For Quick Alerts
ALLOW NOTIFICATIONS  
For Daily Alerts

2020ರಲ್ಲಿ ನಿಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿ ಬದುಕು ಹೇಗಿರಲಿದೆ?

|

ನೂತನ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮುಂದಿನ ವರ್ಷದಲ್ಲಿ ನಮ್ಮ ಜೀವನದಲ್ಲಿ ಏನೆಲ್ಲಾ ಘಟಿಸಬಹುದು?, ಯಾವೆಲ್ಲಾ ಶುಭ ಘಳಿಗೆ ಸಂತೋಷ ನೀಡುತ್ತದೆ, ಎಂಥಾ ಸಕಾರಾತ್ಘಮಕ ಘಳಿಗೆ ನಮಗಾಗಿ ಕಾದಿದೆ ಎಂಬೆಲ್ಲಾ ಚಿಂತನೆ ನಮ್ಮಲ್ಲಿ ಈಗಾಗಲೇ ಆರಂಭವಾಗಿರುತ್ತದೆ.

 

ಅದರಲ್ಲೂ ಉದ್ಯೋಗಿಗಳು ತಮ್ಮ ವೃತ್ತಿ ಜೀವನ ಹೇಗಿರುತ್ತದೆ, ಯಾವುದಾದರೂ ಶುಭಸೂಚನೆ ಇದೆಯೇ ಎಂದೆಲ್ಲಾ ತಾಳೆಹಾಕುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಗಳು ಶಿಕ್ಷಣ ಭವಿಷ್ಯ ಹೇಗಿದೆ, ತಮ್ಮ ಉನ್ನತ ಶಿಕ್ಷಣದ ಕನಸು ನನಸಾಗುತ್ತದೆಯೇ ಎಂಬೆಲ್ಲಾ ಸಂಶಯ ಮೂಡಿರುತ್ತದೆ. ಹಾಗಿದ್ದರೆ 2020ರಲ್ಲಿ 12 ರಾಶಿಚಕ್ರಗಳಿಗೆ ಅನುಗುಣವಾಗಿ ನಿಮ್ಮ ಉದ್ಯೋಗ ಹಾಗೂ ಶಿಕ್ಷಣ ರಾಶಿಭವಿಷ್ಯ ಹೇಗಿದೆ ಮುಂದೆ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿ

ವೃತ್ತಿಜೀವನದ ದೃಷ್ಟಿಯಿಂದ 2020 ವರ್ಷವು ತುಂಬಾ ಉತ್ತಮವಾಗಿದೆ. ನಿಮ್ಮ ಪ್ರಸ್ತುತ ಕೆಲಸವನ್ನು ಬದಲಾಯಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಈ ವರ್ಷ ನೀವು ಉತ್ತಮ ಕಂಪನಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಆದರೂ, ಯಶಸ್ಸನ್ನು ಸಾಧಿಸಲು ನೀವು ತುಂಬಾ ಶ್ರಮಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿಯೂ ಈ ವರ್ಷ ನೀವು ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಈ ವರ್ಷ ವಿದೇಶಕ್ಕೆ ಹೋಗಬೇಕೆಂಬ ನಿಮ್ಮ ಆಸೆ ಈಡೇರಬಹುದು.

ವೃಷಭ ರಾಶಿ

ವೃಷಭ ರಾಶಿ

ವೃತ್ತಿಜೀವನದ ದೃಷ್ಟಿಯಿಂದ ಈ ವರ್ಷವು ಬಹಳ ಮುಖ್ಯವಾಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆ ಬರಬಹುದು, ಆದರೆ ಫಲಿತಾಂಶವು ನಿಮ್ಮ ಪರವಾಗಿರುವುದರಿಂದ ಚಿಂತೆ ಮಾಡುವ ಅವಶ್ಯವಿಲ್ಲ. ನಿಮ್ಮ ವರ್ಗಾವಣೆ ದೂರದ ಸ್ಥಳದಲ್ಲಿ ಆಗುವ ಬಲವಾದ ಸಾಧ್ಯತೆಯಿದೆ. ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವರ್ಷದ ಮಧ್ಯದಲ್ಲಿ ಕೆಲವು ಏರಿಳಿತಗಳು ಇರಬಹುದು, ಆದರೆ ಶ್ರಮಿಸುತ್ತಲೇ ಇರಿ. ಈ ವರ್ಷ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಅನೇಕ ಬಾರಿ ನೀವು ಅಧ್ಯಯನದಲ್ಲಿ ನಿಮ್ಮ ಗಮನವನ್ನು ಕಳೆದುಕೊಳ್ಳುತ್ತೀರಿ, ಆದರೆ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಮಿಥುನ ರಾಶಿ
 

ಮಿಥುನ ರಾಶಿ

ಮಿಥುನನ ರಾಶಿಯ ವ್ಯಕ್ತಿಗಳಿಗೆ 2020 ವರ್ಷವು ವೃತ್ತಿಜೀವನದ ದೃಷ್ಟಿಯಿಂದ ಸವಾಲಾಗಿರುತ್ತದೆ. ನೀವು ಉದ್ಯೋಗಿಯಾಗಿದ್ದರೆ ಈ ವರ್ಷ ನೀವು ಸಾಕಷ್ಟು ಪ್ರಯತ್ನದ ನಂತರವೂ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಿ ಮತ್ತು ಶ್ರಮವಹಿಸಿ. ಸಹಭಾಗಿತ್ವದಲ್ಲಿ ಉದ್ಯಮ ಮಾಡುವವರಿಗೆ ವರ್ಷದ ಮಧ್ಯಭಾಗವು ತುಂಬಾ ಒಳ್ಳೆಯದಾಗಲಿದೆ. ವರ್ಷವು ವಿದ್ಯಾರ್ಥಿಗಳಿಗೆ ಮಿಶ್ರವಾಗಲಿದೆ. ಯಶಸ್ಸನ್ನು ಸಾಧಿಸಲು ಬಯಸಿದರೆ ಹೆಚ್ಚು ಶ್ರಮಿಸಬೇಕು. ನಿಮ್ಮ ಆಯ್ಕೆಯ ಕಾಲೇಜಿನಲ್ಲಿ ನೀವು ಪ್ರವೇಶ ಪಡೆಯುವ ಸಾಧ್ಯತೆಯಿದೆ.

ಕರ್ಕ ರಾಶಿ

ಕರ್ಕ ರಾಶಿ

ಕಳೆದ ವರ್ಷ ಅಪೂರ್ಣವಾಗಿದ್ದ ಕೆಲವು ಪ್ರಮುಖ ಕಾರ್ಯಗಳು ಈ ವರ್ಷ ಉತ್ತಮ ಆದಾಯದೊಂದಿಗೆ ಪೂರ್ಣಗೊಳಿಸುವ ಸಾಧ್ಯತೆಯಿದೆ. ಅಲ್ಲದೆ, ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನೌಕರರು ತಮ್ಮ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯಾಗುವ ಬಲವಾದ ಸಾಧ್ಯತೆಯಿದೆ. ವ್ಯಾಪಾರಿಗಳು ಹಲವಾರು ಪ್ರವಾಸಗಳನ್ನು ಮಾಡಬೇಕಾಗಬಹುದು, ಅದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ವರ್ಷವು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿರುತ್ತದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಶ್ರದ್ಧೆಯಿಂದ ಅಧ್ಯಯನ ಮಾಡಿ ಮತ್ತು ನಿಮ್ಮ ಗುರಿಯತ್ತ ಮಾತ್ರ ಗಮನಹರಿಸಿ. ತುಂಬಾ ಶ್ರಮಿಸಬೇಕು.

ಸಿಂಹ ರಾಶಿ

ಸಿಂಹ ರಾಶಿ

ವೃತ್ತಿಜೀವನದ ದೃಷ್ಟಿಯಿಂದ 2020 ನಿಮಗೆ ಉತ್ತಮವಾದದ್ದನ್ನು ನೀಡುತ್ತದೆ. ವರ್ಷದ ಆರಂಭವು ತುಂಬಾ ಚೆನ್ನಾಗಿರುತ್ತದೆ. ಬಡ್ತಿ ಜತೆಗೆ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಕಾರ್ಯಕ್ಷಮತೆಯನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ ಮತ್ತು ನಿರುದ್ಯೋಗಿಗಳಿಗೆ ಸಹ ಕೆಲಸ ಸಿಗಬಹುದು. ವರ್ಷವು ವ್ಯಾಪಾರಿಗಳಿಗೆ ಬಹಳ ಲಾಭದಾಯಕವಾಗಿರುತ್ತದೆ. ನೀವು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯವಹಾರವೂ ಬೆಳೆಯುತ್ತದೆ. ಈ ವರ್ಷ ಹೊಸ ಕಾರ್ಯವೂ ಪ್ರಾರಂಭವಾಗಬಹುದು. ವರ್ಷವು ವಿದ್ಯಾರ್ಥಿಗಳಿಗೆ ಬಹಳ ಶುಭವಾಗಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ವರ್ಷವು ನಿಮಗೆ ಉತ್ತಮವಾಗಲಿದೆ. ವೃತ್ತಿಜೀವನವು ಪ್ರಗತಿಯಾಗುತ್ತದೆ ಮತ್ತು ಕೆಲವು ಹೊಸ ಬದಲಾವಣೆಗಳು ಬರಬಹುದು. ನೀವು ಉತ್ತಮ ಸ್ಥಾನ ಮತ್ತು ಉತ್ತಮ ಸಂಬಳದೊಂದಿಗೆ ಹೊಸ ಕಂಪನಿಗೆ ಸೇರಬಹುದು. ಈ ವರ್ಷ ನಿಮ್ಮ ವರ್ಗಾವಣೆಯ ಸಾಧ್ಯತೆಗಳಿವೆ. ಕೆಲಸದಲ್ಲಿ ನಿಮ್ಮ ಪ್ರಯತ್ನ ಎಂದಿಗೂ ಇರಲಿ ಮತ್ತು ನಿಮ್ಮ ಅತ್ಯುತ್ತಮವಾದದನ್ನು ನೀಡಿ. ಉತ್ತಮ ಆದಾಯ ಸಾಧ್ಯವಿರುವ ಕಾರಣ ವ್ಯಾಪಾರಿಗಳಿಗೆ ವರ್ಷ ಉತ್ತಮವಾಗಿರುತ್ತದೆ. ಹೊಸ ವ್ಯವಹಾರಗಳಲ್ಲಿ ನಿಮ್ಮ ಅದೃಷ್ಟವನ್ನು ಸಹ ಪ್ರಯತ್ನಿಸಬಹುದು. ಸರಿಯಾದ ಯೋಜನೆಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವರ್ಷವು ವಿದ್ಯಾರ್ಥಿಗಳಿಗೆ ಬಹಳ ಶುಭವಾಗಲಿದೆ. ಅಧ್ಯಯನವನ್ನು ನೀವು ಪೂರ್ಣಗೊಳಿಸಿದ್ದರೆ ಈ ವರ್ಷವೇ ನಿಮಗೆ ಉತ್ತಮ ಕೆಲಸ ಸಿಗಬಹುದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಮುಂದೆ ಸಾಗಲು ಈ ವರ್ಷ ತುಂಬಾ ಶ್ರಮಿಸಬೇಕಾಗುತ್ತದೆ. ವರ್ಷದ ಆರಂಭದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಇವುಗಳು ನಿಮ್ಮ ಪ್ರಗತಿಗೆ ಪೂರಕ ಎಂಬುದನ್ನು ನೆನಪಿಡಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ಅದನ್ನು ತಪ್ಪಿಸಲು ಸೂಚಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶಗಳು ಸಿಗಲಿದೆ. ನೀವು ಸೋಮಾರಿತನದಿಂದ ಇರುವಿರಿ. ನಿಮ್ಮ ಗುರಿಯನ್ನು ಕೇಂದ್ರೀಕರಿಸುವ ಮೂಲಕ ಶ್ರಮಿಸಿದರೆ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು ಮತ್ತು ಯಶಸ್ಸನ್ನು ಸಾಧಿಸಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃತ್ತಿಜೀವನದ ದೃಷ್ಟಿಯಿಂದ ವರ್ಷವು ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮವು ಭವಿಷ್ಯದಲ್ಲಿ ನಿಮಗೆ ನಿರೀಕ್ಷಿತ ಫಲಿತಾಂಶವನ್ನು ನೀಡುವ ಸಾಧ್ಯತೆಯಿದೆ. ವರ್ಷದ ಆರಂಭದಲ್ಲಿ, ಹೊಸ ಕೆಲಸವನ್ನು ಸಹ ಪ್ರಾರಂಭಿಸಬಹುದು. ಉದ್ಯೋಗಾಕಾಂಕ್ಷಿಗಳು ಕೆಲವು ತೊಂದರೆಗಳನ್ನು ಎದುರಿಸಬಹುದು ಮತ್ತು ಅವರ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಿಲ್ಲ ಎಂದು ಭಾವಿಸಬಹುದು. ನಿಮ್ಮ ಪ್ರಸ್ತುತ ಕೆಲಸದ ಬಗ್ಗೆ ನೀವು ಅತೃಪ್ತರಾಗಿರಬಹುದು. ವರ್ಷವು ವ್ಯಾಪಾರಿಗಳಿಗೆ ಉತ್ತಮವಾಗಬಹುದು, ಆದರೂ ಅವರು ಕೆಲವು ಅಪಾಯಗಳನ್ನು ತೆಗೆದುಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಅದ್ಭುತ ವರ್ಷ ಇರುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಪಡೆಯುವ ಸಾಧ್ಯತೆಗಳಿವೆ.

ಧನು ರಾಶಿ

ಧನು ರಾಶಿ

ವೃತ್ತಿಜೀವನದ ದೃಷ್ಟಿಯಿಂದ 2020 ವರ್ಷವು ನಿಮಗೆ ಉತ್ತಮವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕೆಲವು ಹೊಸ ಯೋಜನೆಗಳ ಸಲುವಾಗಿ ವಿದೇಶ ಪ್ರವಾಸ ಮಾಡಬೇಕಾಗಬಹುದು. ಒಟ್ಟಾರೆಯಾಗಿ ಈ ವರ್ಷ ಅದ್ಭುತ ಪ್ರಗತಿಯನ್ನು ಸಾಧಿಸುವಿರಿ. ವ್ಯಾಪಾರಿಗಳಿಗೆ ಲಾಭ ಗಳಿಸಲು ಅನೇಕ ಅವಕಾಶಗಳು ಸಿಗುತ್ತವೆ. ನೀವು ಸಾಕಷ್ಟು ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ವ್ಯವಹಾರವೂ ವಿಸ್ತರಿಸುತ್ತದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಾಗುವುದು. ವರ್ಷವು ವಿದ್ಯಾರ್ಥಿಗಳಿಗೆ ಮಿಶ್ರಣವಾಗಲಿದೆ. ವರ್ಷದ ಆರಂಭವು ಉತ್ತಮವಾಗಿರುತ್ತದೆ, ಆದರೆ ಮಧ್ಯದಿಂದ ಕೊನೆಯವರೆಗೆ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರ ವೃತ್ತಿಜೀವನ ಈ ವರ್ಷ ಪ್ರಗತಿಯಾಗಲಿದೆ ಆದರೆ ನಿಧಾನಗತಿಯಲ್ಲಿ ಮಾತ್ರ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಪಡೆಯುವ ಬಲವಾದ ಸಾಧ್ಯತೆ ಇದೆ. ಈ ವರ್ಷ ನೀವು ಅನೇಕ ಪ್ರವಾಸಗಳನ್ನು ಮಾಡಬೇಕಾಗಬಹುದು, ಅದು ನಿಮ್ಮನ್ನು ಕಾರ್ಯನಿರತಗೊಳಿಸುತ್ತದೆ. ನಿಮ್ಮ ಕಠಿಣ ಪರಿಶ್ರಮದ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನೀವು ನಿರಾಶರಾಗಿರಬಹುದು. ಚಿಂತಿಸಬೇಡಿ ಮತ್ತು ಮುಂದುವರಿಯಿರಿ ಪೂರ್ಣ ವಿಶ್ವಾಸ ಮತ್ತು ಧೈರ್ಯ ನಿಮ್ಮದಾಗಿರಲಿ. ನೀವು ವ್ಯಾಪಾರ ಮಾಡಿದರೆ ನಿಮ್ಮ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ವ್ಯವಹಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ವರ್ಷವು ಉತ್ತಮವಾಗಿರುತ್ತದೆ.

ಕುಂಭ ರಾಶಿ

ಕುಂಭ ರಾಶಿ

ವೃತ್ತಿಜೀವನದ ದೃಷ್ಟಿಯಿಂದ ವರ್ಷವು ವಿಶೇಷವಾಗುವುದಿಲ್ಲ, ಏರಿಳಿತ ಉಳಿಯುತ್ತದೆ. ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಜಿಸುತ್ತಿದ್ದರೆ ಅವಸರದಿಂದ ತಪ್ಪಿಸಿ. ಕಚೇರಿಯಲ್ಲಿ ಕೆಲಸವನ್ನು ತ್ಯಜಿಸಲು ನಿಮ್ಮನ್ನು ಒತ್ತಾಯಿಸುವ ಕೆಲವು ಪ್ರತಿಕೂಲ ಸಂದರ್ಭಗಳನ್ನು ನೀವು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತುಂಬಾ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ನೀವು ನಷ್ಟವನ್ನು ಎದುರಿಸಬೇಕಾಗಿರುವುದರಿಂದ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ವರ್ಷವೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಲ್ಲ. ನಿಮ್ಮ ಶಿಕ್ಷಣದಲ್ಲಿ ಹಲವು ಅಡೆತಡೆಗಳು ಇರಬಹುದು.

ಮೀನ ರಾಶಿ

ಮೀನ ರಾಶಿ

ಈ ವರ್ಷ ನಿಮ್ಮ ವೃತ್ತಿಜೀವನವು ವೇಗವಾಗಿ ಪ್ರಗತಿಯಾಗುತ್ತದೆ. ನೀವು ಹೆಚ್ಚು ಶ್ರಮವಹಿಸುತ್ತೀರಿ, ಬೇಗ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ನಿರ್ಧಾರಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾಗಿರುತ್ತದೆ ಮತ್ತು ಹಿರಿಯರು ನಿಮ್ಮ ಕೆಲಸದ ಬಗ್ಗೆ ತೃಪ್ತರಾಗುತ್ತಾರೆ. ನಿಮ್ಮ ಆದಾಯವು ಈ ವರ್ಷ ಹೆಚ್ಚಾಗುವ ನಿರೀಕ್ಷೆಯಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವುದರಿಂದ ವರ್ಷವೂ ಪ್ರಯೋಜನಕಾರಿಯಾಗಿದೆ. ಈ ವರ್ಷ ವಿರೋಧಿಗಳೊಂದಿಗೆ ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ. ವರ್ಷವು ವಿದ್ಯಾರ್ಥಿಗಳಿಗೆ ಸಾಧನೆಗಳಿಂದ ತುಂಬಿರುತ್ತದೆ. ನೀವು ದೊಡ್ಡ ಯಶಸ್ಸನ್ನು ಎದುರು ನೋಡುತ್ತಿದ್ದೀರಿ. ಅಲ್ಲದೆ ಎಂಜಿನಿಯರಿಂಗ್ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ವರ್ಷವು ತುಂಬಾ ಶುಭವಾಗಿದೆ.

English summary

Udyoga and Sikshana Bhavishya 2020 | Career Horoscope in Kannada

How will your career be in the year 2020? Will you get good results in a job or business? Will the students get success this year? Read the horoscope related to your education and career and know all about it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more