For Quick Alerts
ALLOW NOTIFICATIONS  
For Daily Alerts

ಇಂದು ಪಿತೋರಿ ಅಮವಾಸ್ಯೆ: ಮುಸ್ಸಂಜೆ ಈ ಸಮಯದಲ್ಲಿ ವಿಶೇಷ ಪೂಜೆ ಮಾಡಿ

|

ಇಂದು ಪಿತೋರಿ ಅಮವಾಸ್ಯೆ. ಭಾದ್ರಪದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಪಿತೋರಿ ಅಮವಾಸ್ಯೆ ಅಥವಾ ಕುಶಗ್ರಹಣಿ ಅಮವಾಸ್ಯೆಯಂದು ಕರೆಯಲಾಗುವುದು. ಪೂರ್ವಜರ ಆತ್ಮಕ್ಕೆ ಮೋಕ್ಷ ಸಿಗಲೆಂದು ಈ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗೃಹಿಣಿಯರು ಪೂಜೆ ಮಾಡುವುದರಿಂದ ಪತಿ ಹಾಗೂ ಮಕ್ಕಳಿಗೆ ಶ್ರೇಯಸ್ಸು ಉಂಟಾಗುವುದು.

Pithori Amavasya

ದಕ್ಷಿಣ ಭಾರತದಲ್ಲಿ ಈ ಅಮವಾಸ್ಯೆಯನ್ನು ಪೋಲಾಲಾ ಅಮಾವಾಸ್ಯೆಯೆಂದೂ ಕರೆಯಲಾಗುವುದು. ತರ್ಪಣ ನೀಡುವುದು, ದಾನ ಮಾಡುವುದು ಈ ದಿನ ತುಂಬಾ ಮಹತ್ವದ್ದಾಗಿದೆ.

ಪಿತೋರಿ ಅಮವಾಸ್ಯೆಯ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬೆಲ್ಲಾ ಮಾಹಿತಿ ಇಲ್ಲಿವೆ ನೋಡಿ:

ಪಿತೋರಿ ಅಮವಾಸ್ಯೆಯ ಮಹತ್ವ

ಪಿತೋರಿ ಅಮವಾಸ್ಯೆಯ ಮಹತ್ವ

ಪ್ರಾಚೀನ ಗ್ರಂಥಗಳಲ್ಲಿ ಈ ಅಮಾವಾಸ್ಯೆಯನ್ನು ಕುಶೋತ್ಪತಿನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ದಿನ ಸಂಗ್ರಹಿಸಿದ ದರ್ಬೆಯನ್ನು ಒಂದು ವರ್ಷಗಳವರೆಗೆ ಧಾರ್ಮಿಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಹೇಳಲಾಗುವುದು. ಉತ್ತರ ದಿಕ್ಕಿನಲ್ಲಿರುವ ದರ್ಬೆಯನ್ನು ಮುಂಜಾನೆ ಕೀಳಬೇಕು. ಕೀಳುವಾಗ ಕೈಯಿಂದ ಕೀಳಬೇಕು. ಕತ್ತರಿ, ಕತ್ತಿ ಬಳಸಬಾರದು.

ದಾನದ ಮಹತ್ವ

ದಾನದ ಮಹತ್ವ

ಈ ದಿನ ಬ್ರಾಹ್ಮಣರಿಗೆ ನಿಮ್ಮ ಕೈಯಲ್ಲಾದ ದಾನ ಮಾಡಿ. ಅಲ್ಲದೆ ಅಗ್ಯತವಿರುವವರಿಗೆ ದಾನ ಮಾಡಿ. ಹೀಗೆ ದಾನ ಮಾಡುವುದರಿಂದ ಅದರ ಪುಣ್ಯದ ಫಲದಿಂದ ಮನೋಕಾಮನೆಗಳು ಈಡೇರುವುದು.

ಮುಸ್ಸಂಜೆ ಹೀಗೆ ಮಾಡಿ

ಮುಸ್ಸಂಜೆ ಹೀಗೆ ಮಾಡಿ

ಮುಸ್ಸಂಜೆ ಹೊತ್ತಿಗೆ ಅರಳಿ ಮರದ ಕೆಳಗೆ ಪೂರ್ವಜರನ್ನು ನೆನಪಿಸಿಕೊಂಡು ಸಾಸಿವೆ ಎಣ್ಣೆಯ ದೀಪ ಹಚ್ಚಿ, 7 ಬಾರಿ ಪ್ರದಕ್ಷಿಣೆ ಬನ್ನಿ.

ಪೂರ್ವಜರ ಹೆಸರಿನಲ್ಲಿ ಈ ದಿನ ಹಸುಗಳಿಗೆ ಮೇವು ದಾನ ಮಾಡುವುದರಿಂದ ಕೂಡ ಶುಭ ಉಂಟಾಗುವುದು. ಪೂರ್ವಜರಿಗೆ ಈ ದಿನ ತರ್ಪಣ ನೀಡಿದರೆ ಜಾತಕದಲ್ಲಿರುವ ಶನಿ, ರಾಹು ದೋಷ ದೂರವಾಗುವುದು. ಕುಂಡಲಿಯಲ್ಲಿ ಸರ್ಪ ದೋಷ ಇರುವವರು ಈ ದಿನ ವಿಶೇಷ ಪೂಜೆ ಮಾಡಿಸಿದರೆ ಅದು ನೀಗುವುದು ಎಂದು ಹೇಳಲಾಗುವುದು.

ತಿಥಿ ಸಮಯ ಹಾಗೂ ಪ್ರದೋಷ ಮುಹೂರ್ತ

ತಿಥಿ ಸಮಯ ಹಾಗೂ ಪ್ರದೋಷ ಮುಹೂರ್ತ

ಪಿತೋರಿ ಅಮವಾಸ್ಯೆ ತಿಥಿ ಸಮಯ ಪ್ರಾರಂಭ: ಸೆ. 6 ಬೆಳಗ್ಗೆ 7:38ಕ್ಕೆ

ಪಿತೋರಿ ಅಮವಾಸ್ಯೆ ತಿಥಿ ಸಮಯ ಮುಕ್ತಾಯ: ಸೆ. 7 ಬೆಳಗ್ಗೆ 06:21ಕ್ಕೆ

ಪಿತೋರಿ ವ್ರತ ಪ್ರದೋಷ ಮುಹೂರ್ತ

ಪ್ರದೋಷ ಮುಹೂರ್ತ ಸೆ. 6 ಸಂಜೆ 06:37ರಿಂದ 8:54

ಈ ಸಮಯಲ್ಲಿ ವಿಶೇಷ ಪೂಜೆ ಮಾಡಿಸಿ.

English summary

Pithori Amavasya 2021: Date, Shubh Muhurat, Ritauls, Puja Vidhi, Importance and Significance of New Moon Day in Kannada

Pithori Amavasya 2021: Date, Shubh Muhurat, Ritauls, Puja Vidhi, Importance and Significance of New Moon Day in Kannada
X
Desktop Bottom Promotion