For Quick Alerts
ALLOW NOTIFICATIONS  
For Daily Alerts

Budh Gochar August 2022 : ಆ.21ರಿಂದ ಬುಧ ಗೋಚಾರ ಫಲ : 10 ರಾಶಿಯವರಿಗೆ ಅನುಕೂಲಕರ, 2 ರಾಶಿಯವರು ಹುಷಾರಾಗಿರಬೇಕು

|

ವೈದಿಕ ಶಾಸ್ತ್ರದ ಪ್ರಕಾರ ಬುಧ ನಮ್ಮ ತರ್ಕ, ಸಂವಹನ, ಕೌಶಲ್ಯದ ಮೇಲೆ ಪರಿಣಾಮ ಬೀರುತ್ತದೆ. ಬುಧನು ಆಗಸ್ಟ್‌ 21ಕ್ಕೆ ಕನ್ಯಾರಾಶಿಗೆ ಪ್ರವೇಶಿಸಲಿದೆ.

ಬುಧನ ಈ ಸಂಚಾರ ದ್ವಾದಶ ರಾಶಿಗಳ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಈ ಸಂಚಾರ ಬಹುತೇಕ ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದೆ. ನಕಾರಾತ್ಮಕ ಪ್ರಬಾವ ಕೆಲವೇ ರಾಶಿಗಳ ಮೇಲಿದೆ. ನಿಮ್ಮ ರಾಶಿಯ ಮೇಲೆ ಈ ಬುಧ ಸಂಕ್ರಮಣ ಯಾವ ರೀತಿಯ ಪ್ರಭಾವ ಬೀರಿದೆ ನೋಡೋಣ:

ಮೇಷ ರಾಶಿ: ಮೇಷ ರಾಶಿಯವರಿಗೆ ಈ ಅವಧಿ ಒಳ್ಳೆಯದಿದೆ

ಮೇಷ ರಾಶಿ: ಮೇಷ ರಾಶಿಯವರಿಗೆ ಈ ಅವಧಿ ಒಳ್ಳೆಯದಿದೆ

ಮೇಷ ರಾಶಿಯವರ 3ನೇ ಹಾಗೂ 6ನೇ ಮನೆಯನ್ನು ಬುಧ ಆಳುತ್ತಿದ್ದಾನೆ. ಈ ಸಂಚಾರ ಸಮಯದಲ್ಲಿ ಬುಧ ನಿಮ್ಮ 6ನೇ ಮನೆಯಲ್ಲಿಯೇ ಇರಲಿದೆ. ಈ ಮನೆಯನ್ನು ಶತ್ರುಗಳು, ಆರೋಗ್ಯ, ಸ್ಪರ್ಧೆ ಹಾಗೂ ಮಾವನ ಮನೆಯೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಲಿದೆ. ತುಂಬಾ ಸಮಯದಿಮದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಅವಧಿಯಲ್ಲಿ ಗುಣಮುಖರಾಗುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವವರು ಈ ಸಮಯದಲ್ಲಿ ಯಶಸ್ಸು ಪಡೆಯುವಿರಿ. ಈ ಅವಧಿಯಲ್ಲಿ ಮಾವನಿಂದ ಬೆಂಬಲ ಸಿಗುವುದು. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ.

ಪರಿಹಾರ: ಹಸುವಿಗೆ ಹಸಿರು ಮೇವು ದಾನ ಮಾಡಿ.

ವೃಷಭ ರಾಶಿ: ಈ ಸಂಚಾರ ನಿಮ್ಮ ಪರವಾಗಿದೆ

ವೃಷಭ ರಾಶಿ: ಈ ಸಂಚಾರ ನಿಮ್ಮ ಪರವಾಗಿದೆ

ವೃಷಭ ರಾಶಿಯ 2ನೇ ಹಾಗೂ 5ನೇ ಮನೆಯ ಅಧಿಪರಿಯಾಗಿರುವ ಬುಧ ಈ ಅವಧಿಯಲ್ಲಿ 5ನೇ ಮನೆಯಲ್ಲಿಯೇ ಇರಲಿದೆ. ಇದನ್ನು ಪ್ರೀತಿ, ಸಬಂಧ ಹಾಗೂ ಪೂರ್ವ ಪುಣ್ಯದ ಮನೆಯೆಂದು ಪರಿಗಣಿಸಲಾಗಿದೆ.

ಈ ಅವಧಿ ವಿದ್ಯಾರ್ಥಿಗಳಿಗೆ ತುಂಬಾನೇ ಚೆನ್ನಾಗಿದೆ. ಪ್ರೇಮಿಗಳಿಗೆ ಈ ಅವಧಿ ತುಂಬಾನೇ ರೊಮ್ಯಾಂಟಿಕ್‌ ಆಗಿರುತ್ತದೆ. ವಿವಾಹಿತರು ಮಕ್ಕಳು, ಕುಟುಂಬದೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ.

ಒಟ್ಟಿನಲ್ಲಿ ಬುಧನ ಈ ಸಂಚಾರದ ಸಮಯ ನಿಮಗೆ ಪರವಾಗಿಯೇ ಇದೆ.

ಪರಿಹಾರ: ಅವಶ್ಯಕ ಇರುವ ಮಕ್ಕಳಿಗೆ ನೋಟ್-ಬುಕ್ ದಾನ ಮಾಡಿ.

ಮಿಥುನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮಿಥುನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮಿಥುನ ರಾಶಿಯವರ ಮೊದಲ ಹಾಗೂ 4ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 4ನೇ ಮನೆಯಲ್ಲಿಯೇ ಇರಲಿದೆ. ನಾಲ್ಕನೇ ಮನೆಯನ್ನು ತಾಯಿ, ಕೌಟಂಬಿಕ ಜೀವನ, ಗಾಡಿ, ಆಸ್ತಿಯ ಮನೆಯೆಂದು ಪರಿಗಣಿಸಲಾಗಿದೆ.

ಈ ಸಂಚಾರದ ಅವಧಿಯಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನೀವು ಜಾಗ ಅಥವಾ ಗಾಡಿ ಖರೀದಿಸಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಪ್ರಯತ್ನಿಸಿದರೆ ಖರೀದಿ ಮಾಡಬಹುದು. ರಿಯಲ್‌ ಎಸ್ಟೇಟ್‌ನವರಿಗ, ಏಜೆಂಟ್‌ಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಮನೆಯಲ್ಲಿ ತಾಯಿಯಿಂದ ಬೆಂಬಲ ಸಿಗುವುದು. ಈ ಬುಧ ಸಂಕ್ರಮಣ ನಿಮಗೆ ಸಂತೋಷ ತರಲಿದೆ.

ಪರಿಹಾರ: ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಮಾಡಿ

ಕರ್ಕ ರಾಶಿ: ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ

ಕರ್ಕ ರಾಶಿ: ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ

ಕರ್ಕ ರಾಶಿಯವರ 12ನೇ ಹಾಗೂ 3ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 3ನೇ ಮನೆಯಲ್ಲಿಯೇ ಇರಲಿದೆ. ಇದು ಸಹೋದರ-ಸಹೋದರಿ, ಹವ್ಯಾಸಗಳು, ಸಂವಹನವನ್ನು ಪ್ರತಿನಿಧಿಸುವ ಮನೆಯಾಗಿದೆ. ಈ ಸಮಯದಲ್ಲಿ ಕರ್ಕ ರಾಶಿಯವರಿಗೆ ಒಡಹುಟ್ಟಿದವರಿಂದ ಒಳ್ಳೆಯ ಬೆಂಬಲ ಸಿಗಲಿದೆ.

ಬರಹಗಾರರಿಗೆ , ಮೀಡಿಯಾದಲ್ಲಿ ಇರುವವರಿಗೆ , ನಿರ್ದೇಶಕರಿಗೆ, ನಿರೂಪಕರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರುತ್ತದೆ. ಕೆಲಸದಲ್ಲಿ ಪ್ರಗತಿ ಕಾಣುವಿರಿ.

ಪರಿಹಾರ: ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ.

ಸಿಂಹ ರಾಶಿ: ಆರ್ಥಿಕವಾಗಿ ಚೆನ್ನಾಗಿದೆ

ಸಿಂಹ ರಾಶಿ: ಆರ್ಥಿಕವಾಗಿ ಚೆನ್ನಾಗಿದೆ

ಸಿಂಹ ರಾಶಿಯವರ 11ನೇ ಹಾಗೂ 2ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 2ನೇ ಮನೆಯಲ್ಲಿಯೇ ಇರಲಿದೆ. ಆರ್ಥಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿದೆ. ನೀವು ನಿಮ್ಮ ವೃತ್ತಿಯಲ್ಲಿ ತುಂಬಾ ಲಾಭ ಗಳಿಸುವಿರಿ. ನಿಮ್ಮ ಇನ್ನೋವೇಟಿವ್‌ ಐಡಿಯಾಗಳಿಗೆ ಕುಟುಂಬದ ಬೆಂಬಲ ಸಿಗುವುದರಿಂದ ನೀವು ನಿಮ್ಮ ಐಡಿಯಾದಲ್ಲಿ ಮುಂದುವರಿಯಬಹುದು.

ಪರಿಹಾರ: ಪ್ರತಿದಿನ ದಿನ ತುಳಸಿ ಗಿಡವನ್ನು ಪೂಜಿಸಿ, ಒಂದು ತುಳಸಿ ಎಲೆಯನ್ನು ಬಾಯಿಗೆ ಹಾಕಿ.

ಕನ್ಯಾ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ

ಕನ್ಯಾ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ

ಕನ್ಯಾ ರಾಶಿಯವರ 10ನೇ ಹಾಗೂ 1 ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ ಲಗ್ನ ಮನೆಯಲ್ಲಿಯೇ ಇರಲಿದೆ. ಈ ಬುಧ ಸಂಚಾರ ನಿಮ್ಮ ಬುದ್ಧಿವಂತಿಕೆಯನ್ನು ಮತ್ತಷ್ಟು ಶಾರ್ಪ್ ಮಾಡಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.

ಪರಿಹಾರ: ಹಸಿರು ಬಟ್ಟೆ ನಿಮಗೆ ಶುಭ. ಹಸಿರು ಬಟ್ಟೆ ಧರಿಸದಿದ್ದರೂ ಹಸಿರು ಕರ್ಚೀಪ್‌ ನಿಮ್ಮ ಬಳಿ ಇಟ್ಟುಕೊಳ್ಳಿ.

ತುಲಾ ರಾಶಿ: ಖರ್ಚು ಹೆಚ್ಚಲಿದೆ

ತುಲಾ ರಾಶಿ: ಖರ್ಚು ಹೆಚ್ಚಲಿದೆ

ತುಲಾ ರಾಶಿಯವರ 9ನೇ ಹಾಗೂ 12ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 12ನೇ ಮನೆಯಲ್ಲಿಯೇ ಇರಲಿದೆ. ಈ ಮನೆಯನ್ನು ಖರ್ಚು, ಆಸ್ಪತ್ರೆ, ವಿದೇಶಿ ಕಂಪನಿಗಳ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಖರ್ಚು ಹೆಚ್ಚಲಿದೆ. ಈ ಸಮಯದಲ್ಲಿ ದೂರ ಪ್ರಯಾಣ ಮಾಡುವಿರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ ಖುಷಿಯಾಗಿರುತ್ತೀರಿ. ಈ ಅವಧಿಯಲ್ಲಿ ಖರ್ಚು ತುಂಬಾ ಹೆಚ್ಚುವುದರಿಂದ ಬಜೆಟ್‌ ಪ್ಲ್ಯಾನ್‌ ಮಾಡಿದರೆ ಒಳ್ಳೆಯದು.

ಪರಿಹಾರ: ಇಡೀ ಸಿಹಿಕುಂಬಳಕಾಯಿ ತೆಗೆದುಕೊಂಡು ಅದನ್ನು ಹಣೆಗೆ ಮುಟ್ಟಿಸಿ ಹರಿಯುವ ನದಿಯಲ್ಲಿ ಬಿಡಿ.

ವೃಶ್ಚಿಕ ರಾಶಿ: ಆರ್ಥಿಕ ಲಾಭ ಉಂಟಾಗುವುದು

ವೃಶ್ಚಿಕ ರಾಶಿ: ಆರ್ಥಿಕ ಲಾಭ ಉಂಟಾಗುವುದು

ವೃಶ್ಚಿಕ ರಾಶಿಯವರ 8ನೇ ಹಾಗೂ 11ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 11ನೇ ಮನೆಯಲ್ಲಿಯೇ ಇರಲಿದೆ. 11ನೇ ಮನೆಯನ್ನು ಆರ್ಥಿಕ ಲಾಭ, ಬಯಕೆ, ಮಾವ, ಅಕ್ಕ-ಅಣ್ಣನ ಮನೆಯೆಂದು ಪರಿಗಣಿಸಲಾಗಿದೆ. ವೃಶ್ಚಿಕ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಅಣ್ಣ ಅಥವಾ ಅಕ್ಕ ಅವರ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ಆರ್ಥಿಕ ಲಾಭ ಕಾಣುವಿರಿ. ಒಟ್ಟಿನಲ್ಲಿ ಈ ಅವಧಿ ಅನುಕೂಲಕರವಾಗಿದೆ.

ಪರಿಹಾರ: ಚಿಕ್ಕ ಮಕ್ಕಳಿಗೆ ಹಸಿರು ಬಣ್ಣದ ಏನಾದರೂ ಗಿಫ್ಟ್ ನೀಡಿ.

ಧನು ರಾಶಿ: ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿದೆ

ಧನು ರಾಶಿ: ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿದೆ

ಧನು ರಾಶಿಯವರ 7ನೇ ಹಾಗೂ 10ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 10ನೇ ಮನೆಯಲ್ಲಿಯೇ ಇರಲಿದೆ. 10ನೇ ಮನೆಯನ್ನು ವೃತ್ತಿ ಜೀವನ, ಕೆಲಸದ ಸ್ಥಳದ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ತಾಯಿಯ ಬೆಂಬಲವಿರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಹೊಂದಲು ಇದುಕೂಲಕರವಾದ ಅವಧಿಯಾಗಿದೆ.

ಪರಿಹಾರ:ಬುಧ ಬೀಜ ಮಂತ್ರವನ್ನು ಪ್ರತಿದಿನ ಪಠಿಸಿ.

ಮಕರ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮಕರ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮಕರ ರಾಶಿಯವರ 6ನೇ ಹಾಗೂ 9ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 9ನೇ ಮನೆಯಲ್ಲಿಯೇ ಇರಲಿದೆ. ಶಿಕ್ಷಕ ವೃತ್ತಿಯಲ್ಲಿರುವವರಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ತಂದೆ, ಗುರುಗಳ ಸಪೋರ್ಟ್ ಸಿಗುತ್ತೆ.

ಪರಿಹಾರ: ಹಸಿರು ಧಾನ್ಯಗಳನ್ನು ದೇವಾಲಯಕ್ಕೆ ಕೊಡಿ.

ಕುಂಭ ರಾಶಿ: ಇದು ಸ್ವಲ್ಪ ಸವಾಲಿನ ಅವಧಿ

ಕುಂಭ ರಾಶಿ: ಇದು ಸ್ವಲ್ಪ ಸವಾಲಿನ ಅವಧಿ

ಕುಂಭ ರಾಶಿಯವರ 5ನೇ ಹಾಗೂ 8ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ8ನೇ ಮನೆಯಲ್ಲಿಯೇ ಇರಲಿದೆ. ಈ ಅವಧಿ ನಿಮಗೆ ಸ್ವಲ್ಪ ಸವಾಲಿನಿಂದ ಕೂಡಿದೆ. ಈ ಸಮಯದಲ್ಲಿ ಮಾನಸಿಕ ಒತ್ತಡ ಹೆಚ್ಚಲಿದೆ. ಅಲ್ಲದೆ ಕೈ ಹಾಗೂ ಬೆನ್ನಿನಲ್ಲಿ ನೋವು ಕಂಡು ಬರಬಹುದು, ಆರೋಗ್ಯದ ಕಡೆ ತುಂಬಾ ಗಮನ ಹರಿಸಿ. ಪ್ರಯಾಣ ಮಾಡುವಾಗ ಹುಷಾರಾಗಿರಿ.

ಪರಿಹಾರ: ಮಂಗಳಮುಖಿಯರಿಗೆ ವಸ್ತ್ರದಾನ ಮಾಡಿ.

ಮೀನ ರಾಶಿ: ಉದ್ಯೋಗ ಪ್ರಾರಂಭಿಸಲು ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿ: ಉದ್ಯೋಗ ಪ್ರಾರಂಭಿಸಲು ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿಯವರ 4ನೇ ಹಾಗೂ 7ನೇ ಮನೆಯ ಅಧಿಪತಿಯಾಗಿರುವ ಬುಧ ಈ ಸಂಚಾರದ ಸಮಯದಲ್ಲಿ 7ನೇ ಮನೆಯಲ್ಲಿಯೇ ಇರಲಿದೆ. ಈ ಅವಧಿ ಉದ್ಯೋಗ, ವ್ಯಾಪಾರದ ದೃಷ್ಟಿಯಿಂದ ಅನುಕೂಲಕರವಾಗಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೂ ಈ ಅವಧಿ ಅನುಕೂಲಕರವಾಗಿದೆ. ಆದರೆ ಆರೋಗ್ಯದ ಕಡೆ ಗಮನ ನೀಡಿ.

ಪರಿಹಾರ: ಗಣೇಶನಿಗೆ ಪೂಜೆ ಮಾಡಿ.

English summary

Mercury Transit in Virgo on 21 August 2022 Effects and Remedies on 12 Zodiac Signs in Kannada

Budh Rashi Parivartan 2022 In Kanya Rashi ; Mercury Transit in Virgo Effects on Zodiac Signs : The Mercury Transit in Virgo will take place on 21 August 2022. Learn about remedies to perform in Kannada,
Story first published: Friday, August 19, 2022, 13:10 [IST]
X
Desktop Bottom Promotion