For Quick Alerts
ALLOW NOTIFICATIONS  
For Daily Alerts

Raksha Bandhan : ರಕ್ಷಾ ಬಂಧನ 2021: ದಿನಾಂಕ, ಪೂಜೆಗೆ ಮುಹೂರ್ತ, ರಾಖಿ ಮಂತ್ರ ಹಾಗೂ ಮಹತ್ವ

|

ಸಹೋದರ-ಸಹೋಧರಿಯ ಬಂಧವನ್ನು ಸಾರುವ ಆಚರಣೆಯೇ ರಕ್ಷಾ ಬಂಧನ. ನನ್ನನ್ನು ಎಲ್ಲಾ ಸಂದರ್ಭದಲ್ಲೂ ರಕ್ಷಿಸಲು ನನ್ನ ಸಹೋದರ ಇರುತ್ತಾನೆ ಎಂಬ ನಂಬಿಕೆಯಲ್ಲಿ ಸಹೋದರಿ ಅಣ್ಣನಿಗೆ ರಾಖಿ ಕಟ್ಟುತ್ತಾಳೆ. ನಾನು ಇರುವರೆಗೆ ನಿನ್ನ ರಕ್ಷಣೆ ಹೊಣೆ ಎಂಬ ಪ್ರತಿಜ್ಞೆ ತೆಗೆದು ಸಹೋದರ-ಸಹೋದರಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಈ ರಾಖಿ ಹಬ್ಬ ಸಹೋದರ-ಸಹೋದರಿ ಸಂಬಂಧದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಹಾಗೂ ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಬಲ ಪಡಿಸುತ್ತದೆ.

2021ರಲ್ಲಿ ರಕ್ಷಾ ಬಂಧನವನ್ನು ಆಗಸ್ಟ್‌ 22ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಪೌರ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಆ ದಿನ ಪೂರ್ತಿ ಆಚರಿಸಲಾಗುವುದು. ರಕ್ಷಾ ಬಂಧನ ತಿಥಿ ಸಮಯ ಯಾವಾಗ, ಪೂಜೆಗೆ ಶುಭ ಮುಹೂರ್ತ ಎಷ್ಟೊತ್ತಿಗೆ, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ರಕ್ಷಾ ಬಂಧನ ದಿನಾಂಕ ಮತ್ತು ತಿಥಿ

ರಕ್ಷಾ ಬಂಧನ ದಿನಾಂಕ ಮತ್ತು ತಿಥಿ

ದಿನಾಂಕ: 22 ಆಗಸ್ಟ್ 2021, ಭಾನುವಾರ

ಪೌರ್ಣಿಮೆ ತಿಥಿ ಪ್ರಾರಂಭ: 21 ಆಗಸ್ಟ್‌ 2021, ಸಂಜೆ 7 ಗಂಟೆಗೆ

ಪೌರ್ಣಿಮೆ ತಿಥಿ ಮುಕ್ತಾಯ:22 ಆಗಸ್ಟ್ 2021 ಸಂಜೆ 03:30ಕ್ಕೆ

ರಕ್ಷಾ ಬಂಧನದಂದು ಪೂಜೆ ಮಾಡಿ ರಾಖಿ ಕಟ್ಟಲು ಶುಭ ಮುಹೂರ್ತ

ರಕ್ಷಾ ಬಂಧನದಂದು ಪೂಜೆ ಮಾಡಿ ರಾಖಿ ಕಟ್ಟಲು ಶುಭ ಮುಹೂರ್ತ

ರಕ್ಷಾ ಬಂಧನ ಸಮಯ ಆಗಸ್ಟ್ ಬೆಳಗ್ಗೆ 0:21ರಿಂದ ಪ್ರಾರಂಭವಾಗಿ 05:31ರವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಹುದು, ಆದರೆ ತುಂಬಾ

ಶುಭ ಮುಹೂರ್ತ: ಮಧ್ಯಾಹ್ನ 01:57ರಿಂದ 04:29ರವರೆಗೆ

ಒಟ್ಟು ಸಮಯ: 2 ಗಂಟೆ: 32 ನಿಮಿಷ

ರಾಖಿಯ ಮಹತ್ವ

ರಾಖಿಯ ಮಹತ್ವ

ಉತ್ತರ ಭಾರತದಲ್ಲಿ ಶ್ರಾವಣ ಕೊನೆಯ ದಿನದಂದು ರಕ್ಷಾ ಬಂಧನ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಿಮೆಯಂದು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 22ಕ್ಕೆ ಪೌರ್ಣಿಮೆ. ಅಣ್ಣ-ತಂಗಿಯ ಬಂಧವನ್ನು ಸಾರುವ ಈ ಹಬ್ಬವನ್ನು ದೇಶದೆಲ್ಲಡೆ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

ರಾಖಿ ಮಂತ್ರ

ರಾಖಿ ಮಂತ್ರ

'ಯೇನ್ ಬದ್ದೋ ಬಲಿ ರಾಜ, ದಾನ್‌ವೇಂದ್ರೋ ಮಹಾಬಲ್‌: ತೇನ್ ತ್ವಾಂ ಪ್ರತಿ ಬಂಧನ್'

ಅರ್ಥ: ನಾನು ನಿನಗೆ ಕಟ್ಟಿರುವ ಈ ರಕ್ಷಾ ಬಲಿ ರಾಜನಿಗೆ ಕಟ್ಟಿದ ರಕ್ಷಾಗೆ ಸಮ, ಓ ರಕ್ಷಾವೇ ಬಲವಾಗಿರು, ಎಂದಿಗೂ ಅಲುಗಾಡಬೇಡ..

English summary

Raksha Bandhan 2021: Know Date, Tithi, Rakhi Mantra, Puja Shubh Muhurat And Significance

Raksha Bandhan 2021: Know Date, Tithi, Rakhi Mantra, Puja Shubh Muhurat & Significance, Read on.. .
X
Desktop Bottom Promotion