For Quick Alerts
ALLOW NOTIFICATIONS  
For Daily Alerts

ಸೂರ್ಯಗ್ರಹಣ 2021: ಮಾಡಬೇಕಾದ, ಮಾಡಬಾರದ ಕೆಲಸಗಳು

|

ಈ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. ಕೆಲ ದಿನಗಳ ಹಿಂದೆಯಷ್ಟೇ ಚಂದ್ರಗ್ರಹಣಕ್ಕೆ ಭೂಮಿಯ ಕೆಲ ಪ್ರದೇಶಗಳು ಸಾಕ್ಷಿಯಾಗಿದ್ದು, ಇದೀಗ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸಲಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು, ಅದನ್ನು ರಿಂಗ್ ಆಫ್ ಫೈರ್(ಬೆಂಕಿಯ ಉಂಗುರ) ಎಂದು ಕರೆಯಲಾಗಿದೆ.

Annular Solar Eclipse 2020: Dos and don’ts

ಸೂರ್ಯಗ್ರಹಣವೆಂದರೆ ಸೂರ್ಯ, ಚಂದ್ರ ಮತ್ತು ಭೂಮಿಯು ಒಂದೇ ಪಥದಲ್ಲಿ ಬರುವುದು. ಚಂದ್ರನು ಸೂರ್ಯನಿಗೆ ಅಡ್ಡವಾಗಿ ಬರುವ ಪರಿಣಾಮವಾಗಿ ಭೂಮಿಯ ಮೇಲ್ಮೈ ಮೇಲೆ ನೆರಳು ಕಾಣಿಸುವುದು. ಇದನ್ನು ಗ್ರಹಣವೆಂದು ಕರೆಯಲಾಗುತ್ತದೆ.

ಎಷ್ಟೊತ್ತಿಗೆ ಘಟಿಸಲಿದೆ?

ಎಷ್ಟೊತ್ತಿಗೆ ಘಟಿಸಲಿದೆ?

ಜೂನ್ 10ರ ಸೂರ್ಯಗ್ರಹಣ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1:42ಕ್ಕೆ ಆರಂಭಗೊಂಡು 6:41ಕ್ಕೆ ಕೊನೆಗೊಳ್ಳಲಿದೆ.

ಈ ವರ್ಷದ ಮೊದಲ ಸೂರ್ಯಗ್ರಹಣ ಅಥವಾ ಈ ಉಂಗುರ ಸೂರ್ಯಗ್ರಹಣವು ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಗೋಚರವಾಗಲಿದೆ. ಸೈಬೀರಿಯಾ ಮತ್ತು ಉತ್ತರ ಧ್ರುವದಲ್ಲಿಯೂ ಗ್ರಹಣ ಕಾಣಿಸಲಿದೆ. ಪೂರ್ವ ಕರಾವಳಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾಗಶಃ ಗೋಚರಿಸಲಿದೆ ಆದರೆ ಭಾರತ, ಅಮೆರಿಕದಲ್ಲಿ ಗ್ರಹಣ ಕಾಣಿಸುವುದಿಲ್ಲ. ಇನ್ನೂ ಈ ವರ್ಷದ ಇನ್ನೊಂದು ಸೂರ್ಯಗ್ರಹಣ ಈ ವರ್ಷದ ಅಂತ್ಯಕ್ಕೆ ಗೋಚರವಾಗಲಿದ್ದು, ಅದು ಕೂಡ ಭಾರತಕ್ಕೆ ಅಗೋಚರ ಎನ್ನಲಾಗುತ್ತಿದೆ.

ವಲಯಾಕಾರದ ಸೂರ್ಯಗ್ರಹಣದಲ್ಲಿ ಏನಾಗುವುದು?

ವಲಯಾಕಾರದ ಸೂರ್ಯಗ್ರಹಣದಲ್ಲಿ ಏನಾಗುವುದು?

ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಬಹು ದೂರದಲ್ಲಿದ್ದಾಗ ಸೂರ್ಯನಿಗೆ ಅಡ್ಡ ಬರುವ ಪರಿಣಾಮ ಅದು ಉಂಗುರ ತೊಡಿಸಿದ ರೀತಿಯಲ್ಲಿ ಕಾಣಿಸಲಿದೆ ಎಂದು ನಾಸಾ ಹೇಳುವುದು. ಇದನ್ನೇ ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ದೂರದಲ್ಲಿರುವ ಕಾರಣ ಚಂದ್ರನು ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳುವುದಲ್ಲದೆ, ಸೂರ್ಯನ ಬೆಳಕು ಭೂಮಿಗೆ ಬರುವುದನ್ನು ಸಂಪೂರ್ಣವಾಗಿ ತಡೆಯದೇ, ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ. ಹೀಗಾಗಿ ಸೂರ್ಯನ ಹೊರಭಾಗವಷ್ಟೇ ವೃತ್ತಾಕಾರವಾಗಿ ಕಾಣಿಸಲಿದ್ದು, ಅದು ಉಂಗುರ ತೊಡಿಸಿದ ಮಾದರಿಯಲ್ಲಿ ಗೋಚರಿಸುತ್ತದೆ.

ಏನು ಮಾಡಬೇಕು?:

ಏನು ಮಾಡಬೇಕು?:

ಜನರು ಹೆಚ್ಚಾಗಿ ಗ್ರಹಣ ಸಂದರ್ಭದಲ್ಲಿ ಮನೆಯೊಳಗೆ ಇರುವುದು ಸೂಕ್ತ.

ಯಾವುದೇ ಆಹಾರವನ್ನು ಈ ಸಮಯದಲ್ಲಿ ಸೇವಿಸುವಂತಿಲ್ಲ.

ಆಹಾರ ಮತ್ತು ನೀರಿಗೆ ತುಳಸಿ ಎಲೆಗಳನ್ನು ಹಾಕಿಟ್ಟರೆ ಅದರಿಂದ ಗ್ರಹಣದ ಪರಿಣಾಮ ಕಡಿಮೆ ಆಗುವುದು.

ಗ್ರಹಣ ಮುಕ್ತಾಯವಾದ ಬಳಿಕ ಸ್ನಾನ ಮಾಡಿ ಬೆರೆ ಬಟ್ಟೆ ಹಾಕಿಕೊಳ್ಳಬೇಕು.

ಸೂರ್ಯ ದೇವರಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸುತ್ತಿರಬೇಕು.

ಗರ್ಭಿಣಿಯರು ಮನೆಯೊಳಗೆ ಇರಬೇಕು ಮತ್ತು ಸಂತಾನ ಗೋಪಾಲ ಮಂತ್ರ ಪಠಿಸಬೇಕು.

ಏನು ಮಾಡಬಾರದು?

ಏನು ಮಾಡಬಾರದು?

ಸೂರ್ಯ ಗ್ರಹಣದ ವೇಳೆ ಯಾವುದೇ ರೀತಿಯ ದೇವರ ಪೂಜೆಯಂತಹ ಪವಿತ್ರ ಕಾರ್ಯ ಮಾಡಬಾರದು.

ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಬಾರದು. ಇದರಿಂದ ಕಣ್ಣಿಗೆ ಹಾನಿ ಆಗುವುದು.

ಖಗೋಳ ಪ್ರೇಮಿಗಳು ಬೈನಾಕ್ಯೂಲರ್, ಟೆಲಿಸ್ಕೋಪ್ ಅಥವಾ ಒಪ್ಟಿಕಲ್ ಕ್ಯಾಮರಾ ದಿಂದ ಗ್ರಹಣವನ್ನು ವೀಕ್ಷಿಸಬಹುದು. ಸಾಮಾನ್ಯ ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪ್ ಬಳಸಬೇಡಿ.

ಗರ್ಭಿಣಿಯರು ಮನೆಯಿಂದ ಹೊರೆಗೆ ಬರುವಂತಿಲ್ಲ.

ಗ್ರಹಣ ವೇಳೆ ಆಹಾರ ಸೇವಿಸಬೇಡಿ.

English summary

Solar Eclipse June 2021: Dos and don’ts

Here we are discussing about Annular Solar Eclipse 2020: Dos and don’ts on that day. The annularity, when only a ring of fire is visible, usually ranges from less than a second to over 12 minutes. Read more.
X
Desktop Bottom Promotion