For Quick Alerts
ALLOW NOTIFICATIONS  
For Daily Alerts

ಶನಿವಾರ: ಏನು ಮಾಡಬಾರದು ಹಾಗೂ ಯಾವ ವಸ್ತುಗಳನ್ನು ಮನೆಗೆ ತರಬಾರದು?

|

ಹಿಂದೂ ಧರ್ಮದ ಪ್ರಕಾರ ಶನಿವಾರ ಎಂಬುವುದು ಶನಿ ದೇವನಿಗೆ ಮೀಸಲಾದ ದಿನವಾಗಿದೆ. ಶನಿ ದೇವನನ್ನು ನ್ಯಾಯದ ದೇವರೇ ಎಂದು ಕರೆಯಲಾಗುವುದು. ಶನಿಯ ಕೋಪಕ್ಕೆ ಕಾರಣವಾದರೆ ಅವನಿಗೆ ಉಳಿಗಾಲವಿಲ್ಲ, ಅದೇ ಶನಿಯ ಕೃಪೆಗೆ ಪಾತ್ರರಾದರೆ ಜೀವನದಲ್ಲಿರುವ ಕಷ್ಟಗಳು ದೂರವಾಗುವುದು, ಸಾಡೇಸಾತಿ, ಶನಿ ದೋಷ ಇವೆಲ್ಲಾ ದೂರವಾಗುವುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಆದ್ದರಿಂದಲೇ ಶನಿವಾರದಂದು ಶನಿ ದೇವನಿಗೆ ಕೋಪ ತರಿಸುವ ಅಥವಾ ಶನಿಗೆ ಇಷ್ಟವಾಗದ ಯಾವುದೇ ಕಾರ್ಯ ಮಾಡಬಾರದು ಎಂದು ಹೇಳಲಾಗುವುದು. ಒಂದು ವೇಳೆ ಹಾಗೇ ಮಾಡಿದರೆ ಅನಿಷ್ಟ ಉಂಟಾಗುವುದು ಎಂದು ಹೇಳಲಾಗುವುದು. ಎಲ್ಲವೂ ಒಂದು ನಂಬಿಕೆಯಾಗಿದೆ. ಅಭಿಪ್ರಾಯಗಳು ಅವರವರ ನಂಬಿಕೆಗೆ ಬಿಟ್ಟದ್ದು, ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯುಳ್ಳವರಾದರೆ ಶನಿವಾರದೆಂದು ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶನಿವಾರ ಏನು ಮಾಡಬಾರದು?

ಶನಿವಾರ ಏನು ಮಾಡಬಾರದು?

* ಈ ದಿನ ಬಡವರಿಗೆ ನೋವುಂಟು ಮಾಡಿದರೆ ಶನಿ ದೇವ ಕ್ಷಮಿಸಲ್ಲ. ಆದ್ದರಿಂದ ಅವರಿಗೆ ನೋವುಂಟು ಮಾಡುವುದು, ಹೀಯಾಳಿಸುವುದು ಮಾಡಬಾರದು.

* ಇನ್ನು ಶನಿವಾರ ಯಾರಿಗೂ ಎಣ್ಣೆ ದಾನ ಮಾಡಬೇಡಿ ಹಾಗೂ ಎಣ್ಣೆಯನ್ನು ಖದೀದಿ ಮಾಡಬೇಡಿ.

* ಶನಿವಾರದಂದು ಯಾರಿಂದಲೂ ಚಪ್ಪಲಿ ಅಥವಾ ಶೂ ಗಿಫ್ಟ್‌ ಆಗಿ ಪಡೆಯಬೇಡಿ, ನೀವು ಕೊಡಲೂ ಬೇಡಿ.

ಯಾವ ವಸ್ತುಗಳನ್ನು ಖರೀದಿಸಬಾರದು

ಯಾವ ವಸ್ತುಗಳನ್ನು ಖರೀದಿಸಬಾರದು

* ಶನಿವಾರ ಕಬ್ಬಿಣವನ್ನು ಖರೀದಿ ಮಾಡಬಾರದು ಇಲ್ಲದಿದ್ದರೆ ಕಬ್ಬಣದಿಂದ ಮಾಡಿದಂಥ ವಸ್ತುಗಳನ್ನು ಮನೆಗೆ ತರಬಾರದು, ಅದು ಅದೃಷ್ಟವಲ್ಲ ಎಂದು ಹೇಳಲಾಗುವುದು.

* ಶನಿವಾರ ಎಣ್ಣೆಯನ್ನು ಖರೀದಿ ಮಾಡಬಾರದು, ಖರೀದಿಸಿದರೆ ಆರೋಗ್ಯ ಸಮಸ್ಯೆ, ಬದುಕಿನಲ್ಲಿ ಸಮಸ್ಯೆಗಳು ಎದುರಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

* ಉಪ್ಪು ತಂದ್ರೆ ಸಾಲ ಹೆಚ್ಚುವುದು ಎಂದು ಹೇಳಲಾಗುವುದು.

* ಕತ್ತರಿ ಕೊಂಡು ತಂದರೆ ಜಗಳವಾಗುವುದು

* ಪೊರಕೆ ತಂದರೆ ಸಾಲ ಹೆಚ್ಚುವುದು

* ಇಂಕ್ ತರುವುದರಿಂದ ಬದುಕಿನಲ್ಲಿ ಸೋಲಾಗುವುದು, ಆದ್ದರಿಂದ ಇವುಗಳೆನ್ನೆಲ್ಲಾ ತರಬಾರದು ಎಂದು ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಬಲವಾಗಿ ನಂಬುತ್ತಾರೆ.

ಶನಿವಾರ ಏನು ಮಾಡಬೇಕು?

ಶನಿವಾರ ಏನು ಮಾಡಬೇಕು?

* ಸಮೀಪದ ಹನುಮಂತನ ಗುಡಿಗೆ ಹೋಗಿ ದೀಪ ಹಚ್ಚಿ.

* ಶನಿವಾರದಂದು ಅರಳಿ ಮರಕ್ಕೆ ನೀರು ಹಾಕಿ ಪೂಜಿಸಿ

* ಶನಿವಾರ ಕಪ್ಪು ವಸ್ತ್ರ, ನೀಲಿ ವಸ್ತ್ರ ಅಥವಾ ಕಪ್ಪು ಎಳ್ಳು ದಾನ ಮಾಡಿ.

ಶನಿಯನ್ನು ಒಲಿಸಿಕೊಳ್ಳುವುದು ಹೇಗೆ?

ಶನಿಯನ್ನು ಒಲಿಸಿಕೊಳ್ಳುವುದು ಹೇಗೆ?

ಶನಿವಾರ ಉಪವಾಸವಿದ್ದು ಶನಿ ದೇವಾಲಯಕ್ಕೆ ಹೋಗಿ ಎಣ್ಣೆ ಅರ್ಪಿಸಿ, ಪ್ರಾರ್ಥಿಸಿ. ಪ್ರಾರ್ಥಿಸುವಾಗ ಅಥವಾ ಪೂಜಿಸುವಾಗ ಮೂರ್ತಿಯ ಎದುರಿಗೆ ಶನಿಯ ದೃಷ್ಟಿ ನೇರವಾಗಿ ಬೀಳುವಂತೆ ನಿಲ್ಲಬಾರದು.

* ಶನಿ ಮಂತ್ರಗಳನ್ನು ಹೇಳಿ.

* ಈ ದಿನ ಬಡವರಿಗೆ, ಹಸಿದವರಿಗೆ ಆಹಾರ ದಾನ ಮಾಡಿ.

* ನಿರ್ಗತಿಕರಿಗೆ ಕಪ್ಪು ಅಥವಾ ಕಡು ನೀಲಿ ವಸ್ತ್ರ ದಾನ ಮಾಡಿ.

* ಹಿರಿಯರನ್ನು ಗೌರವಿಸಿ.

English summary

Never Do These Things On Saturday In Kannada

Never do these things on Saturday in kannada, Read on...
X
Desktop Bottom Promotion