For Quick Alerts
ALLOW NOTIFICATIONS  
For Daily Alerts

ಆನೆಯ ಮೇಲೇರಿ ಬರುತ್ತಿದ್ದಾಳೆ ದುರ್ಗೆ.. ಈ ವರ್ಷ ಸಂತೋಷ, ಸಮೃದ್ಧಿ ಹೆಚ್ಚಲಿದೆ

|

ಸೆಪ್ಟೆಂಬರ್‌ 26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿಯ ಸಂಭ್ರಮ. ನವರಾತ್ರಿಯಲ್ಲಿ ದುರ್ಗಯ 9 ಅವತಾರಗಳನ್ನು ಪೂಜಿಸಿಲಾಗುವುದು. ನವರಾತ್ರಿಗೆ ದುರ್ಗೆ ದೇವಿ ಭೂಮಿಗೆ ಬಂದು ಭಕ್ತರನ್ನು ಹರಿಸುತ್ತಾಳೆ ಎಂಬ ನಂಬಿಕೆ ಇದೆ. ಅದೇ ರೀತಿ ಪ್ರತೀವರ್ಷ ಅವಳು ಬರುವಾಗ ಒಂದೊಂದು ವಾಹನದಲ್ಲಿ ಬರುತ್ತಾಳೆ. ಅವಳು ವಾಹನದಲ್ಲಿ ಬರುತ್ತಾಳೆ ಅದರ ಆಧಾರದ ಮೇಲೆ ಆ ವರ್ಷದ ಭವಿಷ್ಯ ಶುಭಕರವಾಗಿದೆಯೇ, ಇಲ್ಲವೇ ಎಂದು ಹೇಳಲಾಗುವುದು.

ಈ ವರ್ಷ ದುರ್ಗಾ ಮಾತೆ ಆನೆಯ ಬೆನ್ನೇರಿ ಬರುತ್ತಾಳೆ ಹಾಗೂ ಹೋಗುತ್ತಾಳೆ, ಇದನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ದುರ್ಗಾ ದೇವಿ ಯಾವುದರ ಮೇಲೆ ಬರುತ್ತಾಳೆ ಎಂಬುವುದನ್ನು ಹೇಗೆ ಹೇಳಲಾಗುವುದು, ಯಾವ ವಾಹನ ಏನನ್ನು ಸೂಚಿಸುತ್ತೆ ಎಂಬೆಲ್ಲಾ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ನವರಾತ್ರಿ ಯಾವ ದಿನ ಬಂದ್ರೆ ಏನರ್ಥ?

ನವರಾತ್ರಿ ಯಾವ ದಿನ ಬಂದ್ರೆ ಏನರ್ಥ?

ದೇವಿ ಭಾಗವತ ಪುರಾಣದ ಪ್ರಕಾರ ನವರಾತ್ರಿ ಭಾನುವಾರ ಅಥವಾ ಸೋಮವಾರ ಪ್ರಾರಂಭವಾದರೆ ದುರ್ಗೆ ಆನೆಯ ಮೇಲೇರಿ ಬರುತ್ತಾಳೆ

ಅದೇ ಶನಿವಾರ ಅಥವಾ ಮಂಗಳವಾರ ನವರಾತ್ರಿ ಬಂದ್ರೆ ಕುದುರೆಯ ಮೇಲೇರಿ ಬರುತ್ತಾಳೆ.

ನವರಾತ್ರಿ ಗುರುವಾರ ಅಥವಾ ಶುಕ್ರವಾರ ಬಂದರೆ ಪಲಕ್ಕಿಯೇರಿ ಬರುತ್ತಾಳೆ.

ನವರಾತ್ರಿ ಬುಧವಾರ ಬಂದರೆ ದೋಣಿಯಲ್ಲಿ ಬರುತ್ತಾಳೆ.

2022ರಲ್ಲಿ ಸೋಮವಾರ ನವರಾತ್ರಿ ಪ್ರಾರಂಭ

2022ರಲ್ಲಿ ಸೋಮವಾರ ನವರಾತ್ರಿ ಪ್ರಾರಂಭ

2022ರಲ್ಲಿ ಸೆಪ್ಟೆಂಬರ್ 26ಕ್ಕೆ ಅಂದರೆ ಸೋಮವಾರ ನವರಾತ್ರಿ ಪ್ರಾರಂಭವಾಗುವುದು. ಆದ್ದರಿಂದ ದುರ್ಗೆ ಆನೇಯ ಮೇಲೇರಿ ಬರುತ್ತಿದ್ದಾಳೆ. ದುರ್ಗೆ ಆನೆಯ ಮೇಲೇರಿ ಬರುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.

ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಹೆಚ್ಚಲಿದೆ

ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಹೆಚ್ಚಲಿದೆ

ದುರ್ಗೆ ಆನೆ ಮೇಲೆ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ, ಇದರಿಂದಾಗಿ ದೇಶದಲ್ಲಿ ಸಮೃದ್ಧಿ ಹೆಚ್ಚಲಿದೆ . ಜನರಲ್ಲಿ ಸಂತೋಷ ಹೆಚ್ಚಲಿದೆ.

ಆನೆ ಬೆನ್ನೇರಿ ನಿರ್ಗಮಿಸಲಿರುವ ದುರ್ಗಾ ಮಾತೆ

ಆನೆ ಬೆನ್ನೇರಿ ನಿರ್ಗಮಿಸಲಿರುವ ದುರ್ಗಾ ಮಾತೆ

ಈ ವರ್ಷದಲ್ಲಿ ದುರ್ಗೆ ಆನೆ ಬೆನ್ನೇರಿ ಬಂದು, ಆನೆಯ ಮೇಲೆ ಕುಳಿತು ಮರಳುತ್ತಿದ್ದಾಳೆ. ದುರ್ಗೆ ಬುಧವಾರ ಅಥವಾ ಶುಕ್ರವಾರ ಹೋಗುವುದಾದರೆ ಆನೆಯ ಮೇಲೆ ಹೋಗುತ್ತಾಳೆ. ಈ ವರ್ಷ ಅಕ್ಟೋಬರ್‌ಕ್ಕೆ ನವರಾತ್ರಿ ಮುಕ್ತಾಯ, ಬುಧವಾರ ಬಂದಿದೆ, ಆದ್ದರಿಂದ ಆನೆಯ ಬೆನ್ನೇರಿ ಮರಳುತ್ತಿದ್ದಾಳೆ. ಇದನ್ನು ಕೂಡ ಶುಭ ಎಂದು ಪರಿಗಣಿಸಲಾಗಿದೆ.

ದುರ್ಗೆ ಯಾವ ವಾಹನದಲ್ಲಿ ಬಂದರೆ ಶುಭವಲ್ಲ

ದುರ್ಗೆ ಯಾವ ವಾಹನದಲ್ಲಿ ಬಂದರೆ ಶುಭವಲ್ಲ

ಕುದುರೆ, ಪಲ್ಲಕ್ಕಿಯಲ್ಲಿ ದುರ್ಗೆ ಬಂದರೆ ಅದನ್ನು ಶುಭ ಎಂದು ಪರಿಗಣಿಸುವುದಿಲ್ಲ. ಕುದುರೆಯೇರಿ ಬಂದರೆ ವಿನಾಶದ ಸೂಚನೆ ನೀಡುತ್ತೆ, ಪಲ್ಲಕ್ಕಿಯಲ್ಲಿ ಬಂದರೆ ಸಾಂಕ್ರಮಿಕ ರೋಗದ ಸೂಚನೆ ನೀಡುತ್ತೆ.

ಆನೆ ಹಾಗೂ ದೋಣಿಯಲ್ಲಿ ಬರುವುದನ್ನು ಶುಭವೆಂದು ಪರಿಗಣಿಸಲಾಗಿದೆ.

English summary

Navratri 2022: Goddess Durga will come on Elephant this year

Navratri 2022: Goddess Durga will come on Elephant this year, so this year is consider so auspecious...
X
Desktop Bottom Promotion