Just In
- 2 hrs ago
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- 6 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- 15 hrs ago
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- 16 hrs ago
ನಿಯಮಿತವಾಗಿ ಅಣಬೆ ಸೇವನೆಯಿಂದ ಮಧುಮೇಹ ತಡೆಗಟ್ಟಬಹುದು
Don't Miss
- Automobiles
ಬಹುಕೋಟಿಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್
- News
ಟಿ.ಜಿ.ಶಿವಶಂಕರೇಗೌಡ ಸೇರಿ ಐವರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದನ್ನೋತಿ
- Technology
75ನೇ ಸ್ವಾತಂತ್ರ್ಯೋತ್ಸವ: ಜಿಯೋದಿಂದ ಭರ್ಜರಿ ಕೊಡುಗೆ!..ಇಲ್ಲಿದೇ ಮಾಹಿತಿ!
- Movies
ದಾಸನ ಡೆಡಿಕೇಶನ್ಗೆ ಫ್ಯಾನ್ಸ್ ಬಹುಪರಾಕ್: 6 ತಿಂಗಳಲ್ಲಿ ಹೇಗಿದ್ದ ದರ್ಶನ್ ಹೇಗಾದ್ರು?
- Sports
CSA T20 League: ಪಾರ್ಲ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್ ಸೇರ್ಪಡೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಆಗಸ್ಟ್ 13: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ವರಮಹಾಲಕ್ಷ್ಮಿ ಹಬ್ಬಕ್ಕೆ ಇರಬೇಕಾದ ಪೂಜಾ ಸಾಮಗ್ರಿಗಳಿವು
ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿದೆ. ಜುಲೈ 31ಕ್ಕೆ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುವುದು. ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಕೆಲವು ದಿನಗಳ ಮುಂಚೆಯೇ ಹಬ್ಬಕ್ಕೆ ಬೇಕಾದ ವಸ್ತುಗಳ ಜೋಡಣೆ ಮಾಡಿಡುವುದು ಒಳ್ಳೆಯದು. ನಾವು ವರಮಹಾಲಕ್ಷ್ಮಿ ಹಬ್ಬದಂದು ಕುಂದನ್ ವಿನ್ಯಾಸ ಬಳಸಿ ಅಲಂಕರಿಸುವುದು ಹೇಗೆ ಎಂದು ಈ ಹಿಂದಿನ ಲೇಖನದಲ್ಲಿ ಹೇಳಿದ್ದೆವು.
ಈ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಪೂಜೆಗೆ ಅಗ್ಯತವಾದ ಸಾಮಗ್ರಿಗಳ ಪಟ್ಟಿ ನೀಡಿದ್ದೇವೆ. ಬೆಳಗ್ಗೆ ಎದ್ದು ಮಡಿ ಸ್ನಾನ ಮಾಡಿ ಅಷ್ಟದಳ ಪದ್ಮ'ದ ರಂಗೋಲಿಯನ್ನು ಬರೆದು, ಅದರ ಮೇಲೆ ಕಲಶವನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಹದಿನಾರು ಗಂಟುಳ್ಳಂತಹ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಈ ಹಬ್ಬದ ಸಂಪ್ರದಾಯ. ಈ ಹಬ್ಬಕ್ಕೆ ನಿಮ್ಮಲ್ಲಿ ಇರಬೇಕಾದ ಪೂಜಾ ಸಾಮಗ್ರಿ:

ಕಲಶ:
ವರಮಹಾಲಕ್ಷ್ಮಿ ಪೂಜೆಯಲ್ಲಿ ಕಲಶ ಲಕ್ಷ್ಮಿಯ ಕಲಶ ಪ್ರತಿಷ್ಠಾಪನೆ ಮಾಡುವುದೇ ಪ್ರಮುಖವಾಗಿರುತ್ತದೆ. ಕಲಶಕ್ಕೆ ನೀರನ್ನು ತುಂಬಿ, ಅದನ್ನು ವೀಳ್ಯೆದೆಲೆ ಅಥವಾ ಮಾವಿನ ಎಲೆಗಳಿಂದ ಅಲಂಕರಿಸಬೇಕು. ಕಲಶ ಪ್ರತಿಷ್ಠಾಪನೆಗೆ ಕೆಲವರು ಪುಟ್ಟದಾಗ ಬಂದಿಗೆ ಇನ್ನು ಕೆಲವರು ಚಿನ್ನ, ಬೆಳ್ಳಿ ಹಿತ್ತಾಳೆ ಅಥವಾ ಸ್ಟೀಲ್ನ ಚೊಂಬು ಬಳಸುತ್ತಾರೆ. ಲಕ್ಷ್ಮೀ ಪೂಜೆಗೆ ಹೆಚ್ಚಿನವರು 'ಅಷ್ಟಲಕ್ಷ್ಮಿ'ಯರ ಚಿತ್ರವಿರುವಂತಹ 'ತಂಬಿಗೆ' ಅಥವಾ 'ಚೊಂಬನ್ನು' ಬಳಸುತ್ತಾರೆ.

ಪಂಚಪಾತ್ರೆ ಹಾಗೂ ಉದ್ಧರಣೆ
ಲಕ್ಷ್ಮೀ ಪೂಜೆ ಮಾಡುವಾಗ 'ಪಂಚಪಾತ್ರೆ'ಗೆ ಹೆಚ್ಚಿನ ಮಹತ್ವವಿದೆ. ಇದನ್ನು ಪೂಜೆ ಕಾರ್ಯ ಮಾಡುವಾಗ ಪಂಚಪಾತ್ರೆಗೆ ಶುದ್ಧವಾದ ನೀರು ತುಂಬಿ, ಅದರಲ್ಲಿ ಹೂ, ಗಂಧ, ಅಕ್ಷತೆ, ಅರಿಶಿಣ, ಕುಂಕುಮ ಹಾಕಿ ಈ ನೀರನ್ನು ಪ್ರೋಕ್ಷಣೆ ಮಾಡಿ ಪೂಜಾ ಸ್ಥಳಗಳನ್ನು ಶುದ್ಧೀಕರಿಸುತ್ತಾರೆ. ಈ ಪಾತ್ರೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಪಂಚಲೋಃಗಳಲ್ಲೂ ತಯಾರಿಸಲಾಗುವುದು.

ತಟ್ಟೆ ಅಥವಾ ಹರಿವಾಣ:
ಇನ್ನು ಹೂ, ಹಣ್ಣುಗಳನ್ನು ಇಡಲು ಹರಿವಾಣ ತಟ್ಟೆಗಳನ್ನು ಬಳಸುತ್ತಾರೆ. ಈ ಹರಿವಾಣ ಸ್ಟೀಲ್ನದ್ದು ಆಗಿರಬಹುದು ಅಥವಾ ಇತರ ಲೋಹದ್ದು ಪಾತ್ರೆಗಳಾಗಿರಬಹುದು, ಅರಿಶಿಣ, ಕುಂಕುಮ ಬಟ್ಟಲು ಕೂದ ಇದರಲ್ಲೇ ಇಡಲಾಗುವುದು.

ಪಂಚಾಮೃತ ಬಟ್ಟಲು
ಪೂಜೆ ಪ್ರಸಾದದಲ್ಲಿ ಪಂಚಾಮೃತ ಮಾಡಲಾಗುವುದು. ಹಾಲು, ಜೇನು, ತುಪ್ಪ, ಬಾಳೆಹಣ್ಣು, ಸಕ್ಕರೆ ಬಳಸಿ ಪಂಚಾಮೃತ ತಯಾರಿಸಲಾಗುವುದು. ' ಪಂಚಾಮೃತ ಬಟ್ಟಲಿ ಸಿಗುತ್ತದೆ, ಇಲ್ಲದಿದ್ದರೆ ಮನೆಯಲ್ಲಿರುವ ಸ್ವಲ್ಪ ಅಗಲ ಬಾಯಿಯ ಚಿಕ್ಕ ಪಾತ್ರೆಯನ್ನು ಕೂಡ ಪಂಚಾಮೃತ ಬಡಿಸಲು ಇಡಬಹುದು.

ಆರತಿ ತಟ್ಟೆ
ದೇವರ ಪೂಜೆಯಲ್ಲಿ ಆರತಿ ಎತ್ತಲಾಗುವುದು. ಆರತಿ ಎತ್ತಲು ಏಕಾರತಿ, ಪಂಚಾರತಿ, ಷೋಡಷಾರತಿ ಮುಂತಾದುವುಗಳ ಬಳಕೆ ವರಮಹಾಲಕ್ಷ್ಮಿ ಪೂಜೆಯಲ್ಲಿ ಮಹತ್ವವನ್ನು ಹೊಂದುತ್ತದೆ. ಐದು ಸೊಡರುಗಳಿಂದ ಕೂಡಿದಂತಹ ಹಾಗೂ ಹದಿನಾರು ಸೊಡರುಗಳಿಂದ ಕೂಡಿದಂತಹ 'ಆರತಿ'ಯನ್ನು ಮಾರುಕಟ್ಟೆಯಲ್ಲಿನ ಖರೀದಿಸಬಹುದು.

ಗಂಟೆ:
ಇನ್ನು ದೇವರ ಪೂಜೆಯಲ್ಲಿ ಗಂಟೆಯ ನಿನಾದ ಕೇಳುವುದೇ ಕಿವಿಗೆ ಇಂಪು. ಮನೆಯಲ್ಲ ಬಳಕೆಗೆ ಚಿಕ್ಕ ಗಂಟೆ ಬಳಸಬಹುದು. ಇನ್ನು ದೇವರು ಕೋಣೆಯಲ್ಲಿ ದೊಡ್ಡ ಗಣಟೆಯನ್ನೂ ನೇತು ಹಾಕಬಹುದು.

ಅರಿಶಿನ-ಕುಂಕುಮ ಬಟ್ಟಲು:
ಇನ್ನು ಅರಿಶಿಣ -ಕುಂಕುಮ ಇಡಲು 'ಪಂಚವಾಳ' ಎಂದು ಕರೆಯಲ್ಪಡುವ ವಿವಿಧ ಬಟ್ಟಲುಗಳು ಸಿಗತ್ತವೆ. ಈ ಬಟ್ಟಲುಗಳು ಹಲವಾರು ವಿನ್ಯಾಸದಲ್ಲಿ ದೊರೆಯುತ್ತವೆ. ಮನೆಗೆ ಬಂದ ಅರಿಶಿಣ-ಕುಂಕುಮವನ್ನು ಇದೇ ಅರಿಶಿಣ-ಕುಂಕುಮ ಬಟ್ಟಲಿನಲ್ಲಿ ನೀಡುವುದು ವಾಡಿಕೆ.

ಸಲಹೆ:
- ಪೂಜಾ ಪರಿಕರಗಳನ್ನು ಮೊದಲೇ ಜೋಡಿಸಿಡುವುದು ಒಳ್ಳೆಯದು. ಈ ಪರಿಕರಗಳನ್ನು ಎಲ್ಲಾ ಪೂಜೆಯಲ್ಲಿ ಮುಗಿಸಬಹುದು.
- ಪೂಜಾ ಪರಿಕರಗಳನ್ನು ಖರೀದಿಸುವಾಗ ಅಗತ್ಯಕ್ಕೆ ತಕ್ಕಂತೆ ಗಾತ್ರ, ವಿನ್ಯಾಸಗಳನ್ನು ಗಮನಿಸಿ ಖರೀದಿಸಬೇಕು.
- ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ, ಬೆಳ್ಳಿ, ತಾಮ್ರದ ಪೂಜಾ ಸಾಮಗ್ರಿ ಬಳಸುತ್ತಾರೆ.
- ಹಿತ್ತಾಳೆ ಅಥವಾ ತಾಮ್ರದ ಪೂಜಾ ಪಾತ್ರೆ-ಪರಿಕರಗಳನ್ನು ತೊಳೆಯುವಾಗ ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ಫಳ-ಫಳ ಹೊಳೆಯುತ್ತದೆ.
- ಬೆಳ್ಳಿಯ ಪೂಜಾ ವಸ್ತುಗಳನ್ನು ತೊಳೆಯಲು ಬೇಯಿಸಿದ ಆಲೂಗಡ್ಡೆ ಹಾಗೂ ಅಂಟ್ವಾಳ ಕಾಯಿ ಬಳಸಬಹುದು.