For Quick Alerts
ALLOW NOTIFICATIONS  
For Daily Alerts

ಸೂರ್ಯ-ಶನಿ ಸಂಸಪ್ತಕ ಯೋಗ: ಆ.17ರವರೆಗೆ ಈ 4 ರಾಶಿಯವರಿಗೆ ಶುಭ, ಈ 4 ರಾಶಿಯವರು ಹುಷಾರಾಗಿರಬೇಕು

|

ವೈದಿಕ ಜ್ಯೋತಿಷ್ಯದಲ್ಲಿ, ಸೂರ್ಯ ಮತ್ತು ಶನಿ ಗ್ರಹಗಳೆರಡೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಸೂರ್ಯನು ಶಕ್ತಿ ಮತ್ತು ಆತ್ಮದ ಕಾರಕ ಗ್ರಹವಾಗಿದ್ದರೆ, ಶನಿಯು ಕರ್ಮ ಮತ್ತು ನ್ಯಾಯದ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಮತ್ತು ಸೂರ್ಯನು ಪರಸ್ಪರ ದ್ವೇಷದ ಭಾವನೆಯನ್ನು ಹೊಂದಿವೆ. ಇವೆರಡನ್ನೂ ಪರಸ್ಪರ ವಿರುದ್ಧ ಗ್ರಹಗಳೆಂದು ಪರಿಗಣಿಸಲಾಗಿದೆ. ಜುಲೈ 16 ರಂದು, ಸೂರ್ಯನ ರಾಶಿಚಕ್ರವು ಬದಲಾಗಿದೆ. ಈಗ ಕರ್ಕ ರಾಶಿಯಲ್ಲಿ ಸೂರ್ಯ ಮತ್ತು ಮಕರದಲ್ಲಿ ಶನಿ ಗ್ರಹಗಳೆರಡೂ 7ನೇ ಸ್ಥಾನದಲ್ಲಿ ಮುಖಾಮುಖಿಯಾಗಿವೆ. ಇದನ್ನು ಸೂರ್ಯ-ಶನಿ ಸಮ-ಸಪ್ತಾಕ (ಸಂಸಪ್ತಕ) ಯೋಗ ಎಂದು ಕರೆಯಲಾಗುವುದು. ಈ ಯೋಗ ಆಗಸ್ಟ್‌ 17ರವರೆಗೆ ಇರಲಿದೆ.

ಶನಿ-ಸೂರ್ಯನ ಸಂಸಪ್ತಕ ಯೋಗದಿಂದಾಗಿ ಜನರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ವೈಫಲ್ಯಗಳಿರುತ್ತವೆ ಮತ್ತು ಮನಸ್ಸಿನಲ್ಲಿ ಹತಾಶೆಯ ಭಾವನೆ ಉಂಟಾಗುತ್ತದೆ. ಆದರೆ ಈ ಯೋಗ ಕೆಲವು ರಾಶಿಗಳಿಗೆ ಪ್ರಯೋಜನಕಾರಿಯೂ ಆಗಲಿದೆ. ಈ ಸಂಸಪ್ತಾಕ ಯೋಗ ಯಾವ ರಾಶಿಗಳ ಮೇಲೆ ಶುಭ ಹಾಗೂ ಯಾವ ರಾಶಿಗಳ ಅಶುಭ ಪ್ರಭಾವ ಬೀರಿದೆ, ಯಾರು ಈ ಸಮಯದಲ್ಲಿ ಹುಷಾರಾಗಿರಬೇಕು? ಕೆಟ್ಟ ಪ್ರಭಾವ ಕಡಿಮೆ ಮಾಡಲು ಪರಿಹಾರವೇನು ಎಂದು ನೋಡೋಣ:

ಈ ನಾಲ್ಕು ರಾಶಿಗಳಿಗೆ ಶುಭವಾಗಿದೆ

ಈ ನಾಲ್ಕು ರಾಶಿಗಳಿಗೆ ಶುಭವಾಗಿದೆ

ಈ ಯೋಗ ನಾಲ್ಕು ರಾಶಿಗಳಿಗೆ ಪ್ರಯೋಜನಕಾರಿಯೂ ಆಗಲಿದೆ. ಮಿಥುನ, ಕರ್ಕ, ತುಲಾ, ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುವಿರಿ, ಉದ್ಯಮಿಗಳಿಗೆ ಹೂಡಿಕೆಗೆ ಸಮಯ ಅನುಕೂಲಕರವಾಗಿದೆ, ನಿಮ್ಮ ವ್ಯವಹಾರವನ್ನು ವಿಸ್ತರಿಸಬಹುದು.

ಕರ್ಕ ರಾಶಿ

ಕರ್ಕ ರಾಶಿ

ಸಂಸಪ್ತಾಕ ಯೋಗ ಕರ್ಕ ರಾಶಿಯವರಿಗೆ ಶುಭವಾಗಲಿದೆ. ನಿಮ್ಮ ಆದಾಯ ಹೆಚ್ಚಲಿದೆ, ವಿವಿಧ ಮೂಲಗಳಿಂದ ಹಣ ಗಳಿಸಲು ಸಾಧ್ಯವಾಗುವುದು. ಈ ಅವಧಿ ಆರ್ಥಿಕವಾಗಿ ತುಂಬಾ ಚೆನ್ನಾಗಿದೆ. ವ್ಯವಹಾರಸ್ಥರಿಗೆ, ಉದ್ಯಮಿಗಳಿಗೆ ಲಾಭವಾಗಲಿದೆ.

ತುಲಾ ರಾಶಿ

ತುಲಾ ರಾಶಿ

ನೀವು ನಿಮ್ಮ ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಲಾಭ ಗಳಿಸುವಿರಿ. ಅಪೂರ್ಣವಾದ ಕೆಲಸ ಈ ಅವಧಿಯಲ್ಲಿ ಪೂರ್ಣವಗಲಿದೆ, ಪಾಲುದಾರಿಕೆಯ ವ್ಯವಹಾರದಲ್ಲೂ ಲಾಭ ಕಾಣುವಿರಿ.

ಮೀನ ರಾಶಿ

ಮೀನ ರಾಶಿ

ಈ ಸಂಪ್ತಾಕ ಯೋಗ ಮೀನ ರಾಶಿಯವರಿಗೆ ಶುಭ ಯೋಗವಾಗಿದೆ. ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ವ್ಯಾಪಾರಸ್ಥರು ಲಾಭ ಗಳಿಸುವಿರಿ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ಈ ರಾಶಿಯವರು ಹುಷಾರಾಗಿರಬೇಕು

ಈ ರಾಶಿಯವರು ಹುಷಾರಾಗಿರಬೇಕು

ಸೂರ್ಯ ಮತ್ತು ಶನಿ ಪರಸ್ಪರರ ಏಳನೇ ಮನೆಯಲ್ಲಿರುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸಂಸಪ್ತಕ ಯೋಗದ ಪ್ರಭಾವವು ನಡೆಯುತ್ತಿದೆ. ಈ ಸಂಸಪ್ತಕ ಯೋಗದಿಂದಾಗಿ, ಎಲ್ಲಾ 12 ರಾಶಿಗಳ ಸ್ಥಳೀಯರಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಆದರೆ ಇವುಗಳಲ್ಲಿ, 4 ರಾಶಿಯ ಜನರು ಆಗಸ್ಟ್ 17ರವರೆಗೆ ಬಹಳ ಜಾಗರೂಕರಾಗಿರಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿಯಿಂದ ರೂಪುಗೊಂಡ ಅಶುಭ ಸಂಸಪ್ತಕ ಯೋಗದ ಪರಿಣಾಮವು ಮಿಥುನ, ಸಿಂಹ, ಧನು ಮತ್ತು ಕುಂಭ ರಾಶಿಯ ಜನರ ಮೇಲೆ ಕಂಡುಬರುತ್ತದೆ. ಈ ನಾಲ್ಕು ರಾಶಿಗಳ ಜನರು ಕೆಲಸದಲ್ಲಿ ವಿಫಲರಾಗುತ್ತಾರೆ. ಕೆಲಸದ ವಿಷಯದಲ್ಲಿ ಉದ್ವೇಗ ಉಂಟಾಗಬಹುದು. ಹಣದ ನಷ್ಟದ ಬಲವಾದ ಸಾಧ್ಯತೆಯಿದೆ. ಹೂಡಿಕೆಯಲ್ಲಿ ನಷ್ಟ ಉಂಟಾಗಬಹುದು. ಜಗಳಗಳು ಮತ್ತು ವಿವಾದಗಳು ಮೊದಲಿಗಿಂತ ಹೆಚ್ಚಾಗುತ್ತವೆ. ಕೆಲವು ಗಂಭೀರ ಕಾಯಿಲೆಗಳೂ ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ.

ಶನಿ ಮತ್ತು ಶಿವನ ಆರಾಧನೆ ಮಾಡಿ

ಶನಿ ಮತ್ತು ಶಿವನ ಆರಾಧನೆ ಮಾಡಿ

ಜಾತಕದಲ್ಲಿ ಶನಿ ದೋಷವನ್ನು ಕಡಿಮೆ ಮಾಡಲು ಶನಿ ಪೂಜೆಗೆ ವಿಶೇಷ ಮಹತ್ವವಿದೆ.ಶ್ರಾವಣ ಮಾಸ ಮಾಸ ನಡೆಯುತ್ತಿದೆ. ಾದ್ದರಿಂದ ಸೂರ್ಯ ಮತ್ತು ಶನಿಯ ಅಶುಭ ಪರಿಣಾಮಗಳನ್ನು ತಪ್ಪಿಸಲು ಶ್ರಾವಣ ಮಾಸದಲ್ಲಿ ಭಗವಾನ್ ಶಿವ ಮತ್ತು ಶನಿಯನ್ನು ಪೂಜಿಸಿ. ಶಿವನಿಗೆ ರುದ್ರಭಿಷೇಕ ಮಾಡಿಸಿ. ಪ್ರದೋಷ ವ್ರತ ಮಾಡಿ. ಆಗಸ್ಟ್ 8 ರಂದು ಪ್ರದೋಷ ವ್ರತವಿದೆ.

English summary

Surya Shani Samasaptak Yoga Till August 17: These Zodiac Signs Will Get Auspicious Benefits Know details in kannada

Sun and Saturn are considered to be enemies of each other, and the special Samasaptak yoga of these two planets has come together. Which zodiac signs will get auspicious benefits? Find out.
X
Desktop Bottom Promotion