8. ಮಕ್ಕಳ ಕೋಣೆಯಲ್ಲಿ ಒಡೆದ ಕನ್ನಡಿಯನ್ನು ಇಡಬೇಡಿ. ಹಾಸಿಗೆಯ ಎದುರು ಯಾವುದೇ ಕನ್ನಡಿಯನ್ನು ಇಡಬೇಡಿ.
9. ಮಕ್ಕಳ ಕೋಣೆಯಲ್ಲಿ ಬೆಳಕು ಯಾವಾಗಲೂ ಚೆನ್ನಾಗಿರಬೇಕು. ದೀಪಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು

10. ನಿಮ್ಮ ಮಗುವಿನ ಮನಸ್ಥಿತಿಯಲ್ಲಿ ತಾಜಾತನ ತುಂಬಲು ಅವರ ಕೋಣೆಯನ್ನು ಹಸಿರು ಅಥವಾ ಹಳದಿ ಬಣ್ಣಗಳಿಂದ ಬ್ರಷ್ ಮಾಡಿ.
11. ಉತ್ತಮ ಏಕಾಗ್ರತೆಗೆ ಕೋಣೆಯ ಉತ್ತರ ಗೋಡೆಯ ಮೇಲೆ ಲೋಲಕದ ಗಡಿಯಾರವನ್ನು ಇರಿಸಿ.

12. ಮಗುವಿನ ಉತ್ತಮ ಬೆಳವಣಿಗೆಗೆ ಅರಿಶಿನ / ಸೂರ್ಯಕಾಂತಿ ಹಳದಿ ಬಣ್ಣದ ಯಾವುದೇ ವಸ್ತು ಅಥವಾ ಬಟ್ಟೆಯನ್ನು ಕೋಣೆಯಲ್ಲಿ ಇಡಿ.
13. ಅಧ್ಯಯನದ ಮೇಜಿನ ಮೇಲೆ ತುಂಬಾ ವಸ್ತುಗಳನ್ನು ಇಡಬೇಡಿ. ಯಾವುದೇ ಓವರ್ಹೆಡ್ ಸಂಗ್ರಹಣೆ ಮಾಡಬಾರದು.

English summary

Vastu Tips For Children Room In Kannada

Children room is a hub of recreation, fun and frolic; however some basic things should be taken care of to make your child an all-rounder. Some basic tips of Vastu for children’s room are as follows, have a look.
Story first published: Saturday, January 16, 2021, 16:23 [IST]
X
Desktop Bottom Promotion