For Quick Alerts
ALLOW NOTIFICATIONS  
For Daily Alerts

Solar and Lunar Eclipses 2022 ರಲ್ಲಿರುವ ಸೂರ್ಯ ಮತ್ತು ಚಂದ್ರಗ್ರಹಣಗಳ ಬಗೆಗಿನ ಮಾಹಿತಿ

|

ನಭೋಮಂಡಲದಲ್ಲಿ ನಡೆಯುವ ಕೌತುಕಗಳಲ್ಲಿ ಗ್ರಹಣಗಳೂ ಒಂದು. ಅದು ಸೂರ್ಯಗ್ರಹಣವಾಗಲೀ ಅಥವಾ ಚಂದ್ರಗ್ರಹಣವಾಗಲೀ, ಇಡೀ ಜಗತ್ತೇ ಇದಕ್ಕೆ ಸಾಕ್ಷಿ. ಇದು ಪ್ರತಿವರ್ಷವೂ ನಡೆಯುವಂತಹ ಪ್ರಮುಖ ಘಟನೆಗಳಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಅಂದ್ರೆ, 2022ಕ್ಕೆ ಕಾಲಿಡಲಿದ್ದೇವೆ. ಈ ಸಂದರ್ಭದಲ್ಲಿ ಮುಂಬರುವ ವರ್ಷದಲ್ಲಿರುವ ಗ್ರಹಣಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ, ಅದರಲ್ಲಿ ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣಗಳಾಗಿವೆ. ಸಾಮಾನ್ಯವಾಗಿ ಸೂರ್ಯಗ್ರಹಣವಾದ ಹದಿನೈದು ದಿನಗಳ ನಂತರ ಅಥವಾ ಹದಿನೈದು ದಿನಗಳ ಮುಂಚೆ ಚಂದ್ರಗ್ರಹಣ ಸಂಭವಿಸುತ್ತವೆ. ಹಾಗಾಗಿ ಇಂದು ನಾವು 2022ರ ಅಂದರೆ, ಮುಂಬರುವ ಗ್ರಹಣಗಳ ದಿನಾಂಕ ಮತ್ತು ಸಮಯದ ವಿವರಗಳನ್ನು ತಿಳಿಸಿಕೊಡಲಿದ್ದೇವೆ.

ಏಪ್ರಿಲ್ 30ರಂದು 2022 ರ ಮೊದಲ ಸೂರ್ಯ ಗ್ರಹಣ:

ಏಪ್ರಿಲ್ 30ರಂದು 2022 ರ ಮೊದಲ ಸೂರ್ಯ ಗ್ರಹಣ:

2022 ರ ಮೊದಲ ಸೂರ್ಯ ಗ್ರಹಣವು ಏಪ್ರಿಲ್ 30, ಶನಿವಾರದಂದು ಸಂಭವಿಸುತ್ತದೆ ಎಂದು ಪಂಚಾಂಗ ಹೇಳುತ್ತದೆ. ಗ್ರಹಣದ ಸಮಯವು ಮಧ್ಯಾಹ್ನ 12:15 ರಿಂದ ಸಂಜೆ 04:07 ರವರೆಗೆ ಇರುತ್ತದೆ. ಇದು ಭಾಗಶಃ ಗ್ರಹಣವಾಗಿದ್ದು, ಇದರ ಪರಿಣಾಮವು ದಕ್ಷಿಣ/ಪಶ್ಚಿಮ ಅಮೆರಿಕ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಕಂಡುಬರುತ್ತದೆ.

ಮೇ 15 ಮತ್ತು 16ರಂದು 2022ರ ಮೊದಲ ಚಂದ್ರಗ್ರಹಣ:

ಮೇ 15 ಮತ್ತು 16ರಂದು 2022ರ ಮೊದಲ ಚಂದ್ರಗ್ರಹಣ:

2022 ರ ಮೊದಲ ಚಂದ್ರ ಗ್ರಹಣವು ಮೇ 15 ಮತ್ತು 16 ರಂದು ಸಂಭವಿಸಲಿದೆ. ಗ್ರಹಣವು ಬೆಳಿಗ್ಗೆ 7.02 ರಿಂದ ಪ್ರಾರಂಭವಾಗಿ 12.20 ರವರೆಗೆ ಇರುತ್ತದೆ. ಈ ಎರಡೂ ಗ್ರಹಣಗಳು ಬ್ಲಡ್‌ ಮೂನ್ ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಇದು ಭಾರತದಲ್ಲೂ ಪರಿಣಾಮಕಾರಿಯಾಗಲಿರುವ ಮೊದಲ ಚಂದ್ರಗ್ರಹಣವಾಗಿದೆ . ಇದರ ಜೊತೆಗೆ ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿಯೂ‌ ಹೆಚ್ಚು ಪ್ರಭಾವವಿರುತ್ತದೆ.

ಈ ಗ್ರಹಣದ ಸೂತಕ ಕಾಲವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಆದ್ದರಿಂದ ನೀವು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೂತಕ ಅವಧಿಯು ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ, ಇದು ಚಂದ್ರಗ್ರಹಣದ ಮುಗಿದ ಮೇಲೆ ಕೊನೆಗೊಳ್ಳುತ್ತದೆ.

ಅಕ್ಟೋಬರ್ 25ಕ್ಕೆ ಎರಡನೇ ಸೂರ್ಯಗ್ರಹಣ:

ಅಕ್ಟೋಬರ್ 25ಕ್ಕೆ ಎರಡನೇ ಸೂರ್ಯಗ್ರಹಣ:

2022 ರ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ಮಂಗಳವಾರ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಅಕ್ಟೋಬರ್ 25 ರಂದು 4.29ಕ್ಕೆ ಪ್ರಾರಂಭವಾಗಿ, 05:42ಕ್ಕೆ ಕೊನೆಯಾಗುತ್ತದೆ. ಈ ಗ್ರಹಣದ ಪ್ರಭಾವವು ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಅಟ್ಲಾಂಟಿಕಾದಲ್ಲಿ ಇರಲಿದೆ. ಈ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ.

ನವೆಂಬರ್ 8ರಂದು ಎರಡನೇ ಚಂದ್ರಗ್ರಹಣ:

ನವೆಂಬರ್ 8ರಂದು ಎರಡನೇ ಚಂದ್ರಗ್ರಹಣ:

2022 ರ ಎರಡನೇ ಹಾಗೂ ವರ್ಷದ ಕೊನೆಯ ಚಂದ್ರಗ್ರಹಣವು ನವೆಂಬರ್ 8 ರಂದು ಸಂಭವಿಸಲಿದೆ. ಇದು ಮಧ್ಯಾಹ್ನ 1:32 ರಿಂದ ಆರಂಭವಾಗಿ ರಾತ್ರಿ 7.27 ರವರೆಗೆ ಇರುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಸೂತಕ ಕಾಲವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದರ ಪ್ರಭಾವವು ಭಾರತವನ್ನು ಒಳಗೊಂಡಂತೆ ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿಯೂ ಇರಲಿದೆ.

English summary

Solar and Lunar Eclipses 2022: Check 2022 Surya and Chandra Grahan Dates, Timings and Visibility in India

Solar and Lunar Eclipses 2022: There will be a total of 4 lunar and solar eclipses in 2022. Check 2022 Surya and Chandra Grahan Dates, Timings, Visibility in India and other details in kannada. Read on.
X
Desktop Bottom Promotion