For Quick Alerts
ALLOW NOTIFICATIONS  
For Daily Alerts

Numerology 2022: ಸಂಖ್ಯಾಶಾಸ್ತ್ರ ಭವಿಷ್ಯ 2022: ನಿಮ್ಮ ಜನ್ಮದಿನ ಆಧರಿಸಿ ವರ್ಷ ಭವಿಷ್ಯ

|

ಹೊಸ ವರ್ಷದ ಆಗಮನಕ್ಕೆ ನಾವೆಲ್ಲಾರೂ ಸಿದ್ಧರಿದ್ದೇವೆ. ಹಾಗೆಯೇ ಹೊಸ ಹೊಸ ನಿರೀಕ್ಷೆಗಳು ಸಾಕಷ್ಟಿದೆ. ಎಲ್ಲಾ ಕಷ್ಟಗಳು ಕಳೆದು ಸುಖದ ಜೀವನ ಬರಲಿ, ನೆಮ್ಮದಿಯು ನಮ್ಮ ಪಾಲಾಗಲಿ ಎಂದು ಆಶಿಸುತ್ತೇವೆ. ಹೊಸ ವರ್ಷವು ಎಲ್ಲರಿಗೂ ಹೊಸ ಭರವಸೆ, ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯವನ್ನು ಎಲ್ಲರಿಗೂ ನೀಡಲಿ ಎಂಬುದಷ್ಟೇ ನಮ್ಮೆಲ್ಲರ ಹಾರೈಕೆಯಾಗಿದೆ.

2022ರ ನೂತನ ವರ್ಷ ನಮ್ಮ ಬದುಕನ್ನು ಹೇಗೆ ಹಸನು ಮಾಡಲಿದೆ?, ಹೇಗೆ ಅದೃಷ್ಟ ತರಲಿದೆ? ಇದರ ಬಗ್ಗೆ ಸಂಖ್ಯಾಶಾಸ್ತ್ರಜ್ಞರು ಏನು ಹೇಳುತ್ತಾರೆ. ನಮ್ಮ ಜನ್ಮ ದಿನಾಂಕವನ್ನು ಆಧರಿಸಿ 2022ರಲ್ಲಿ ನಮ್ಮೆಲ್ಲರ ಬದುಕು ಹೇಗಿರಲಿದೆ?, ಅದೃಷ್ಟ ಯಾರ ಪಾಲಿಗಿದೆ?, ನಾವು ಯಾವೆಲ್ಲಾ ವಿಚಾರದಲ್ಲಿ ಎಚ್ಚರವಹಿಸಬೇಕು,? ಎಂಬುದರ ಸವಿವರ ಮಾಹಿತಿ ನೀಡಿಲಿದ್ದೇವೆ:

1, 10, 19, 28ನೇ ದಿನಗಳು

1, 10, 19, 28ನೇ ದಿನಗಳು

ಇತರರಿಂದ ಸಹಾಯ ಪಡೆಯಲು ಹಿಂಜರಿಯಬೇಡಿ. ಅಹಂಕಾರ ಮತ್ತು ನಿಮ್ಮ ವರ್ತನೆಯು ನಿಮ್ಮ ಉತ್ತಮವಾಗಲು ಬಿಡಬೇಡಿ. ಈ ವರ್ಷ ಜವಳಿ ಮತ್ತು ಫ್ಯಾಷನ್ ಸಂಬಂಧಿತ ವ್ಯಾಪಾರಕ್ಕೆ ಉತ್ತಮ ಸಮಯವಾಗಿದೆ. ಹೂಡಿಕೆಯ ಬಗ್ಗೆ ಗಮನವಿರಲಿ. ನೀವು ಅಧಿಕ ರಕ್ತದೊತ್ತಡ ಮತ್ತು ಕಣ್ಣಿನ ಸಮಸ್ಯೆಗಳನ್ನು ಎದುರಿಸಬಹುದು.

2ನೇ, 11ನೇ, 20ನೇ, 29ನೇ ದಿನಗಳು

2ನೇ, 11ನೇ, 20ನೇ, 29ನೇ ದಿನಗಳು

ಇತರರ ಮಾತುಗಳನ್ನು ಕೇಳುವುದರಿಂದ ನಿಮಗೆ ಪ್ರಯೋಜನವಾಗಬಹುದು. ನಿಮ್ಮ ಮೇಲೆ ಹೆಚ್ಚು ನಂಬಿಕೆ ಇರಲಿ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ನಿಮ್ಮನ್ನು ಸೇರಿದಂತೆ ಇತರರನ್ನು ಅನುಮಾನಿಸಬೇಡಿ. ಸರಿಯಾಗಿ ನಿದ್ದೆ ಮಾಡಿ ಮತ್ತು ಆರೋಗ್ಯಕರ ಆಹಾರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಪ್ರಾಣಾಯಾಮ ಮಾಡುವುದು ದಿರ್ಘಕಾಲೀನ ಆರೋಗ್ಯಕ್ಕೆ ಉತ್ತಮ.

3ನೇ, 12ನೇ, 21ನೇ, 30ನೇ ದಿನಗಳು

3ನೇ, 12ನೇ, 21ನೇ, 30ನೇ ದಿನಗಳು

ನಿಮ್ಮ ಎಲ್ಲಾ ಗಮನವನ್ನು ಕೆಲಸದಲ್ಲಿ ಇರಿಸಿ. ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರನ್ನು ನೀವು ಸ್ವಾಗತಿಸಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಹಂಕಾರಕ್ಕೆ ಅವಕಾಶ ನೀಡುವುದನ್ನು ತಪ್ಪಿಸಿ. ನಿಮ್ಮ ಪ್ರಯತ್ನಗಳು ಶೈಕ್ಷಣಿಕ ಮತ್ತು ಸಲಹಾ ವಿಷಯದಲ್ಲಿ ನಿಮಗೆ ಫಲಪ್ರದ ಫಲಿತಾಂಶಗಳನ್ನು ನೀಡುತ್ತವೆ. ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮ ಗಂಟಲಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.

4, 13, 22, 31ನೇ ದಿನಗಳು

4, 13, 22, 31ನೇ ದಿನಗಳು

ಮದ್ಯಪಾನ ಮತ್ತು ಮಾಂಸಾಹಾರ ಸೇವಿಸುವುದನ್ನು ತಪ್ಪಿಸಿ. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ಈ ವರ್ಷ ಆರ್ಥಿಕವಾಗಿ ಉತ್ತಮವಾಗಿದೆ. ನಿಮ್ಮ ಆರೋಗ್ಯ ಮತ್ತು ಆಹಾರವನ್ನು ಸಮತೋಲನಗೊಳಿಸಲು ಹೆಚ್ಚು ಹಸಿರು ತರಕಾರಿ ಸೇವಿಸಿ. ನಿಮ್ಮ ಕಿರಿಯರನ್ನು ಮತ್ತು ನಿಮಗಿಂತ ಕಡಿಮೆ ಅನುಭವ ಹೊಂದಿರುವವರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ. ಬುಧವಾರ ಮತ್ತು ಶುಕ್ರವಾರಗಳು ಒಪ್ಪಂದಗಳಿಗೆ ಬರಲು ಸೂಕ್ತವಾಗಿರುತ್ತದೆ.

5, 14, 23ನೇ ದಿನಗಳು

5, 14, 23ನೇ ದಿನಗಳು

ಹೊಸ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡುವುದಿಲ್ಲ. 2022 ನಿಮ್ಮ ಸಂಬಂಧಗಳಿಗೆ ಉತ್ತಮ ವರ್ಷವಾಗಿದೆ. ಬುಧವಾರದಂದು ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಿ. ಬಡವರಿಗೆ, ಹಸಿದವರಿಗೆ ಆಹಾರವನ್ನು ದಾನ ಮಾಡಿ.

6, 15, 24ನೇ ದಿನಗಳು

6, 15, 24ನೇ ದಿನಗಳು

ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಅದೃಷ್ಟ ನೀಡುತ್ತದೆ. ನಿಮ್ಮ ಗಳಿಕೆಯನ್ನು ನೀವು ಹೇಗೆ ಖರ್ಚು ಮಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಪ್ರಣಯ ಜೀವನವು ನಿಮಗೆ ಆಳವಾದ ಸಂತೋಷ ತರಬಹುದು ಮತ್ತು ಚೆನ್ನಾಗಿ ನಡೆಯಬಹುದು. ನಿಮ್ಮ ಸಂಗಾತಿಗೆ ನಿಷ್ಠರಾಗಿರಿ. ಹೆಚ್ಚುವರಿ ಸಕ್ಕರೆ ಮತ್ತು ಜಂಕ್ ಆಹಾರಗಳನ್ನು ತಪ್ಪಿಸಿ.

7, 16, 25ನೇ ದಿನಗಳು

7, 16, 25ನೇ ದಿನಗಳು

ಜನರೊಂದಿಗೆ ಸಂಪರ್ಕ ಸಾಧಿಸಲು ನೀವು ಹೊಸ ಅವಕಾಶಗಳನ್ನು ಪಡೆಯಬಹುದು. ಸಂಶೋಧನೆ ಆಧಾರಿತ ವೃತ್ತಿಯನ್ನು ಹೊಂದಿರುವವರಿಗೆ, ಪ್ರಗತಿಯು ನಿಮ್ಮ ಹಾದಿಯಲ್ಲಿದೆ. ಮೇ ತಿಂಗಳ ನಂತರ ನೀವು ಗಮನಾರ್ಹವಾದ ಬೆಳವಣಿಗೆಯನ್ನು ಗಮನಿಸಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ. ತಾಜಾ ಹಣ್ಣು ಮತ್ತು ರಸವನ್ನು ಸೇವಿಸುವುದು ನಿಮಗೆ ನಿಜವಾಗಿಯೂ ಸಹಾಯಕವಾಗಬಹುದು.

8, 17, 26ನೇ ದಿನಗಳು

8, 17, 26ನೇ ದಿನಗಳು

ವಿಷಯಗಳು ನೀವು ಅಂದುಕೊಂಡಂತೆ ಆಗದಿರಬಹುದು ಆದರೆ ತಾಳ್ಮೆಯಿಂದಿರಿ. ಇತರರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ನಿಮ್ಮ ಹೊಟ್ಟೆ ಮತ್ತು ಹಲ್ಲುಗಳ ಅಗತ್ಯ ಕಾಳಜಿಯನ್ನು ತೆಗೆದುಕೊಳ್ಳಿ. ಮದುವೆ ಮತ್ತು ನಿಮ್ಮ ಕುಟುಂಬವನ್ನು ವಿಸ್ತರಿಸಲು ಇದು ಉತ್ತಮ ಸಮಯ. ನಿಮ್ಮ ಉಳಿತಾಯವನ್ನು ನೀವು ಚೆನ್ನಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ನಿರ್ಮಾಣ ಮತ್ತು ವಾಸ್ತುಶಿಲ್ಪದ ಕೆಲಸಗಳಿಗೆ ಇದು ಲಾಭದಾಯಕ ವರ್ಷವಾಗಿರುತ್ತದೆ.

9, 18 ಮತ್ತು 27ನೇ ದಿನಗಳು

9, 18 ಮತ್ತು 27ನೇ ದಿನಗಳು

ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಲು ನೀವು ಪ್ರಯತ್ನಿಸಬೇಕು. ವಿದೇಶಿ ವ್ಯಾಪಾರದಲ್ಲಿ ಅದೃಷ್ಟದ ಹೊಸ ಉಲ್ಬಣವನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಉತ್ತಮ ವರ್ಷ. ಕೋಪ ತಪ್ಪಿಸಿ ಮತ್ತು ಹೆಚ್ಚು ತಾಳ್ಮೆಯಿಂದಿರಲು ಪ್ರಯತ್ನಿಸಿ. ಹೂಡಿಕೆಗೆ ಇದು ಉತ್ತಮ ಸಮಯ ಮತ್ತು ನೀವು ಅವುಗಳಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

English summary

Numerology Predictions 2022 in Kannada: Numerology Predictions for the New Year 2022

Here we are discussing about Numerology 2022 Horoscope in Kannada: Read the numerology horoscope 2022 according to the date of birth and know what kind of auspicious results you will get in the year 2022 in Kannada. Read on.
X
Desktop Bottom Promotion