For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷ 2021: ಈ ಸಮಯದಲ್ಲಿ ಪೂಜೆಗೆ ಹಾಗೂ ನಿಮ್ಮ ಆಹಾರ ಕ್ರಮ ಹೀಗಿರಲಿ

|

ಹದಿನೈದು ದಿನಗಳ ಕಾಲ ನಡೆಯುವ ಪಿತೃ ಪಕ್ಷವು ಈ ವರ್ಷ ಅಂದರೆ 2021ರಲ್ಲಿ ಸೆಪ್ಟೆಂಬರ್ 21ರಿಂದ ಆರಂಭವಾಗಿ ಅಕ್ಟೋಬರ್‌ 6ರವರೆಗೆ ಇರುತ್ತದೆ. ನಮ್ಮನ್ನು ಅಗಲಿದ ಪೂರ್ವಜರ ಆತ್ಮಕ್ಕೆ ಶಾಂತಿಕೋರಲು, ನೆಮ್ಮದಿಯಾಗಿ ಸ್ವರ್ಗ ಸೇರಲು ಈ ಪೂಜೆ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ.

ಈ ಸಮಯದಲ್ಲಿ, ಹಲವಾರು ಆಹಾರ ನಿರ್ಬಂಧಗಳಿವೆ, ಇದನ್ನು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿಗಾಗಿ ಅನುಸರಿಸಲಾಗುತ್ತದೆ. ತಾಮಸಿಕ ಆಹಾರ ಪದಾರ್ಥಗಳಿಂದ ದೂರವಿರಬೇಕು ಎಂದು ಹೇಳಲಾಗಿದೆ. ಹೆಚ್ಚಿನ ಆಹಾರ ಪದಾರ್ಥಗಳನ್ನು ವೈಜ್ಞಾನಿಕ ಉದ್ದೇಶಗಳಿಗಾಗಿ ತಿನ್ನಬಾರದು ಹಾಗೂ ತಾಮಸಿಕ ಆಹಾರ ಪದಾರ್ಥಗಳನ್ನು ತಿಂದ ನಂತರ ದೇಹದಿಂದ ಉತ್ಪತ್ತಿಯಾಗುವ ರಾಸಾಯನಿಕಗಳು ಪಿತೃ ಪಕ್ಷ ಆಚರಣೆಗಳಿಗೆ ಅಗತ್ಯವಿರುವ ಏಕಾಗ್ರತೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಪಿತೃ ಪಕ್ಷದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು, ಯಾವುದನ್ನು ಸೇವಿಸಲೇಬಾರದು ಮುಂದೆ ನೋಡೊಣ:

ಎಲೆಯ ಮೇಲೆ ಎಂದಿಗೂ ಆಹಾರವನ್ನು ನೀಡಬೇಡಿ

ಎಲೆಯ ಮೇಲೆ ಎಂದಿಗೂ ಆಹಾರವನ್ನು ನೀಡಬೇಡಿ

ನಮ್ಮ ಪೂರ್ವಜರನ್ನು ಮೆಚ್ಚಿಸಲು ಶ್ರಾದ್ಧ ಆಹಾರವನ್ನು ಬೆಳ್ಳಿ, ಕಂಚು, ಹಿತ್ತಾಳೆ ಅಥವಾ ಇತರೆ ಯಾವುದೇ ತಟ್ಟೆಯಲ್ಲಿ ನೀಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೆ, ಈ ಲೋಹವು ಸುತ್ತಲಿನ ಎಲ್ಲಾ ದುಷ್ಟ ಶಕ್ತಿಗಳನ್ನು ನಾಶಪಡಿಸುತ್ತದೆ ಎಂದು ಹೇಳಲಾಗಿದೆ. ಬದಲಾಗಿ ಬಾಳೆಎಲೆ ಬಳಕೆ ಸಲ್ಲದು. ಅಲ್ಲದೇ, ಈ ಕಾಲಮಾನದಲ್ಲಿ ನೈರ್ಮಲ್ಯದ ಉದ್ದೇಶದಿಂದಲೂ ಸಹ ಬಾಳೆ ಎಲ್ಲೆ ಅಷ್ಟು ಒಳ್ಳೆಯದಲ್ಲ ಎನ್ನಲಾಗುತ್ತದೆ. ಬಾಳೆಎಲೆಯಲ್ಲಿ ಊಟ ಬಡಿಸಿದರೆ ಇದು ನಮ್ಮ ಪೂರ್ವಜರ ಹಸಿವನ್ನು ನೀಗಿಸುವುದಿಲ್ಲ ಎಂಬ ಮಾತೂ ಇದೆ.

ಹಳೆಯ ಆಹಾರ

ಹಳೆಯ ಆಹಾರ

ಪಿತೃಪಕ್ಷದಲ್ಲಿ ಸೇವಿಸುವ ಎಲ್ಲಾ ಆಹಾರ ಪದಾರ್ಥಗಳು ತಾಜಾವಾಗಿರಬೇಕು. ಈ ಸಮಯದಲ್ಲಿ, ತಾಜಾ ಆಹಾರವನ್ನು ತಯಾರಿಸುವುದು ಪೂರ್ವಜರ ಆತ್ಮವನ್ನು ಪೋಷಿಸುತ್ತದೆ. ಅಲ್ಲದೆ, ಈ ಸಮಯದಲ್ಲಿ ಹವಾಮಾನವು ತೀವ್ರವಾಗಿ ಬದಲಾಗುವುದರಿಂದ, ಆರೋಗ್ಯದ ಉದ್ದೇಶಗಳಿಗಾಗಿ ರೆಫ್ರಿಜರೇಟರ್‌ನಲ್ಲಿ ಹೆಚ್ಚು ಸಮಯದವರೆಗೆ ಇರಿಸಲಾಗಿರುವ ಆಹಾರದಿಂದ ದೂರವಿರಬೇಕು. ರೆಫ್ರಿಜರೇಟರ್‌ನಲ್ಲಿ ಸಂಗ್ರಹವಾಗಿರುವ ಹೆಚ್ಚಿನ ಆಹಾರ ಪದಾರ್ಥಗಳು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತವೆ, ಇದು ಕ್ಯಾನ್ಸರ್ ಕಾರಕವಾಗಿಸುತ್ತದೆ ಎಂಬುದು ನೆನಪಿರಲಿ.

ಹಸುವಿನ ಹಾಲು

ಹಸುವಿನ ಹಾಲು

ಈ ಋತುವಿನಲ್ಲಿ ಹಸುವಿನ ಹಾಲಿನಿಂದ ದೂರವಿರಬೇಕು. ಅದರಲ್ಲೂ ಇತ್ತೀಚೆಗೆ ಜನ್ಮ ನೀಡಿದ ಹಸುವಿನ ಹಾಲನ್ನು ವಿಶೇಷವಾಗಿ ತಪ್ಪಿಸಬೇಕು. ಹಾಗೆಯೇ ಈ ಸಮಯದಲ್ಲಿ ಹಸುವಿನ ತುಪ್ಪವನ್ನು ಸಹ ಸೇವಿಸುವುದನ್ನು ತಪ್ಪಿಸಿ.

ಶ್ರಾದ್ಧಾ ಪಾಯಸ

ಶ್ರಾದ್ಧಾ ಪಾಯಸ

ಶ್ರಾದ್ಧ ಕಾಲದಲ್ಲಿ ಖೀರ್, ಪಾಯಸಕ್ಕೆ ವಿಶೇಷ ಮಹತ್ವವಿದೆ. ಅಲ್ಲದೆ ಈ ಸಂದರ್ಭದಲ್ಲಿ ತಯಾರಿಸುವ ಪಾಯಸಕ್ಕೆ ಬಳಸುವ ಹಾಲು ಕೇವಲ ಹಸುವಿನ ಹಾಲಾಗಿರಬೇಕು. ಮೊಸರು, ತುಪ್ಪ ಸೇರಿದಂತೆ ಹಾಲಿನಿಂದ ತಯಾರಿಸಿದ ಯಾವುದೇ ವಸ್ತುವು ಹಸುವಿನ ಹಾಲಿನಿಂದ ಇರಬೇಕು. ಆದರೆ ಈ ಹಾಲು ಇತ್ತೀಚೆಗೆ ಜನ್ಮ ನೀಡಿದ ಹಸುವಿನ ಹಾಲಾಗಿರಬಾರದು ಎಂಬುದು ನೆನಪಿರಲಿ.

ಪುಡಿ ಉಪ್ಪಿನ ಬದಲಿಗೆ ಕಲ್ಲು ಉಪ್ಪು ಬಳಸಿ

ಪುಡಿ ಉಪ್ಪಿನ ಬದಲಿಗೆ ಕಲ್ಲು ಉಪ್ಪು ಬಳಸಿ

ಆಹಾರದ ಶುದ್ಧತೆಯನ್ನು ಕಾಪಾಡಿಕೊಳ್ಳಲು, ಸಾಮಾನ್ಯ ಕಲ್ಲು ಉಪ್ಪನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ. ಆಯುರ್ವೇದದ ಪ್ರಕಾರ ಕಲ್ಲು ಉಪ್ಪು ಅತ್ಯಂತ ಶುದ್ಧ ಉಪ್ಪಾಗಿದೆ. ಇದರಲ್ಲಿ ಯಾವುದೇ ರಾಸಾಯನಿಕ ಮಿಶ್ರಣ ಇರುವುದಿಲ್ಲ.

FAQ's
  • ಪಿತೃಪಕ್ಷದ ಆಹಾರ ಕ್ರಮವನ್ನು ಶ್ರದ್ಧಾ ಮಾಡುವವರು ಮಾತ್ರ ಆಚರಿಸಬೇಕೆ?

    ಇಲ್ಲ, ಮನೆಯವರು ಎಲ್ಲರೂ ಆಚರಿಸಬೇಕು ಎಂಬ ಪದ್ಧತಿ ಇದೆ, ಇದನ್ನು ಪಾಲಿಸಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ. 

  • ಪಿತೃಪಕ್ಷದ ಆಹಾರ ಕ್ರಮ ಪಾಲಿಸಲೇಬೇಕೆ?

    ಹಾಗೇನಿಲ್ಲ, ವೈಜ್ಞಾನಿಕವಾಗಿ ಹಾಗೂ ನಂಬಿಕಗೆಳ ಪ್ರಕಾರ ಪಾಲಿಸಿದರೆ ಒಳ್ಳೆಯದು. 

English summary

Pitru Paksha 2021: What To Eat And What To Avoid in kannada

Here we are discussing about Pitru Paksha 2021: What To Eat And What To Avoid in kannada. Read more.
Story first published: Tuesday, September 21, 2021, 17:31 [IST]
X
Desktop Bottom Promotion