Just In
- 3 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ಕನ್ಯಾ, ವೃಶ್ಚಿಕ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- 11 hrs ago
ಮಳೆಗಾಲದಲ್ಲಿ ಉಲ್ಬಣವಾಗುವ ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಟಿಪ್ಸ್
- 15 hrs ago
ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿದ್ದರೆ ಉತ್ತಮ
- 16 hrs ago
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
Don't Miss
- Sports
IPL 2022: ಕ್ವಾಲಿಫೈಯರ್ 1 ಪಂದ್ಯ ನಿಗದಿ, ಗುಜರಾತ್ ಜೊತೆ ಸೆಣಸಾಡಲಿದೆ ಈ ತಂಡ; ಇಲ್ಲಿದೆ ವಿವರ
- News
ಅಂತರಾಷ್ಟ್ರೀಯ ಯೋಗ ದಿನಾಚರಣೆ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಭೇಟಿ
- Movies
ಕಾನ್ ಫೆಸ್ಟಿವಲ್ ಬಗ್ಗೆ ಕಿರುತೆರೆ ನಟಿ ಶ್ವೇತಾ ಬಸು ಪ್ರಸಾದ್ ಅಸಮಾಧಾನ
- Technology
ಕಡಿಮೆ ಬೆಲೆಯಲ್ಲಿ ಆಕರ್ಷಕ ಪ್ರಯೋಜನ ಪಡೆದ ಟಾಪ್ ಏರ್ಟೆಲ್ ಪ್ಲ್ಯಾನ್ಗಳು!
- Finance
ಮೇ 20ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಕಾಯುವಿಕೆ ಅಂತ್ಯ: ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021 ಸೂರ್ಯಗ್ರಹಣ: ಗರ್ಭಿಣಿಯರು ಈ ನಿಯಮಗಳನ್ನು ತಪ್ಪದೇ ಪಾಲಿಸಿ
ಈ ವರ್ಷದ (2021) ಮೊದಲ ಸೂರ್ಯ ಗ್ರಹಣ ಇದೇ ಜೂನ್ 10ರಂದು ಕಾಣಿಸಿಕೊಳ್ಳಲಿದೆ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಆಗಮಿಸಲಿದ್ದು ಅಂದು ಸೂರ್ಯನ ಬಿಸಿಲು ಭೂಮಿಗೆ ಬೀಳುವುದನ್ನು ಚಂದ್ರ ತಡೆಯುತ್ತಾನೆ ಇದನ್ನೇ ಸೂರ್ಯ ಗ್ರಹಣ ಎನ್ನುತ್ತಾರೆ.
2021ನೇ ಸಾಲಿನ ಸೂರ್ಯಗ್ರಹಣದ ಸಂಪೂರ್ಣ ಪ್ರಕ್ರಿಯೆ ಮಧ್ಯಾಹ್ನ 1.42ರಿಂದ ಸಂಜೆ 6.41ರವರೆಗೆ ಘಟಿಸಲಿದ್ದು, ಪೂರ್ಣ ಸೂರ್ಯ ಮರೆಯಾಗುವ ಸಮಯ 3 ನಿಮಿಷ 51 ಸೆಕೆಂಡ್ಗಳ ಕಾಲ ಘಟಿಸಲಿದೆ ಎಂದು ನಾಸಾ ಹೇಳಿದೆ.
ಹಿಂದೂ ಧರ್ಮದಲ್ಲಿ ಹಾಗೂ ಜ್ಯೋತಿಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ಕೆಲವು ನಿರ್ಬಂಧಗಳು ಹಾಗೂ ಕಟ್ಟುಪಾಡುಗಳಿವೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನಿಂದ ಬಿಡುಗಡೆಯಾಗುವ ಅತೀ ಸೂಕ್ಞ್ಮ ಕಿರಣಗಳು ಹಾನಿಕರ ಎಂದು ಹೇಳಲಾಗುತ್ತದೆ. ಆದ್ದರಿಂದ ಸೂರ್ಯಗ್ರಹಣದ ಸಮಯದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಲೇಬಾರದು ಎಂಬ ದೊಡ್ಡ ಪಟ್ಟಿಯೇ ಇದೆ.
ಅದರಲ್ಲೂ ನಿತ್ಯ ವಿಶೇಷ ಕಾಳಜಿವಹಿಸುವ ಗರ್ಭಿಣಿಯರನ್ನು ಈ ಸಮಯದಲ್ಲಿ ಇನ್ನಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಅವರು ಪ್ರತಿಯೊಂದು ಹೆಜ್ಜೆಯಲ್ಲೂ ಇನ್ನಷ್ಟು ಜಾಗ್ರತೆವಹಿಸಬೇಕಿದೆ. ಗ್ರಹಣ ಮಗು ಹಾಗೂ ತಾಯಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಈ ವರ್ಷದ ಸೂರ್ಯಗ್ರಹದ ವೇಳೆ ಗರ್ಭಿಣಿಯರು ಹೇಗಿರಬೇಕು?, ಯಾವುದನ್ನು ಮಾಡಬೇಕು?, ಏನನ್ನು ಮಾಡಲೇಬಾರದು?..... ಇಲ್ಲಿದೆ ಉತ್ತರ.
1. ಸೂರ್ಯ ಗ್ರಹಣದ ವೇಳೆ ಯಾವುದೇ ಕಾರಣಕ್ಕೂ ಗರ್ಭಿಣಿಯರು ಮನೆಯಿಂದ ಹೊರಗಡೆ ಹೋಗಲೇಬೇಡಿ.
2. ಸೂರ್ಯನನ್ನು ನೋಡುವ ಪ್ರಯತ್ನ ಮಾಡಲೇಬೇಡಿ.
3. ಗ್ರಹಣದ ವೇಳೆ ಪ್ರಯಾಣ ನಿಷಿದ್ಧ.
4. ಸೂರ್ಯ ಗ್ರಹಣದ ವೇಳೆ ಗರ್ಭಿಣಿಯರು ಯಾವುದೇ ರೀತಿಯ ಮೆಟಲ್ ವಸ್ತುಗಳನ್ನು ಧರಿಸಬೇಡಿ. ಉದಾಹರಣೆಗೆ ಹೇರ್ಪಿನ್, ಖಡ, ಸೂಜಿ ಇತರೆ ಯಾವುದೇ ಮೆಟಲ್ ವಸ್ತು ಬಳಸಬೇಡಿ.
5. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾನಸಿಕ ಶಾಂತಿಗೆ ಭಂಗವಾಗುವಂಥ, ರಕ್ತದೊತ್ತಡ ಹೆಚ್ಚಾಗುವಂಥ ಚಿಂತನೆಗಳನ್ನು ಮಾಡಬೇಡಿ. ಗೊಂದಲ, ಭಯ ಬೇಡ.
6. ಗ್ರಹಣದ ವೇಳೆ ಯಾವುದೇ ರೀತಿಯ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು ಸೇವಿಸಬೇಡಿ. ಗ್ರಹಣದ ಮುನ್ನ ಅಥವಾ ನಂತರ ಸೇವಿಸಿ.
7. ಯಾವುದೇ ತರಹದ ಚೂಪಾದ ಆಯುಧಗಳನ್ನು ಗರ್ಭಿಣಿಯರು ಸ್ಪರ್ಶಿಸಬೇಡಿ. ಇದರಿಂದ ಮಗುವಿಗೆ ಸೀಳುತುಟಿ ಅಥವಾ ಮಗುವಿನ ದೇಹದಲ್ಲಿ ಮಚ್ಚೆ ಉಂಟಾಗಬಹುದು ಎಂಬ ನಂಬಿಕೆ ಇದೆ.
8. ಮಗುವಿನ ಸುರಕ್ಷತೆಗಾಗಿ ಸೂರ್ಯ ಗ್ರಹಣದ ವೇಳೆ ಮಹಾಮೃತ್ಯುಂಜಯ ಮಂತ್ರ, ಸೂರ್ಯ ಮಂತ್ರ, ವಿಷ್ಣು ಮಂತ್ರವನ್ನು ಪಠಿಸಿ.
9. ಗ್ರಹಣದ ವೇಳೆ ಹೊಟ್ಟೆಯ ಮೇಲೆ ಕೈಗಳನ್ನು ಇಡಬೇಡಿ, ಅವರ ಕೈ ಬೆರಳುಗಳ ಗುರುತು ಹುಟ್ಟುವ ಮಗುವಿನ ಮೇಲೆ ಹಾಗೆ ಮೂಡುತ್ತದೆ ಎನ್ನುತ್ತಾರೆ.
10. ಸೂರ್ಯ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವುದೇ ಕೆಲಸಗಳನ್ನು ಮಾಡಬೇಡಿ. ಬದಲಾಗಿ ದೇವರ ಪ್ರಾರ್ಥನೆ ಮಾಡಿ ಅಥವಾ ವಿಶ್ರಾಂತಿ ಪಡೆಯಿರಿ.
11. ನಿಮ್ಮ ಮನೆಗೆ ನಿತ್ಯ ಸೂರ್ಯನ ಕಿರಣಗಳು ಪ್ರವೇಶಿಸುವಂಥ ಕಿಟಕಿಗಳಿಗೆ ದಪ್ಪದಾದ ಬಟ್ಟೆ ಅಥವಾ ರಟ್ಟಿನ ಮೂಲಕ ಮುಚ್ಚಿ. ಬಾಗಿಲುಗಳನ್ನು ತೆಗೆಯಬೇಡಿ.
12. ಗ್ರಹಣದ ವೇಳೆ ಬಟ್ಟೆ ಹೊಲೆಯುವುದು, ಒಗೆಯುವುದು. ಬಟ್ಟೆಗಳನ್ನು ಗಂಟು ಕಟ್ಟಿ ಇರುವಂಥ ಕೆಲಸಗಳನ್ನು ಮಾಡಬೇಡಿ.
13. ಸೂರ್ಯ ಗ್ರಹಣಕ್ಕೂ ಮುನ್ನ ಸ್ನಾನ ಮಾಡಬೇಡಿ, ಗ್ರಹಣದ ನಂತರ ಶುದ್ಧ ಸ್ನಾನ ಮಾಡಿ ಪೂಜೆ ಮಾಡಿ, ತುಳಸಿ ಎಲೆ ಸೇವಿಸಿ.