For Quick Alerts
ALLOW NOTIFICATIONS  
For Daily Alerts

ಜೂ. 10ರ ಸೂರ್ಯಗ್ರಹಣದ ಸಮಯದಲ್ಲಿ ಕಂಡು ಬರಲಿದೆ ಬೆಂಕಿಯ ಉಂಗುರ

|

ಜೂನ್‌.10ಕ್ಕೆ 2021ರ ಮೊದಲ ಸೂರ್ಯಗ್ರಹಣ. ಇದು ವಾರ್ಷಿಕ ಸೂರ್ಯಗ್ರಹಣವಾಗಿದ್ದು ಈ ಸೂರ್ಯಗ್ರಹಣದ ವೇಳೆ ಬೆಂಕಿಯ ಉಂಗುರ ಕೂಡ ಗೋಚರಿಸಲಿದೆ.

ನಭೋಮಂಡಲದಲ್ಲಿ ನಡೆಯುವ ಈ ವಿಸ್ಮಯವನ್ನು ವಿಜ್ಞಾನಿಗಳು ವೈಜ್ಞಾನಿಕ ದೃಷ್ಟಿಯಿಂದ ವಿವರಿಸಿದರೆ , ಜ್ಯೋತಿಷ್ಯವೂ ವೈದಿಕ ಶಾಸ್ತ್ರದ ಆಧಾರದ ಮೇಲೆ ಇದರಿಂದಾಗುವ ಪರಿಣಾಮದ ಕುರಿತು ಹೇಳುತ್ತದೆ. ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ ನೋಡುತ್ತೀರೋ ಅಥವಾ ಜ್ಯೋತಿಷ್ಯವನ್ನು ನಂಬುತ್ತೀರೋ ಅದು ನಿಮ್ಮ ಸ್ವಂತ ಇಚ್ಛೆಗೆ ಬಿಟ್ಟದ್ದು.

ಜೂನ್‌ 10ರಂದು ಸಂಭವಿಸಲಿರುವ ಸೂರ್ಯಗ್ರಹಣದಂದು ಬೆಂಕಿಯ ಉಂಗುರ ಅಥವಾ ರಿಂಗ್‌ ಆಫ್‌ ಫೈರ್‌ ಕೂಡ ಕಂಡು ಬರುತ್ತಿದ್ದು, ಈ ಕೌತುಕದ ವೀಕ್ಷಣೆಗೆ ಇಡೀ ವಿಶ್ವ ಸಜ್ಜಾಗಿದೆ. ಏನಿದು ರಿಂಗ್‌ ಆಫ್ ಫೈರ್‌, ಇದು ಉಂಟಾಗಲು ಕಾರಣವೇನು ಎಂದು ನೋಡೋಣ ಬನ್ನಿ:

ರಿಂಗ್‌ ಆಫ್‌ ಫೈರ್ ಅಥವಾ ಬೆಂಕಿ ಉಂಗುರ ಎಂದರೇನು?

ರಿಂಗ್‌ ಆಫ್‌ ಫೈರ್ ಅಥವಾ ಬೆಂಕಿ ಉಂಗುರ ಎಂದರೇನು?

ಚಂದ್ರ ಭೂಮಿಯಿಂದ ತುಂಬಾ ದೂರ ಸರಿದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಅಂತರದಿಂದಾಗಿ ಚಂದ್ರನ ಗಾತ್ರ ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವಷ್ಟು ದೊಡ್ಡದಾಗಿರದ ಕಾರಣ, ಸೂರ್ಯನಿಂದ ಹೊರ ಹೊಮ್ಮುವ ಸಂಪೂರ್ಣ ಬೆಳಕನ್ನು ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ, ಆಗ ಬೆಂಕಿಯ ಉಂಗುರದಂಥ ಬೆಳಕು ಕಂಡು ಬರುವುದು. ಇದನ್ನು ರಿಂಗ್‌ ಆಫ್‌ ಫೈರ್ ಅಥವಾ ಬೆಂಕಿಯ ಉಂಗುರ ಎಂದು ಕರೆಯಲಾಗುವುದು.

ಬೆಂಕಿಯ ಉಂಗುರ ಭಾರತದಲ್ಲಿ ಕಂಡು ಬರುವುದೇ?

ಬೆಂಕಿಯ ಉಂಗುರ ಭಾರತದಲ್ಲಿ ಕಂಡು ಬರುವುದೇ?

ಬೆಂಕಿಯ ಉಂಗುರ ಭಾರತದಲ್ಲಿ ಕಂಡು ಬರುವುದಿಲ್ಲ. ಕೆನಡಾದಲ್ಲಿ ರಿಂಗ್‌ ಆಫ್‌ ಫೈರ್ 3 ನಿಮಿಷಗಳವರೆಗೆ ಗೋಚರಿಸಲಿದೆ. ಗ್ರೀನ್‌ಲ್ಯಾಂಡ್‌, ಸೈಬೇರಿಯಾ, ಉತ್ತರ ಧ್ರುವಗಳಲ್ಲಿ ಕಂಡು ಬರಲಿದೆ. ಯುಎಸ್‌ನಲ್ಲಿ ರಿಂಗ್‌ ಆಫ್‌ ಫೈರ್‌ ಮಿಸ್‌ ಆಗಲಿದೆ, ಪೂರ್ವ ಕರಾವಳಿ ಮತ್ತು ಮೇಲಿನ ಮಧ್ಯ ಪಶ್ಚಿಮ ಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಂಡು ಬರಲಿದೆ.

ಸೂರ್ಯಗ್ರಹಣದ ಸೂತಕ ಸಮಯ:

ಸೂರ್ಯಗ್ರಹಣದ ಸೂತಕ ಸಮಯ:

ಜೂನ್‌ 10ರಂದು 01:42ಕ್ಕೆ ಪ್ರಾರಂಭವಾಗಿ ಸಂಜೆ 6:41ರವರೆಗೆ ಇರಲಿದೆ. ಸೂರ್ಯಗ್ರಹಣ ಬರಿಗಣ್ಣಿನಲ್ಲಿ ನೋಡಬೇಡಿ, ಸೌರ ಕನ್ನಡಕ ಬಳಸಿ ನೋಡಬಹುದು. ಹಾಳಾಗಿರುವ ಸೌರ ಕನ್ನಡಕ ಬಳಸಬೇಡಿ.

ಈ ವರ್ಷದ ಮತ್ತೊಂದು ಸೂರ್ಯಗ್ರಹಣ ಯಾವಾಗ?

ಈ ವರ್ಷದ ಮತ್ತೊಂದು ಸೂರ್ಯಗ್ರಹಣ ಯಾವಾಗ?

2021ರ ಮತ್ತೊಂದು ಸೂರ್ಯಗ್ರಹಣ ಡಿಸೆಂಬರ್‌ 4ರಂದು ಸಂಭವಿಸಲಿದೆ. ಇದು ಕೂಡ ಜೂ. 10ರ ಸೂರ್ಯಗ್ರಹಣದಂತೆ ಭಾರತದಲ್ಲಿ ಕಂಡು ಬರುವುದಿಲ್ಲ. ದಕ್ಷಿಣ ಅಮೆರಿಕ, ಪೆಸಿಫಿಕ್ ಸಾಗರ, ಅಟ್ಲಾಂಟಿಕ ಮಹಾ ಸಾಗರ, ಹಿಂದೂ ಮಹಾ ಸಾಗರದ ಕೆಲವು ಭಾಗಗಳಲ್ಲಿ, ಅಂಟಾರ್ಕ್ಟಿಕಾದಲ್ಲಿ ಕಂಡು ಬರುವುದು.

English summary

Solar Eclipse 2021: The 'Ring Of Fire' Coming Up On June 10; How to view Ring of Fire Solar Eclipse in India

Solar Eclipse 2021: The 'Ring Of Fire'Coming Up On June 10; How to view Ring of Fire Solar Eclipse in India
Story first published: Tuesday, June 8, 2021, 15:12 [IST]
X
Desktop Bottom Promotion