For Quick Alerts
ALLOW NOTIFICATIONS  
For Daily Alerts

2021ರ ಸೂರ್ಯ ಹಾಗೂ ಚಂದ್ರ ಗ್ರಹಣದ ಸಂಪೂರ್ಣ ಮಾಹಿತಿ

|

ಸೌರ ಮಂಡಲದಲ್ಲಿ ನಡೆಯುವ ಅನೇಕ ಕೌತುಕ ಘಟನೆಗಳಲ್ಲಿ ನಮಗೆ ಪ್ರಮುಖವಾದ ಎರಡು ಘಟನೆಗಳೆಂದರೆ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ.

next solar and lunar eclipse

ಈ ಎರಡು ಘಟನೆಗಳನ್ನು ಕೆಲವರು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ಮತ್ತೆ ಕೆಲವರು ಜ್ಯೋತಿಷ್ಯ ದೃಷ್ಟಿಕೋನದಿಂದ ನೋಡಲಾಗುತ್ತದೆ. ಸೂರ್ಯ ಹಾಗೂ ಚಂದ್ರ ಗ್ರಹಣ ನಡೆದಾಗ ಅದರ ಪ್ರಭಾವ ಜನರ ಮೇಲೆ ಇರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಪ್ರತಿ ಗ್ರಹಣವೂ ನಮ್ಮ ರಾಶಿಯ ಮೇಲೆ ಅದರದ್ದೇ ಆದ ಪ್ರಭಾವ ಬೀಳುವುದೆಂದು ವೈದಿಕ ಶಾಸ್ತ್ರ ನಂಬುವುದರಿಂದ ಈ ಗ್ರಹಣ ಯಾವಾಗ ನಡೆಯುತ್ತದೆ, ಆ ದಿನ ಯಾವೆಲ್ಲಾ ಕಾರ್ಯ ಮಾಡಬಾರದು, ಏನು ಮಾಡಬೇಕು ಎಂಬುವುದರ ಬಗ್ಗೆ ಜನರಿಗೆ ಕೌತುಕ ಇದ್ದೇ ಇದೆ.

ಕಳೆದ ವರ್ಷದ ಕೊನೆಯ ಗ್ರಹಣ ಡಿಸೆಂಬರ್‌ 14ರಂದು ಸಂಭವಿಸಿತ್ತು.

ಈ ವರ್ಷದ ಗ್ರಹಣ ಯಾವಗೆಲ್ಲಾ ನಡೆಯಲಿದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ:

2021ರ ಚಂದ್ರಗ್ರಹಣ: ಮೇ 26 (ಪೂರ್ಣ ಚಂದ್ರಗ್ರಹಣ)

2021ರ ಚಂದ್ರಗ್ರಹಣ: ಮೇ 26 (ಪೂರ್ಣ ಚಂದ್ರಗ್ರಹಣ)

ಈ ಗ್ರಹಣ ಭಾರತದಲ್ಲಿ ಮಧ್ಯಾಹ್ನ 2:17ಕ್ಕೆ ಪ್ರಾರಂಭವಾಗಿ ರಾತ್ರಿ 7:19ಕ್ಕೆ ಮುಕ್ತಾಯವಾಗುತ್ತದೆ. ಈ ಗ್ರಹಣ ದಕ್ಷಿಣ ಏಷ್ಯಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಫೆಸಿಫಿಕ್ ಸಾಗರ, ಅಂಟ್ಲಾಟಿಕ ಸಾಗರ, ಹಿಂದೂ ಮಹಾ ಸಾಗರ ಹಾಗೂ ಅಂಟಾರ್ಕ್ಟಿಕಾದಲ್ಲಿ ಗೋಚರಿಸಲಿದೆ.

 2021ರ ಸೂರ್ಯಗ್ರಹಣ: ಜೂನ್ 10 ( ವಾರ್ಷಿಕ ಸೂರ್ಯಗ್ರಹಣ)

2021ರ ಸೂರ್ಯಗ್ರಹಣ: ಜೂನ್ 10 ( ವಾರ್ಷಿಕ ಸೂರ್ಯಗ್ರಹಣ)

ವಾರ್ಷಿಕ ಸೂರ್ಯಗ್ರಹಣ ಜೂನ್‌ 10ರಂದು ನಡೆಯಲಿದೆ. ಇದು ಮಧ್ಯಾಹ್ನ 1:42ಕ್ಕೆ ಪ್ರಾರಂಭವಾಗಿ 6:41ಕ್ಕೆ ಮುಕ್ತಾಯವಾಗುತ್ತದೆ. ಯುರೋಪ್, ಏಷ್ಯಾದ ಅನೇಕ ಭಾಗಗಳಲ್ಲಿ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕ, ಅಂಟ್ಲಾಟಿಕ, ಆರ್ಕ್ಟಿಕ್ ಈ ಭಾಗಗಳಲ್ಲಿ ಗೋಚರಿಸಲಿದೆ.

ನವೆಂಬರ್ 18-19ಕ್ಕೆ ಮತ್ತೊಂದು ಚಂದ್ರಗ್ರಹಣ (ಪಾರ್ಶ್ವ ಚಂದ್ರಗ್ರಹಣ)

ನವೆಂಬರ್ 18-19ಕ್ಕೆ ಮತ್ತೊಂದು ಚಂದ್ರಗ್ರಹಣ (ಪಾರ್ಶ್ವ ಚಂದ್ರಗ್ರಹಣ)

ಇದು ಪಾರ್ಶ್ವ ಚಂದ್ರಗ್ರಹಣವಾಗಿದ್ದು ಭಾರತದ ಸಮಯ ಬೆಳಗ್ಗೆ 11:32ಕ್ಕೆ ಪ್ರಾರಂಭವಾಗಿ 6:33ಕ್ಕೆ ಮುಕ್ತಾಯವಾಗುತ್ತದೆ. ಇದು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಫೆಸಿಫಿಕ್ ಸಾಗರ, ದಕ್ಷಿಣ ಅಮೆರಿಕ, ಹಿಂದೂ ಮಹಾ ಸಾಗರ, ಆರ್ಕ್ಟಿಕ್‌ಗಳಲ್ಲಿ ಗೋಚರಿಸಲಿದೆ.

ಸೂರ್ಯಗ್ರಹಣ 2021: ಡಿಸೆಂಬರ್‌ ಗ್ರಹಣ (ಪೂರ್ಣ ಸೂರ್ಯಗ್ರಹಣ)

ಸೂರ್ಯಗ್ರಹಣ 2021: ಡಿಸೆಂಬರ್‌ ಗ್ರಹಣ (ಪೂರ್ಣ ಸೂರ್ಯಗ್ರಹಣ)

ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಸೂರ್ಯಗ್ರಹಣ ಬೆಳಗ್ಗೆ 10:59ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 03:07ಕ್ಕೆ ಮುಕ್ತಾಯವಾಗಲಿದೆ. ಇದು ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಹಿಂದೂ ಮಹಾ ಸಾಗರ, ಅಂಟ್ಲಾಟಿಕ ಸಾಗರ, ಫೆಸಿಫಿಕ್ ಸಾಗರ ಅಂಟಾರ್ಕ್ಟಿಕಾದಲ್ಲಿ ಗೋಚರಿಸಲಿದೆ.

English summary

Solar and Lunar Eclipse 2021: Here is the complete list in Kannada

Here's is a complete list of upcoming Solar and Lunar Eclipse in the year of 2021, check all details here.
X
Desktop Bottom Promotion