For Quick Alerts
ALLOW NOTIFICATIONS  
For Daily Alerts

ಮಹಾಲಕ್ಷ್ಮಿ ವ್ರತ ಯಾವಾಗ? 16 ದಿನಗಳ ವ್ರತ ಪಾಲಿಸಿದರೆ ಲಕ್ಷ್ಮಿ ಕೃಪೆಯಿಂದ ಸಂಪತ್ತು ಪ್ರಾಪ್ತಿ

|

ಹಿಂದೂ ಪಂಚಾಂಗ ಪ್ರಕಾರ ಮಹಾಲಕ್ಷ್ಮಿ ವ್ರತವು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಪ್ರಾರಂಭವಾಗುತ್ತದೆ ಮತ್ತು ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯವರೆಗೆ ಮುಂದುವರಿಯುತ್ತದೆ.ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಮರ್ಪಿತವಾಗಿರುವ ಈ ವ್ರತದಲ್ಲಿ 16 ದಿನಗಳ ಕಾಲ ಉಪವಾಸ ಇದ್ದು ವ್ರತದ ನಿಯಮಗಳನ್ನು ಪಾಲಿಸಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಮಾಡುವ ಉಪವಾಸ, ಪೂಜೆಗೆ ಬೇಗನೆ ಫಲ ಸಿಗುವುದು. ಯಾರು ಈ ಲಕ್ಷ್ಮಿ ವ್ರತವನ್ನು ಮಾಡುತ್ತಾರೋ ಅವರಿಗೆ ಆರ್ಥಿಕ ಸಂಕಷ್ಟ ಬರಲ್ಲ, ಲಕ್ಷ್ಮಿಯ ಕೃಪೆಯಿಂದಾಗಿ ಅಪಾರ ಸಂಪತ್ತು ಗಳಿಸುತ್ತಾರೆ.

mahalakshmi vrat

ಈ ವರ್ಷ ಮಹಾಲಕ್ಷ್ಮಿ ವ್ರತ ಯಾವಾಗ ಪ್ರಾರಂಭ, ಯಾವಾಗ ಮುಕ್ತಾಯ, ಪೂಜಾ ನಿಯಮಗಳು ಹಾಗೂ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಮಹಾಲಕ್ಷ್ಮಿ ವ್ರತ ಯಾವಾಗ ಪ್ರಾರಂಭ?

ಮಹಾಲಕ್ಷ್ಮಿ ವ್ರತ ಯಾವಾಗ ಪ್ರಾರಂಭ?

ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಮಹಾಲಕ್ಷ್ಮಿ ವ್ರತ ಪ್ರಾರಂಭವಾಗುತ್ತದೆ. ಈ ಉಪವಾಸವನ್ನು 16 ದಿನಗಳವರೆಗೆ ನಡೆಸಲಾಗುತ್ತದೆ. ಈ ಬಾರಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಸೆಪ್ಟೆಂಬರ್ 3ರಿಂದ ಆರಂಭವಾಗಲಿದೆ. ವ್ರತವು ಅಶ್ವಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಸೆಪ್ಟೆಂಬರ್ 17ರಂದು ಕೊನೆಗೊಳ್ಳುತ್ತದೆ.

ಈ ಬಾರಿ ಭಾದ್ರಪದ ಶುಕ್ಲ ಅಷ್ಟಮಿ ತಿಥಿ ಸೆ.3ರಂದು ಮಧ್ಯಾಹ್ನ 12.28ರಿಂದ ಆರಂಭವಾಗಿ ಸೆ.4ರಂದು ಬೆಳಗ್ಗೆ 10.39ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಮಹಾಲಕ್ಷ್ಮಿ ವ್ರತವನ್ನುಸೆಪ್ಟೆಂಬರ್ 4ರಂದು ಆಚರಿಸಲಾಗುವುದು.

ಮಹಾಲಕ್ಷ್ಮಿ ವ್ರತ ಪೂಜಾ ನಿಯಮಗಳೇನು?

ಮಹಾಲಕ್ಷ್ಮಿ ವ್ರತ ಪೂಜಾ ನಿಯಮಗಳೇನು?

ಮಹಾಲಕ್ಷ್ಮಿ ವ್ರತವನ್ನು 16 ದಿನಗಳವರೆಗೆ ಆಚರಿಸಬೇಕು, ಈ ದಿನಗಳಲ್ಲಿ ಉಪವಾಸವಿದ್ದು ಆಚರಿಸಬೇಕು. ಉಪವಾಸದ ದಿನಗಳಲ್ಲಿ ಹಣ್ಣುಗಳನ್ನು ಸೇವಿಸಬಹುದು, ಒಪ್ಪೊತ್ತಿನ ಆಹಾರ ಸೇವಿಸಬಹುದು. ಈ ದಿನಗಳಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು.

ಪ್ರತದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಲಕ್ಷ್ಮಿಗೆ ಕಮಲದ ಹೂ, ಹಣ್ಣುಗಳು, ಹೂಗಳನ್ನು ಅರ್ಪಿಸಿ ದೀಪ ಹಚ್ಚಿ ದೂಪ ಬೆಳಗಿ ಆರತಿ ಮಾಡಬೇಕು. ಲಕ್ಷ್ಮಿಗೆ ಪ್ರತಿದಿನ ನೈವೇದ್ಯ ಇಡಬೇಕು. ಈ ವ್ರತದ ಸಮಯದಲ್ಲಿ ಪ್ರತಿದಿನ ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬನ್ನಿ.

ಮಹಾಲಕ್ಷ್ಮಿ ಮಂತ್ರಗಳು

ಮಹಾಲಕ್ಷ್ಮಿ ಮಂತ್ರಗಳು

ಲಕ್ಷ್ಮಿಬೀಜ ಮಂತ್ರ 1

ಓಂ ಹ್ರೀಮ್ ಶ್ರೀಮ್ ಲಕ್ಷ್ಮೀಭ್ಯೋ ನಮಃ

ಲಕ್ಷ್ಮಿ ಬೀಜ ಮಂತ್ರ 2

ಓಂ ಶ್ರಿಂಗ್ ಶ್ರೀಯೆ ನಮಃ

ಲಕ್ಷ್ಮಿ ಗಾಯತ್ರಿ ಮಂತ್ರ

ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದಾಮಹೇ ವಿಷ್ಣು ಪತ್ನಿಯೇ ಚ ದೀಮಹಿ ತನ್ನೊ ಲಕ್ಷ್ಮೀ ಪ್ರಚೋದಯಾತ್ ಓಂ

ಮಹಾಲಕ್ಷ್ಮಿ ಮಂತ್ರ

ಓಂ ಸರ್ವಬಾಧಾ ವಿನಿರ್‪‎ಮುಕ್ತೋ, ಧನ್ ಧಾನ್ಯ್ ಸು ತನ್ವಿತಾಃ ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‎ಷ್ಯಾ ಓಂ

ಮಹಾಲಕ್ಷ್ಮಿ ವ್ರತ ಕಥಾ

ಮಹಾಲಕ್ಷ್ಮಿ ವ್ರತ ಕಥಾ

ಒಂದು ಹಳ್ಳಿಯಲ್ಲಿ ಒಬ್ಬ ಬಡ ಬ್ರಾಹ್ಮಣ ವಾಸಿಸುತ್ತಿದ್ದ. ಅವರು ಜಗತ್ತನ್ನು ಕಾಪಾಡುವ ಭಗವಂತ ವಿಷ್ಣುವನ್ನು ನಿಯಮಿತವಾಗಿ ಪೂಜಿಸುತ್ತಿದ್ದ. ಅವನ ಭಕ್ತಿ ಮತ್ತು ಆರಾಧನೆಯಿಂದ ಸಂತೋಷಗೊಂಡ ವಿಷ್ಣುವು ಅವನಿಗೆ ಕಾಣಿಸಿಕೊಂಡು ಬ್ರಾಹ್ಮಣನಿಗೆ ವರವನ್ನು ಕೇಳುವಂತೆ ಹೇಳಿದನು.

ಆಗ ಬ್ರಾಹ್ಮಣನು ತನ್ನ ಮನೆಯಲ್ಲಿ ಲಕ್ಷ್ಮಿಯು ನೆಲೆಸಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದನು. ಆಗ ವಿಷ್ಣುವು ಲಕ್ಷ್ಮಿಯನ್ನು ಪಡೆಯುವ ಮಾರ್ಗವನ್ನು ಹೇಳಿದನು. ದೇವಸ್ಥಾನದ ಮುಂದೆ ಒಬ್ಬ ಸ್ತ್ರೀ ದೇವಾಸ್ಥಾನದ ಪ್ರಸಾದ ಸೇವಿಸಲು ಬರುತ್ತಾಳೆ, ಅವಳನ್ನು ನಿಮ್ಮ ಮನೆಗೆ ಬರುವಂತೆ ಆಹ್ವಾನಿಸು ಎಂದು ಹೇಳಿ ಶ್ರೀ ವಿಷ್ಣು ಅಲ್ಲಿಂದ ಹೊರಡುತ್ತಾನೆ.

ಆ ಬಡ ಬ್ರಾಹ್ಮಣ ಮಾರನೇಯ ದಿನ ದೇವಾಲಯದ ಬಳಿ ಕುಳಿತಿರುವಾಗ ಅಲ್ಲಿಗೊಬ್ಬ ಸ್ತ್ರೀ ಬರುತ್ತಾಳೆ, ಅವಳನ್ನು ಆ ಬಡವ ಮನೆಗೆ ಆಹ್ವಾನಿಸುತ್ತಾನೆ, ಇದೆಲ್ಲವೂ ಶ್ರೀ ವಿಷ್ಣುವಿನ ಮಹಿಮೆ ಎಂದು ತಿಳಿದಿದ್ದ ಲಕ್ಷ್ಮಿ ದೇವಿಯು ನಾನು ನಿನ್ನ ಮನೆಗೆ ಬರುತ್ತೇನೆ, ಆದರೆ ಅದಕ್ಕಿಂತ ಮೊದಲು 16 ದಿನಗಳ ಕಾಲ ಉಪವಾಸ ಮಾಡಿ 16ನೇ ದಿನ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಿ ಅಪ್ರತ್ಯಕ್ಷಳಾಗುತ್ತಾಳೆ. ದೇವಿಯ ಸೂಚನೆಯಂತೆ ಬ್ರಾಹ್ಮಣನು ಉಪವಾಸ ಮಾಡಿ ಪೂಜಿಸಿ ದೇವಿಯನ್ನು ಉತ್ತರಾಭಿಮುಖವಾಗಿ ಕರೆದನು. ಇದರ ನಂತರ ಲಕ್ಷ್ಮಿ ದೇವಿಯು ತನ್ನ ಭರವಸೆಯನ್ನು ಪೂರೈಸಿದಳು. ಅಂದಿನಿಂದ ಈ ಉಪವಾಸದ ಸಂಪ್ರದಾಯ ಪ್ರಾರಂಭವಾಯಿತು ಎಂದು ನಂಬಲಾಗಿದೆ.

English summary

Mahalakshmi Vrat 2022 Date, Shubh Muhurat, Puja Tithi, Rituals and Significance in Kannada

Mahalakshmi Vrat 2022: Here are information about date, puja vidhi and significance read on,
X
Desktop Bottom Promotion