For Quick Alerts
ALLOW NOTIFICATIONS  
For Daily Alerts

ಮದುವೆ-ಮಕ್ಕಳು ವಿಳಂಬ, ಆರ್ಥಿಕ ತೊಂದರೆಗೆ ಪಿತೃದೋಷ ಕಾರಣವಾಗಿರಬಹುದೇ? ತಿಳಿಯುವುದು ಹೇಗೆ?

|

ಜ್ಯೋತಿಷ್ಯ ಪ್ರಕಾರ ಪಿತೃದೋಷವಿದ್ದರೆ ಅದು ಬಹುದೊಡ್ಡ ದೋಷವಾಗಿದೆ, ಇದರಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುವುದು. ಆರ್ಥಿಕ, ಆರೋಗ್ಯ, ಮಕ್ಕಳ ಸಮಸ್ಯೆ ಮುಂತಾದ ತೊಂದರೆಗಳು ಉಂಟಾಗುವುದು.

ಪಿತೃದೋಷ ಎಂದರೇನು? ಪಿತೃದೋಷವಿದೆ ಎಂದು ಕಂಡು ಹಿಡಿಯುವುದು ಹೇಗೆ? ಕುಂಡಲಿಯಲ್ಲಿ ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ ಮುಂತಾದ ಅಂಶಗಳನ್ನು ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

ಪಿತೃದೋಷ ಎಂದರೇನು?

ಪಿತೃದೋಷ ಎಂದರೇನು?

ಪೂರ್ವಜರ ಆಸೆಗಳನ್ನುಈಡೇರಿಸಿದಿದ್ದಾಗ, ಅವರಿಗೆ ಮೋಕ್ಷ ಸಿಗದಿದ್ದರೆ ಅಥವಾ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಸರಿಯಿಲ್ಲದಿದ್ದರೆ ಅಥವಾ ಕೆಟ್ಟ ಕರ್ಮದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುವುದು. ಇದಕ್ಕೆ ಪಿತೃದೋಷ ಎಂದು ಕರೆಯಲಾಗುವುದು.

ಪಿತೃದೋಷ ಇದೆ ಎಂದು ತಿಳಿಯುವುದು ಹೇಗೆ?

ಪಿತೃದೋಷ ಇದೆ ಎಂದು ತಿಳಿಯುವುದು ಹೇಗೆ?

ಪಿತೃದೋಷ ಇದೆ ಎಂದು ಈ ಎರಡು ರೀತಿಯಲ್ಲಿ ಕಂಡು ಹಿಡಿಯಲಾಗುವುದು

* ಕುಂಡಲಿನ ನೋಡಿದರೆ ಪಿತೃದೋಷ ಇದೆಯೇ ಎಂದು ತಿಳಿದು ಬರುತ್ತದೆ

* ಮನೆಯಲ್ಲಿ ಅಸ್ವಾಭಾವಿಕ ಸಾವು, ಬ್ರಹ್ಮಚಾರಿಯ ಸಾವು, ಮದುವೆಯಲ್ಲಿ ವಿಳಂಬ, ಸಂತಾನ ಭಾಗ್ಯ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು.

 ಕುಂಡಲಿಯಲ್ಲಿ ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ

ಕುಂಡಲಿಯಲ್ಲಿ ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ

ಕುಂಡಲಿಯಲ್ಲಿ ಸೂರ್ಯ 9ನೇ ಮನೆಯಲ್ಲಿ ಇದ್ದು, 9ನೇ ಮನೆಯನ್ನು ಆಳುತ್ತಿದ್ದರೆ, ಅದೇ ಮನೆಯಲ್ಲಿ ಬೇರೆ ಗ್ರಹ ಕೂಡ ಇದ್ದು ಅದರ ಸ್ಥಾನ ದುರ್ಬಲವಾಗಿದ್ದರೆ ಪಿತೃದೋಷವಿದೆ ಎಂದರ್ಥ.

ಪಿತೃದೋಷಕ್ಕೆ ಸೂಕ್ತ ಪರಿಹಾರವೇನು?

ಪಿತೃದೋಷಕ್ಕೆ ಸೂಕ್ತ ಪರಿಹಾರವೇನು?

ಮದುವೆ ವಿಳಂಬವಾದರೆ, ಮಕ್ಕಳಾಗದಿದ್ದರೆ

ಮದುವೆ ತುಂಬಾ ತಡವಾಗಿದ್ದರೆ, ಮದುವೆಯಾಗಿ ತುಂಬಾ ಸಮಯ ಮಕ್ಕಳಾಗದಿದ್ದರೆ ಬಲಿ ಪೂಜೆ, ತ್ರಿಪಿಂಡಿ ಪೂಜೆ, ತಿಲಾ ಹೋಮಾ ಮಾಡಿಸಿ.

 ಪಿತೃ ದೋಷ ನಿವಾರಣೆಗೆ ಯಾವ ಮಂತ್ರ ಹೇಳಬೇಕು?

ಪಿತೃ ದೋಷ ನಿವಾರಣೆಗೆ ಯಾವ ಮಂತ್ರ ಹೇಳಬೇಕು?

ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್, ಶಾಂತಿಂ ದೇಹಿ ಪಥ್ ಸ್ವಾಹಾ'.

ಪಿತೃ ಪೂಜೆ ಜೊತೆಗೆ ದೇವತಾ ಪೂಜೆಯನ್ನೂ ಮಾಡಬಹುದೇ?

ಪಿತೃ ಪೂಜೆ ಜೊತೆಗೆ ದೇವತಾ ಪೂಜೆಯನ್ನೂ ಮಾಡಬಹುದೇ?

ಪಿತೃ ಪೂಜೆಯನ್ನು ವರ್ಷದಲ್ಲಿ ಒಂದು ದಿನ ಅಷ್ಟೇ ಮಾಡುವುದು. ಕೆಲವೊಂದು ಪುಣ್ಯ ಕ್ಷೇತ್ರಗಳಲ್ಲಿ ಪಿತೃ ಪೂಜೆ ಮಾಡಲಾಗುವುದು. ಅಲ್ಲಿ ಹೋಗಿ ತರ್ಪಣ ಅರ್ಪಿಸಿ.

ಪಿತೃದೋಷಕ್ಕೆ ಕಾರಣವೇನು?

ಪಿತೃದೋಷಕ್ಕೆ ಕಾರಣವೇನು?

* ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಸರಿಯಾಗಿ ಇಲ್ಲದಿದ್ದರೆ

* ಪೂರ್ಜಜರ ಶಾಪ

* ನಿಮ್ಮದೇ ಕರ್ಮಫಲ

ಯಾವಾಗ ಪಿತೃದೋಚ ಪೂಜೆ ಮಾಡಲಾಗುವುದು

ಯಾವಾಗ ಪಿತೃದೋಚ ಪೂಜೆ ಮಾಡಲಾಗುವುದು

ಕೃಷ್ಣ ಪಕ್ಷ ಪಂಚಮಿಯಿಂದ ಅಮವಾಸ್ಯೆಯವರೆಗೆ, ಶುಕ್ಲ ಪಕ್ಷ ಅಷ್ಟಯಿಂದ ಪೂರ್ಣಿಮೆಯವರೆಗೆ ಮಾಡಲಾಗುವುದು.

ಶುಕ್ಲ ಪಕ್ಷದಲ್ಲಿ 15 ದಿನ ಪಿತೃಪಕ್ಷವಿದೆ.

 ಪಿತೃದೋಷದಿಂದ ಮುಕ್ತಿ ಪಡೆಯಬಹುದೇ?

ಪಿತೃದೋಷದಿಂದ ಮುಕ್ತಿ ಪಡೆಯಬಹುದೇ?

ವೈದಿಕ ಶಾಸ್ತ್ರದ ಪ್ರಕಾರ ಸರಿಯಾದ ಪೂಜೆ ಮಾಡಿದರೆ ಪಿತೃದೋಷ ಹೋಗಲಾಡಿಸಬಹುದು. ಹಿರಿಯರನ್ನು ಗೌರವಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಇದರಿಂದಲೂ ಪಿತೃದೋಷದಿಂದ ಮುಕ್ತಿ ಪಡೆಯಬಹುದು.

ಅನ್ನ ದಾನ, ಧನ ದಾನ ಇವುಗಳನ್ನು ಮಾಡಿ. ಪಿತೃ ದೋಷ ನಿವಾರಣೆಗೆ ಮಂತ್ರವನ್ನು ಪಠಿಸಿ.

ಪಿತೃದೋಷ ನಿವಾರಣೆಗೆ ಸರಿಯಾದ ಜಾಗ ಯಾವುದು?

ಕರ್ನಾಟಕದಲ್ಲಿ ಗೋಕರ್ಣ, ಕಾವೇರಿಯಲ್ಲಿ ಮಾಡಲಾಗುವುದು.

English summary

Pitru Dosha Remedies To Solve Marriage, Pregnancy and Family Problem in Kannada

Pitru Dosha: How Can identify Pitru Dosha, what are remedies for that read on:
X
Desktop Bottom Promotion