For Quick Alerts
ALLOW NOTIFICATIONS  
For Daily Alerts

ಅಮವಾಸ್ಯೆಯಂದು ಬರುವ ಜೂನ್ 21ರ ಸೂರ್ಯಗ್ರಹಣದ ವಿಶೇಷತೆ ಏನು?

|

ಜೂನ್‌ 21 ಭಾನುವಾರ ದಿನವನ್ನು ಖಗೋಳ ವಿಜ್ಞಾನಿಗಳು ಹಾಗೂ ಜ್ಯೋತಿಷ್ಯ ಶಾಸ್ತ್ರಜ್ಞರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆ ದಿನ ಖಂಡಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದೆ. ಖಗೋಳ ವಿಜ್ಞಾನಿಗಳಿಗೆ ಸೂರ್ಯಗ್ರಹಣ ಎನ್ನುವುದು ಬಾಹ್ಯಾಕಾಶದಲ್ಲಿ ನಡೆಯು ವಿಸ್ಮಯ, ಅದೇ ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಸೂರ್ಯಗ್ರಹಣದ ಪ್ರಭಾವ ರಾಶಿಗಳ ಮೇಲೆ ಬೀರುತ್ತದೆ.

Solar Eclipse On June 21, 2020

ಜೂನ್‌ 21ರಂದು ನಡೆಯುವ ಸೂರ್ಯಗ್ರಹಣ 2020ರ ಮೊದಲೇ ಸೂರ್ಯಗ್ರಹಣವಾಗಿದೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

ಅಮವಾಸ್ಯೆಯಂದು ನಡೆಯುವ ಸೂರ್ಯಗ್ರಹಣ

ಅಮವಾಸ್ಯೆಯಂದು ನಡೆಯುವ ಸೂರ್ಯಗ್ರಹಣ

ಸೂರ್ಯಗ್ರಹಣ ಅಮವಾಸ್ಯೆಯಂದು ಬರುತ್ತದೆ. ಸೂರ್ಯಗ್ರಹಣಕ್ಕೆ ಕಾರಣವೇನೆಂದು ವೈಜ್ಞಾನಿಕವಾಗಿ ನೋಡುವುದಾದರೆ ಭೂಮಿ ಮತ್ತು ಸೂರ್ಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುವುದು. ಚಂದ್ರನು ಅಡ್ಡ ಬಂದಾಗ ಸೂರ್ಯನ ಬೆಳಕು ಭೂಮಿಗೆ ಬೀಳದೆ ಕತ್ತಲು ಆವರಿಸುತ್ತದೆ. ಈ ಬಾರಿ ಚಂದ್ರನ ನೆರಳು ಸೂರ್ಯನ ಪ್ರತಿಶತ 99ರಷ್ಟು ಆವರಿಸಿಕೊಳ್ಳಲಿದೆ. ಈ ರೀತಿಯ ಸೂರ್ಯಗ್ರಹಣ 18 ವರ್ಷಗಳಿಗೊಮ್ಮೆ ನಡೆಯುತ್ತದೆ.

 ಎಷ್ಟು ಹೊತ್ತಿಗೆ ಸೂರ್ಯಗ್ರಹಣ ನಡೆಯಲಿದೆ?

ಎಷ್ಟು ಹೊತ್ತಿಗೆ ಸೂರ್ಯಗ್ರಹಣ ನಡೆಯಲಿದೆ?

ಸೂರ್ಯಗ್ರಹಣ ಬೆಳಗ್ಗೆ 9.15ರಿಂದ 3.03ರವರೆಗೆ ಸಂಭವಿಸಲಿದೆ.

ಸೂರ್ಯಗ್ರಹಣದ ಸೂತಕದ ಅವಧಿ ಜೂನ್‌ 20, ರಾತ್ರಿ 10:20ರಿಂದ ಪ್ರಾರಂಭವಾಗಲಿದೆ.

ಭಾಗಶಃ ಸೂರ್ಯಗ್ರಹಣ ಪ್ರಾರಂಭ: ಜೂನ್ 21, ಬೆಳಗ್ಗೆ 9.15

ಪೂರ್ಣ ಸೂರ್ಯಗ್ರಹಣ : ಜೂನ್ 21, ಬೆಳಗ್ಗೆ 10:17

ಗರಿಷ್ಠ ಗ್ರಹಣ ಸಮಯ: ಮಧ್ಯಾಹ್ನ 12 ಗಂಟೆ 10 ನಿಮಿಷ

ಸೂರ್ಯಗ್ರಹಣ ಕೊನೆಯಾಗುವ ಸಮಯ: 3:03ಕ್ಕೆ

ಭಾರತದಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಈ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಯುರೋಪ್‌ನ ಕೆಲವು ಭಾಗಗಳಲ್ಲಿ, ಉತ್ತರ ಆಸ್ಟ್ರೇಲಿಯಾ, ಪೆಸೆಫಿಕ್ ಮತ್ತು ಹಿಂದೂ ಮಹಾ ಸಾಗರದ ಭಾಗಗಳಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯಗ್ರಹಣದ ಬಗ್ಗೆ ಭಯ ಪಡುವ ಅಗ್ಯತವಿದೆಯೇ?

ಸೂರ್ಯಗ್ರಹಣದ ಬಗ್ಗೆ ಭಯ ಪಡುವ ಅಗ್ಯತವಿದೆಯೇ?

ಸೂರ್ಯಗ್ರಹಣದಿಂದ ಮನಹ ಕುಲಕ್ಕೆ ನಾಶ ಅಂತೆಲ್ಲಾ ಕೆಲ ಜ್ಯೋತಿಷ್ಯರು ಭಯ ಪಡಿಸುತ್ತಾರೆ. ಆದರೆ ಆ ರೀತಿ ಭಯ ಪಡುವ ಅಗ್ಯತವಿಲ್ಲ, ಗ್ರಹಣದ ವೇಳೆ ಕೆಲ ನಕಾರಾತ್ಮಕ ಪರಿಣಾಮಗಳು ಇರುವುದು ಸಹಜ, ಆದರೆ ಹಾಗಂತ ಭಯ ಪಡಬೇಡಿ, ಸೂರ್ಯಗ್ರಹಣವನ್ನು ನೇರವಾಗಿ ನೋಡದೆ ಇದಕ್ಕಾಗಿ ವ್ಯವಸ್ಥೆ ಮಾಡಿದ ಕಡೆ ಹೋಗಿ ನೋಡಬಹುದು.

ಸೂರ್ಯಗ್ರಹಣದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ಸೂರ್ಯಗ್ರಹಣದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ನೀವು ಸೂರ್ಯಗ್ರಹಣ ನೋಡಲು ಬಯಸುವುದಾದರೆ ಬೈನಾಕ್ಯೂಲರ್‌, ದೂರದ್ಶಕಗಳು, ಸರಿಯಾದ ಫಿಲ್ಟರ್‌ಗಳನ್ನು ಹೊಂದಿರುವ ಕ್ಯಾಮೆರಾಗಳ ಮೂಲಕ ನೋಡಬಹುದು. ಆದರೆ ಸಾಮಾನ್ಯ ಬೈನಾಕ್ಯೂಲರ್, ದೂರದರ್ಶಕ ಬಳಸಿ ನೋಡಲು ಹೋಗಬೇಡಿ, ಕಣ್ಣಿಗೆ ಹಾನಿಯುಂಟಾಗುವುದು.

ಇನ್ನು ಜ್ಯೋತಿಷ್ಯ ಶಾಸ್ತ್ರವು ಏನು ಹೇಳುತ್ತದೆ?

ಇನ್ನು ಜ್ಯೋತಿಷ್ಯ ಶಾಸ್ತ್ರವು ಏನು ಹೇಳುತ್ತದೆ?

ಈ ಸಮಯದಲ್ಲಿ ಆಹಾರ ತಯಾರಿಸುವುದು, ಆಹಾರ ಸೇವನೆ ಮಾಡುವುದು ಮಾಡಬಾರದು ಎನ್ನುತ್ತದೆ. ಈ ಸಮಯದಲ್ಲಿ ಜಪ-ತಪಗಳನ್ನು ಮಾಡಿದರೆ ಒಳ್ಳೆಯದು. ಇನ್ನು ಗರ್ಭಿಣಿಯರಿಗೆ, ಕಾಯಿಲೆ ಬಿದ್ದವರಿಗೆ ಹಾಗೂ ಮಕ್ಕಳಿಗೆ ಆಹಾರ ಸೇವಿಸುವುದರ ಬಗ್ಗೆ ಯಾವುದೇ ಕಟ್ಟುಗಳಿಲ್ಲ ಎಂದು ಕೂಡ ಹೇಳಿದೆ.

ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ನಿಮ್ಮ ನಂಬಿಕೆಗಳಿಗೆ ಬಿಟ್ಟದ್ದು, ಆದರೆ ಬರೀಗಣ್ಣಿನಲ್ಲಿ ಮಾತ್ರ ಆಕಾಶ ನೋಡಬೇಡಿ, ಇದರಿಂದ ಕಣ್ಣಿಗೆ ಹಾನಿ ತಪ್ಪಿದ್ದಲ್ಲ ಎನ್ನುವುದು ವೈಜ್ಞಾನಿಕವಾಗಿಯೂ ಸತ್ಯ,

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Solar Eclipse June 2020: Date, Time, Do' and Don'ts

An annular solar eclipse will occur on June 21, 2020. A solar eclipse occurs when the Moon passes between Earth and the Sun.
Story first published: Monday, June 15, 2020, 15:41 [IST]
X
Desktop Bottom Promotion