For Quick Alerts
ALLOW NOTIFICATIONS  
For Daily Alerts

ಸಂಖ್ಯಾಶಾಸ್ತ್ರ: ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ

|

ಸಂಖ್ಯಾಶಾಸ್ತ್ರದ ಪ್ರಕಾರ ತಿಂಗಳ ಭವಿಷ್ಯ ಅರ್ಥಮಾಡಿಕೊಳ್ಳಲು, ಮೊದಲು, ನಮ್ಮ ಜನ್ಮದಿನಾಂಕಗಳಿಂದ ಜೀವನ ಪಥ ಸಂಖ್ಯೆಯನ್ನು ಲೆಕ್ಕ ಹಾಕಬೇಕು. ಹೇಗೆ ಅಂದು ನೋಡುವುದಾದರೆ ನಿಮ್ಮ ಸಂಪೂರ್ಣ ಜನ್ಮದಿನಾಂಕವನ್ನು ಒಂದಂಕಿಗೆ ಇಳಿಸಬೇಕು.

Numerology February 2022 Predictions

ಉದಾಹರಣೆಗೆ, ಹುಟ್ಟಿದ ದಿನಾಂಕ 26/12/1990 = 2+6+1+2+1+9+9+0 = 30 = 3+0 = 3 ಹೀಗಾಗಿ, ಜೀವನ ಪಥ ಸಂಖ್ಯೆ 3 ಆಗಿದೆ.

1

1

ಹಣಕಾಸಿನ ಲಾಭಕ್ಕಾಗಿ ಉತ್ತಮ ಪರಿಸ್ಥಿತಿಗಳು ಇರುತ್ತವೆ ಮತ್ತು ಹೂಡಿಕೆಗಳ ಮೂಲಕ ಲಾಭವನ್ನು ಸಹ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಯಾವುದೋ ಒಂದು ಸುದ್ದಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವುದು. ಪ್ರೇಮ ಸಂಬಂಧದಲ್ಲಿ ಪರಸ್ಪರ ಪ್ರೀತಿ ಬಲಗೊಳ್ಳುತ್ತದೆ. ಫೆಬ್ರವರಿ ಅಂತ್ಯದಲ್ಲಿ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದರೆ ಉತ್ತಮ.

2.

2.

ಈ ತಿಂಗಳು ನೀವು ತಾಳ್ಮೆಯಿಂದ ಮುನ್ನೆಡೆಯಬೇಕು. ಆಗ ಮಾತ್ರ ಪ್ರಗತಿಯ ಹಾದಿ ಸುಗಮವಾಗುತ್ತದೆ. ಕೆಲಸದ ಸ್ಥಳದಲ್ಲಿ ಪರಸ್ಪರ ಸಂಭಾಷಣೆಯ ಮೂಲಕ ಸಂದರ್ಭಕ್ಕೆ ಹೊಂದಿಕೊಳ್ಳುವ ಕಲೆಯನ್ನು ನೀವು ಕಲಿತರೆ ಅದು ಉತ್ತಮವಾಗಿರುತ್ತದೆ. ಈ ತಿಂಗಳು ಹಣಕಾಸಿನ ವೆಚ್ಚಗಳು ಹೆಚ್ಚಾಗಬಹುದು ಹಾಗೂ ನಿಮ್ಮ ಹೂಡಿಕೆಗಳ ಬಗ್ಗೆ ನೀವು ಗಮನ ಹರಿಸಬೇಕು. ಪ್ರೇಮ ಸಂಬಂಧದಲ್ಲಿ ಪರಸ್ಪರ ಪ್ರೀತಿ ಬಲವಾಗಿರುತ್ತದೆ. ಫೆಬ್ರವರಿ ಕೊನೆಯಲ್ಲಿ, ಸಂತೋಷ ಮತ್ತು ಸಮೃದ್ಧಿ ನಿಮಗೆ ದೊರೆಯುವುದು.

3.

3.

ಹಣಕಾಸಿನ ಲಾಭಕ್ಕಾಗಿ ಈ ತಿಂಗಳು ಬಲವಾದ ಪರಿಸ್ಥಿತಿಗಳನ್ನು ಮಾಡಲಾಗುವುದು ಮತ್ತು ಹೂಡಿಕೆಗಳ ಮೂಲಕವೂ ಪ್ರಯೋಜನಗಳಿವೆ. ಕಾರ್ಯ ಕ್ಷೇತ್ರದಲ್ಲಿ ಸರಳ ಯಶಸ್ಸು ಇರುತ್ತದೆ. ಪ್ರೇಮ ಸಂಬಂಧದಲ್ಲಿ ಯಾವುದೇ ಸುದ್ದಿ ಬಂದ ನಂತರ ಮನಸ್ಸು ನಿರಾಶೆಗೊಳ್ಳಬಹುದು. ವಾರದ ಕೊನೆಯಲ್ಲಿ ನೀವು ಖುಷಿ ಪಡುವ ಸುದ್ದಿ ಸಿಗುವುದು.

4.

4.

ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹಿರಿಯರ ಆಶೀರ್ವಾದದಿಂದ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಂಡು ಮುಂದೆ ಸಾಗಿದರೆ ಉತ್ತಮ ಫಲಿತಾಂಶ ಬರುತ್ತದೆ. ಹಣಕಾಸಿನ ಲಾಭವು ನಿಮ್ಮ ಪ್ರಯತ್ನಗಳ ಫಲಿತಾಂಶವಾಗಿದೆ. ಈ ತಿಂಗಳ ಕೊನೆಯಲ್ಲಿ ನೀವು ಅನಗತ್ಯ ಪ್ರವಾಸಗಳನ್ನು ತಪ್ಪಿಸಿದರೆ ಉತ್ತಮ.

5.

5.

ಪ್ರೇಮ ಸಂಬಂಧಗಳು ರೊಮ್ಯಾಂಟಿಕ್ ಆಗಿ ಉಳಿಯುತ್ತವೆ ಮತ್ತು ಪರಸ್ಪರ ಪ್ರೀತಿಯು ಬಲಗೊಳ್ಳುತ್ತದೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು ಮತ್ತು ಸೃಜನಾತ್ಮಕ ಕೆಲಸಗಳಿಂದ ಶುಭ ಫಲಗಳು ದೊರೆಯುವುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಫೆಬ್ರವರಿ ಅಂತ್ಯದಲ್ಲಿ, ಮನಸ್ಸು ಯಾವುದೋ ವಿಷಯದ ಬಗ್ಗೆ ಗೊಂದಲಕ್ಕೊಳಗಾಗಬಹುದು.

6.

6.

ಪ್ರೇಮ ಸಂಬಂಧದಲ್ಲಿ ಸಮಯವು ಆಹ್ಲಾದಕರವಾಗಿರುತ್ತದೆ ಮತ್ತು ಮನಸ್ಸು ಸಂತೋಷವಾಗಿರುತ್ತದೆ. ಹಿರಿಯರ ಆಶೀರ್ವಾದವು ಜೀವನದಲ್ಲಿ ಪ್ರೀತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ ಮತ್ತು ಕ್ರಮೇಣ ನಿಮ್ಮ ಯೋಜನೆಗಳು ಟ್ರ್ಯಾಕ್‌ಗೆ ಬರಲಾರಂಭಿಸುತ್ತದೆ. ಫೆಬ್ರವರಿ ಮಧ್ಯದಲ್ಲಿ, ಆರ್ಥಿಕ ಪರಿಸ್ಥಿತಿಯು ತಕ್ಷಣವೇ ಸುಧಾರಿಸಲು ಪ್ರಾರಂಭಿಸಬಹುದು. ಫೆಬ್ರವರಿ ಅಂತ್ಯದಲ್ಲಿ, ನಿಮ್ಮ ಪ್ರೀತಿಪಾತ್ರರ ಜೊತೆ ಖುಷಿಯ ಸಮಯವನ್ನು ಕಳೆಯುವಿರಿ.

7.

7.

ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದ್ದು, ಗೌರವ ಹೆಚ್ಚಲಿದೆ. ಈ ತಿಂಗಳು ಪಾಲುದಾರಿಕೆಯಲ್ಲಿ ಮಾಡಿದ ಯೋಜನೆಯಿಂದ ಪ್ರಯೋಜನಗಳು ಸಹ ಬರುತ್ತವೆ. ಪ್ರೇಮ ಸಂಬಂಧಗಳು ಮಧುರವಾಗಿರುತ್ತವೆ. ಆದರೆ ಆರ್ಥಿಕ ವೆಚ್ಚಗಳು ಹೆಚ್ಚಾಗಬಹುದು ಹಾಗಾಗಿ ಹಣವನ್ನು ನೋಡಿಕೊಮಡು ಖರ್ಚು ಮಾಡಿ. ಫೆಬ್ರವರಿ ಅಂತ್ಯದಲ್ಲಿ, ಮನಸ್ಸು ಸ್ವಲ್ಪ ಭಾವನಾತ್ಮಕವಾಗಿ ಉಳಿಯುತ್ತದೆ ಮತ್ತು ಸಣ್ಣ ವಿಷಯಗಳ ಬಗ್ಗೆ ಅನುಮಾನಗಳು ಮನಸ್ಸನ್ನು ಆವರಿಸುತ್ತದೆ.

8.

8.

ಈ ತಿಂಗಳು ಆರ್ಥಿಕ ಸಂಪತ್ತಿನ ಬೆಳವಣಿಗೆಯನ್ನು ಕಾಣುವಿರಿ, ಆದಾಯವು ಹೆಚ್ಚಾಗುತ್ತದೆ. ಪ್ರೇಮ ಸಂಬಂಧದಲ್ಲಿ ಶಾಂತಿ ನೆಲೆಸುವುದು ಮತ್ತು ಮನಸ್ಸು ಸಂತೋಷವಾಗಿರುವುದು. ನೀವು ಕೆಲಸದ ಸ್ಥಳದಲ್ಲಿ ಪ್ರಕ್ಷುಬ್ಧತೆಯನ್ನು ಅನುಭವಿಸಬಹುದು ಮತ್ತು ನಿಮ್ಮ ಯೋಜನೆಗೆ ಸಂಬಂಧಿಸಿದಂತೆ ನೀವು ಅಹಂಕಾರದ ಸಂಘರ್ಷವನ್ನು ತಪ್ಪಿಸಬೇಕು. ಫೆಬ್ರವರಿ ಅಂತ್ಯವು ನಿಮಗೆ ಉತ್ತಮ ಫಲಿತಾಂಶಗಳನ್ನು ತರಬಹುದು ಮತ್ತು ಗೌರವವು ಹೆಚ್ಚಾಗುತ್ತದೆ.

9.

9.

ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ ಮತ್ತು ಈ ತಿಂಗಳು ನಿಮ್ಮ ಚಾತುರ್ಯದ ಬಲದಿಂದ ವಿಶೇಷ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಪ್ರತಿಕೂಲವಾದ ಸಮಯವಿರುತ್ತದೆ, ವಂಚನೆ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಸುಂದರವಾದ ಬದಲಾವಣೆ ಉಂಟಾಗುತ್ತದೆ, ಮನಸ್ಸು ಸಂತೋಷವಾಗಿರುತ್ತದೆ. ತಿಂಗಳ ಕೊನೆಯಲ್ಲಿ ನೀವು ಅನಗತ್ಯ ಒತ್ತಡವನ್ನು ಅನುಭವಿಸುವಿರಿ.

English summary

Numerology Monthly Predictions for February 2022

Numerology Monthly Predictions for February 2022, Read on....
X
Desktop Bottom Promotion