For Quick Alerts
ALLOW NOTIFICATIONS  
For Daily Alerts

ಮಾರ್ಚ್ 14ಕ್ಕೆ ಪುಷ್ಯಾ ನಕ್ಷತ್ರ: ಈ ದಿನದ ಮಹತ್ವದ ಬಗ್ಗೆ ವೈದಿಕ ಶಾಸ್ತ್ರ ಏನು ಹೇಳುತ್ತದೆ? ಇದರ ಪ್ರಭಾವವೇನು?

|

ಜ್ಯೋತಿಷ್ಯ ಪ್ರಕಾರ ವ್ಯಕ್ತಿ ಯಾವ ಸಮಯದಲ್ಲಿ ಹುಟ್ಟುತ್ತಾರೆ ಅದರ ಮೇಲೆ ಅವರು ಯಾವ ನಕ್ಷತ್ರ ಹಾಗೂ ರಾಶಿಗೆ ಸೇರಿದವರು ಎಂದು ಹೇಳಲಾಗುವುದು. ಪ್ರತಿಯೊಂದು ನಕ್ಷತ್ರವೂ ತನ್ನದೇ ಆದ ಪ್ರಭಾವವನ್ನು ಮನುಷ್ಯನ ಮೇಲೆ ಬೀರುತ್ತದೆ. ನಮ್ಮ ಜನ್ಮ ನಕ್ಷತ್ರ ಹೇಗೆ ಇರುತ್ತದೋ ಅದರಂತೆ ನಮ್ಮ ಬದುಕು ಇರುತ್ತದೆ ಎಂದು ಹೇಳಲಾಗುವುದು.

27 ನಕ್ಷತ್ರಗಳಲ್ಲಿ ಪುಷ್ಯಾ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಕರೆಯಲಾಗುವುದು. ಈ ನಕ್ಷತ್ರ ಸಂಪತ್ತು, ಐಶ್ವರ್ಯ ಪ್ರಯೋಜನಕಾರಿ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುವುದು.

ಗುರುಪುಷ್ಯಾಮೃತ ಯೋಗ

ಗುರುಪುಷ್ಯಾಮೃತ ಯೋಗ

ಪುಷ್ಯಾ ನಕ್ಷತ್ರ ದಿನಗಳಲ್ಲಿ 'ಗುರುಪುಷ್ಯಾಮೃತ ಯೋಗ ' ತುಂಬಾನೇ ವಿಶೇಷವಾದ ದಿನವಾಗಿದೆ. ಗುರುಪುಷ್ಯಾಮೃತ ಯೋಗದಲ್ಲಿ ಏನಾದರೂ ಮಾಡಿದರೆ ತುಂಬಾ ಪ್ರಯೋಜನಕಾರಿಯಾಗಲಿದೆ, ಆ ಕಾರ್ಯದಲ್ಲಿ ಯಶಸ್ಸು, ಸಂಪತ್ತು ದೊರೆಯುವುದು ಎಂದು ಹೇಳಲಾಗುವುದು.

ಪಂಚಾಂಗದಲ್ಲಿ ಪುಷ್ಯಾ ನಕ್ಷತ್ರಕ್ಕ ಎರಡನೇ ಮಹತ್ವವಾದ ಸ್ಥಾನವಿದೆ. ಕಾರ್ತಿಕ ಅಮವಾಸ್ಯೆಗೆ ಮೊದಲು ಬರುವ ಪುಷ್ಯಾ ನಕ್ಷತ್ರ ಸಮಯ ಏನಾದರೂ ಶುಭ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

 ಪುಷ್ಯಾ ನಕ್ಷತ್ರದ ಮಹತ್ವ

ಪುಷ್ಯಾ ನಕ್ಷತ್ರದ ಮಹತ್ವ

ಪುಷ್ಯಾ ನಕ್ಷತ್ರದ ಸಮಯದಲ್ಲಿ ಏನಾದರೂ ಕಾರ್ಯ ಮಾಡಿದರೆ ತುಂಬಾ ಒಳ್ಳೆಯದಾಗುವುದು, ನಾವು ಬ್ಯುಸ್‌ನೆಸ್‌ ಮಾಡಿದರೆ ಅದರಲ್ಲಿ ಸಕ್ಸಸ್‌ ಆಗುತ್ತೇವೆ, ಸಂಪತ್ತು ದೊರೆಯುವುದು ಎಂದು ಹೇಳಲಾಗುವುದು.

ಪುಷ್ಯಾ ನಕ್ಷತ್ರ ಸೋಮವಾರ, ಗುರುವಾರ, ಶನಿವಾರ ಬಂದ್ರೆ ವರ ನಕ್ಷತ್ರ ಯೋಗ ಉಂಟಾಗುವುದು, ಅದರಲ್ಲಿ ಪುಷ್ಯಾ ನಕ್ಷತ್ರ ಗುರುವಾರ ಬರುವುದು ತುಂಬಾ ಅಪರೂಪ. ಈ ತಿಂಗಳಿನಲ್ಲಿ ಸೋಮವಾರ ಬಂದಿದೆ. ನೀವೇನಾದರೂ ಶುಭ ಕಾರ್ಯ ಪ್ರಾರಂಭಿಸುವುದಾದರೆ ಈ ದಿನ ತುಂಬಾ ಶ್ರೇಷ್ಠವಾಗಿದೆ ನೋಡಿ.

ಪುಷ್ಯಾ ನಿಮ್ಮ ಜನ್ಮ ನಕ್ಷತ್ರವಾಗಿದ್ದರೆ

ಪುಷ್ಯಾ ನಿಮ್ಮ ಜನ್ಮ ನಕ್ಷತ್ರವಾಗಿದ್ದರೆ

ಗುರು ನಿಮ್ಮ ಅಧಿಪತಿಯಾಗಿರುತ್ತಾನೆ, ಅದರ ಜೊತೆಗೆ ಶನಿಯ ಕೃಪೆಯೂ ಇರುವುದು. ಗುರು ಶುದ್ಧತೆ, ಜ್ಞಾನ, ಬುದ್ಧಿಯ ಸಂಕೇತವಾಗಿದ್ದರೆ ಶನಿ ಅಚಲತೆಯ ಸಂಕೇತವಾಗಿದೆ. ನಿಮ್ಮ ನಕ್ಷತ್ರದಲ್ಲಿ ಶನಿ-ಗುರು ಜೊತೆಯಾಗಿರುವುದರಿಂದ ಈ ನಕ್ಷತ್ರದವರು ಅದೃಷ್ಟವಂತರು ಎಂದು ಹೇಳಲಾಗುವುದು.

ಈ ನಕ್ಷತ್ರದವರು ವಿರುದ್ಧ ಲಿಂಗದವರ ಕಡೆ ತುಂಬಾ ಪ್ರೀತಿ, ಕೇರ್ ತೋರಿಸುತ್ತಾರೆ. ಇವರು ಪ್ರವಾಸ ಮಾಡುವುದನ್ನು, ತುಂಬಾ ಸುತ್ತಾಡುವುದನ್ನು ಇಷ್ಟಪಡುತ್ತಾರೆ. ಇವರು ತಮ್ಮ ಕೆಲಸದಲ್ಲಿ ತುಂಬಾ ನಿಯತ್ತು ತೋರಿಸುತ್ತಾರೆ, ಅವರು ಸುಳ್ಳು ಹೇಳುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.

 ಪುಷ್ಯಾ ನಕ್ಷತ್ರ ಸಮಯದಲ್ಲಿ ಹೀಗೆ ಮಾಡಿದರೆ ಒಳ್ಳೆಯದು

ಪುಷ್ಯಾ ನಕ್ಷತ್ರ ಸಮಯದಲ್ಲಿ ಹೀಗೆ ಮಾಡಿದರೆ ಒಳ್ಳೆಯದು

* ಯಾವುದೇ ಹೊಸ ಕೆಲಸ ಅಥವಾ ಪ್ರಾಜೆಕ್ಟ್ ಪ್ರಾರಂಬಿಸಿ

* ಪ್ರಯಾಣ ಪ್ರಾರಂಭಿಸಲು ಯೋಗ್ಯವಾದ ದಿನ

* ಕಲಿಕೆಗೆ ಅಥವಾ ಹೊಸತನ್ನು ಕಲಿಯಲು ಒಳ್ಳೆಯ ಸಮಯ

* ಧಾರ್ಮಿಕ ಕಾರ್ಯಗಳಿಗೆ ತುಂಬಾ ಶ್ರೇಷ್ಠವಾಗಿದೆ

* ಜೊತೆಗೆ ನಾಯಕತ್ವದಲ್ಲಿ ಏನಾದರೂ ಕಾರ್ಯ ಮಾಡಲು ಶ್ರೇಷ್ಠ ಸಮಯವಾಗಿದೆ.

 ಬುಧವಾರ, ಶುಕ್ರವಾರ ಪುಷ್ಯಾ ನಕ್ಷತ್ರದಲ್ಲಿ ಏನೂ ಮಾಡಬೇಡಿ

ಬುಧವಾರ, ಶುಕ್ರವಾರ ಪುಷ್ಯಾ ನಕ್ಷತ್ರದಲ್ಲಿ ಏನೂ ಮಾಡಬೇಡಿ

* ಪುಷ್ಯಾ ನಕ್ಷತ್ರ ಬುಧವಾರ ಅಥವಾ ಶುಕ್ರವಾರದಂದು ಬಂದರೆ ಯಾವುದೇ ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ

* ಈ ದಿನಗಳಲ್ಲಿ ಪುಷ್ಯಾ ನಕ್ಷತ್ರವನ್ನು ಶಾಪಗ್ರಸ್ಥವಾಗಿದೆ ಎಂದು ಹೇಳಲಾಗುವುದು

* ಮದುವೆ, ಮತ್ತಿತರ ಶುಭ ಕಾರ್ಯಗಳನ್ನು ಪುಷ್ಯಾ ನಕ್ಷತ್ರವಿರುವ ಈ ದಿನಗಳಲ್ಲಿ ಮಾಡಬೇಡಿ.

2022ರ ಮುಂಬರುವ ದಿನಗಳಲ್ಲಿ ಪುಷ್ಯಾ ನಕ್ಷತ್ರದ ದಿನಾಂಕ

2022ರ ಮುಂಬರುವ ದಿನಗಳಲ್ಲಿ ಪುಷ್ಯಾ ನಕ್ಷತ್ರದ ದಿನಾಂಕ

ಮಾರ್ಚ್ 14, ಸೋಮವಾರ

ಏಪ್ರಿಲ್ 10, ಭಾನುವಾರ

ಮೇ 7, ಶನಿವಾರ'

ಜೂನ್ 4, ಶನಿವಾರ

ಜುಲೈ 1, ಶುಕ್ರವಾರ

ಜುಲೈ 28 , ಗುರುವಾರ

ಆಗಸ್ಟ್ 24, ಬುಧವಾರ

ಸೆಪ್ಟೆಂಬರ್ 21, ಬುಧವಾರ

ಅಕ್ಟೋಬರ್ 18, ಮಂಗಳವಾರ

ನವೆಂಬರ್ 14, ಸೋಮವಾರ

ಡಿಸೆಂಬರ್ 12, ಸೋಮವಾರ

English summary

Pushya Nakshatra: Astrological Significance, Benefits, Facts And Effects in Kannada

Pushya Nakshatra: Astrological Significance, Benefits, Facts And Effects in Kannada...
X
Desktop Bottom Promotion