For Quick Alerts
ALLOW NOTIFICATIONS  
For Daily Alerts

ಈ ಮಹಾಕಾಳಿ ಮಂತ್ರ ಪಠಿಸಿದರೆ ನಿಮಗೆ ಜೀವನದಲ್ಲಿ ಯಶಸ್ಸು ಲಭಿಸುವುದು!

By Reena T. K
|

ದೀಪಾವಳಿ ಹಬ್ಬದಲ್ಲಿ ಉತ್ತರ ಭಾರತದ ಕಡೆ ಮಹಾಕಾಳಿ ಪೂಜೆ ಮಾಡುತ್ತಾರೆ. ಜಗತ್ತಿನ ಶಕ್ತಿ ಮಾತೆ ಎಂದು ಕರೆಯಲ್ಪಡುವ ಮಹಾಕಾಳಿಯನ್ನು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುವುದು. ಆದ್ದರಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಮಹಾಕಾಳಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಮಹಾಕಾಳಿ ಮಂತ್ರ ಪಠಣೆ ಮಾಡುತ್ತಾರೆ.

ಮಹಾಕಾಳಿಯನ್ನು ಶಕ್ತಿ ಸ್ವರೂಪಿಣಿ, ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ತಾಯಿ ಎಂದು ವರ್ಣನೆ ಮಾಡುತ್ತಾರೆ. ಕಾಳಿ ಮಾತೆಯನ್ನು ಭಕ್ತಿಯಿಂದ ಪೂಜಿಸಿದರೆ ಆ ತಾಯಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಹಾಕಾಳಿ ಎಂದಾಗ ನಾಲಗೆಯನ್ನು ಹೊರಚಾಚಿ, ತಲೆಬುರಡೆಗಳನ್ನು ಕೊರಳಿನಲ್ಲಿ ಹಾರವಾಗಿ ಧರಿಸಿದ, ಕೈಗಳಲ್ಲಿ ಆಯುಧಗಳನ್ನು ಹಿಡಿದಿರುವ ಉಗ್ರ ಸ್ವರೂಪಿಣಿ ಮಹಾಕಾಳಿಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈ ತಾಯಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಸಂಪತ್ತು ಹಾಗೂ ಯಶಸ್ಸು ದೊರೆಯುತ್ತದೆ.

Mahakali manthras

ಮಂತ್ರ ಹೇಳುವಾಗ ಎಚ್ಚರ

ಮಹಾಕಾಳಿಯನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳಿವೆ. ಈ ಮಂತ್ರಗಳನ್ನು ಜಪಿಸುವುದರಿಂದ ಯಶಸ್ಸು ದೊರೆಯುತ್ತದೆ ಎಂಬುವುದನ್ನು ಕಾಳಿ ಭಕ್ತರು ಅಚಲವಾಗಿ ನಂಬುತ್ತಾರೆ. ಆದರೆ ಈ ಮಂತ್ರವನ್ನು ಹೇಳುವಾಗ ತುಂಬಾ ಎಚ್ಚರಿಕೆವಹಿಸಬೇಕು, ತಪ್ಪಾಗಿ ಉಚ್ಛರಿಸಿದರೆ ಕೆಡಕು ಉಂಟಾಗುವುದು. ಮಹಾಕಾಳಿ ಮಂತ್ರವನ್ನು ಹೇಳುವುದರಿಂದ ನಮ್ಮಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು, ಆತ್ಮವಿಶ್ವಾಸ, ಧೈರ್ಯ ಮೂಡವುದು ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುವುದು.

ಕಾಳಿ ಮಂತ್ರಗಳಲ್ಲಿ ತುಂಬಾ 'ಓಂ ಕ್ರೀಂ ಕಾಳಿಕಾಯೈ ನಮಃ' ಎಂಬುವುದು ತುಂಬಾ ಪ್ರಭಾವಶಾಲಿಯಾದ ಮಂತ್ರವಾಗಿದೆ. ಈ ಮಂತ್ರದ ಅರ್ಥ ನಾನು ಕಾಳಿಮಾತೆಗೆ ತಲೆ ಬಾಗಿದ್ದೇನೆ ಎಂಬುವುದಾಗಿದೆ. ಈ ಮಂತ್ರವನ್ನು ಬೆಳಗ್ಗೆ ಹಾಗೂ ಸಂಜೆ ಪಠಿಸುವುದರಿಂದ ಯಶಸ್ಸು ದೊರೆಯುವುದು.

Mahakali manthras

ಕಾಳಿ ದೇವಿಯ ಈ ಮಂತ್ರಗಳನ್ನು ಪಠಿಸಬಹುದು

* ಓಂ ಕ್ರೀಂ

* ಓಂ ಕ್ರೀಂ ಹ್ರುಂ ಹ್ರೀಂ,

* ಓಂ ಕ್ರೀಂ ಕಾಳಿಕೇ ಸ್ವಾಹಃ

Mahakali manthras

ಈ ಮಂತ್ರವನ್ನು ಪಠಿಸುವ ಮುನ್ನ ತಿಳಿದ ವ್ಯಕ್ತಿಯಿಂದ ಈ ಮಂತ್ರದ ಉಚ್ಛಾರಣೆ ಚೆನ್ನಾಗಿ ಕಲಿತು ನಂತರ ಪಠಿಸಿ. ವೃತ್ತಿಯಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭ ದೊರೆಯುವುದು. ಈ ಮಂತ್ರವನ್ನು ಪಠಿಸಲು ಒಂದು ಸಮಯ ನಿಗದಿ ಮಾಡಿ. ಆ ಸಮಯದಲ್ಲಿ ದೇವಿಯನ್ನು ಮನದಲ್ಲಿ ನೆನೆಸಿ, ಧ್ಯಾನ ಮಾಡುತ್ತಾ ಈ ಮಂತ್ರವನ್ನು ಪಠಿಸಿ. ಈ ಮಂತ್ರ ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಯೋಚನೆಗಳನ್ನು ತುಂಬುವುದು, ನಿಮಗೆ ಶಕ್ತಿ ದೊರೆತ ಅನುಭವ ಉಂಟಾಗುವುದು. ಈ ಮಂತ್ರವನ್ನು ಸಂಗಾತಿ ಜತೆ ಕುಳಿತು ಪಠಿಸಿದರೆ ಮತ್ತಷ್ಟು ಒಳ್ಳೆಯದು. ಮನೆ ಸದಸ್ಯರು ಜತೆಯಾಗಿ ಈ ಮಂತ್ರ ಜಪಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ, ಮನೆಗೆ ಐಶ್ವರ್ಯ ಬರುವುದು, ಎಲ್ಲಕ್ಕಿಂತ ಹೆಚ್ಚಾಗಿ ಕಾಳಿಮಾತೆಯ ಕೃಪೆ ಆ ಭಕ್ತರ ಮೇಲಿರುತ್ತದೆ.

Mahakali manthras

ಮಹಾಕಾಳಿ ಮಂತ್ರ ಪಠಿಸುವುದರಿಂದ ದೊರೆಯುವ ಪ್ರಯೋಜನಗಳು

* ಪ್ರತಿನಿತ್ಯ ಮಹಾಕಾಳಿ ಮಂತ್ರ ಪಠಣೆ ಮಾಡುವುದರಿಂದ ಶಕ್ತಿ, ಧೈರ್ಯ ದೊರೆಯುತ್ತದೆ, ಇದರಿಂದ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ದೊರೆಯುತ್ತದೆ.

* ಮಹಾಕಾಳಿ ಮಂತ್ರ ಪಠಿಸುವುದರಿಂದ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತದೆ, ದಂಪತಿಗೆ ಒಳಿತಾಗುವುದು.

* ಈ ಮಂತ್ರ ಪಠಿಸುವುದರಿಂದ ನಿಮ್ಮಲ್ಲಿ ಧನಾತ್ಮಕ ಗುಣ ಬೆಳೆಯುವುದು, ಯಾವುದೇ ವಿಷಯವನ್ನು ಖುಣಾತ್ಮವಾಗಿ ನೋಡುವ ಬದಲು ಧನಾತ್ಮಕವಾಗಿ ನೋಡಲು ಪ್ರಾರಂಭಿಸುತ್ತೀರಿ, ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ದೊರೆಯುವುದು.

* ಮಹಾಕಾಳಿಯ ಕೃಪೆಯಿಂದ ನಿಮ್ಮ ಬದುಕಿನಲ್ಲಿ ಅಸಾಧ್ಯವಾಗಿದ್ದನ್ನು ಕೂಡ ಸಾಧ್ಯವಾಗಿಸಬಹುದು. ಸಾಲದಿಂದ ಮುಕ್ತರಾಗಿ ಉತ್ತಮ ಆರ್ಥಿಕ ಸ್ಥಿತಿ ಹೊಂದಬಹುದು. ನಿಮ್ಮ ಬದುಕಿನಲ್ಲಿ ಪ್ರೀತಿ ತುಂಬಿರುತ್ತದೆ, ಬಯಸಿದ್ದನ್ನು ಸಾಧಿಸಬಹುದು.

* ಪ್ರತಿದಿನ ಮಹಾಕಾಳಿ ಮಂತ್ರ ಪಠಿಸುವುದರಿಂದ ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ದೊರೆಯುವುದು.

* ವಿದ್ಯಾರ್ಥಿಗಳು ಈ ಮಂತ್ರ ಪಠಿಸಿದರೆ ತುಂಬಾ ಒಳ್ಳೆಯದು, ಅವರ ಬುದ್ಧಿಶಕ್ತಿ ಚುರುಕಾಗುವುದು, ವಿದ್ಯಾಭಾಸಕ್ಕೆ ತೊಂದರೆ ಉಂಟಾಗುವುದಿಲ್ಲ.

* ಈ ಮಂತ್ರ ಪಠಿಸಿದರೆ ಗೊಂದಲ ನಿವಾರಣೆಯಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ನಿರ್ಧರಿಸಿ ಒಳ್ಳೆಯದನ್ನು ಮಾಡುತ್ತೀರಿ, ಇದರಿಂದ ಬದುಕಿನಲ್ಲಿ ಒಳ್ಳೆಯದೇ ಆಗುತ್ತದೆ.

Mahakali manthras

* ಈ ಮಂತ್ರ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ.

* ಈ ಮಂತ್ರ ಪಠಿಸುವುದರಿಂದ ಶಕ್ತಿ ದೊರೆಯುತ್ತದೆ. ಇದರಿಂದ ನಿಮಗೆ ಏನೋ ವಿಭಿನ್ನ ಶಕ್ತಿಯ ಅನುಭವ ಉಂಟಾಗುವುದು, ಈ ಧನಾತ್ಮಕ ಶಕ್ತಿ ಉತ್ತಮ ಕಾರ್ಯಗಳು ಮಾಡುವಂತೆ ಪ್ರೇರೇಪಿಸುತ್ತದೆ.

* ಮಹಾಕಾಳಿ ಮಂತ್ರ ಪಠಣೆ ಮಾಡುವುದರಿಂದ ಯಶಸ್ಸು ದೊರೆಯುವುದು, ಬದುಕಿನಲ್ಲಿ ಒಳ್ಳೆಯದಾಗುವುದು.

English summary

Mahakali manthras for success

Kali Matha Mantra is so powerful and also very simple to learn and chant. But While chanting Kali mantras with Beej,one must be very careful since mispronunciation will reverse the results.Those you chant Maa Kali mantra will get these benefits.
Story first published: Saturday, October 26, 2019, 15:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more