For Quick Alerts
ALLOW NOTIFICATIONS  
For Daily Alerts

ಸೂರ್ಯ-ಶುಕ್ರ ಯುತಿ: ಈ ಮೂರು ರಾಶಿಯವರಿಗೆ ಒಳ್ಳೆಯ ಸಮಯ ಕೂಡಿ ಬಂದಿದೆ

|

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಶುಭ ಸ್ಥಾನದಿಂದಾಗಿ, ವ್ಯಕ್ತಿಯು ಭೌತಿಕ ಸುಖ, ದಾಂಪತ್ಯ ಸುಖ ಮತ್ತು ಸಂತಾನ ಸುಖವನ್ನು ಪಡೆಯುತ್ತಾನೆ. ಆದ್ದರಿಂದ, ವ್ಯಕ್ತಿಯ ಮದುವೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯವನ್ನು ತಿಳಿಯಲು ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನವನ್ನು ಮಾತ್ರ ನೋಡಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 7 ರಂದು ಶುಕ್ರ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯ ಕೂಡ ಕರ್ಕ ರಾಶಿಯಲ್ಲೇ ಇದ್ದಾನೆ. ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸಿದ ಕೂಡಲೇ ಸೂರ್ಯ ಮತ್ತು ಶುಕ್ರನ ಸಂಯೋಗವಾಗುತ್ತದೆ. ಇದನ್ನು ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ-ಶುಕ್ರ ಯುತಿಯೆಂದು ಕರೆಯಲಾಗುವುದು. ಸೂರ್ಯ-ಶುಕ್ರ ಗ್ರಹದ ಸಂಯೋಜನೆಯಾದಾಗ ಆ ಎರಡು ಗ್ರಹದ ಸ್ಥಾನದ ಅನುಸಾರ ಅದರ ಫಲ ಸಿಗುವುದು. ಕರ್ಕದಲ್ಲಿ ಸೂರ್ಯ-ಶುಕ್ರ ಸಂಯೋಜನೆ ಯಾವೆಲ್ಲಾ ರಾಶಿಗಳಿಗೆ ಎರಡೂ ಗ್ರಹದ ಅದೃಷ್ಟ ಫಲ ತಂದಿದೆ ಎಂದು ನೋಡೋಣ:

ಕನ್ಯಾ ರಾಶಿ -

ಕನ್ಯಾ ರಾಶಿ -

ಶುಕ್ರ ಮತ್ತು ಸೂರ್ಯನ ಸಂಯೋಜನೆಯೊಂದಿಗೆ, ಕನ್ಯಾ ರಾಶಿಯ ಜನರ ವೈವಾಹಿಕ ಜೀವನದ ಮೇಲೆ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದು. ಈ ಸಮಯದಲ್ಲಿ, ನಿಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಪ್ರೀತಿ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನೀವು ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಗುಣಮುಖರಾಗುತ್ತೀರಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಜೀವನ ಸಂಗಾತಿಯು ಉದ್ಯೋಗದಲ್ಲಿ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

ಮೇಷ ರಾಶಿ -

ಮೇಷ ರಾಶಿ -

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ಗೌರವ ಹೆಚ್ಚಾಗಲಿದೆ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಪರಸ್ಪರ ವಿವಾದಗಳಿದ್ದರೆ ಅದು ಬಗೆಹರಿಯುವುದು ಅಲ್ಲದೆ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತವೆ.

ಮಿಥುನ ರಾಶಿ-

ಮಿಥುನ ರಾಶಿ-

ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಈ ರಾಶಿಯ ಜನರ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಂತಾನ ಬಯಸುವವರಿಗೆ ಖುಷಿಯ ಸುದ್ದಿ ದೊರೆಯಲಿದೆ. ಕುಟುಂಬದೊಂದಿಗೆ ಉತ್ತಮವಾಗಿ ಸಮಯ ಕಳೆಯುವಿರಿ, ನಿಮ್ಮಆರೋಗ್ಯವು ಉತ್ತಮವಾಗಿರುತ್ತದೆ.

ಯಾರು ಹುಷಾರಾಗಿರಬೇಕು

ಯಾರು ಹುಷಾರಾಗಿರಬೇಕು

ಈ ಸಮಯದಲ್ಲಿ, ತುಲಾ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಸೂರ್ ಹಾಗೂ ಶುಕ್ರ ದುರ್ಬಲ ಸ್ಥಾನದಲ್ಲಿ ಇರುವುದರಿಂದ ಈ ಸಮಯವು ಸ್ವಲ್ಪ ನೋವಿನಿಂದ ಕೂಡಿದೆ. ಸಂಗಾತಿಯೊಂದಿಗೆ ಮನಸ್ತಾಪ ಹೆಚ್ಚಬಹುದು. ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು.

ಉಳಿದ ರಾಶಿಗಳಿಗೆ ಈ ಅವಧಿ ಸರಾಸರಿಯಾಗಿದೆ.

English summary

Surya-Shukra Yuti 2022: These zodiac signs will get prosperous benefits; Know details in kannada

Surya-Shukra Yuti 2022 Effects on Zodiac Signs in Kannada : According to astrology, the planet Venus is going to enter Cancer on 7th August, the union of Sun and Venus. These zodiac signs will going to have an auspicious effect during Surya-Shukra Yuti 2022. Take a look.
Story first published: Friday, July 29, 2022, 15:37 [IST]
X
Desktop Bottom Promotion