For Quick Alerts
ALLOW NOTIFICATIONS  
For Daily Alerts

ಮೇ. 23ರಿಂದ ಹಿಮ್ಮುಖವಾಗಿ ಚಲಿಸಲಿರುವ ಶನಿ: 12 ರಾಶಿಗಳ ಮೇಲೆ ಇದರ ಪ್ರಭಾವ

|

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶನಿ ದೇವ ತುಂಬಾ ಮಹತ್ವದ ಪಾತ್ರ ವಹಿಸುತ್ತಾ,ಎ. ಶನಿ ದೇವನ ಕೃಪೆಯಿದ್ದರೆ ಎಲ್ಲಾ ಕಷ್ಟವೂ ದೂರವಾಗುವುದು, ಅದೇ ಶನಿಯ ವಕ್ರ ದೃಷ್ಟಿ ಬಿದ್ದರೆ ನೂರಾರು ತೊಂದರೆಗಳನ್ನು ಅನುಭವಿಸಬೇಕಾಗುವುದು. ಸಾಡೇಸಾತಿ ಇರುವವರಿಗೆ ಶನಿ ದೋಷ ಹೇಗೆಲ್ಲಾ ಕಷ್ಟ ಕೊಡುವುದು ಎಂಬುವುದು ಅನುಭವಕ್ಕೆ ಬಂದಿರುತ್ತದೆ.

Saturn Retrograde 2021 in Capricorn during May-October Effects On All Zodiac Signs in Kannada

ಜ್ಯೋತಿಷ್ಯ ಪ್ರಕಾರ ಶನಿಯು ರಾಶಿಯಿಂದ ರಾಶಿಗೆ ಸಂಚರಿಸುತ್ತಾನೆ. ಇದನ್ನು ಶನಿ ಸಂಚಾರ ಎಂದು ಕರೆಯಲಾಗುವುದು. ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತಾನೆ. ಈ ವರ್ಷ ಯಾವುದೇ ಶನಿ ಸಂಚಾರವಿಲ್ಲ, ಆದರೆ ಮೇ.23ಕ್ಕೆ ಮಧ್ಯಾಹ್ನ 02:50ಕ್ಕೆ ಶನಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಅಕ್ಟೋಬರ್‌ 11, 2021ಕ್ಕೆ ಶನಿ ಮತ್ತೆ ಸರಾಗವಾಗಿ ಚಲಿಸಲಾರಂಭಿಸುತ್ತಾನೆ.

ಜ್ಯೋತಿಷ್ಯ ನಂಬುವವರು ಶನಿಯ ಈ ಚಲನೆಯಲ್ಲಿ ತುಂಬಾನೇ ಎಚ್ಚರವಾಗಿರುತ್ತಾರೆ. ಶನಿಯ ಹಿಮ್ಮುಖ ಚಲನೆ ಅನೇಕ ಸಮಸ್ಯೆಗಳನ್ನು ತರುತ್ತದೆ ಎಂದು ಹೇಳಲಾಗುವುದು.

ಈ ವರ್ಷದ ಶನಿಯ ಹಿಮ್ಮುಖ ಚಲನೆ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಶನಿಯ ಈ ಹಿಮ್ಮುಖ ಚಲನೆಯ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿದ್ದರೂ ಈ ಅವಧಿಯಲ್ಲಿ ನಿಮ್ಮ ಬಾಸ್‌ನೊಂದಿಗೆ ವ್ಯವಹರಿಸುವಾಗ ಜಾಗ್ರತೆಯಾಗಿರಿ. ನಿಮ್ಮ ಕೆಲಸದ ಬಗ್ಗೆ ತುಂಬಾನೇ ಗಮನ ನೀಡಿ. ಈ ಸಮಯದಲ್ಲಿ ನಿಮ್ಮ ಖರ್ಚು ಕಡಿಮೆಯಾಗಿ ಉಳಿಕೆ ಹೆಚ್ಚಬಹುದು. ವೈಯಕ್ತಿಕ ಜೀವನದಲ್ಲೂ ಕೆಲವೊಂದು ಸಮಸ್ಯೆ ಎದುರಾಗಬಹುದು. ನಿಮ್ಮ ತಾಯಿಯನ್ನು ಗೌರವಿಸಿ, ವೈವಾಹಿಕ ಜೀವನದಲ್ಲಿ ತಪ್ಪುಗಳು ಆಗದಂತೆ ಎಚ್ಚರವಹಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಈ ಅವಧಿಯಲ್ಲಿ ನಿಮ್ಮ ಬಾಸ್ ಅಥವಾ ಮೆಂಟರ್ ಜೊತೆ ಉತ್ತಮ ಸಂಬಂಧ ಹೊಂದಿರುತ್ತೀರಿ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಬದಲಾವಣೆ ಬಯಸುವವರಿಗೆ ಉತ್ತಮ ಅವಕಾಶ ಸಿಗಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ, ಈ ಅವಧಿಯಲ್ಲಿ ದೇಹದ ಕೆಲಗಿನ ಭಾಗದಲ್ಲಿ ಕೆಲವೊಂದು ಸಮಸ್ಯೆ ಎದುರಾಗಬಹುದು. ನಿಮ್ಮ ಉಳಿತಾಯದ ಹಣ ಖಾಲಿಯಾಗಬಹುದು. ನಿಮ್ಮ ಒಡ ಹುಟ್ಟಿದವರು ಹಾಗೂ ನೆರೆಹೊರೆಯವರೊಂದಿಗೆ ಯಾವುದೇ ವಿವಾದಕ್ಕೆ ಹೋಗಬೇಡಿ. ಈ ಅವಧಿಯಲ್ಲಿ ಸಾಲ ತೆಗೆದುಕೊಳ್ಳುವುದರಿಂದ ದೂರವಿರಿ.

ಮಿಥುನ ರಾಶಿ

ಮಿಥುನ ರಾಶಿ

ಅಸ್ತಮಾ ರೋಗಿಗಳಿಗೆ ಈ ಅವಧಿ ಅಷ್ಟು ಒಳ್ಳೆಯದಲ್ಲ, ಆರೋಗ್ಯ ಸಮಸ್ಯೆ ಎದುರಾಗಬಹುದು. ಜೀವನದಲ್ಲಿ ಕೆಲವೊಂದು ಏರಳಿತ ಉಂಟಾಗಬಹುದು. ವೈವಾಹಿಕ ಜೀವನದಲ್ಲೂ ಕೆಲವೊಂದು ಸಮಸ್ಯೆ ಎದುರಾಗುವುದು. ಅನಗ್ಯತ ಖರ್ಚು ಮಾಡಬೇಡಿ, ಹಣವನ್ನು ಮಿತವಾಗಿ ಖರ್ಚು ಮಾಡುವುದು ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಹಾಗೂ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ.

ಕರ್ಕ ರಾಶಿ

ಕರ್ಕ ರಾಶಿ

ಶನಿಯು ನಿಮ್ಮ 7ನೇ ಮನೆಯಲ್ಲಿ ಹಿಮ್ಮುಖವಾಗಿ ಸಂಚರಿಸುತ್ತಿದ್ದಾನೆ. ಈ ಸಮಯ ನಿಮಗೆ ಒಳ್ಳೆಯದಿದೆ ಆದರೆ ಸಹಭಾಗಿತ್ವದಲ್ಲಿ ಮಾಡುವ ವ್ಯವಹಾರಕ್ಕೆ ಅಡೆತಡೆ ಉಂಟಾಗಬಹುದು. ವೈವಾಹಿಕ ಜೀವನದಲ್ಲೂ ತೊಂದರೆ ಬರಬಹುದು, ಸಂಗಾತಿಯ ಆರೋಗ್ಯದ ಚಿಂತೆ ಕಾಡುವುದು. ಈ ಅವಧಿಯಲ್ಲಿ ನಿಮ್ಮ ಹಾಗೂ ಕುಟುಂಬದ ಆರೋಗ್ಯದ ಕಡೆಗೆ ತುಂಬಾನೇ ಗಮನ ನೀಡಬೇಕು. ಅಜೀರ್ಣ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆ ಕಾಡಬಹುದು. ವೈಯಕ್ತಿಕ ಜೀವನದಲ್ಲಿ ಕೆಲವೊಂದು ಸಮಸ್ಯೆ ಬರಬಹುದು, ತಾಯಿ ಜೊತೆ ಭಿನ್ನಾಭಿಪ್ರಾಯ ಬರಬಹುದು. ಯಾರದೇ ಜೊತೆ ಭಿನ್ನಾಭಿಯವಾದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಹಾಗೂ ಬುದ್ಧಿವಂತಿಕೆಯಿಂದ ನಿಭಾಯಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ನಿಮ್ಮ ಆರನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಈ ಅವಧಿ ನಿಮಗೆ ಪರ್ವಾಗಿಲ್ಲ. ಆದಾಯ ಚೆನ್ನಾಗಿರುತ್ತದೆ, ನಿಮ್ಮ ಕ್ಷೇತ್ರದಲ್ಲಿ ನೀವು ಉತ್ತಮ ಸ್ಪರ್ಧೆಯನ್ನು ಕೂಡ ನೀಡಿ, ಸ್ಪರ್ಧಿಗಳನ್ನು ಸೋಲಿಸುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯದಲ್ಲೂ ಸುಧಾರನೆ ಕಾಣುವಿರಿ. ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಿಮ್ಮ ಗಳಿಕೆ ಹೆಚ್ಚಿಸಲು ಆತುರ ಬೇಡ, ತಾಳ್ಮೆ ಇರಲಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಶನಿ 5ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ವ್ಯವಹಾರ ಮಾಡುವವರು, ಉದ್ಯಮಿಗಳು ಈ ಸಮಯದಲ್ಲಿ ಉತ್ತಮ ಆದಾಯ ಗಳಿಸುತ್ತಾರೆ. ಆದರೆ ಪ್ರೀತಿ ಜೀವನದಲ್ಲಿ ಸವಾಲುಗಳಿರುತ್ತದೆ. ನಿಮ್ಮ ಸಂಗಾತಿ ಜೊತೆ ನಿಮ್ಮ ಹಠಮಾರಿತನ ತೋರಿಸಬೇಡಿ, ಅನಗ್ಯತವಾಗಿ ವಾದ ಮಾಡಬೇಡಿ, ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಕೂಡ ಗಮನ ಹರಿಸಬೇಕಾಗಿದೆ. ಆದಾಯ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುವುದಾದರೆ ಅದರ ಬಗ್ಗೆ ಚೆನ್ನಾಗಿ ಮಾಹಿತಿ ಪಡೆದು ಹೂಡಿಕೆ ಮಾಡಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರ 4ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಈ ಅವಧಿಯಲ್ಲಿ ನೀವು ಧಾರ್ಮಿಕ ವಿಷಯಗಳತ್ತ ಹೆಚ್ಚು ಒಲವು ತೋರುತ್ತೀರಿ. ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದು. ನಿಮ್ಮ ಕೌಶಲ್ಯದಿಂದ ಸ್ಪರ್ಧಿಗಳನ್ನು ಸೋಲಿಸುವಿರಿ. ವೃತ್ತಿ ಜೀವನ ಚೆನ್ನಾಗಿಯೇ ಇದ್ದರೂ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ನಿಮ್ಮ ವ್ಯಕ್ತಿತ್ವ ವಿಕಸನ ಕೂಡ ಉಂಟಾಗುವುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಶನಿಯು 3ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಈ ಹಿಮ್ಮುಖ ಚಲನೆ ನಿಮ್ಮ ಮೇಲೆ ದೊಡ್ಡ ಪರಿಣಾಮವೇನು ಬೀರುವುದಿಲ್ಲ. ಈ ಸಮಯದಲ್ಲಿ ನಿಮ್ಮ ಬಾಸ್‌ ಜೊತೆ ಯಾವುದೇ ತರ್ಕಕ್ಕೆ ಹೋಗಬೇಡಿ. ಈ ಸಮಯದಲ್ಲಿ ಆಸ್ತಿ ಮಾರಾಟ ಮಾಡುವವರು ಒಳ್ಳೆಯ ಲಾಭ ಗಳಿಸುತ್ತಾರೆ. ವಿದ್ಯಾರ್ಥಿಗಳಿಗೆ ಸಮಯ ಚೆನ್ನಾಗಿದೆ. ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುವುದು. ಈ ಅವಧಿಯನ್ನು ನಿಮ್ಮ ಒಡ ಹುಟ್ಟಿದವರೊಂದಿಗೆ ಯಾವುದೇ ಜಗಳಕ್ಕೆ ಹೋಗಬೇಡಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರ 2ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಹಣದ ಉಳಿತಾಯಕ್ಕೆ ಈ ಸಮಯ ತುಂಬಾ ಒಳ್ಳೆಯದಿದೆ. ನಿಮ್ಮ ವ್ಯವಹಾರ ಕೌಶಲ್ಯ ಹೆಚ್ಚುವುದು, ಏನೇ ಪರಿಸ್ಥಿತಿ ಬಂದರೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗುವಿರಿ. ಈ ಸಮಯದಲ್ಲಿ ನಿಮ್ಮ ಮಾವ-ಅತ್ತೆ ಜೊತೆ ಯಾವುದೇ ಮನಸ್ತಾಪ ಬೇಡ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ.. ಈ ಅವಧಿ ನಿಮಗೆ ಉತ್ತಮವಾಗಿದೆ. ನೀವು ನಿಮ್ಮ ಕೆಲಸದಲ್ಲಿ ಅಧಿಕ ಶ್ರಮ ಹಾಕಬೇಕು. ನಿಮ್ಮ ವೃತ್ತಿ ಜೀವನ ಚೆನ್ನಾಗಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ ಆದರೆ ನಿಮ್ಮ ಸಂಗಾತಿ ಇಷ್ಟವಾಗದ ಕಾರ್ಯ ಮಾಡದಿರುವುದು ಒಳ್ಳೆಯದು.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ 12ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಈ ಅವಧಿಯಲ್ಲಿ ಕೋರ್ಟ್ ಕೇಸ್‌ ಇದ್ದರೆ ಅದನ್ನು ಜಯಿಸಲು ಕೆಲವು ಅಡೆತಡೆಗಳು ಎದುರಾಗಬಹುದು. ನಿಮ್ಮ ಸ್ಪರ್ಧಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ವಿದೇಶ ಕಂಪನಿ ಜೊತೆ ವ್ಯವಹಾರ ಮಾಡುವವರು ಒಳ್ಳೆಯ ಲಾಭ ಗಳಿಸುತ್ತಾರೆ. ಈ ಸಮಯದಲ್ಲಿ ಅಧಿಕ ಖರ್ಚು ಇರುವುದರಿಂದ ಹಣವನ್ನು ಮಿತಿಯಲ್ಲಿ ಖರ್ಚು ಮಾಡಿ, ಅನಗ್ಯತ ವಿಷಯಗಳಿಗೆ ಹಣ ಖರ್ಚು ಮಾಡಬೇಡಿ. ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ಹಣ ಉಳಿತಾಯದತ್ತ ಗಮನ ನೀಡಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಶನಿ 11ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಇದರಿಂದಾಗಿ ಈ ಅವಧಿಯಲ್ಲಿ ಗಳಿಕೆಯಲ್ಲಿ ತೊಂದರೆ ಎದುರಾಗುವುದು. ಮೊದಲು ಗಳಿಸುತ್ತಿದ್ದ ಹಣ ಪಡೆಯಲು ಹೆಚ್ಚು ಪರಿಶ್ರಮ ಹಾಕ ಬೇಕಾಗುವುದು. ಈ ಸಮಯದಲ್ಲಿ ನೀವು ಹೆಚ್ಚು ಪ್ರಬುದ್ಧರಾಗಿ ವರ್ತಿಸುತ್ತೀರಿ. ಅನೇಕ ಕೆಲಸ ಮಾಡುವ ಬದಲಿಗೆ ಒಂದು ಕೆಲಸದತ್ತ ಗಮನ ನೀಡಿ. ಮಗುವಿನ ಅಪೇಕ್ಷೆ ಮಾಡುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವುದು.

English summary

Saturn Retrograde 2021 in Capricorn during May-October Effects On All Zodiac Signs in Kannada

Saturn, the largest Karmic influencing planet will turn into retrograde motion while transiting Capricorn (Makara Rasi) on 23 May 2021 at 2.50 PM IST. Here is the effects on all the zodiac signs in Kannada. Take a look.
X
Desktop Bottom Promotion