For Quick Alerts
ALLOW NOTIFICATIONS  
For Daily Alerts

ಶ್ರಾವಣ ಸೋಮವಾರ: ಏನು ಮಾಡಿದರೆ ಒಳಿತಾಗುತ್ತದೆ?

|

ಈ ವರ್ಷ ಆಗಸ್ಟ್ 9ಕ್ಕೆ ಶ್ರಾವಣ ಮಾಸ ಪ್ರಾರಂಭವಾಗಿ ಸೆಪ್ಟೆಂಬರ್ 7ರವರೆಗೆ ಇರುತ್ತದೆ. ಶ್ರಾವಣ ಮಾಸವೆಂದರೆ ಏನೋ ಹೊಸತನ, ವಿವರಿಸಲಾಗದ ನಾವೀನ್ಯ. ಶ್ರಾವಣ ಮಾಸವೆಂದರೆ ಒಂದು ದೈವಿಕ ಮಾಸವೆಂದೇ ಹೇಳಬಹುದು. ಇಡೀ ತಿಂಗಳು ವ್ರತ, ಹಬ್ಬಗಳ ಸಂಭ್ರಮ.

Shravan Somwar Dates, Significance And How To Please Shiva

ಪುರಾಣಗಳಲ್ಲಿ ಈ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಹೇಳುತ್ತಾರೆ. ಶಿವನ ಭಕ್ತರು ಈ ತಿಂಗಳು ವ್ರತ ಮಾಡುತ್ತಾ ಶಿವನಿಗೆ ಪೂಜೆ ಸಲ್ಲಿಸಿದರೆ ಮನಸ್ಸಿನಲ್ಲಿ ಬಯಸಿದ್ದು ನೆರವೇರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಶ್ರಾವಣ ಸೋಮವಾರಂತೂ ತುಂಬಾ ವಿಶೇಷವಾದ ದಿನವಾಗಿರುತ್ತದೆ. ಈ ದಿನ ವ್ರತ ಪಾಲಿಸಲಾಗುವುದು. ಶಿವ ನಾಮ ಹೇಳುತ್ತಾ ಶಿವ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಲಾಗುವುದು.

ಮದುವೆಯಾಗದ ಹೆಣ್ಣು ಮಕ್ಕಳು ಶಿವನಂಥ ಗಂಡ ನಮಗೆ ಸಿಗಲಿ ಶ್ರಾವಣ ಸೋಮವಾರ ವ್ರತ ಪಾಲಿಸುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಲು ಶಿವನಿಗೆ ಪ್ರಿಯವಾಗುವಂತೆ ಪೂಜೆ ಸಲ್ಲಿಸಬೇಕು ಎನ್ನತ್ತಾರೆ. ಶಿವನ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಲ್ಲಿ ಮಾಡುವ ಪೂಜೆ ಹಾಗೂ ವ್ರತ ಹೇಗಿರಬೇಕೆಂದು ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

ಶ್ರಾವಣ ಮಾಸದ ಸೋಮವಾರದ ದಿನಾಂಕ

ಶ್ರಾವಣ ಮಾಸದ ಸೋಮವಾರದ ದಿನಾಂಕ

2021ರಲ್ಲಿ ಶ್ರಾವಣ ಸೋಮವಾರದ ದಿನಾಂಕಗಳು

ಆಗಸ್ಟ್ 9 , 2021

ಆಗಸ್ಟ್ 16, 2021

ಆಗಸ್ಟ್ 23, 2021

ಆಗಸ್ಟ್‌ 30, 2021

ಸೆಪ್ಟೆಂಬರ್ 6, 2021

ಸೆಪ್ಟೆಂಬರ್‌ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.

ಸೋಮವಾರ ಉಪವಾಸ

ಸೋಮವಾರ ಉಪವಾಸ

ಶಿವನ ಕೃಪೆಗೆ ಪಾತ್ರರಾಗಲು ಸೋಮವಾರ ಉಪವಾಸ ಮಾಡಬೇಕು. ಶಿವನಿಗೆ ಪೂಜೆ ಸಲ್ಲಿಸುವಾಗ ಶಿವಲಿಂಗಕ್ಕೆ ಹಾಲು, ಸಕ್ಕರೆ, ಅನ್ನದ ನೈವೇದ್ಯ ಅರ್ಪಿಸಬೇಕು. ಶಿವನಿಗೆ ಇಷ್ಟವಾದ ಹೂಗಳನ್ನು ಅರ್ಪಿಸಿದರೆ ಇನ್ನೂ ಒಳ್ಳೆಯದು, ಜೊತೆಗೆ ಶಿವನಾಮ ಜಪಿಸಬೇಕು.

ಶ್ರಾವಣ ಮಾಸದಲ್ಲಿ ಏನು ಮಾಡಬೇಕು?

ಶ್ರಾವಣ ಮಾಸದಲ್ಲಿ ಏನು ಮಾಡಬೇಕು?

ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಶಿವ ಚಾಲೀಸ ಹೇಳುವುದರಿಂದ ಅದೃಷ್ಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಶಿವ ಪೂಜೆಗೆ ಹಾಲು, ಜೇನು, ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಬೇಕು.

ರುದ್ರಾಕ್ಷಿ ಮಾಲೆ ಧರಿಸಲು ಸೂಕ್ತವಾದ ತಿಂಗಳು

ರುದ್ರಾಕ್ಷಿ ಮಾಲೆ ಧರಿಸಲು ಸೂಕ್ತವಾದ ತಿಂಗಳು

ನೀವು ರುದ್ರಾಕ್ಷಿ ಮಾಲೆ ಧರಿಸಲು ಬಯಸುವುದಾದರೆ ಆ ಮಾಲೆ ಧರಿಸಲು ಇದು ಸೂಕ್ತವಾದ ತಿಂಗಳಾಗಿದೆ. ರುದ್ರಾಕ್ಷಿ ಮಾಲೆಯನ್ನು ಜಪ ಮಾಡುವಾಗಲೂ ಬಳಸುವುದು ಒಳ್ಳೆಯದು.

ಏನು ಮಾಡಬಾರದು?

ಏನು ಮಾಡಬಾರದು?

ಶಿವನಿಗೆ ಬಿಲ್ವೆ ಪತ್ರೆ ಎಲೆಗಳೆಂದರೆ ತುಂಬಾ ಪ್ರಿಯ. ಶಿವ ಪೂಜೆಗೆ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರೆ ಶಿವನ ಕೃಪೆಗೆ ಪಾತ್ರರಾಗುವಿರಿ. ಆದರೆ ಅಷ್ಟಮಿ, ಚತುರ್ಥಿ, ನವಮಿ,ಅಮವಾಸ್ಯೆ, ಸಂಕ್ರಾಂತಿ ಹಾಗೂ ಸೋಮವಾರ ಬಿಲ್ವೆ ಪತ್ರೆ ಎಲೆಗಳನ್ನು ಕೀಳುವುದರಿಂದ ಅಪಶಕುನ ಉಂಟಾಗುವುದು.

ಸ್ಪಟಿಕ ಶಿವಲಿಂಗ

ಸ್ಪಟಿಕ ಶಿವಲಿಂಗ

ಶ್ರಾವಣ ಮಾಸದಲ್ಲಿ ಮನೆಯಲ್ಲಿ ಸ್ಪಟಿಕ ಶಿವಲಿಂಗ ಇಟ್ಟು ಪೂಜಿಸುವುದರಿಂದ ಮನೆಯಲ್ಲಿರುವ ಎಲ್ಲಾ ನಕರಾತ್ಮಕ ಶಕ್ತಿ ಹೊರದೂಡಬಹುದು. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು, ಅದೃಷ್ಟ ಒಲಿಯುವುದು.

ಶಿವ-ಪಾರ್ವತಿಗೆ ಆರತಿ

ಶಿವ-ಪಾರ್ವತಿಗೆ ಆರತಿ

ಮದುವೆ ವಯಸ್ಸಿನ ಹುಡುಗ-ಹುಡುಗಿ ಸಂಜೆ ಹೊತ್ತಿನಲ್ಲಿ ಶಿವ-ಪಾರ್ವತಿಗೆ ಆರತಿ ಮಾಡುವುದರಿಂದ ಉತ್ತಮ ಸಂಗಾತಿ ದೊರೆಯುವಂತೆ ಶಿವ ಹರಿಸುತ್ತಾನೆ.

ಮಂಗಳ ಗೌರಿ ವ್ರತ

ಮಂಗಳ ಗೌರಿ ವ್ರತ

ಇನ್ನು ಶ್ರಾವಣ ಮಾಸದಲ್ಲಿ ಮಂಗಳಗೌರಿ ವ್ರತ ಬರುತ್ತದೆ. ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ, ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುತ್ತಾಳೆ. ಈ ವ್ರತವನ್ನು ಮುತ್ತೈದೆ ಮಹಿಳೆಯರು ಸಂತಾಭಾಗ್ಯ, ಸಂತೋಷದ ದಾಂಪತ್ಯಕ್ಕಾಗಿ ಮಾಡಿದರೆ, ಹೆಣ್ಣು ಮಕ್ಕಳು ಉತ್ತಮ ಬಾಳ ಸಂಗಾತಿ ನೀಡುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯದನ್ನೇ ಕೇಳಿ

ಒಳ್ಳೆಯದನ್ನೇ ಕೇಳಿ

ಶ್ರವಣ ಎಂದರೆ ಕೇಳು ಎಂದು ಅರ್ಥ. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನೇ ಕೇಳಬೇಕು, ಒಳ್ಳೆಯದನ್ನೇ ಮಾತನಾಡಬೇಕು. ಧರ್ಮಗ್ರಂಥಗಳನ್ನು ಓದುವುದು, ಮೃತ್ಯುಂಜಯ ಮಂತ್ರ ಹೇಳುವುದು ಇವೆಲ್ಲಾ ಮಾಡುವುದರಿಂದ ಒಳಿತು ಉಂಟಾಗುತ್ತದೆ.

English summary

Shravan Somwar 2021 Dates, Significance And How To Please Lord Shiva

Shravan is a very significant month for Hindu. During this month if you please lord shiva good thing will happen for your life...
X
Desktop Bottom Promotion