For Quick Alerts
ALLOW NOTIFICATIONS  
For Daily Alerts

ನವೆಂಬರ್‌ 30 ಚಂದ್ರಗ್ರಹಣ ರಾಶಿಗಳ ಮೇಲೆ ಬೀರುವ ಪ್ರಭಾವಗಳು

|

2020ರ ಕೊನೆಯ ಚಂದ್ರಗ್ರಹಣ ನವೆಂಬರ್‌ 30ಕ್ಕೆ ಸಂಭವಿಸಲಿದೆ. ವಿಜ್ಞಾನವೂ ಈ ಗ್ರಹಣ ಹೇಗೆ ನಡೆಯುತ್ತದೆ ಎಂಬುವುದನ್ನು ವೈಜ್ಞಾನಿಕ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. ಚಂದ್ರ, ಭೂಮಿ, ಸೂರ್ಯ ಒಂದೇ ಸರಳ ರೇಖೆಯಲ್ಲಿ ಬಂದಾಗ ಗ್ರಹಣ ಉಂಟಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರನಿಗೆ ಗ್ರಹಣ ಸಂಭವಿಸುತ್ತದೆ.

Lunar Eclipse November 2020

ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲಾಗಿದೆ. ಅಲ್ಲದೆ ಪ್ರತಿಯೊಂದು ಗ್ರಹಣ ನಡೆದಾಗ ಅದರ ಪ್ರಭಾವ ರಾಶಿಗಳ ಮೇಲಾಗುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ.

ಕಾರ್ತಿಕ ಪೌರ್ಣಿಮೆಯಂದು ನಡೆಯುವ ಚಂದ್ರಗ್ರಹಣ ನಿಮ್ಮ ರಾಶಿಗಳ ಮೇಲಾಗುವ ಪ್ರಭಾವವೇನು ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಮೇಷ ರಾಶಿಯವರಿಗೆ ಅಷ್ಟೊಂದು ಅನುಕೂರವಲ್ಲ. ಸ್ವಲ್ಪ ಆರ್ಥಿಕ ಸಮಸ್ಯೆ ಎದುರಾಗಬಹುದು, ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹು ಎಚ್ಚರವಹಿಸಬೇಕು. ಅಲ್ಲದೆ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದಾಗಿ ಚಿಂತೆ ಹೆಚ್ಚುವುದು, ನಿಮ್ಮ ಕೋಪವನ್ನು ನಿಯಂತ್ರಿಸಿ. ನಿಮ್ಮ ಕುಟುಂಬವರ ಜೊತೆ ಕೆಲವೊಂದು ವಾಗ್ವಾದ ಬರಬಹುದು. ಮುಂಬರುವ ವರ್ಷದಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಸರಿಹೋಗುವುದು.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ. ನಿಮಗೆ ಅಧಿಕ ಮಾನಸಿಕ ಒತ್ತಡದಿಂದಾಗಿ ಉಂಟಾಗಿರುವ ಆರೋಗ್ಯ ಸಮಸ್ಯೆ ದೂರವಾಗುವುದು. ಅಲ್ಲದೆ ನಿಮ್ಮ ಪ್ರೀತಿ ಪಾತ್ರರರ ಹಾಗೂ ಕುಟುಂಬದವರ ಬಗ್ಗೆ ಹೆಚ್ಚು ಕಾಳಜಿ ತೋರುತ್ತೀರಿ. ಈ ಸಮಯದಲ್ಲಿ ಯಾವುದೇ ಜಗಳಕ್ಕೆ ಹೋಗಬೇಡಿ. ನಿಮ್ಮ ತಾಯಿ ಅಥವಾ ಸಂಗಾತಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ನೀವು ಹೊಸ ಕೆಲಸ ಪ್ರಾರಂಭಿಸಲು ಬಯಸುವುದಾದರೆ ಇದು ಉತ್ತಮ ಸಮಯವಾಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಗ್ರಹಣ 12ನೇ ಮನೆಯಲ್ಲಿ ಸಂಭವಿಸಲಿದೆ. ನೀವು ಹೆಚ್ಚಿನ ಖರ್ಚು ಕಡಿಮೆ ಮಾಡಿ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಜಾಗೃತಿಯಾಗುವಿರಿ. ಅಲ್ಲದೆ ಮನೆಯಿಂದ ದೂರ ಇರುವವರಿಗೆ ಸ್ವಲ್ಪ ಭಯ, ಆತಂಕ ಕಾಡುವುದು. ಅನಗ್ಯತ ಖರ್ಚುಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಗ್ರಹಣ 11ನೇ ಮನೆಯಲ್ಲಿ ಸಂಭವಿಸಲಿದೆ. ಕೆಲಸದ ವಿಷಯದಲ್ಲಿ ನೋಡುವುದಾದರೆ ಕೊಟ್ಟ ಕೆಲಸವನ್ನು ನಿಮ್ಮ ಕೌಶಲ್ಯದಿಂದಾಗಿ ಸಮರ್ಥವಾಗಿ ನಿಭಾಯಿಸುವಿರಿ, ಇದರಿಂದ ನಿಮ್ಮ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಈ ಸಮಯದಲ್ಲಿ ವೃತ್ತಿಪರವಾಗಿ ಪ್ರಗತಿ ಉಂಟಾಗಲಿದೆ. ನಿಮ್ಮ ಒಡಹುಟ್ಟಿದವರ ಜೊತೆ ಸಂತೋಷವಾಗಿ ಇರುವಿರಿ. ನಿಮ್ಮ ಸಂಗಾತಿಯೊಂದಿಗೆ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

 ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರ 10ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಉಂಟಾಗಲಿದೆ. ನಿಮ್ಮ ವ್ಯವಹಾರ ಉತ್ತಮವಾಗುವುದು ಹಾಗೂ ಒಳ್ಳೆಯ ಲಾಭ ಗಳಿಸುವಿರಿ. ಆದರೆ ವ್ಯವಹಾರದಲ್ಲಿ ನಿರ್ಧಾರಗಳನ್ನುತೆಗೆದುಕೊಳ್ಳುವಾಗ ತುಂಬಾ ಎಚ್ಚರವಹಿಸಬೇಕು.

ಉದ್ಯೋಗದಾತರು ಮುಂಬರುವ ದಿನಗಳಲ್ಲಿ ಕೆಲವೊಂದು ಖರ್ಚುಗಳನ್ನು ನಿರೀಕ್ಷಿಸಬಹುದು. ನಿಮ್ಮ ತಂದೆಯ ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಬಹುದು.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಗ್ರಹಣ ಒಂಭತ್ತನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯದಲ್ಲಿ ನೀವು ಪವಿತ್ರ ಸ್ಥಳಕ್ಕೆ ಪ್ರಯಾಣ ಮಾಡುವಿರಿ. ನೀವು ಹೂಡಿಕೆಯಲ್ಲಿ ಯೋಜನೆ ರೂಪಿಸಿದರೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಆಧ್ಯಾತ್ಮದ ಕಡೆಯೂ ಒಲವು ತೋರುವಿರಿ. ಕೆಲಸದ ವಿಷಯದಲ್ಲಿ ದೂರ ಪ್ರಯಾಣ ಮಾಡುವಿರಿ. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದರಿಂದ ಧನಾತ್ಮಕ ಭಾವನೆ ಮೂಡುವುದು.

ತುಲಾ ರಾಶಿ

ತುಲಾ ರಾಶಿ

ವೃಶ್ಚಿಕ ರಾಶಿಯವರಲ್ಲಿ ಗ್ರಹಣ 8ನೇ ಮನೆಯಲ್ಲಿ ಸಂಭವಿಸುವುದರಿಂದ ಕೆಲ ಸವಾಲುಗಳು ಎದುರಾಗಲಿದೆ. ವೃತ್ತಿ ಹಾಗೂ ವೈಯಕ್ತಿಕ ವಿಷಯದಲ್ಲಿ ಹಲವು ಸವಾಲುಗಳು ಎದುರಾಗುವುದು. ಇದರಿಂದ ನೀವು ಕಿರಿಕಿರಿ ಅನುಭವಿಸುವಿರಿ. ವಿವಾಹಿತರು ಸಂಗಾತಿಯರ ಮನೆಯವರಿಂದ ಅಧಿಕ ಒತ್ತಡ ಅನುಭವಿಸುವಿರಿ. ಇದರಿಂದ ಕೌಟಂಬಿಕ ವಾತಾವರಣ ಅಹಿತರಕರವಾಗಿರುವುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಗ್ರಹಣ 7ನೇ ಮನೆಯಲ್ಲಿ ಸಂಭವಿಸಲಿದೆ. ನಿಮ್ಮ ಕಾರ್ಯಕ್ಕೆ ಸಂಗಾತಿಯಿಂದ ಒಳ್ಳೆಯ ಬೆಂಬಲ ಸಿಗುವುದು. ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಸ್ವಲ್ಪ ಎಚ್ಚರವಹಿಸಿ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತಿಲ್ಲ ಎಂದು ಅಸಮದಾನ ಉಂಟಾಗಬಹುದು. ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ನೀಡಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಗ್ರಹಣ 6ನೇ ಮನೆಯಲ್ಲಿ ಸಂಭವಿಸಲಿದೆ. ವೃಶ್ಚಿಕ ರಾಶಿಯವರಲ್ಲಿ ಏಳನೇ ಮನೆಯಲ್ಲಿ ಸಂಭವಿಸಲಿದೆ. ನೀವು ನಿಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಿರಿ, ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುವಿರಿ. ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಿದರೆ ಒಳ್ಳೆಯ ಲಾಭಗಳಿಸುವಿರಿ. ನೀವು ಒಂದು ಟ್ರಿಪ್ ಪ್ಲ್ಯಾನ್ ಮಾಡುವಿರಿ. ನಿಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡಬೇಡಿ.

 ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಗ್ರಹಣ 5ನೇ ಮನೆಯಲ್ಲಿ ಸಂಭವಿಸಲಿದೆ. ಈ ಹಂತದಲ್ಲಿ ವೃತ್ತಿಯಲ್ಲಿ ಎಲ್ಲವೂ ನಿಮಗೆ ಅನುಕೂಲಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಕೂಡ ಉತ್ತಮವಾಗುವುದು. ನಿಮ್ಮ ಕೆಲಸ ಇತರರಿಗಿಂತ ಭಿನ್ನವಾಗಿರುತ್ತದೆ, ಇದನ್ನು ನಿಮ್ಮ ಮೇಲಾಧಿಕಾರಿಗಳು ಗಮನಿಸುತ್ತಾರೆ ಕೂಡ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಗ್ರಹಣ 4ನೇ ಮನೆಯಲ್ಲಿ ಸಂಭವಿಸಲಿದೆ. ನಿಮ್ಮ ತಾಯಿಯ ಆರೋಗ್ಯ ಉತ್ತಮವಾಗುವುದು. ಮನೆಯ ರಿಪೇರಿಗೆ ಮನಸ್ಸು ಮಾಡುವಿರಿ. ಆಸ್ತಿ ಕೊಳ್ಳ ಬಯಸುವುದಾದರೆ ಇದು ಸೂಕ್ತ ಸಂಬಂಧ. ಕೆಲಸದ ಕಡೆ ಹೆಚ್ಚು ಶ್ರದ್ಧೆ ಇರಬೇಕು.

 ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವಲ್ಲಿ ಗ್ರಹಣ 3ನೇ ಮನೆಯಲ್ಲಿ ಸಂಭವಿಸುವುದು. ವೃತ್ತಿ ಜೀವನದಲ್ಲಿ ಜವಾಬ್ದಾರಿ ಹೆಚ್ಚುವುದು. ಧ್ಯಾನ , ಆಧ್ಯಾತ್ಮದ ಕಡೆ ಹೆಚ್ಚು ಗಮನ ನೀಡಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು, ಬಾಕಿ ಉಳಿದಿರುವ ಕೆಲಸದತ್ತ ಗಮನ ಹರಿಸುವಿರಿ.

English summary

Lunar Eclipse November 2020: Check timings, significance and how it will affect different zodiac signs

Lunar Eclipse November 2020: Check timings, significance and how it will affect different zodiac signs
Story first published: Thursday, November 26, 2020, 19:54 [IST]
X
Desktop Bottom Promotion