For Quick Alerts
ALLOW NOTIFICATIONS  
For Daily Alerts

ಶನಿ ಅಸ್ತಮಿಸಿರುವುದರಿಂದ ಈ 4 ರಾಶಿಯವರು 33 ದಿನ ಜಾಗ್ರತೆವಹಿಸಿ

|

ಶನಿ ನ್ಯಾಯದ ದೇವರು. ಶನಿ ಈಗ ಮಕರ ರಾಶಿಯಲ್ಲಿದೆ, ಇದೇ ಏಪ್ರಿಲ್ 29ರಂದು ಕುಂಭ ರಾಶಿ ಪ್ರವೇಶಿಸಲಿದೆ. ಮಕರ ರಾಶಿಯಲ್ಲಿರುವ ಶನಿ ಜನವರಿ 18ರಂದು ಅಸ್ತಮಿಸಿದ್ದಾನೆ. ಹೀಗೆ ಅಸ್ತಮಿಸಿದ ಶನಿ ಮತ್ತೆ ತನ್ನ ಮೊದಲಿನ ಸ್ಥಿತಿಗೆ ಫೆಬ್ರವರಿ 24ರಂದು ಬರುತ್ತಾನೆ. ಒಟ್ಟು 33 ದಿನಗಳವರೆಗೆ ಶನಿಯು ಅಸ್ತಮಿಸುವುದರಿಂದ ಇದರ ಪ್ರಬಾವ ಗ್ರಹಗಳ ಮೇಲಿದೆ. ಶನಿಯು ಅಸ್ತಮಿಸಿರುವುದರಿಂದ ಕೆಲ ರಾಶಿಯವರಿಗೆ ಒಳ್ಳೆಯದಾದರೆ ಇನ್ನು ಕೆಲ ರಾಶಿಯವರಿಗೆ ಶನಿಯ ಸ್ಥಾನ ಸಮಸ್ಯೆಗಳನ್ನು ತರುತ್ತದೆ.

ಶನಿಯು ಅಸ್ತಮಿಸಿರುವುದರಿಂದ ಈ ರಾಶಿಯವರು ಸ್ವಲ್ಪ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರವನ್ನೂ ಸೂಚಿಸಲಾಗಿದೆ, ಅದನ್ನು ಪಾಲಿಸಿದರೆ ಸಮಸ್ಯೆಗಳು ಕಡಿಮೆಯಾಗುವುದು. ಶನಿ ಅಸ್ತಮಿಸಿರುವ ಈ ಅವಧಿಯಲ್ಲಿ ಸಮಸ್ಯೆಗಳು ಕಂಡು ಬಂದರೆ ಹೆದರಬೇಡಿ, ಇನ್ನು 33 ದಿನಗಳಲ್ಲಿ ಎಲ್ಲವೂ ಸರಿ ಹೋಗುವುದು:

ಮಿಥುನ ರಾಶಿ

ಮಿಥುನ ರಾಶಿ

ಶನಿಯು ಅಸ್ತಮಿಸಿರುವುದರಿಂದ ಕೆಲಸದಲ್ಲಿ ಅತೃಪ್ತಿ ಉಂಟಾಗುವುದು. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಣದ ಅತಿಯಾದ ಖರ್ಚು ಕಾರಣ, ನೀವು ನಿಮ್ಮ ಸಂಗಾತಿಯೊಂದಿಗೆ ಜಗಳವಾಡಬಹುದು. ಯಾರಿಗಾದರೂ ಸಾಲ ನೀಡುವುದು ನಿಮ್ಮ ಮನಸ್ಸನ್ನು ಚಂಚಲಗೊಳಿಸುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳಿರಬಹುದು ಮತ್ತು ಮುಂಬರುವ 33 ದಿನಗಳು ವ್ಯಾಪಾರ ಮಾಡುವ ಜನರಿಗೆ ವಿಶೇಷವಾಗಿರುವುದಿಲ್ಲ.

ಪರಿಹಾರ: ಪ್ರತಿದಿನ 11 ಬಾರಿ "ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪಿಸಿ.

ಕರ್ಕ ರಾಶಿ

ಕರ್ಕ ರಾಶಿ

ಶನಿಯು ಅಸ್ತಮಿಸಿರುವುದರಿಂದ ಕರ್ಕ ರಾಶಿಯವರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಬಹುದು. ಹಣ ನಷ್ಟದ ಸಾಧ್ಯತೆಗಳಿವೆ, ಯಾವುದೇ ವಿಷಯದಲ್ಲಿ ನಿರ್ಲಕ್ಷ್ಯ ತೋರಬೇಡಿ. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಳು ಉಂಟಾಗಲಿದೆ. ಆರೋಗ್ಯ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಈ ಅವಧಿಯಲ್ಲಿ ಧ್ಯಾನವು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ.

ಪರಿಹಾರ: "ಓಂ ನಮಃ ಶಿವಾಯ" ಎಂದು ದಿನಕ್ಕೆ 21 ಬಾರಿ ಜಪಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

33 ದಿನಗಳ ಕಾಲ ಶನಿಗ್ರಹವು ಅಸ್ತಮಿಸಿರುವುದರಿಂದ ಕನ್ಯಾ ರಾಶಿಯ ಜನರ ಮೇಲೆ ಅದರ ಋಣಾತ್ಮಕ ಪರಿಣಾಮವನ್ನು ಕಾಣಬಹುದು. ಯಾವುದೇ ಕೆಲಸ ಮಾಡಲು ನಿಮಗೆ ಮನಸ್ಸಾಗುವುದಿಲ್ಲ. ಆರೋಗ್ಯ ಸಮಸ್ಯೆಗಳಿರುತ್ತವೆ. ಯಶಸ್ಸನ್ನು ಸಾಧಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ನಿಮ್ಮ ತಂದೆಯೊಂದಿಗಿನ ವಿವಾದದಿಂದಾಗಿ, ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗಿರುತ್ತದೆ. ಆರ್ಥಿಕ ತೊಂದರೆಗಳು ಉಂಟಾಗುವುದು.

ಪರಿಹಾರ: ಶನಿವಾರದಂದು ಎಮ್ಮೆಗೆ ಹಸಿರು ಹುಲ್ಲನ್ನು ತಿನ್ನಿಸಿ.

ತುಲಾ ರಾಶಿ

ತುಲಾ ರಾಶಿ

ಶನಿಯ ಅಸ್ತವ್ಯಸ್ತತೆಯು ತುಲಾ ರಾಶಿಯವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚುತ್ತಿರುವ ಚರ್ಚೆಯಿಂದಾಗಿ ನಿಮ್ಮ ಚಿಂತೆಗಳು ಹೆಚ್ಚಾಗಬಹುದು. ನೀವು ಯಾವ ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ, ಇಲ್ಲದಿದ್ದರೆ ನೀವು ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ಸಹ ಎದುರಿಸಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸೂಚನೆಗಳಿವೆ.

ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ.

English summary

Shani Asta 2022 : Effect of Shani Tara Asta on Zodiac Signs in kannada

Shani Asta 2022: before saturn transit shani dev going to set for 33 days. Know effects on zodiac signs in kannada,
Story first published: Tuesday, January 18, 2022, 19:30 [IST]
X