For Quick Alerts
ALLOW NOTIFICATIONS  
For Daily Alerts

ತಮ್ಮ ಭಾವನೆಗಳನ್ನು ಮರೆಮಾಚುವುದಲ್ಲಿ ಈ ರಾಶಿಯವರು ಎತ್ತಿದಕೈ

|

ಪ್ರತಿಯೊಬ್ಬರಲ್ಲೂ ಭಾವನೆಗಳು ಇದ್ದೇ ಇರುತ್ತದೆ, ಆದರೆ ಅದನ್ನು ವ್ಯಕ್ತಪಡಿಸುವ ರೀತಿ, ಸ್ವೀಕರಿಸುವ ಭಿನ್ನವಾಗಿರುತ್ತದೆ ಅಷ್ಟೇ. ಮೆದುಳು ಹಾಗೂ ಮನಸ್ಸಿನ ಸಂಚಾರ ಮಾಡುವ ಈ ಭಾವನೆಗಳು ಒಬ್ಬ ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ, ಜೀವನವನ್ನೇ ಬದಲಾಯಿಸುವ ಶಕ್ತಿ ಸಹ ಈ ಭಾವನೆಗಳಿಗಿದೆ.

ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ಭಾವನೆಗಳನ್ನು ಅಭಿವ್ಯಕ್ತಪಡಿಸುವ ರೀತಿ ಭಿನ್ನವಾಗಿದೆ. ಅಲ್ಲದೇ, ಕೆಲವು ರಾಶಿಗಳು ತಮ್ಮ ಭಾವನಗಳನ್ನು ಹೊರಗಿನ ಪ್ರಪಂಚಕ್ಕೆ ತೋರ್ಪಡಿಸುವುದೇ ಇಲ್ಲವಂತೆ. ಹೌದೇ, ಯಾವುದು ಆ ರಾಶಿಗಳು ಮುಂದೆ ತಿಳಿಯೋಣ:

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ಭಾವನೆಗಳನ್ನು ಮರೆಮಾಚುತ್ತಾರೆ ಎಂದರೆ ನಿಮಗೆ ಆಸಕ್ತಿದಾಯಕವಾಗಿರಬಹುದು, ಏಕೆಂದರೆ ಮಿಥುನ ರಾಶಿಯವರು ಸಾಮಾನ್ಯವಾಗಿ ಬಹಳ ಅಭಿವ್ಯಕ್ತಿಶೀಲ ಮತ್ತು ಸಾಮಾಜಿಕ ಜನರು ಎನ್ನಲಾಗುತ್ತದೆ. ಅವರು ಅನೇಕ ವಿಷಯಗಳನ್ನು ಹೇಳಿಕೊಳ್ಳಬಹುದು, ಆದರೆ ಅವರು ತಮ್ಮ ಜೀವನದ ಬಗೆಗಿನ ವಿವರಗಳನ್ನು ಅಡಗಿಸಿಡುತ್ತಾರೆ, ಇದರಿಂದ ಅವರು ಎಂದಿಗೂ ಇತರರ ಮುಂದೆ ದುರ್ಬಲವಾಗಿ ಕಾಣಿಸುವುದಿಲ್ಲ. ಮತ್ತು ಅವರಿಗೆ ನೋವಾಗಿದ್ದರೆ ತಮ್ಮ ಕೋಪವನ್ನು ಸಹ ನಿಗ್ರಹಿಸುತ್ತಾರೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ತಮ್ಮ ಸಮಸ್ಯೆಗಳು ಮತ್ತು ಭಾವನೆಗಳಿಂದ ಇತರರಿಗೆ ಹೊರೆಯಾಗಲು ಬಯಸುವುದಿಲ್ಲ. ಅವರು ಹೆದರುವುದಿಲ್ಲವೆಂದು ತೋರುತ್ತದೆ ಆದರೆ ಅವರು ನಿಜವಾಗಿಯೂ ಬಹಳಷ್ಟು ಸೂಕ್ಷ್ಮಮತಿಗಳು, ವಾಸ್ತವವಾಗಿ ಅವರು ಯಾರಿಗಾದರೂ ತುಂಬಾ ಹತ್ತಿರವಾಗಿದ್ದಾಗ ತುಂಬಾ ಅಭಿವ್ಯಕ್ತರಾಗುತ್ತಾರೆ. ಅವರಿಗೆ ಏನು ಬೇಕು ಎಂದು ತಿಳಿದಿದ್ದರೂ ಸಹ, ತಮ್ಮ ಬೇಡಿಕೆಯನ್ನು ಎಲ್ಲರ ಮುಂದಿಡಲು ಬಯಸುವುದಿಲ್ಲ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಏನನ್ನು ಬಂದರೂ ಸ್ವೀಕರಿಸುತ್ತಾರೆ, ಅದು ಯಶಸ್ಸು ಅಥವಾ ಸೋಲು ಆಗಿರಲಿ, ಅವರು ಹಿಂದೆ ಏನಾಯಿತು ಎಂಬುದನ್ನು ಮರೆತು ಬೇಗನೆ ಮುಂದುವರಿಯುತ್ತಾರೆ. ಅವರು ತಮ್ಮ ನೋವನ್ನು ದೀರ್ಘಕಾಲ ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು ಅವರ ಭಾವನೆಗಳನ್ನು ತಮ್ಮ ಹೃದಯದೊಳಗೆ ಆಳವಾಗಿ ಹೂತುಹಾಕಲು ಇಷ್ಟಪಡುತ್ತಾರೆ. ಆದ್ದರಿಂದ, ಕನ್ಯಾರಾಶಿಯವರು ಯಾರೊಂದಿಗೂ ಹೆಚ್ಚು ತೆರೆದುಕೊಳ್ಳಲು ಬಯಸುವುದಿಲ್ಲ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ಭಾವನೆಗಳನ್ನು ತೋರ್ಪಡಿಸುವುದನ್ನು ಬಲವಾಗಿ ವಿರೋಧಿಸುತ್ತಾರೆ ಏಕೆಂದರೆ ಅದು ಅವರನ್ನು ದುರ್ಬಲರನ್ನಾಗಿ ಮಾಡುತ್ತದೆ ಮತ್ತು ಇಂಥಾ ದುರ್ಬಲತೆಯನ್ನು ಅವರು ಎಂದಿಗೂ ಬಯಸುವುದಿಲ್ಲ. ತಮ್ಮ ದುರ್ಬಲತೆಯನ್ನು ಮರೆಮಾಚಲೆಂದೇ ಅವರು ತಮ್ಮ ಭಾವನೆಗಳನ್ನು ತೋರಿಸುವುದನ್ನು ತಪ್ಪಿಸುತ್ತಾರೆ. ಆದರೆ ಯಾರಾದರೂ ತಮ್ಮ ನಂಬಿಕೆಯನ್ನು ಚೆನ್ನಾಗಿ ಗಳಿಸಿದರೆ ಇವರು ಸುಲಭವಾಗಿ ತಮ್ಮ ಭಾವನೆಯನ್ನು ಹೊರಹಾಕುತ್ತಾರೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಯಾರನ್ನಾದರೂ ಸಂಪೂರ್ಣವಾಗಿ ನಂಬಿದರೆ ಮಾತ್ರ ಅವರು ಹತ್ತಿರವಾಗುತ್ತಾರೆ. ಕುಂಭ ರಾಶಿಯವರು ಉತ್ಸಾಹಭರಿತ ಜನರಂತೆ ತೋರಬಹುದು ಆದರೆ ಅವರು ಯಾವುದೇ ಸಂದರ್ಭದಲ್ಲೂ ತಮ್ಮ ಭಾವನೆಗಳನ್ನು ತೋರ್ಪಡಿಸುತ್ತಾರೆ ಎಂದು ನಿರೀಕ್ಷಿಸಬೇಡಿ ಏಕೆಂದರೆ ಅವರು ಹಾಗೆ ಮಾಡುವುದಿಲ್ಲ. ಯಾರೂ ಎಷ್ಟೇ ಮನವರಿಕೆ ಮಾಡಿದರೂ ಅವರು ತಮ್ಮ ಭಾವನೆಯನ್ನು ಮುಚ್ಚಿಡುತ್ತಾರೆ.

English summary

These zodiac signs likely to hide their emotions in Kannada

Here we are discussing about These zodiac signs likely to hide their emotions in Kannada. Read more.
Story first published: Tuesday, September 28, 2021, 16:25 [IST]
X
Desktop Bottom Promotion