For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿ ಹಬ್ಬ 2022: ನಿಮ್ಮ ರಾಶಿಗೆ ತಕ್ಕಂತೆ ಈ ಮಂತ್ರ ಪಠಿಸಿದರೆ ಪೂಜೆ ಹೆಚ್ಚು ಫಲಪ್ರದ

|

ಹಬ್ಬಗಳ ಮುನ್ನುಡಿಯಾದ ನಾಗರ ಪಂಚಮಿ ಹಬ್ಬ ಬಂದಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗ ಪಂಚಮಿ ಹಬ್ಬವು ಆಗಸ್ಟ್‌ 2ರಂದು ಅಂದರೆ ಮಂಗಳವಾರ ಬಂದಿದೆ. ಈ ದಿನ ನಾಗದೇವತೆಯನ್ನು ಪೂಜಿಸಲಾಗುವುದು.

ಈ ದಿನ ನಾಗನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಗ ಪಂಚಮಿ ಹಬ್ಬದಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ, ಶಿವ ಸಹಸ್ರನಾಮದ ಪಠಣ ಮತ್ತು ಮಹಾಮೃತ್ಯುಂಜಯ ಮಂತ್ರದ ಪಠಣ ಮಾಡಿದರೆ ಒಳ್ಳೆಯದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಗರ ಪಂಚಮಿ ಪೂಜೆ ಮಾಡುವುದರಿಂದ ಜಾತಕದ ಕಾಲಸರ್ಪ ದೋಷ ಮತ್ತು ರಾಹು-ಕೇತು ಗ್ರಹಗಳ ದೋಷಗಳನ್ನು ತೊಡೆದುಹಾಕುವುದರ ಜೊತೆಗೆ ಜಾತಕದಲ್ಲಿನ ಎಲ್ಲಾ ಗ್ರಹಗಳು ಶಾಂತವಾಗುತ್ತವೆ.

ಅದರಲ್ಲೂ ನಿಮ್ಮ ರಾಶಿಗೆ ತಕ್ಕಂತೆ ಮಂತ್ರಗಳನ್ನು ಹೇಳಿ ಪೂಜಿಸುವುದರಿಂದ ನಾಗರ ಪಂಚಮಿ ಪೂಜೆಯಿಂದ ಹೆಚ್ಚು ಫಲ ಸಿಗುವುದು:

ನಾಗರ ಪಂಚಮಿ

ನಾಗರ ಪಂಚಮಿ

ಮೇಷ ರಾಶಿ- ಓಂ ವಾಸುಕೇಯ ನಮಃ

ವೃಷಭ ರಾಶಿ- ಓಂ ಶೂಲಿನೇ ನಮಃ

ಮಿಥುನ ರಾಶಿ - ಓಂ ಸರ್ಪಾಯ ನಮಃ

ಕರ್ಕಾಟಕ ರಾಶಿ - ಓಂ ಅನಂತಾಯ ನಮಃ

ಸಿಂಹ ರಾಶಿ - ಓಂ ಕಾರ್ಕೋಟ್ಕಾಯ ನಮಃ

ಕನ್ಯಾ ರಾಶಿ- ಓಂ ಕಾಂಬ್ಲಾಯ ನಮಃ

ನಾಗರ ಪಂಚಮಿ

ನಾಗರ ಪಂಚಮಿ

ತುಲಾ ರಾಶಿ - ಓಂ ಶಂಖಪಾಲಾಯ ನಮಃ

ವೃಶ್ಚಿಕ ರಾಶಿ - ಓಂ ತಕ್ಷಕಾಯ ನಮಃ

ಧನುರಾಶಿ - ಓಂ ಪೃಥ್ವಿಧರಾಯೈ ನಮಃ

ನಾಗರ ಪಂಚಮಿ

ನಾಗರ ಪಂಚಮಿ

ಮಕರ ರಾಶಿ- ಓಂ ನಾಗಾಯ ನಮಃ

ಕುಂಭ ರಾಶಿ - ಓಂ ಕುಲಿಶಾಯ ನಮಃ

ಮೀನ ರಾಶಿ- ಓಂ ಅಶ್ವತರಾಯ ನಮಃ

English summary

Nag Panchami 2022 Mantra: Mantras To Chant According to Zodiac Signs in Kannada

Nag Panchami 2022: Here are Mantras To Chant According to Zodiac Signs in Kannada, read on...
X
Desktop Bottom Promotion