For Quick Alerts
ALLOW NOTIFICATIONS  
For Daily Alerts

ಕನ್ಯಾ ಸಂಕ್ರಾಂತಿ ಈ 8 ರಾಶಿಗಳಿಗೆ ಅನುಕೂಲಕರವಲ್ಲ: ಸೂರ್ಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಈ ಪರಿಹಾರ ಒಳ್ಳೆಯದು

|

ಸೆಪ್ಟೆಂಬರ್ 17ಕ್ಕೆ ಕನ್ಯಾ ಸಂಕ್ರಾಂತಿಯಾಗಿದೆ, ಅಂದರೆ ಸೂರ್ಯ ಕನ್ಯಾ ರಾಶಿ ಪ್ರವೇಶಿಸಿದೆ. ಸೂರ್ಯನು ಕನ್ಯಾ ರಾಶಿಯಲ್ಲಿ 30 ದಿನಗಳು ಇರಲಿದ್ದು ಇದು ಕೆಲ ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರಿದೆ. ಆ ರಾಶಿಯವರು ಸೂರ್ಯನ ಕೆಟ್ಟ ಪ್ರಭಾವ ಕಡಿಮೆ ಮಾಡಲು ಕೆಲವೊಂದು ಪರಿಹಾರ ಮಾಡುವುದು ಒಳ್ಳೆಯದು.

Sun Transit in Virgo on 17

ಯಾವ ರಾಶಿಯವರಿಗೆ ಈ ಅವಧಿ ಅಷ್ಟು ಒಳ್ಳೆಯದಲ್ಲ, ಯಾವ ಬಗೆಯ ಪರಿಹಾರ ಒಳ್ಳೆಯದು ಎಂದು ನೋಡೋಣ ಬನ್ನಿ:

1. ವೃಷಭ ರಾಶಿ :

1. ವೃಷಭ ರಾಶಿ :

ವೃಷಭ ರಾಶಿಯಲ್ಲಿ ಈ ಸಂಕ್ರಮಣದ ಸಮಯದಲ್ಲಿ ಅವನು ನಿಮ್ಮ ಐದನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಐದನೇ ಮನೆಯಲ್ಲಿ ಸೂರ್ಯನ ಸ್ಥಾನ ಅಷ್ಟು ಅನುಕೂಲಕರವಲ್ಲ. ಆದ್ದರಿಂದ ಕೆಲವು ಸವಾಲುಗಳು ಎದುರಾಗುವುದು ಕೌಟುಂಬಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತದೆ. ಈ ಅವಧಿಯಲ್ಲಿ, ನೀವು ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

2. ಮಿಥುನ ರಾಶಿ :

2. ಮಿಥುನ ರಾಶಿ :

ಸೂರ್ಯನು ಈ ಸಂಕ್ರಮಣದ ಸಮಯದಲ್ಲಿನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿದೆ. ಈ ಸೂರ್ಯನ ಸಂಕ್ರಮಣದ ಪರಿಣಾಮವಾಗಿ, ಈ ಅವಧಿಯಲ್ಲಿ ಮಿಥುನ ರಾಶಿಯವರಿಗೆ ಕೆಲವು ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಅನಗ್ಯತ ಪ್ರಯಾಣ ಮಾಡದಿರುವುದು ಒಳ್ಳೆಯದು. ಕೌಟುಂಬಿಕ ಜೀವನದಲ್ಲೂ ಸಮಸ್ಯೆಗಳಿರಬಹುದು. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ.

3. ಸಿಂಹ ರಾಶಿ:

3. ಸಿಂಹ ರಾಶಿ:

ಸಿಂಹ ರಾಶಿಯವರಲ್ಲಿ ಈ ಅವಧಿಯಲ್ಲಿ ನಿಮ್ಮ ಎರಡನೇ ಮನೆಯಲ್ಲಿಇದೆ. ಎರಡನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ಅವಧಿಯಲ್ಲಿ ಮಾತನಾಡುವಾಗ ತುಂಬಾನೇ ಹುಷಾರಾಗಿರಬೇಕು. ಅಲ್ಲದೆ ಈ ಅವಧಿಯಲ್ಲಿ ದೈಹಿಕ ತೊಂದರೆ ಮಾನಸಿಕ ಒತ್ತಡ ಕೂಡ ಉಂಟಾಗುವುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಣಕಾಸಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ.

4. ಕನ್ಯಾ ರಾಶಿ :

4. ಕನ್ಯಾ ರಾಶಿ :

ಇದೀಗ ಸೂರ್ಯ ನಿಮ್ಮ ಲಗ್ನ ಮನೆಯಲ್ಲಿದೆ. , ಕನ್ಯಾರಾಶಿಯಲ್ಲಿ ಸೂರ್ಯನ ಈ ಸಂಕ್ರಮಣವು ಹೆಚ್ಚಿನ ಕನ್ಯಾ ರಾಶಿಯವರ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ತರಲಿದೆ. ಅಂದರೆ ಈ ಅವಧಿಯಲ್ಲಿ ನಿಮ್ಮ ಅಹಂಕಾರ ವರ್ತನೆ ಇತರರಿಗೆ ನೋವು ಉಂಟು ಮಾಡಬಹುದು. ಇದಲ್ಲದೆ ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಕೂಡ ಕಾಡಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರವನ್ನು ತುಂಬಾ ಆಲೋಚಿಸಿ ತೆಗೆದುಕೊಳ್ಳಬೇಕು.

5. ತುಲಾ ರಾಶಿ :

5. ತುಲಾ ರಾಶಿ :

ತುಲಾ ರಾಶಿಯವರಲ್ಲಿ ಸೂರ್ಯ ಹನ್ನೆರಡನೇ ಮನೆಯಲ್ಲಿದೆ. ಈ ಅವಧಿಯಲ್ಲಿ ಖರ್ಚು ತುಂಬಾ ಹೆಚ್ಚಲಿದೆ. ಇನ್ನು ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹಾನಿಯಾಗಬಹುದು, ಹುಷಾರಾಗಿರಿ. ವೈಯಕ್ತಿಕ ಜೀವನದಲ್ಲೂ ನೆಮ್ಮದಿ ಇರಲ್ಲ.

6. ಮಕರ ರಾಶಿ:

6. ಮಕರ ರಾಶಿ:

ಮಕರ ರಾಶಿಯಲ್ಲಿ ಸೂರ್ಯ ಒಂಬತ್ತನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಕೆಲವು ಏರಿಳಿತಗಳನ್ನು ತರಲಿದೆ. ವೈಯಕ್ತಿಕ ಜೀವನದಲ್ಲಿ ತುಂಬಾನೇ ಸಮಸ್ಯೆ ಎದುರಾಗಬಹುದು. ಆರೋಗ್ಯ ಸಮಸ್ಯೆಯೂ ಕಾಡುವುದು. ಈ ಸಮಯದಲ್ಲಿ ನೀವು ತುಂಬಾ ತಾಳ್ಮೆಯಿಂದ ವರ್ತಿಸಬೇಕು.

7. ಕುಂಭ ರಾಶಿ :

7. ಕುಂಭ ರಾಶಿ :

ಕುಂಭ ರಾಶಿಯವರಲ್ಲಿ ಸೂರ್ಯ ಎಂಟನೇ ಮನೆಯಲ್ಲಿದೆ. ಈ ಅವಧಿಯಲ್ಲಿ ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ಮಾನಸಿಕ ಒತ್ತಡ ಹೆಚ್ಚಾಗುವುದು. ಈ ಅವಧಿಯಲ್ಲಿ ನೀವು ಯಾವುದಕ್ಕೆ ವಿವಾದಕ್ಕೆ ಒಳಗಾಗಬೇಡಿ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಬೇಡಿ. ಈ ಅವಧಿಯಲ್ಲಿ ಸಂಗಾತಿಯ ಆರೋಗ್ಯದ ಕಡೆ ತುಂಬಾ ಗಮನ ನೀಡಬೇಕು. ಖರ್ಚು ಅಂತೂ ತುಂಬಾ ಹೆಚ್ಚಾಗಲಿದೆ.

 8. ಮೀನ ರಾಶಿ:

8. ಮೀನ ರಾಶಿ:

ಮೀನ ರಾಶಿಯವರಲ್ಲಿ ಸೂರ್ಯ ಏಳನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಜಾಗ್ರತೆವಹಿಸಬೇಕು. ಇಲ್ಲದಿದ್ದರೆ ದೊಡ್ಡ ಸಮಸ್ಯೆ ಉಂಟಾಗಬಹುದು. ಆರೋಗ್ಯದ ಕಡೆ ಕೂಡ ತುಂಬಾ ಗಮನ ಹರಿಸಿ.

ಸೂರ್ಯ ಕೆಟ್ಟ ಪ್ರಭಾವ ತಡೆಯಲು ಹೀಗೆ ಮಾಡಿ

ಸೂರ್ಯ ಕೆಟ್ಟ ಪ್ರಭಾವ ತಡೆಯಲು ಹೀಗೆ ಮಾಡಿ

* ದೊಡ್ಡವರಿಗೆ ಗೌರವ ನೀಡಿ

* ಕೆಂಪು ಬಟ್ಟೆಯನ್ನು ಧರಿಸುವುದು ನಿಮಗೆ ಶುಭ

* ಬೆಳಗ್ಗೆ ಬೇಗನೆ ಎದ್ದು ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ಕುಂಕುಮ ಹಾಕಿ ಸೂರ್ಯನಿಗೆ ಆರ್ಘ್ಯವನ್ನು ನೀಡಿ

* ಪ್ರತಿದಿನ ಸೂರ್ಯ ದೇವನನ್ನು ಪ್ರಾರ್ಥಿಸಿ.

* ಸೂರ್ಯ ಯಂತ್ರ ಸ್ಥಾಪಿಸಿ

* ಏಕ ಮುಖ ರುದ್ರಾಕ್ಷ ಧರಿಸುವುದು ಕೂಡ ಒಳ್ಳೆಯದು.

* ಪ್ರತಿದಿನ ಸೂರ್ಯ ನಮಸ್ಕಾರ ಮಾಡಿ.

English summary

Sun Transit in Virgo on 17: Not Good For These Zodiac Signs, Do This Remedies To Solve Problem

Sun Transit in Virgo on 17: This transit not good for this transit, do this remedies to get blessing from sun,
Story first published: Saturday, September 17, 2022, 21:13 [IST]
X
Desktop Bottom Promotion