For Quick Alerts
ALLOW NOTIFICATIONS  
For Daily Alerts

2023 ಸೂರ್ಯಗ್ರಹಣ: ಗರ್ಭಿಣಿಯರು ಈ ಸಮಯದಲ್ಲಿ ಹೇಗಿರಬೇಕು ಗೊತ್ತಾ?

|

ಸೂರ್ಯ,ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದು ನಿಂತಾಗ ಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣದ ವೇಳೆ ಸೂರ್ಯನಿಂದ ಭೂಮಿಗೆ ಬರುವ ನೇರವಾದ ಬೆಳಕನ್ನು ಚಂದ್ರನು ತಡೆಯುತ್ತಾನೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್‌ 20 ರಂದು ಸಂಭವಿಸಲಿದೆ. ಮೊದಲಿನಿಂದಾನೂ ಜನರಿಗೆ ಗ್ರಹಣ ಅಂದರೇನೆ ಒಂದು ರೀತಿ ಭಯವಂತೂ ಖಂಡಿತ ಇದ್ದೇ ಇದೆ.

Solar Eclipse 2023 : The effect of surya grahan on pregnant women in kannada

ಹಿಂದೂ ಧರ್ಮದಲ್ಲಿ ಹಾಗೂ ಜ್ಯೋತಿಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ಕೆಲವು ನಿರ್ಬಂಧಗಳು ಹಾಗೂ ಕಟ್ಟುಪಾಡುಗಳಿವೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನಿಂದ ಬಿಡುಗಡೆಯಾಗುವ ಅತೀ ಸೂಕ್ಞ್ಮ ಕಿರಣಗಳು ಹಾನಿಕರ ಎಂದು ಹೇಳಲಾಗುತ್ತದೆ. ಆದ್ದರಿಂದ ಸೂರ್ಯಗ್ರಹಣದ ಸಮಯದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಲೇಬಾರದು ಎಂಬ ದೊಡ್ಡ ಪಟ್ಟಿಯೇ ಇದೆ.

ಗರ್ಭಿಣಿಯರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರುತ್ತೆ?
ಗರ್ಭಿಣಿಯರು ಈ ಗ್ರಹಣದ ಸಂದರ್ಭದಲ್ಲಿ ತುಂಬಾನೇ ಜಾಗರೂಕತೆಯಿಂದ ಇರಬೇಕು. ಅದರಲ್ಲೂ ನಿತ್ಯ ವಿಶೇಷ ಕಾಳಜಿವಹಿಸುವ ಗರ್ಭಿಣಿಯರನ್ನು ಈ ಸಮಯದಲ್ಲಿ ಇನ್ನಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಅವರು ಪ್ರತಿಯೊಂದು ಹೆಜ್ಜೆಯಲ್ಲೂ ಇನ್ನಷ್ಟು ಜಾಗ್ರತೆವಹಿಸಬೇಕಿದೆ. ಗ್ರಹಣ ಮಗು ಹಾಗೂ ತಾಯಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

ಈ ವರ್ಷದ ಸೂರ್ಯಗ್ರಹದ ವೇಳೆ ಗರ್ಭಿಣಿಯರು ಹೇಗಿರಬೇಕು?, ಯಾವುದನ್ನು ಮಾಡಬೇಕು?, ಏನನ್ನು ಮಾಡಲೇಬಾರದು?..... ಇಲ್ಲಿದೆ ಉತ್ತರ.

1. ಸೂರ್ಯ ಗ್ರಹಣದ ವೇಳೆ ಯಾವುದೇ ಕಾರಣಕ್ಕೂ ಗರ್ಭಿಣಿಯರು ಮನೆಯಿಂದ ಹೊರಗಡೆ ಹೋಗಲೇಬೇಡಿ.

2. ಸೂರ್ಯನನ್ನು ನೋಡುವ ಪ್ರಯತ್ನ ಮಾಡಲೇಬೇಡಿ.

3. ಗ್ರಹಣದ ವೇಳೆ ಪ್ರಯಾಣ ನಿಷಿದ್ಧ.

4. ಸೂರ್ಯ ಗ್ರಹಣದ ವೇಳೆ ಗರ್ಭಿಣಿಯರು ಯಾವುದೇ ರೀತಿಯ ಮೆಟಲ್‌ ವಸ್ತುಗಳನ್ನು ಧರಿಸಬೇಡಿ. ಉದಾಹರಣೆಗೆ ಹೇರ್‌ಪಿನ್‌, ಖಡ, ಸೂಜಿ ಇತರೆ ಯಾವುದೇ ಮೆಟಲ್‌ ವಸ್ತು ಬಳಸಬೇಡಿ.

5. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾನಸಿಕ ಶಾಂತಿಗೆ ಭಂಗವಾಗುವಂಥ, ರಕ್ತದೊತ್ತಡ ಹೆಚ್ಚಾಗುವಂಥ ಚಿಂತನೆಗಳನ್ನು ಮಾಡಬೇಡಿ. ಗೊಂದಲ, ಭಯ ಬೇಡ.

6. ಗ್ರಹಣದ ವೇಳೆ ಯಾವುದೇ ರೀತಿಯ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು ಸೇವಿಸಬೇಡಿ. ಗ್ರಹಣದ ಮುನ್ನ ಅಥವಾ ನಂತರ ಸೇವಿಸಿ.

7. ಯಾವುದೇ ತರಹದ ಚೂಪಾದ ಆಯುಧಗಳನ್ನು ಗರ್ಭಿಣಿಯರು ಸ್ಪರ್ಶಿಸಬೇಡಿ. ಇದರಿಂದ ಮಗುವಿಗೆ ಸೀಳುತುಟಿ ಅಥವಾ ಮಗುವಿನ ದೇಹದಲ್ಲಿ ಮಚ್ಚೆ ಉಂಟಾಗಬಹುದು ಎಂಬ ನಂಬಿಕೆ ಇದೆ.

8. ಮಗುವಿನ ಸುರಕ್ಷತೆಗಾಗಿ ಸೂರ್ಯ ಗ್ರಹಣದ ವೇಳೆ ಮಹಾಮೃತ್ಯುಂಜಯ ಮಂತ್ರ, ಸೂರ್ಯ ಮಂತ್ರ, ವಿಷ್ಣು ಮಂತ್ರವನ್ನು ಪಠಿಸಿ.

9. ಗ್ರಹಣದ ವೇಳೆ ಹೊಟ್ಟೆಯ ಮೇಲೆ ಕೈಗಳನ್ನು ಇಡಬೇಡಿ, ಅವರ ಕೈ ಬೆರಳುಗಳ ಗುರುತು ಹುಟ್ಟುವ ಮಗುವಿನ ಮೇಲೆ ಹಾಗೆ ಮೂಡುತ್ತದೆ ಎನ್ನುತ್ತಾರೆ.

10. ಸೂರ್ಯ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವುದೇ ಕೆಲಸಗಳನ್ನು ಮಾಡಬೇಡಿ. ಬದಲಾಗಿ ದೇವರ ಪ್ರಾರ್ಥನೆ ಮಾಡಿ ಅಥವಾ ವಿಶ್ರಾಂತಿ ಪಡೆಯಿರಿ.

11. ನಿಮ್ಮ ಮನೆಗೆ ನಿತ್ಯ ಸೂರ್ಯನ ಕಿರಣಗಳು ಪ್ರವೇಶಿಸುವಂಥ ಕಿಟಕಿಗಳಿಗೆ ದಪ್ಪದಾದ ಬಟ್ಟೆ ಅಥವಾ ರಟ್ಟಿನ ಮೂಲಕ ಮುಚ್ಚಿ. ಬಾಗಿಲುಗಳನ್ನು ತೆಗೆಯಬೇಡಿ.

12. ಗ್ರಹಣದ ವೇಳೆ ಬಟ್ಟೆ ಹೊಲೆಯುವುದು, ಒಗೆಯುವುದು. ಬಟ್ಟೆಗಳನ್ನು ಗಂಟು ಕಟ್ಟಿ ಇರುವಂಥ ಕೆಲಸಗಳನ್ನು ಮಾಡಬೇಡಿ.

13. ಸೂರ್ಯ ಗ್ರಹಣಕ್ಕೂ ಮುನ್ನ ಸ್ನಾನ ಮಾಡಬೇಡಿ, ಗ್ರಹಣದ ನಂತರ ಶುದ್ಧ ಸ್ನಾನ ಮಾಡಿ ಪೂಜೆ ಮಾಡಿ, ತುಳಸಿ ಎಲೆ ಸೇವಿಸಿ.

English summary

Solar Eclipse 2023 : The effect of surya grahan on pregnant women in kannada

Here we are discussing about Solar Eclipse 2023: The effect of surya grahan on pregnant women in kannada. pregnant women should take some precautions during the Solar Eclipse. So here are some precautions that a pregnant woman should take during a Solar Eclipse. Read more
X
Desktop Bottom Promotion