For Quick Alerts
ALLOW NOTIFICATIONS  
For Daily Alerts

ಜು. 20 ಪ್ರಥಮ ಏಕಾದಶಿ: ಪೂಜಾವಿಧಿ ಹಾಗೂ ಈ ದಿನದ ಮಹತ್ವವೇನು?

|

ಜುಲೈ 20 ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ, ಈ ಏಕಾದಶಿಯನ್ನು ದೇವಾಶ್ಯಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿ ಕರೆಯಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಅದರಂತೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯಂದು ಕೂಡ ಹಲವಾರು ಆಚರಣೆಗಳಿವೆ. ಈ ದಿನ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು, ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ.

ದೇವಾಶ್ಯಯನಿ ಏಕಾದಶಿಯ ಮಹತ್ವ

ದೇವಾಶ್ಯಯನಿ ಏಕಾದಶಿಯ ಮಹತ್ವ

ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತ ಆಚರಿಸುತ್ತಾರೋ ಅವರ ಪಾಪಗಳನ್ನು ಸುಟ್ಟು ಬಿಡುತ್ತೇನೆ ಹಾಗೂ ಅವರ ಹೃದಯದಲ್ಲಿ ನಾನು ವಾಸಿಸುತ್ತೇನೆ ಎಂದು ಶ್ರೀಕೃಷ್ಣನೇ ಹೇಳಿರುವುದಾಗಿ ಪೌರಾಣಿಕ ಕತೆಯಿದೆ. ಇಂದಿನಿಂದ ಚಾತುರ್ಮಾಸ ಪ್ರಾರಂಭ. ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ದೆಯಲ್ಲಿರುತ್ತಾನೆ.

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ

ದೇವಾಶ್ಯಯನಿ ಏಕಾದಶಿ : ಜುಲೈ 20, ಮಂಗಳವಾರ

ತಿಥಿ ಪ್ರಾರಂಭ: ಸಂಜೆ 04:29, ಜುಲೈ 19, 2021

ಏಕಾದಶಿ ತಿಥಿ ಮುಕ್ತಾಯ: ಮಧ್ಯಾಹ್ನ 01:47, ಜುಲೈ 20, 2021

ಪಾರಣ : ಜುಲೈ 21 ಬೆಳಗ್ಗೆ 05:44ರಿಂದ 08:15ರವರೆಗೆ

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು

ಆಷಾಢ ಮಾಸದ ಶುಕ್ಲ ಪಕ್ಷದ ಶಯನಿ ಏಕಾದಶಿ ಬಳಿಕ ಚಾತುರ್ಮಾಸ ಪ್ರಾರಂಭ, ಈ ನಾಲ್ಕು ತಿಂಗಳು ವಿಷ್ಣು ನಿದ್ದೆಯಲ್ಲಿರುತ್ತಾನೆ. ಆಗ ಶಿವನು ಈ ಲೋಕವನ್ನು ಕಾಯುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾತುರ್ಮಾಸ ಎಂಬುವುದು ಪವಿತ್ರವಾದ ಮಾಸವಾಗಿದ್ದು ಇಂದಿನಿಂದ ಆರಂಭ.

ಶಯನಿ ಏಕಾದಶಿ ಪೂಜಾ ವಿಧಿ

ಶಯನಿ ಏಕಾದಶಿ ಪೂಜಾ ವಿಧಿ

* ಈ ದಿನ ಉಪವಾಸವಿರಬೇಕು.

* ಕೆಲವರು ಸಾತ್ವಿಕ ಆಹಾರ ಸೇವಿಸುತ್ತಾರೆ, ಆದರೆ ಆ ಆಹಾರದಲ್ಲಿ ಧಾನ್ಯಗಳು, ಕಾಳುಗಳು, ತರಕಾರಿಗಳಾದ ಈರುಳ್ಳಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರಬಾರದು.

* ವಿಷ್ಣುವಿನ ಪೂರ್ತಿಯನ್ನು ಹಳದಿ ಹೂಗಳಿಂದ ಅಲಂಕರಿಸಬೇಕು. ನಂತರ ತುಳಸಿಯನ್ನು ಅರ್ಪಿಸಬೇಕು.

* ನಂತರ ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಬೇಕು.

* ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು ಈ ವ್ರತ ಮಾಡುತ್ತಾರೆ.

English summary

Prathama Ekadashi 2021 Date, Importance, Rituals and Significance in Kannada

Prathama Ekadashi 2021 Date, Importance, Rituals and Significance, read on
Story first published: Tuesday, July 20, 2021, 10:24 [IST]
X
Desktop Bottom Promotion