For Quick Alerts
ALLOW NOTIFICATIONS  
For Daily Alerts

ಜ. 18ಕ್ಕೆ ಮಕರದಲ್ಲಿ ಶನಿ ಅಸ್ತಮಿಸುವುದರಿಂದ ನಿಮ್ಮ ರಾಶಿಯ ಮೇಲಾಗುವ ಪ್ರಭಾವ

|

ಜನವರಿ 18, 2022 ರಂದು ಶನಿಯು ಮಕರ ಸಂಕ್ರಾಂತಿಯಲ್ಲಿ ಅಸ್ತಮಿಸಲಿದೆ. ಯಾವ ಗ್ರಹ ಸೂರ್ಯನ ಸಮೀಪಕ್ಕೆ ಬರುತ್ತದೋ ಆಗ ಅದು ತನ್ನ ಪ್ರಬಾವವನ್ನು ಕಳೆದುಕೊಳ್ಳುವುದು. ಇದಕ್ಕೆ ಗ್ರಹ ಅಸ್ತಮಿಸುವುದು ಎಂದು ಹೇಳಲಾಗುವುದು. ಇದೀಗ ಶನಿ ಗ್ರಹ ಅಸ್ತಮಿಸಿದೆ. ಶನಿಯು 18 ಜನವರಿ 2022 ರಂದು ಬೆಳಗ್ಗೆ 04:18 ಕ್ಕೆ ಅಸ್ತಮಿಸಿದೆ. ಶನಿಯು ಮತ್ತೆ ಸಹಜ ಸ್ಥಿತಿಗೆ 22 ಫೆಬ್ರವರಿ 2022 ರಂದು ರಾತ್ರಿ 10:50 ಕ್ಕೆ ಬರಲಿದೆ. ಶನಿ ಅಸ್ತಮಿಸಿದಾಗ ಅದರ ಪ್ರಭಾವ ನಿಮ್ಮ ರಾಶಿಯ ಮೇಲೆ ಇರಲಿದೆ.

ವೈದಿಕ ಜ್ಯೋತಿಷ್ಯದಲ್ಲಿ ಶನಿ ಗ್ರಹ
ಶನಿ ಗ್ರಹವನ್ನು ಕೆಲಸ, ಜೀವಿತಾವಧಿ ಮತ್ತು ಪ್ರತಿಷ್ಠೆಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಕಠಿಣ ಪರಿಶ್ರಮ, ಪ್ರತಿಷ್ಠೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಜಾತಕದಲ್ಲಿ ಶನಿಯು ಬಲಶಾಲಿಯಾಗಿರುವುದರಿಂದ ಆ ವ್ಯಕ್ತಿಯನ್ನು ಅಧಿಪತಿಯನ್ನಾಗಿ ಮಾಡುತ್ತದೆ ಮತ್ತು ಕೌಶಲ್ಯ, ಉದ್ಯೋಗದಲ್ಲಿ ಉನ್ನತ ಸ್ಥಾನ, ಧನ ಭಾಗ್ಯ, ವ್ಯಾಪಾರದಲ್ಲಿ ಉತ್ತಮ ಲಾಭವನ್ನು ನೀಡಲು ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿಯನ್ನು ಕಷ್ಟಪಟ್ಟು ಕೆಲಸ ಮಾಡಲು ಶನಿದೇವನು ಶಕ್ತನಾಗುತ್ತಾನೆ ಮತ್ತು ಆಗ ಮಾತ್ರ ಅವನ/ಅವಳ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಶನಿ ಗ್ರಹವು ವಿದೇಶಗಳಿಗೆ ಸಂಬಂಧಿಸಿದ ಅವಕಾಶಗಳ ಸೂಚಕವಾಗಿದೆ ಮತ್ತು ಜಾತಕದಲ್ಲಿ ಶನಿಯ ಮಂಗಳ ಸ್ಥಾನವು ವ್ಯಕ್ತಿಯನ್ನು ವೃತ್ತಿಗೆ ಸಂಬಂಧಿಸಿದಂತೆ ವಿದೇಶಿ ಪ್ರವಾಸಕ್ಕೆ ಹೋಗುವಂತೆ ಮಾಡುತ್ತದೆ.

ಆದರೆ ಈಗ ಶನಿಯು ಅಸ್ತಮಿಸಿರುವುದರಿಂದ ಕೆಲ ರಾಶಿಯವರಿಗೆ ಅಶಾಂತಿ, ಕೆಲಸದ ಜಾಗದಲ್ಲಿ ಕಡಿಮೆ ತೃಪ್ತಿ, ಉದ್ಯೋಗದಲ್ಲಿ ಅನಗ್ಯತ ವರ್ಗಾವಣೆ ಮುಂತಾದ ಸಮಸ್ಯೆ ಎದುರಾಗಬಹುದು, ಆದರೆ ಈ ಸಮಸ್ಯೆ ತುಂಬಾ ಜನ ಇರುವುದಿಲ್ಲ, ಫೆ. 22ಕ್ಕೆ ಮತ್ತೆ ನಿಮ್ಮ ಜೀವನದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ.

ಈಗ ಶನಿಯು ಅಸ್ತಮಿಸಿರುವುದರಿಂದ ನಿಮ್ಮ ರಾಶಿಗಳ ಮೇಲೆ ಬೀರುವ ಪ್ರಭಾವವೇನು ನೋಡಿ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ, ಶನಿಯು ಅವರ ಹತ್ತನೇ ಮತ್ತು ಹನ್ನೊಂದನೇ ಮನೆಗೆ ಅಧಿಪತಿಯಾಗಿದ್ದು, ಈಗ ಅದು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿದೆ. ಇದರ ಪರಿಣಾಮವಾಗಿ, ನೀವು ಕೆಲವು ಮಾನಸಿಕ ಒತ್ತಡವನ್ನು ಅನುಭವಿಸಬಹುದು ಹಾಗೂ ನಿಮ್ಮ ಪ್ರಯತ್ನಗಳನ್ನು ಮುಂದುವರಿಸುವಲ್ಲಿ ನೀವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು.

ವೃತ್ತಿಜೀವನದ ವಿಷಯದಲ್ಲಿ ಕೆಲಸದ ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚಿರಬಹುದು. ಇದರೊಂದಿಗೆ ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ, ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮತ್ತು ನಿಮ್ಮ ಮೇಲಧಿಕಾರಿಗಳಿಂದ ನೀವು ಬಯಸಿದ ಪ್ರೋತ್ಸಾಹ ಮತ್ತು ಪ್ರಶಂಸೆಯನ್ನು ಪಡೆಯದಿರುವ ಸಾಧ್ಯತೆಯಿದೆ ಮತ್ತು ಈ ಪರಿಸ್ಥಿತಿಯು ನಿಮ್ಮ ವೃತ್ತಿಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ.

ನೀವು ವ್ಯವಹಾರಸ್ಥರಾಗಿದ್ದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಅನೇಕ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಪಾಲುದಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಜನರು ತಮ್ಮ ಪಾಲುದಾರರೊಂದಿಗೆ ಲಾಭದ ಬಗ್ಗೆ ಕೆಲವು ವಿವಾದಗಳನ್ನು ಹೊಂದಿರಬಹುದು. ಇದಲ್ಲದೆ, ಈ ಸಮಯದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಯಲ್ಲಿರುವ ಜನರಿಗೆ ಅವಧಿಯು ಸ್ವಲ್ಪ ಪ್ರತಿಕೂಲವಾಗಿದೆ , ಸ್ವಲ್ಪ ಸಮಯ ಕಾಯುವುದು ಒಳ್ಳೆಯದು.

ಹಣಕಾಸಿನ ಬಗ್ಗೆ ನೋಡುವುದಾದರೆ ಹಣವು ಸಾಧಾರಣ ಸ್ಥಿತಿಯಲ್ಲಿದೆ. ನಿಮ್ಮ ಹಣವನ್ನು ನಿಮ್ಮ ಹಿರಿಯರಿಗೆ ಖರ್ಚು ಮಾಡಬೇಕಾಗುತ್ತದೆ, ಇದರಿಂದಾಗಿ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈ ಎಲ್ಲಾ ವೆಚ್ಚಗಳ ಕಾರಣದಿಂದಾಗಿ, ನಿಮ್ಮ ಅಗತ್ಯಗಳನ್ನು ಪೂರೈಸಲು ನೀವು ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು. ಆದರೆ ಈ ಸಾಲವನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಕೆಲವು ತೊಂದರೆಯ ಪರಿಸ್ಥಿತಿಯಲ್ಲಿ ಇರಿಸಬಹುದು. ಆದ್ದರಿಂದ ಸಾಲ ತೆಗೆಯದಿರುವುದು ಒಳ್ಳೆಯದು.

ವೈಯಕ್ತಿಕ ಜೀವನದಲ್ಲಿ ವಿವಾಹಿತರು ತಮ್ಮ ಸಂಗಾತಿಯೊಂದಿಗೆ ವಿವಾದಗಳನ್ನು ಹೊಂದಿರುತ್ತಾರೆ ಮತ್ತು ತಮ್ಮಲ್ಲಿನ ತಿಳುವಳಿಕೆಯ ಕೊರತೆಯಿಂದ ಈ ವಿವಾದ ಉದ್ಭವಿಸುವ ಸಾಧ್ಯತೆಯಿದೆ. ಇದರೊಂದಿಗೆ, ಅನೇಕ ಜನರು ತಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವನ್ನು ಸಹ ಹೊಂದಬಹುದು. ಇದಲ್ಲದೆ, ಶನಿದೇವನ ಪ್ರಭಾವವು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಒತ್ತಡ, ಕೀಲು ಮತ್ತು ಕಾಲು ನೋವಿನ ಸಮಸ್ಯೆಗಳಿಗೆ ಗುರಿಯಾಗಿಸುತ್ತದೆ. ಈ ಸಮಯದಲ್ಲಿ ನಿಮ್ಮ ಶಕ್ತಿಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ, ಈ ಕಾರಣದಿಂದಾಗಿ ನಿಮ್ಮಲ್ಲಿ ಸ್ವಲ್ಪ ಆಯಾಸವನ್ನು ಸಹ ಕಾಣಬಹುದು.

ಪರಿಹಾರ: ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸಿ

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರಿಗೆ ಶನಿಯು ಒಂಬತ್ತು ಮತ್ತು ಹತ್ತನೇ ಮನೆಗೆ ಅಧಿಪತಿಯಾಗಿದ್ದಾನೆ ಮತ್ತು ಈಗ ಅದು ನಿಮ್ಮ ಒಂಬತ್ತನೇ ಮನೆಯಲ್ಲಿದೆ. ಇದರ ಪರಿಣಾಮವಾಗಿ, ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ. ಕೆಲಸದ ಕಡೆಗೆ ಹೆಚ್ಚಿನ ಬದ್ಧತೆ ಸಾಧ್ಯವಾಗುತ್ತದೆ. ನಿಮಗೆ ವೃತ್ತಿಜೀವನದಲ್ಲಿ ಬೆಳವಣಿಗೆಯನ್ನು ಕಾಣುವಿರಿ. ಕೆಲವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ನೀವು ಮಾಡಿದ ಕಠಿಣ ಕೆಲಸಕ್ಕೆ ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ಬೆಂಬಲ ಮತ್ತು ಗೌರವವನ್ನು ಪಡೆಯುವ ಸಾಧ್ಯತೆಗಳಿವೆ. ಮತ್ತೊಂದೆಡೆ, ನೀವು ವ್ಯಾಪಾರ ಮಾಡುತ್ತಿದ್ದ ನಿಮಗೆ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದರ ಪರಿಣಾಮವಾಗಿ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ತಂತ್ರವನ್ನು ಸಿದ್ಧಪಡಿಸಲು ಮತ್ತು ಅದರಿಂದ ಉತ್ತಮ ಲಾಭವನ್ನು ಗಳಿಸಲು ನಿಮಗೆ ಸಾಧ್ಯವಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ತಮ್ಮ ವ್ಯಾಪಾರ ಪಾಲುದಾರರ ಬೆಂಬಲವನ್ನು ಸಹ ಪಡೆಯುತ್ತಾರೆ. ಅಲ್ಲದೆ, ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಅವಧಿಯು ತುಂಬಾ ಒಳ್ಳೆಯದು.

ಆರ್ಥಿಕ ಜೀವನದ ವಿಷಯದಲ್ಲಿ, ಈ ಸಮಯದಲ್ಲಿ ಹಣವನ್ನು ಉಳಿಸುವಾಗ ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ನೋಡಲು ಸಾಧ್ಯವಾಗುತ್ತದೆ. ಹೊಸ ಹೂಡಿಕೆ ಯೋಜನೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಉತ್ತಮ ವಿತ್ತೀಯ ಲಾಭವನ್ನು ನೀಡುತ್ತದೆ. ಇದಲ್ಲದೆ, ವಿವಾಹಿತರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಆರೋಗ್ಯವೂ ಚೆನ್ನಾಗಿರುತ್ತದೆ.

ಪರಿಹಾರ: ಶನಿವಾರದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಹಳೆಯ ಬಟ್ಟೆಗಳನ್ನು ದಾನ ಮಾಡಿ.

 ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಶನಿಯು ಅವರ ಎಂಟನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು ಈಗ ನಿಮ್ಮ ಎಂಟನೇ ಮನೆಯಲ್ಲಿ ಸ್ಥಿತನಾಗಿದ್ದಾನೆ. ಇದರ ಪರಿಣಾಮವಾಗಿ ನೀವು ಯಾವುದೇ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಬಹಳಷ್ಟು ಅಡೆತಡೆಗಳು ಮತ್ತು ವಿಳಂಬಗಳನ್ನು ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ಈ ಸಮಯವು ನಿಮ್ಮ ಕೆಲಸದಲ್ಲಿ ಕಷ್ಟಕರವಾದ ಸವಾಲುಗಳನ್ನು ನೀಡುತ್ತದೆ.

ಅಲ್ಲದೆ, ಈ ಸಮಯದಲ್ಲಿ ನೀವು ಹೆಚ್ಚಿನ ಕೆಲಸದ ಒತ್ತಡವನ್ನು ಸಹ ಅನುಭವಿಸುತ್ತೀರಿ. ನೀವು ವ್ಯಾಪಾರ ಮಾಡಿದರೆ, ನೀವು ಕೆಲವು ಅನಿರೀಕ್ಷಿತ ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ, ಏಕೆಂದರೆ ಈ ಅವಧಿಯು ಯಾವುದೇ ನಿರ್ಧಾರಕ್ಕೆ ಸೂಕ್ತವಲ್ಲ.

ಹಣಕಾಸಿನ ದೃಷ್ಟಿಕೋನದಿಂದ ಹೇಳುವುದಾದರೆ ನೀವು ಪ್ರಯಾಣ ಮಾಡುವಾಗ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧದಲ್ಲಿ ಸಾಮರಸ್ಯದ ಕೊರತೆ ಉಂಟಾಗುವ ಸಾಧ್ಯತೆ ಇದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನೀವು ನಿಯಮಿತವಾಗಿ ಧ್ಯಾನ ಮಾಡುವುದು ಸೂಕ್ತ.

ಪರಿಹಾರ: ಪ್ರತಿದಿನ 11 ಬಾರಿ "ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪಿಸಿ.

 ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಿಗೆ, ಶನಿಯು ಅವರ ಏಳನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು ಈಗ ಅದು ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಇದೆ. ಇದರ ಪರಿಣಾಮವಾಗಿ ನಿಮ್ಮ ಸಂಬಂಧಗಳಲ್ಲಿ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿಒತ್ತಡವು ಅಧಿಕವಾಗಿರುತ್ತದೆ ಮತ್ತು ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧಗಳಲ್ಲಿಯೂ ಸಮಸ್ಯೆಗಳಿರುತ್ತವೆ.

ಈ ಕಾರಣದಿಂದಾಗಿ ಕೆಲಸದಲ್ಲಿ ನಿಮ್ಮ ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ವ್ಯಾಪಾರ ಮಾಡಿದರೆ ನೀವು ಮಧ್ಯಮ ವೇಗದಲ್ಲಿ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿಪಾಲುದಾರಿಕೆಯ ವ್ಯವಹಾರಕ್ಕೆ ಸಂಬಂಧಿಸಿದ ಜನರು ತಮ್ಮ ಪಾಲುದಾರರೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ಮಾರುಕಟ್ಟೆಯ ಸ್ಪರ್ಧೆಯು ವ್ಯಾಪಾರದ ವಿಷಯದಲ್ಲಿ ನಿಮ್ಮ ವಿಸ್ತರಣೆಗೆ ಅಡ್ಡಿಯಾಗುತ್ತದೆ.

ಆರ್ಥಿಕವಾಗಿ, ಈ ಸಮಯವು ನಿಮಗೆ ಅನುಕೂಲಕರವಾಗಿರುವುದಿಲ್ಲ, ಏಕೆಂದರೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಕುಟುಂಬದ ಸದಸ್ಯರ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ತಮ್ಮ ಕುಟುಂಬಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು.

ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಳು ಉಂಟಾಗಲಿದೆ. ಆರೋಗ್ಯ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಈ ಅವಧಿಯಲ್ಲಿ ಧ್ಯಾನವು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ.

ಪರಿಹಾರ: "ಓಂ ನಮಃ ಶಿವಾಯ" ಎಂದು ದಿನಕ್ಕೆ 21 ಬಾರಿ ಜಪಿಸಿ.

 ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶನಿಯು ನಿಮ್ಮ ಆರನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು ಈಗ ಅದು ಮನೆಯಲ್ಲಿ ಸ್ಥಿತನಾಗಿದ್ದಾನೆ. ಇದರ ಪರಿಣಾಮವಾಗಿ ನೀವು ಈ ಸಮಯದಲ್ಲಿ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ತುಂಬಾ ಉತ್ಸುಕರಾಗಿರುತ್ತೀರಿ. ನಿಮ್ಮ ವಿರೋಧಿಗಳನ್ನು ಸಮರ್ಥವಾಗಿ ವಶಪಡಿಸಿಕೊಳ್ಳುವ ಸ್ಥಿತಿಯಲ್ಲಿಯೂ ನೀವು ಇರುತ್ತೀರಿ.

ಉದ್ಯೋಗಿಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ತಮ್ಮ ಮೇಲಧಿಕಾರಿಗಳಿಂದ ಸರಿಯಾದ ಪ್ರೋತ್ಸಾಹವನ್ನು ಪಡೆಯುತ್ತಾರೆ. ಕೆಲವರಿಗೆ ಈ ಸಮಯವು ಹೊಸ ಉದ್ಯೋಗವನ್ನು ಪಡೆಯಲು ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಇದು ಅವರಿಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ.

ವ್ಯಾಪಾರಸ್ಥರು ಉತ್ತಮ ಪ್ರಗತಿಯನ್ನು ಸಾಧಿಸುವ ಸ್ಥಿತಿಯಲ್ಲಿರುತ್ತೀರಿ. ಪಾಲುದಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಜನರು ತಮ್ಮ ವ್ಯಾಪಾರ ಪಾಲುದಾರರಿಂದ ಬೆಂಬಲವನ್ನು ಪಡೆಯಲು ಸಹ ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಕೆಲವರು ಹೊಸ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಬಹುದು.

ಇದಲ್ಲದೆ, ಆರ್ಥಿಕ ಜೀವನದಲ್ಲಿ ಉತ್ತಮ ಹಣವನ್ನು ಪಡೆಯುವಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಹಣವನ್ನು ಉಳಿಸುವಾಗ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಂಬಂಧ ಚೆನ್ನಾಗಿರುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಪರಿಹಾರ: ಶನಿವಾರ ಮತ್ತು ಸೋಮವಾರ ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನಿಗೆ ಹಾಲನ್ನು ಅರ್ಪಿಸಿ.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ, ಶನಿಯು ನಿಮ್ಮ ಐದನೇ ಮತ್ತು ಆರನೇ ಮನೆಗಳಿಗೆ ಅಧಿಪತಿಯಾಗಿದ್ದು ಈಗ ಅದು ನಿಮ್ಮ ಐದನೇ ಮನೆಯಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಈ ಸ್ಥಾನವು ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಎಲ್ಲಾ ಸವಾಲಿನ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಸಮಯವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುವ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಿಮ್ಮ ಆಸೆಗಳನ್ನು ಪೂರೈಸಲು ಸಾಧ್ಯವಿದೆ. ನೀವು ವ್ಯಾಪಾರ ಮಾಡದರೆ ನೀವು ಮಧ್ಯಮ ಲಾಭವನ್ನು ಪಡೆಯುತ್ತೀರಿ, ಜೊತೆಗೆ ಸ್ವಲ್ಪ ನಷ್ಟವೂ ಸಹ ಸಾಧ್ಯವಿದೆ. ಈ ಸಮಯದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಈಗ ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ ಈ ಸಮಯದಲ್ಲಿ ನಿಮ್ಮ ಪ್ರಯತ್ನದ ನಂತರವೂ ಹಣ ಗಳಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಇದರಿಂದ ಹಣವನ್ನು ಉಳಿಸಲು ನಿಮಗೆ ತುಂಬಾ ಕಷ್ಟವಾಗುತ್ತದೆ. ವೈಯಕ್ತಿಕ ಜೀವನದಲ್ಲಿಯೂ, ನಿಮ್ಮ ಕುಟುಂಬ ಮತ್ತು ಮಕ್ಕಳ ಬಗ್ಗೆ ಚಿಂತೆಳಿಂದಾಗಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ನಿಮ್ಮ ಮಕ್ಕಳ ಅನಾರೋಗ್ಯಕ್ಕಾಗಿ ನಿಮ್ಮ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಪರಿಹಾರ: ಶನಿವಾರದಂದು ಎಮ್ಮೆಗೆ ಹಸಿರು ಹುಲ್ಲನ್ನು ತಿನ್ನಿಸಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ಶನಿಯು ನಿಮ್ಮ ನಾಲ್ಕನೇ ಮತ್ತು ಐದನೇ ಮನೆಗೆ ಅಧಿಪತಿಯಾಗಿದ್ದು ಈಗ ಅದು ನಿಮ್ಮ ನಾಲ್ಕನೇ ಮನೆಯಲ್ಲಿ ಇರಲಿದೆ. ಶನಿಯು 4ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಸೌಕರ್ಯಗಳನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ, ಕುಟುಂಬ ಸಂಬಂಧಗಳಲ್ಲಿ ಒತ್ತಡ ಇತ್ಯಾದಿ ಉಂಟಾಗುವುದು. ಕೆಲಸದಲ್ಲಿ ತೃಪ್ತಿ ಇರುವುದಿಲ್ಲ, ಅಲ್ಲದೆ ಕೆಲಸದ ಒತ್ತಡವೂ ಅಧಿಕವಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ನೀವು ಅನೇಕ ಅಡೆತಡೆಗಳನ್ನು ಸಹ ಎದುರಿಸುತ್ತೀರಿ. ಯಾವುದೇ ವ್ಯವಹಾರ ಮಾಡಿದರೆ ಈ ಅವಧಿಯು ನಿಮಗೆ ನಷ್ಟವನ್ನು ಉಂಟು ಮಾಡುವುದು. ಆದ್ದರಿಂದ ನಿಮ್ಮ ವ್ಯವಹಾರವನ್ನು ಎಚ್ಚರಿಕೆಯಿಂದ ಗಮನಿಸಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಲಾಭದ ಹಂಚಿಕೆಗೆ ಸಂಬಂಧಿಸಿದಂತೆ ವ್ಯಾಪಾರ ಪಾಲುದಾರರೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಸಮಯದಲ್ಲಿ ಆರ್ಥಿಕ ತೊಂದರೆಯೂ ಎದುರಾಗುವುದು. ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ ಎದುರಾಗುವುದು.

ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಶನಿಯು ನಿಮ್ಮ ಮೂರನೇ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿದ್ದು ಈಗ ಅದು ನಿಮ್ಮ ಮೂರನೇ ಮನೆಯಲ್ಲಿ ಸ್ಥಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಶನಿಗ್ರಹವು ನಿಮ್ಮ ಜೀವನದಲ್ಲಿ ಪ್ರಗತಿ ಮತ್ತು ಅಭಿವೃದ್ಧಿ ವಿಳಂಬಗೊಳಿಸುತ್ತದೆ ಮತ್ತು ಇದರಿಂದಾಗಿ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯ ವೇಗವು ನಿಧಾನಗೊಳ್ಳುತ್ತದೆ.

ನಿಮ್ಮ ಕೆಲಸವನ್ನು ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಅನಗತ್ಯ ವರ್ಗಾವಣೆ ಅಥವಾ ಪ್ರೊಫೈಲ್‌ನಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಈ ಕಾರಣದಿಂದಾಗಿ ನೀವು ಕೆಲಸದ ಸ್ಥಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಪ್ರತಿಕೂಲ ಸಂದರ್ಭಗಳು ನಿಮ್ಮನ್ನು ತೊಂದರೆಗೊಳಿಸುತ್ತವೆ. ನಿಮ್ಮ ಎದುರಾಳಿಗಳಿಂದ ನೀವು ಹೆಚ್ಚಿನ ಮಟ್ಟದ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ, ಆದ್ದರಿಂದ ನಿಮ್ಮ ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದು.

ಕುಟುಂಬದಲ್ಲಿ ವೆಚ್ಚಗಳು ಅಧಿಕವಾಗುವುದರಿಂದ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ವೈಯಕ್ತಿಕ ಜೀವನದಲ್ಲೂ ಕೆಲ ಸಮಸ್ಯೆಗಳು ಎದುರಾಗಬಹುದು, ಸಂಗಾತಿಯೊಂದಿಗೆ ಚಿಕ್ಕ ಮನಸ್ತಾಪ ಬರಬಹುದು. ಆದರೆ ಮನಸ್ತಾಪವನ್ನು ಮಾತಿನ ಮೂಲಕ ಬಗೆ ಹರಿಸಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ನೋಡುವುದಾದರೆ ನರಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಪರಿಹಾರ: ಪ್ರತಿದಿನ ಲಿಂಗಾಷ್ಟಕಂ ಸ್ತೋತ್ರವನ್ನು ಪಠಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಿಗೆ, ಶನಿಯು ನಿಮ್ಮ ಎರಡನೇ ಮತ್ತು ಮೂರನೇ ಮನೆಗಳಿಗೆ ಅಧಿಪತಿಯಾಗಿದ್ದು, ಅವರು ಅದು ನಿಮ್ಮ ಎರಡನೇ ಮನೆಯಲ್ಲಿದೆ. ಈ ಸಮಯದಲ್ಲಿ ಕೆಲಸದಲ್ಲಿ ನೀವು ಬಯಸಿದ ಪ್ರಯತ್ನ ಸಿಗುವುದಿಲ್ಲ. ನೀವು ವ್ಯಾಪಾರ ಮಾಡಿದರೆ ಈ ಸಮಯದಲ್ಲಿ ನೀವು ಮಧ್ಯಮ ಲಾಭವನ್ನು ಗಳಿಸುವಿರಿ. ಆದರೆ ಕೆಲವೊಮ್ಮೆ ನಷ್ಟವನ್ನುಕೂಡ ಅನುಭವಿಸಬೇಕಾಗುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿರುವವರು ತಮ್ಮ ಪಾಲುದಾರರೊಂದಿಗಿನ ಸಂಬಂಧದ ಬಗ್ಗೆ ಜಾಗರೂಕರಾಗಿರಬೇಕು.

ಕುಟುಂಬದ ಅವಶ್ಯಕತೆಗಳಿಗೆ ಹಣ ಖರ್ಚಾಗುವುದು, ಈ ಅವಧಿಯಲ್ಲಿ ಪ್ರಯಾಣಿಸುವುದರಿಂದ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ನಿಮ್ಮ ಆರೋಗ್ಯ ಜೀವನದ ಬಗ್ಗೆ ಹೇಳುವುದಾದರೆ ಶನಿ ದೇವನ ಈ ಸ್ಥಾನವು ನಿಮಗೆ ಯಾವುದೇ ಗಂಟಲು ಸೋಂಕು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನೀಡಲಿದೆ. ಆದ್ದರಿಂದ, ಸಾಧ್ಯವಾದಷ್ಟು ಕರಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.

ಪರಿಹಾರ: ವಿಧಿವಿಧಾನಗಳ ಪ್ರಕಾರ ನಿಯಮಿತವಾಗಿ ಗುರುವಾರ ಉಪವಾಸವನ್ನು ಆಚರಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಿಗೆ ಶನಿಯು ಮೊದಲ ಮತ್ತು ಎರಡನೆಯ ಮನೆಯ ಅಧಿಪತಿಯಾಗಿದ್ದು ಈಗ ಮೊದಲನೆಯ ಮನೆಯಲ್ಲಿ ಸ್ಥಿತನಾಗಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಶನಿಗ್ರಹವು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ಗುರಿಗಳ ಕಡೆಗೆ ನಿಮ್ಮನ್ನು ಕೇಂದ್ರೀಕರಿಸುತ್ತದೆ.

ಆದರೂ ನೀವು ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಇದರಿಂದಾಗಿ ನಿಮ್ಮ ಕಾರ್ಯನಿರತತೆಯು ಕೆಲಸದ ಸ್ಥಳದಲ್ಲಿ ಕಂಡುಬರುತ್ತದೆ. ಇದಕ್ಕಾಗಿ ನಿಮಗೆ ಮೇಲಾಧಿಕಾರಿಯಿಂದ ಗೌರವ ಮತ್ತು ಬಡ್ತಿ ದೊರೆಯುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಈ ಸಮಯವು ನಿಮಗೆ ಸ್ವಲ್ಪ ಕಡಿಮೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಬಯಸಿದ ಲಾಭವನ್ನು ಗಳಿಸಲು ವಿಫಲರಾಗುತ್ತೀರಿ. ಇದರೊಂದಿಗೆ, ಪಾಲುದಾರಿಕೆಯ ವ್ಯವಹಾರದಲ್ಲಿದ್ದರೆ ಹುಷಾರಾಗಿರಿ.

ನೀವು ಆರ್ಥಿಕ ಜೀವನದಲ್ಲಿ ಲಾಭ ಮತ್ತು ನಷ್ಟ ಎರಡನ್ನೂ ಗಳಿಸುವಿರಿ. ಏಕೆಂದರೆ ಈ ಸಮಯದಲ್ಲಿ ಪರಿಸ್ಥಿತಿಗಳು ಒಂದು ಕಡೆ ನಿಮಗೆ ಹಣ ಸಂಪಾದಿಸುವುದು ಕಷ್ಟ ಎಂದು ನೀವು ಕಂಡುಕೊಳ್ಳುತ್ತೀರಿ, ಇನ್ನೊಂದು ಕಡೆ ನೀವುಲಾಭವನ್ನು ಪಡೆಯುತ್ತೀರಿ.ಆದರೆ ಹಣ ಗಳಿಸುವಲ್ಲಿ ಸ್ವಲ್ಪ ವಿಳಂಬವಾಗಬಹುದು. ವೈಯಕ್ತಿಕ ಜೀವನದಲ್ಲಿಯೂ ಸಹ ನೀವು ನಿಮ್ಮ ಸಂಗಾತಿಯೊಂದಿಗೆ ಅಹಂಕಾರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮಿಬ್ಬರ ನಡುವಿನ ತಿಳುವಳಿಕೆಯ ಕೊರತೆಯೇ ಇದರ ಹಿಂದಿನ ಮುಖ್ಯ ಕಾರಣ ಎಂದು ಕಾಣಬಹುದು. ಆದ್ದರಿಂದ, ಸಂತೋಷದ ಜೀವನಕ್ಕಾಗಿ, ಈ ಅವಧಿಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ.

ಆರೋಗ್ಯದ ಬಗ್ಗೆ ಹೇಳುವುದಾದರೆ ಶನಿದೇವ ಮಕರದಲ್ಲಿ ಅಸ್ತಮಿಸಿರುವುದರಿಂದ ಕಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದಲ್ಲದೆ, ಈ ಸಮಯದಲ್ಲಿ ಅನೇಕ ಜನರಿಗೆ ಹಲ್ಲುನೋವು ಉಂಟಾಗುವುದು. ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ.

ಪರಿಹಾರ: ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳೆಯೆಣ್ಣೆಯನ್ನು ನೀಡಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಿಗೆ, ಶನಿಯು ಅವರ ಮೊದಲ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿದ್ದು ಈಗ ಅದು ನಿಮ್ಮ ಹನ್ನೆರಡನೇ ಮನೆಯಲ್ಲಿದೆ. ಇದರ ಪರಿಣಾಮವಾಗಿ ನಿಮ್ಮ ವೃತ್ತಿಜೀವನ, ಆರ್ಥಿಕ ಜೀವನ ಇತ್ಯಾದಿಗಳಲ್ಲಿ ಪ್ರಗತಿಗೆ ಸಂಬಂಧಿಸಿದ ಅಡೆತಡೆಗಳನ್ನು ನೀವು ಎದುರಿಸಬೇಕಾಗಬಹುದು.

ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ನಿಮಗೆ ಸುಲಭವಾಗುವುದಿಲ್ಲ, ಏಕೆಂದರೆ ಈ ಅವಧಿಯಲ್ಲಿ ಅಧಿಕ ಕೆಲಸದ ಒತ್ತಡ ನಿಮ್ಮ ಮೇಲಿರುತ್ತದೆ. ನೀವು ವ್ಯವಹಾರ ಮಾಡುವುದಾದರೆ ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಹಠಾತ್ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸುವುದು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಅಸಾಧ್ಯವೆಂದು ತೋರುತ್ತದೆ. ಅದೇ ಸಮಯದಲ್ಲಿ, ಪಾಲುದಾರಿಕೆಯ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಈ ಅವಧಿಯು ಪ್ರತಿಕೂಲ ಫಲಿತಾಂಶಗಳನ್ನು ತರುತ್ತದೆ.

ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ ಈ ಸಮಯದಲ್ಲಿ ಕೆಲವು ಕಾರಣಗಳಿಂದ ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಅದರಲ್ಲೂ ಪ್ರಯಾಣದ ಸಮಸಯದಲ್ಲಿ ಸಾಧ್ಯತೆ ಹೆಚ್ಚು. ವೈಯಕ್ತಿಕ ಜೀವನದಲ್ಲಿ ಸವಾಲುಗಳು ಎದುರಾಗುವುದು.

ಆರೋಗ್ಯದ ದೃಷ್ಟಿಯಿಂದಲೂ ಶನಿಗ್ರಹವು ನಿಮಗೆ ಪ್ರತಿಕೂಲವಾಗಿರುತ್ತದೆ. ಏಕೆಂದರೆಕಾಲುಗಳಲ್ಲಿ ತೀವ್ರವಾದ ನೋವು ಮತ್ತು ಅಸ್ವಸ್ಥತೆ ಉಂಟಾಗಬಹುದು. ಪ್ರತಿದಿನ ಯೋಗ, ಧ್ಯಾನ ಮಾಡಿದರೆ ಒಳ್ಳೆಯದು.

ಪರಿಹಾರ: "ಓಂ ನಮಃ ಶಿವಾಯ" ಎಂದು ದಿನಕ್ಕೆ 21 ಬಾರಿ ಜಪಿಸಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಿಗೆ, ಶನಿದೇವನು ನಿಮ್ಮ ಹನ್ನೊಂದನೇ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿದ್ದು ಈಗ ಹನ್ನೊಂದನೇ ಮನೆಯಲ್ಲಿದೆ. ಪರಿಣಾಮವಾಗಿ, ನಿಮ್ಮ ಜೀವನದಲ್ಲಿ ವಿತ್ತೀಯ ಲಾಭಗಳು ಮತ್ತು ವೆಚ್ಚಗಳ ಹೆಚ್ಚಳ ಎರಡೂ ಸಾಧ್ಯ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೆಲವು ಸಂಘರ್ಷದ ಸಂದರ್ಭಗಳನ್ನು ನೀವು ಎದುರಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮಗೆ ಯಾವುದೇ ಲಾಭದಾಯಕ ಅವಕಾಶ ಸಿಕ್ಕರೂ ಅದರಿಂದ ತೃಪ್ತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅನೇಕ ಜನರು ಉದ್ಯೋಗದಲ್ಲಿ ವಿವಿಧ ಅವಕಾಶಗಳಿಂದ ವಂಚಿತರಾಗುತ್ತಾರೆ.

ನೀವು ವ್ಯಾಪಾರಿಯಾಗಿದ್ದರೆ, ನಿಮ್ಮ ವ್ಯಾಪಾರದ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಸುಧಾರಿಸಲು ನೀವು ಶ್ರಮಿಸಬೇಕಾಗುತ್ತದೆ. ಏಕೆಂದರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ರೀತಿಯ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ಯಾವುದೇ ರೀತಿಯ ಹೊಸ ಹೂಡಿಕೆಯನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಲಾಭ/ನಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ನೀವು ವೈಯಕ್ತಿಕ ಜೀವನವನ್ನು ಅರ್ಥಮಾಡಿಕೊಂಡರೆ, ನಿಮ್ಮ ಸಂಗಾತಿಯೊಂದಿಗೆ ಅಹಂಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ, ಪರಸ್ಪರ ಸಹಕಾರದ ಕೊರತೆಯಿಂದಾಗಿ, ನಿಮ್ಮ ಈ ಸುಂದರ ಸಂಬಂಧದಲ್ಲಿ ಕಹಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಪಾರದರ್ಶಕವಾಗಿರಿ ಮತ್ತು ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಶನಿಗ್ರಹವು ನಿಮಗೆ ಶೀತ ಮತ್ತು ಒಣ ಕೆಮ್ಮಿನ ರೂಪದಲ್ಲಿ ಯಾವುದೇ ಅಲರ್ಜಿಯನ್ನು ನೀಡುತ್ತದೆ. ಇದರೊಂದಿಗೆ, ಜೀರ್ಣಕಾರಿ ಸಮಸ್ಯೆಗಳು ಸಹ ಅನೇಕರನ್ನು ಕಾಡುತ್ತವೆ, ಆದ್ದರಿಂದ ಅಗತ್ಯವಿದ್ದರೆ ತಕ್ಷಣ ಉತ್ತಮ ವೈದ್ಯರನ್ನು ಸಂಪರ್ಕಿಸಿ.

ಪರಿಹಾರ: ಪ್ರತಿ ಶನಿವಾರದಂದು ಶನಿದೇವನ ಆರಾಧನೆ ಮಾಡಿ.

English summary

Saturn Combust in Capricorn on 18th January 2022 Effects on Zodiac Signs in Kannada

Saturn Combust in Capricorn on 18th January 2022 on Effects on Rashis: How Saturn being in a combust state will change your life and what all remedies must be performed in Kannada
X
Desktop Bottom Promotion