For Quick Alerts
ALLOW NOTIFICATIONS  
For Daily Alerts

ಮೌನಿ ಅಮವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಿವಿಧಾನ ಪಾಲಿಸಿ

|

ಪಿತೃದೋಷಗಳಿಂದ ಮುಕ್ತಿ ಪಡೆಯಲು ಸಹಾಯಮಾಡುವ ಅಮವಾಸ್ಯೆಯೇ ಮೌನಿ ಅಮವಾಸ್ಯೆ. ಮೌನವಾಗಿಯೇ ಏನನ್ನೂ ಮಾತನಾಡದೇ ಆಚರಣೆ ಮಾಡುವ ಕಾರಣದಿಂದಾಗಿ ಇದನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.ಫೆಬ್ರವರಿ 11ರಂದು ಇರುವ ಈ ಅಮವಾಸ್ಯೆಯಂದು ಗಂಗಾ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಸದ್ಗುಣಗಳನ್ನು ಪಾಲನೆ ಮಾಡುವುದು ಬಹಳ ಶುಭಕರ.

amavasya

ಮೌನಿ ಅಮವಾಸ್ಯೆಯಂದು ಎಳ್ಳು ಅಥವಾ ಇತರ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ. ಮೌನಿ ಅಮಾವಾಸ್ಯೆಯಂದು, ಪಿತೃಗಳ ಎಲ್ಲಾ ಕೆಲಸಗಳನ್ನು ಮೌನವಾಗಿ ಮಾಡಲಾಗುತ್ತದೆ. ಈ ದಿನ, ಪಿತೃದೋಷವನ್ನು ಕೆಲವು ವಿಶೇಷ ಕ್ರಮಗಳಿಂದ ಸಮಾಧಾನಪಡಿಸಬಹುದು. ಆ ವಿಧಾನಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪಿತೃದೋಷ ನಿವಾರಣೆಗಾಗಿ ಪೂಜೆ ಮಾಡುವ ವಿಧಾನ:

ಪಿತೃದೋಷ ನಿವಾರಣೆಗಾಗಿ ಪೂಜೆ ಮಾಡುವ ವಿಧಾನ:

  • ಪಿತೃ ದೋಷವನ್ನು ತೊಡೆದುಹಾಕಲು, ಈ ದಿನ ಪೂರ್ವಜರನ್ನು ಧ್ಯಾನಿಸುತ್ತಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
  • ಪಿತ್ರ ದೋಷ ತಡೆಗಟ್ಟಲು, ಕಮಲದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕೆಂಪು ಹೂವುಗಳು ಮತ್ತು ಕಪ್ಪು ಎಳ್ಳು ಸೇರಿಸಿ.
  • ನಂತರ ಈ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ, ನಿಮ್ಮ ಪಿತೃಗಳ ಶಾಂತಿಗಾಗಿ ಪ್ರಾರ್ಥಿಸಿ.
  • ಅಶ್ವತ್ಥ ಮರದ ಮೇಲೆ ಕೆಲವು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು, ಮರವನ್ನು 108 ಬಾರಿ ಪ್ರದಕ್ಷಿಣೆ ಹಾಕಿ.
  • ಮೌನಿ ಅಮಾವಾಸ್ಯೆಯ ದಿನ, ಎಳ್ಳಿನ ಲಡ್ಡು, ಎಳ್ಳೆಣ್ಣೆ, ನೆಲ್ಲಿ, ಕಂಬಳಿ ಮತ್ತು ಬಟ್ಟೆಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಿ. ಇದನ್ನು ಮಾಡುವುದರಿಂದ ನಿಮಗೆ ಪುಣ್ಯ ಲಭಿಸುತ್ತದೆ.
  • ವಾಸ್ತು ಪ್ರಕಾರ ಪಿತೃ ದೋಷ ನಿವಾರಣೆಗೆ ಹೀಗೆ ಮಾಡಿ:

    ವಾಸ್ತು ಪ್ರಕಾರ ಪಿತೃ ದೋಷ ನಿವಾರಣೆಗೆ ಹೀಗೆ ಮಾಡಿ:

    • ಮನೆಯ ದಕ್ಷಿಣ ಭಾಗದಲ್ಲಿ ಸ್ವಲ್ಪ ಎಳ್ಳನ್ನು ಬಿಳಿ ಬಟ್ಟೆಯ ಮೇಲೆ ಹಾಕಿ. ಅದರ ಮೇಲೆ ಹಿತ್ತಾಳೆ ಅಥವಾ ತಾಮ್ರದ ಹೂಜಿಯನ್ನು ಸ್ಥಾಪಿಸಿ.
    • ಈಗ ಅದರ ಎಡಭಾಗದಲ್ಲಿ ಎಳ್ಳೆಣ್ಣೆಯ ದೀಪವನ್ನು ಪಿತೃಗಳಿಗಾಗಿ ಹಚ್ಚಿ. ಈಗ ನೀರು ತುಂಬಿದ ಸ್ಟೀಲ್ ಪಾತ್ರೆಯನ್ನು ಮಧ್ಯದಲ್ಲಿ ಇರಿಸಿ.
    • ಅದರ ಮೇಲೆ ಸ್ಟೀಲ್ ಪ್ಲೇಟ್ ಮತ್ತು ಎಳ್ಳಿನ ರೊಟ್ಟಿ ಇರಿಸಿ.
    • ಈಗ ಅದರ ಮೇಲೆ ತುಳಸಿ ಎಲೆಯನ್ನು ಇರಿಸಿ.
    • ಇದಕ್ಕೆ ಬಿಳಿ ಹೂವನ್ನು ಅರ್ಪಿಸಿ ಮತ್ತು ಶ್ರೀಗಂಧದ ತಿಲಕವನ್ನು ಇಡಿ.
    • ಈಗ ರೊಟ್ಟಿಯನ್ನು ನಾಲ್ಕು ತುಂಡುಗಳನ್ನು ಮಾಡಿ. ಅದರಲ್ಲಿ ಒಂದು ತುಂಡನ್ನು ನಾಯಿಗೆ, ಎರಡನೆಯ ತುಂಡು ಹಸುವಿಗೆ, ಮೂರನೆಯ ತುಂಡನ್ನು ಕ್ಷುದ್ರಶಕ್ತಿಗಳಿಗೆ, ನಾಲ್ಕನೆಯ ತುಂಡನ್ನು ಅಶ್ವತ್ಥ ಮರದ ಕೆಳಗೆ ಇರಿಸಿ.
    • ನೆನಪಿನಲ್ಲಿಡಿ:

      ನೆನಪಿನಲ್ಲಿಡಿ:

      ಈ ಎಲ್ಲಾ ಕೆಲಸಗಳನ್ನು ನೀವು ಮೌನವಾಗಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

English summary

Mauni Amavasya 2021 : Pitru Dosh Nivaran Pujan Vidhi

Here we told about Mauni Amavasya 2021 : Pitru Dosh Nivaran Pujan Vidhi, have a look
Story first published: Wednesday, February 10, 2021, 17:54 [IST]
X
Desktop Bottom Promotion