For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ಕ್ಲಾಸ್‌ ಮಾನಸಿಕ ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ವರವಾಗಿದೆ, ಹೇಗೆ?

|

ಕರೊನಾದಿಂದಾಗಿ ಶಾಲೆಗಳು ಬಂದ್ ಆಗಿದೆ. ಇದು ಯಾವ ರೀತಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅಧ್ಯಯನವೊಂದು ನಡೆದಿದ್ದು ಹೊಸ ವಿಚಾರವು ಬಹಿರಂಗಗೊಂಡಿದೆ. ಹೌದು ಸುಮಾರು 1000 ವಿದ್ಯಾರ್ಥಿಗಳ ಮೇಲೆ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಮಧ್ಯ ವಯಸ್ಕ ಮಕ್ಕಳು ಇದೀಗ ರಿಮೋಟ್ ಲರ್ನಿಂಗ್ ನಿಂದಾಗಿ ಅಂದರೆ ಮನೆಯಿಂದಲೇ ತರಗತಿಯನ್ನು ಪಡೆಯುತ್ತಿರುವುದರಿಂದಾಗಿ ಕಡಿಮೆ ಒತ್ತಡಕ್ಕೆ ಒಳಗಾಗುತ್ತಿದ್ದಾರಂತೆ!

13 ರಿಂದ 14 ವಯಸ್ಸಿನ ಹುಡುಗಿಯರಲ್ಲಿ 54 ಶೇಕಡಾದಷ್ಟು ಆತಂಕದ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನ ಹೇಳಿತ್ತು.ಆದರೆ ಇದರ ಪ್ರಮಾಣ ಇದೀಗ 10 ಶೇಕಡಾದಷ್ಟು ಲಾಕ್ ಡೌನ್ ನಿಂದಾಗಿ ಇಳಿಕೆಯಾಗಿದೆಯಂತೆ. ಹುಡುಗರಲ್ಲಿ 26 ಶೇಕಡಾದಷ್ಟಿದ್ದ ಈ ಪ್ರಮಾಣ ಇದೀಗ 18 ಶೇಕಡಾಕ್ಕೆ ಇಳಿಕೆಯಾಗಿದೆ. ತಮ್ಮ ಟೀಚರ್ ಗಳ ಜೊತೆಗೆ ನೇರವಾಗಿ ಮಾತನಾಡುವುದಕ್ಕೆ ಹೆಚ್ಚಿನ ಅವಕಾಶವನ್ನು ಹೊಂದಿದ್ದೇವೆ ಎಂದು ವಿದ್ಯಾರ್ಥಿಗಳು ವರದಿ ಮಾಡಿದ್ದಾರೆ.

ಸರ್ವೇ ನೀಡಿದ ಅಚ್ಚರಿಯ ವರದಿ

ಸರ್ವೇ ನೀಡಿದ ಅಚ್ಚರಿಯ ವರದಿ

ಈ ಎಲ್ಲಾ ಮೇಲಿನ ವಿವರವು ಈ ಲೇಖನ ಪ್ರಕಟಿಸುವಾಗ ಹೆಲ್ತ್‌ ಲೈನ್‌ನಲ್ಲಿ ಸಿಕ್ಕ ಅಂಕಿಅಂಶಗಳನ್ನು ಆಧರಿಸಿರುತ್ತದೆ.ಕೆಲವು ಮಾಹಿತಿಗಳು ಅಧ್ಯಯನದ ಮುಂದಿನ ಹಂತಗಳಲ್ಲಿ ಬದಲಾಗುತ್ತಿರುತ್ತದೆ ಎಂಬುದು ಓದುಗರ ಗಮನದಲ್ಲಿ ಇರಲಿ, ಆದರೆ ನೈರುತ್ಯ ಇಂಗ್ಲೆಂಡ್ ನ ಕೆಲವು ಸಂಶೋಧಕರು ಹಳ್ಳಿಗಳಲ್ಲಿರುವ , ನೆಟ್ ವರ್ಕ್ ಸಿಗದೆ ಶಿಕ್ಷಣದಿಂದ ವಂಚಿತವಾಗಿರುವ ಕೆಲವು ವಿದ್ಯಾರ್ಥಿಗಳು ಹೆಚ್ಚು ಆತಂಕ ಎದುರಿಸುತ್ತಿರಬಹುದು ಎಂದು ಹೇಳುತ್ತಿದ್ದಾರೆ.

ಸ್ನೇಹಿತರು ಮತ್ತು ಕುಟುಂಬದವರು ಎಲ್ಲಿ ಕಾಯಿಲೆ ಬೀಳುತ್ತಾರೇನೋ ಎಂಬ ಭಯವು ಹೆಚ್ಚಿನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಅಷ್ಟೇ ಅಲ್ಲದೆ ಅವರಿಗೆ ಸಾಮಾಜಿಕ ಬೆಂಬಲವೂ ಅವರಿಗೆ ಕಡಿಮೆ ದೊರೆಯುತ್ತಿದೆ ಮತ್ತು ಮನೆಯಲ್ಲೇ ಒಳಗೆ ಕುಳಿತಿರುವಂತಾಗಿದೆ. ಆದರೆ ಯಾವಾಗ ಸರ್ವೇ ಕೈಗೊಂಡರೋ ಆಗ ಅವರಿಗೂ ಆಶ್ಚರ್ಯ ಕಾದಿತ್ತು. ಹಳ್ಳಿಗಳ ಮಕ್ಕಳಲ್ಲೂ ಕೂಡ ಆತಂಕದ ಪ್ರಮಾಣ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಅಧ್ಯಯನ ಹೇಗೆ ಕೈಗೊಳ್ಳಲಾಯಿತು?

ಅಧ್ಯಯನ ಹೇಗೆ ಕೈಗೊಳ್ಳಲಾಯಿತು?

ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದಾರೆ. ಹದಿಹರೆಯದವರ ಮಾನಸಿಕ ಆರೋಗ್ಯ, ಸಾಮಾಜಿಕ ಮಾಧ್ಯಮ ಬಳಕೆಯನ್ನು ಇದು ಆಧರಿಸಿದೆ. ಅಕ್ಟೋಬರ್ 2019 ರಲ್ಲಿ ಇದೇ ವಿಷಯವಾಗಿ ಸರ್ವೇಯನ್ನು ಕೈಗೊಳ್ಳಲಾಗಿತ್ತು. ನಂತರ ಕರೊನಾ ಸಮಸ್ಯೆಯ ನಂತರ ಇದೇ ಸರ್ವೇಯನ್ನು ಎಪ್ರಿಲ್ ಮೇ ತಿಂಗಳಲ್ಲಿ ಕೈಗೊಳ್ಳಲಾಯಿತು.

ನೈರುತ್ಯ ಇಂಗ್ಲೆಂಡಿನ ಸುಮಾರು 1000 ವಿದ್ಯಾರ್ಥಿಗಳನ್ನು ಇದಕ್ಕೆ ಬಳಸಲಾಗಿದ್ದು ಅವರೆಲ್ಲರೂ 8 ನೇ ತರಗತಿಯವರಾಗಿರುತ್ತಾರೆ.

ಅಧ್ಯಯನ ಹೇಳುವುದೇನು?

ಅಧ್ಯಯನ ಹೇಳುವುದೇನು?

ಹುಡುಗಿಯರಲ್ಲಿ 3 ಶೇಕಡಾ ಆತಂಕದ ಪ್ರಮಾಣ ಏರಿಕೆಯಾಗಿದ್ದರೆ ಹುಡುಗರಲ್ಲಿ 2 ಶೇಕಡಾ ಇಳಿಕೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಹುಡುಗ ಹುಡುಗಿಯರಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸುತ್ತಿದೆ.ಅದರಲ್ಲೂ ಹುಡುಗರಲ್ಲಿ ಆರೋಗ್ಯದ ಪ್ರಮಾಣ ಹುಡುಗಿಯರಿಗೆ ಹೋಲಿಕೆ ಮಾಡಿದರೆ ಹೆಚ್ಚೇ ಆಗಿದೆ. ಕರೊನಾ ಸಮಸ್ಯೆ ಕಾಡುವ ಮುನ್ನ ಬಂದ ವರದಿಗೂ ನಂತರ ಬಂದ ವರದಿಗೂ ಬಹಳ ವ್ಯತ್ಯಾಸವಾಗಿದೆ.

ಸಾಮಾಜಿಕ ಜಾಲ ತಾಣದ ಬಳಕೆ ಹೆಚ್ಚಾಗಿರುವ ಕಾರಣದಿಂದಾಗಿ ಹುಡುಗಿಯರಲ್ಲಿ ಆತಂಕ ಪ್ರಮಾಣ ಕಡಿಮೆಯಾಗಿದೆ ಎಂಬುದು ತಿಳಿದುಬಂದಿದೆ.

ಈ ಅಧ್ಯಯನದಿಂದ ಶಾಲೆಗಳು ತಿಳಿಯಬೇಕಾಗಿರುವುದು ಏನು?

ಈ ಅಧ್ಯಯನದಿಂದ ಶಾಲೆಗಳು ತಿಳಿಯಬೇಕಾಗಿರುವುದು ಏನು?

ಎಂಎಸ್ಸಿಯ ಎಮಿಲಿ ವಿಡ್ನಾಲ್ ಈ ಅಧ್ಯಯನದ ಪ್ರಮುಖ ಲೀಡರ್‌ ಆಗಿದ್ದು ಸರ್ವೇಯ ನಂತರ ಸಿಕ್ಕ ಫಲಿತಾಂಶವನ್ನು ನೋಡಿ ಅವರಿಗೆ ಆಶ್ಚರ್ಯವಾಗಿದೆ ಎಂದಿದ್ದಾರೆ. ಎಲ್ಲಾ ಆರೋಗ್ಯ ತಜ್ಞರು ಕೂಡ ಆತಂಕ ಮಕ್ಕಳಲ್ಲಿ ಅಧಿಕವಾಗಿರಬಹುದು ಎಂದು ಆಲೋಚಿಸಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿದ್ದು ವರದಿಯು ವಿರುದ್ಧವಾಗಿ ಬಂದಿದೆ.

ಶಾಲೆ ಅನ್ನುವುದು ಮಕ್ಕಳಿಗೆ ಒತ್ತಡ ಜೀವನವನ್ನು ಸೃಷ್ಟಿಸುತ್ತದೆ. ಪರೀಕ್ಷೆ, ಆತಂಕ, ಇತ್ಯಾದಿ ಇರುತ್ತದೆ. ಆದರೆ ಈಗ ಬಂದಿರುವ ವರದಿಯು ಎಲ್ಲರಿಗೂ ಆಶ್ಚರ್ಯವೇ ಸರಿ. ಶಾಲೆಯ ಪರಿಸರವು ಯಾವ ರೀತಿ ಮಕ್ಕಳಿಗೆ ಆತಂಕ ವಾತಾವರಣ ಸೃಷ್ಟಿ ಮಾಡುತ್ತದೆ ಎಂಬುದನ್ನು ತಿಳಿಸುವ ಮುಂದಿನ ದಿನಗಳಲ್ಲಿ ಅಧ್ಯಯನ ಮಾಡಲಾಗುತ್ತದೆ ಎಂದು ವಿಡ್ನಾಲ್ ತಿಳಿಸಿದ್ದಾರೆ. ನಾವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಲಿದ್ದು ಶಾಲೆಯ ಜೊತೆಗೆ ಹೆಚ್ಚು ಸಂಪರ್ಕ ಹೊಂದಿರದ ಮಕ್ಕಳು ಯಾಕೆ ಅಧಿಕ ಆತಂಕಕ್ಕೆ ಒಳಗಾಗುತ್ತಾರೆ ಎಂಬ ಬಗ್ಗೆ ನಾವು ಅಧ್ಯಯನ ಮಾಡಲಿದ್ದೇವೆ. ದೈಹಿಕವಾಗಿ ಶಾಲೆಯಲ್ಲಿರುವುದು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬ ಬಗ್ಗೆಯೂ ಮುಂದಿನ ದಿನಗಳಲ್ಲಿ ಹೋಲಿಕೆಯ ಅಧ್ಯಯನಗಳು ನಡೆಯಲಿವೆ. ಭವಿಷ್ಯದ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಗಳು ದೊಡ್ಡ ಪಾತ್ರವನ್ನು ಸಮಾಜದ ಮೇಲೆ ಮಾಡಲಿವೆ ಎನ್ನುತ್ತಾರೆ ವಿಡ್ನಾಲ್.

ತಮ್ಮ ಮಕ್ಕಳಿಗೆ ಪೋಷಕರು ಹೇಗೆ ಸಹಾಯ ಮಾಡಬಹುದು?

ತಮ್ಮ ಮಕ್ಕಳಿಗೆ ಪೋಷಕರು ಹೇಗೆ ಸಹಾಯ ಮಾಡಬಹುದು?

ರುಟ್ ಗರ್ ಹೆಲ್ತ್ ಯುನಿವರ್ಸಿಟಿಯ ಬಿಹೇವಿಯರ್ ಹೆಲ್ತ್ ಕೇರ್ ನ ಸಿಇಓ ಆಗಿರುವ ಫ್ರಾಂಕ್ ಎ, ಗಿನ್ನಾಸಿ ಅವರು ಯುವಕ ಯುವತಿಯರಲ್ಲಿ ಆತಂಕಮತ್ತು ಖಿನ್ನತೆಗೆ ಅನೇಕ ರೀತಿಯ ಕಾರಣಗಳಿವೆ. ಇವುಗಳಲ್ಲಿ ಆಹಾರದ ಅಸಮರ್ಪಕತೆ, ಆರ್ಥಿಕ ಒತ್ತಡ, ವಸತಿ ಅಸ್ಥಿರತೆ, ಪೋಷಕರ ನಡುವಿನ ಕಲಹ, ಕೌಟುಂಬಿಕ ಹಿಂಸೆ, ಸ್ವಾಭಿಮಾನದ ಸಮಸ್ಯೆಗಳು, ಬೆದರಿಸುವಿಕೆ, ಸಾಮಾಜಿಕ ಬಹಿಷ್ಕಾರದ ಸ್ಥಿತಿ, ಶೈಕ್ಷಣಿಕ ನಿರೀಕ್ಷೆಗಳು, ಪ್ರಣಯ ಸಂಬಂಧದ ಸಮಸ್ಯೆಗಳು ಸೇರಿದಂತೆ ಇನ್ನೂ ಹಲವು ಇವೆ ಎಂದಿದ್ದಾರೆ. ಆದರೆ ವಯಸ್ಸಿನ ಮಕ್ಕಳಲ್ಲಿ ಸ್ಥಿರತೆ ಇರಬೇಕಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಪ್ರತಿಯೊಬ್ಬ ಟೀನೇಜರ್ ಗಳೂ ಕೂಡ ಸಲಹೆ, ಬೆಂಬಲ,ನಂಬಿಕೆ ಮತ್ತು ಪ್ರೀತಿಯೇ ಸ್ಥಿರ ಮೂಲವಾಗಿದೆ.

ಪ್ರತಿ ದಿನದ ನಿದ್ದೆ. ಊಟ, ವ್ಯಾಯಾಮ ಇದೆಲ್ಲವುದಕ್ಕೂ ಪೋಷಕರು ಅವರಿಗೆ ಸಲಹೆ ನೀಡಬೇಕು. ಸಾಮಾಜಿಕ ಸಂಪರ್ಕದ ಬಗ್ಗೆಯೂ ಕೂಡ ಪೋಷಕರು ಜಾಗೃತೆ ವಹಿಸಬೇಕು. ಸ್ವ-ರಕ್ಷಣೆಯ ಪಾಠ ಮಾಡಬೇಕು. ದೈಹಿಕ ದೂರ ಕಾಪಾಡಿಕೊಳ್ಳುವುದು, ಕೈ ತೊಳೆದುಕೊಳ್ಳುವುದು, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿ ಹೇಳುವುದು ಅವರ ಕರ್ತವ್ಯ. ವಿರಾಮದ ನಂತರ ಮಕ್ಕಳು ಪುನಃ ಶಾಲೆಗೆ ತೆರಳಲು ಅವರು ಒದ್ದಾಡಬಹುದು. ಹೊಸ ಬದಲಾವಣೆಗೆ ಅವರು ತೆರೆದುಕೊಳ್ಳಬೇಕಾಗುತ್ತದೆ. ಆ ಸಮಯಕ್ಕೆ ಶಾಲೆಗಳು ಅವರಿಗೆ ಬಹಳ ಭಿನ್ನವೆನ್ನಿಸಬಹುದು. ಪೋಷಕರು ಸಾಮಾಜಿಕ ಅಂತರ ಸೇರಿದಂತೆ ಹಲವು ಭದ್ರತಾ ವಿಚಾರದ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಬೇಕಾಗುತ್ತದೆ. ಮಕ್ಕಳ ಆತಂಕದ ಬಗ್ಗೆ ಪೋಷಕರು ಯಾವಾಗಲೂ ಒಂದು ಕಣ್ಣಿಟ್ಟಿರಬೇಕು ಎಂದು ಸಲಹೆ ನೀಡುತ್ತಾರೆ ವಿಡ್ನಾಲ್.ಒಂದು ವೇಳೆ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಶಾಲೆಯ ಜೊತೆಗೆ ನೇರ ಸಂಪರ್ಕದಲ್ಲಿ ಪೋಷಕರು ಇರಬೇಕಾಗುತ್ತದೆ.

English summary

Some Teens Experiencing Lower Levels of Anxiety with Remote Schooling

Study says some teens experiencing lower levels of anxiety with remote schooling, read on.
X