For Quick Alerts
ALLOW NOTIFICATIONS  
For Daily Alerts

ನಾಯಿಯಿಂದ ನಾವು ಕಲಿಯಬಹುದಾದ ಜೀವನ ಪಾಠಗಳಿವು

|

ಜೀವನ ಬಹಳ ಸರಳವಾಗಿದೆ, ನಾವು ಮನುಷ್ಯರೇ ಇದನ್ನು ಬಹಳ ಜಟಿಲಗೊಳಿಸಿಕೊಂಡಿದ್ದೇವೆ. ಜೀವನ ಬಂದಂತೆ ಅನುಭವಿಸುವ ಬಯಕೆಯೇ ಮನುಷ್ಯನಿಗೆ ಇದ್ದಂತಿಲ್ಲ. ಲಕ್ಷಾಂತರ ಸಂತೋಷದ ಕ್ಷಣಗಳ ನಡುವೆ ಅದನ್ನು ಬದಿಗಿಟ್ಟು, ಸಾಕಷ್ಟು ಆಸೆಗಳು, ನೂರೆಂಟು ಕನಸು, ಸಾವಿರಾರು ಸಮಸ್ಯೆಗಳ ನಡುವೆಯೇ ಕೊಳೆತು ಜೀವನ ನಡೆಸುವ ಹುಚ್ಚು ಹಂಬಲವನ್ನು ಹೊಂದುತ್ತಾನೆ.

Life Lessons We Can learn from dog

ನಮಗೆ ಹೋಲಿಸಿದರೆ ಪ್ರಾಣಿಗ ಪ್ರಪಂಚವೇ ಸುಖಮಯ, ಎಷ್ಟೇ ಸಮಸ್ಯೆಗಳ ನಡುವೆಯೂ ಇಂದಿನ ಬದುಕನ್ನು ಸುಖದಿಂದ ಜೀವಿಸುತ್ತದೆ. ನಿಮ್ಮ ಮನೆಯಲ್ಲೂ ನಾಯಿ ಇದ್ದರೆ ನೀವು ಸಹ ಇದನ್ನು ಪ್ರಾಯೋಗಿಕವಾಗಿ ಸಮೀಪದಿಂದ ಗಮನಿಸಬಹುದು. ಅಷ್ಟು ಚಿಕ್ಕ ಪ್ರಾಣಿ ಹೇಗೆ ಸಂತೋಷದಿಂದ ಕ್ಷಣಗಳನ್ನು ಜೀವಿಸುತ್ತಿದೆ ಎಂಬುದನ್ನು. ಅನುಕ್ಷಣ ಜೀವನ ಅನುಭವಿಸುವ ಕಲೆಯನ್ನು ನಾವು ಸಾಕಿರುವ ನಾಯಿಯಿಂದ ಸಹ ಕಲಿಯಬಹುದು.

ನಾಯಿಯಿಂದ ಏನೆಲ್ಲಾ ಜೀವನ ಪಾಠವನ್ನು ನಾವೂ ಅಳವಡಿಸಿಕೊಳ್ಳಬಹುದು, ಇಲ್ಲಿದೆ ಕೆಲವು ಸಲಹೆಗಳು...

1. ಪ್ರತಿ ದಿನ ಹೊಸ ಆರಂಭ

1. ಪ್ರತಿ ದಿನ ಹೊಸ ಆರಂಭ

ಮಳೆಯ ದಿನವಿರಲಿ, ಅದು ಬಿಸಿಲಾಗಿರಲಿ ನಾಯಿಗೆ ಪ್ರತಿ ನಿತ್ಯವೂ ತಾಜಾ ಆದ ಹೊಸ ದಿನವೇ. ದಿನಾ ಹೊಸ ಹುರುಪು, ಉತ್ಸಾಹದೊಂದಿಗೆ ದಿನವನ್ನು ಆರಂಭಿಸುತ್ತದೆ. ನಮ್ಮೆಲ್ಲಾ ಜಂಜಡಗಳ ನಡುವೆ ಈ ನಿಯಮವನ್ನು ನಾವೂ ಅಳವಡಿಸಿಕೊಂಡರೆ ನಮ್ಮ ದಿನವೂ ಉತ್ಸಾಹದಿಂದಿರುವುದರಲ್ಲಿ ಸಂಶಯವಿಲ್ಲ.

2. ಅನುಕ್ಷಣ ಜೀವಿಸು

2. ಅನುಕ್ಷಣ ಜೀವಿಸು

ನಾಯಿಗಳು ನಿಮ್ಮೊಂದಿಗೆ ಆಡುವಾಗ ಗಮನಿಸಿದ್ದೀರಾ ಎಷ್ಟು ಶಾಂತವಾಗಿರುತ್ತದೆ. ನೀವು ಅದಕ್ಕೆ ಏನನ್ನೆ ಆದೇಶಿಸಿದರೂ, ಬೈದರೂ ಸಹ ಅದು ಅಷ್ಟೇ ಶಾಂತ ನಡವಳಿಕೆಯಿಂದ ವರ್ತಿಸುತ್ತದೆ. ಕೋಪದಲ್ಲಿದ್ದಾಗ ಕೆಲವು ಕ್ಷಣಗಳು ಕೋಪಗೊಂಡರೂ ನಂತರ ಮರುಕ್ಷಣವೇ ಕೋಪವನ್ನು ಮರೆತು ನಮ್ಮೊಂದಿಗೆ ಒಂದಾಗುತ್ತದೆ. ಹೀಗೆ ನಾವೂ ದ್ವೇಷ, ಕೋಪದ ಕ್ಷಣಗಳನ್ನು ಮರೆತು ಎಲ್ಲರೊಂದಿಗೆ ಒಂದಾಗಿ ಜೀವಿಸಿದರೆ ಬದುಕು ಎಷ್ಟು ಸುಂದರ ಅಲ್ಲವೆ.

3. ಉತ್ಸಾಹಭರಿತ, ಸ್ವಾಭಾವಿಕ ಮತ್ತು ಚೇಷ್ಟೆ ಸ್ವಭಾವ

3. ಉತ್ಸಾಹಭರಿತ, ಸ್ವಾಭಾವಿಕ ಮತ್ತು ಚೇಷ್ಟೆ ಸ್ವಭಾವ

ನಾಯಿಯ ಸದಾ ಉತ್ಸಾಹಭರಿತ ಅಥವಾ ಚೇಷ್ಟೆಯ ನಡವಳಿಕೆಯಿಂದಾಗಿ ಎಷ್ಟೊ ಬಾರಿ ನಾವೂ ಸಹ ನಮ್ಮ ಎಲ್ಲಾ ಗೊಂದಲಗಳನ್ನು ಮರೆತು, ನಮ್ಮಲ್ಲು ಸಕಾರಾತ್ಮಕತೆಯನ್ನು ಹೆಚ್ಚಿಸಿರುತ್ತದೆ. ಅದರ ಪ್ರತಿಯೊಂದು ಸ್ವಾಭಾವಿಕ ಚಲನವಲನಗಳು ನಮ್ಮಲ್ಲಿ ಎಷ್ಟು ಆಸಕ್ತಿಯನ್ನು, ಉತ್ಸಾಹವನ್ನು ಹೆಚ್ಚಿಸಿರುತ್ತದೆ. ನಾಯಿ ಇರುವೆಡೆ ಸಾಮಾನ್ಯ ಮಂದವಾದ ವಾತಾವರಣ ಇರುವುದು ಕಡಿಮೆಯೇ. ಇಂತಹ ಕ್ಷಣಗಳು ನಮಗೆ ಮನಸ್ಸು ಹಾಗೂ ದೇಹವನ್ನು ಪುನರ್ ಯೌವ್ವನಗೊಳಿಸಲು ಸಹಕಾರಿಯಾಗುತ್ತದೆ. ನಾವೂ ಸಹ ಅದರಂತೆ ಸದಾ ಉತ್ಸಾಹ, ಚುರುಕಿನಿಂದ ಇರುವುದು ಒಳ್ಳೆಯದೇ ಅಲ್ಲವೇ.

4. ಊಟ, ಆಟ, ಪ್ರೀತಿ

4. ಊಟ, ಆಟ, ಪ್ರೀತಿ

ಊಟ, ಆಟ ಪ್ರೀತಿ ಇದಿಷ್ಟಿದ್ದರೆ ಸಾಕು ನಾಯಿ ಸಂತೋಷವಾಗಿರುತ್ತದೆ. ಬೇಕೆಂದಾಗ ಮಲಗಲು ಹಿತಕರ ಜಾಗ ಇಷ್ಟನ್ನು ಹೊರತು ಪಡಿಸಿ ಅದಕ್ಕೆ ಇನ್ನೇನು ಬೇಕಿಲ್ಲ. ಮನುಷ್ಯನಿಗೂ ಸಹ ದುಡಿಯಲು ಮಾರ್ಗ ಗೊತ್ತು, ಅದನ್ನು ಮೀರಿ ಊಟ, ಪ್ರೀತಿ ಸಾಕಲ್ಲವೇ. ಇನ್ನೇನು ಬೇಕು ಸಂತೋಷದ ಜೀವನಕ್ಕೆ.

5. ಒಳ್ಳೆಯ ಕೇಳುಗ

5. ಒಳ್ಳೆಯ ಕೇಳುಗ

ನಿಮ್ಮ ನಾಯಿಗೆ ಮಾತು ಬರುವುದಿಲ್ಲ ಅದಕ್ಕೆ ನಮ್ಮಂತೆ ಮಾತಿಲ್ಲ, ಆದರೂ ಅದು ನಿಮಗೆ ಪ್ರತಿಕ್ರಿಯಿಸುತ್ತದೆ ಅಲ್ಲವೇ. ಮಾತು ಬರದಿದ್ದರೂ ನಮ್ಮೊಂದಿಗೆ ಮನುಷ್ಯರಿಗಿಂತ ಹೆಚ್ಚಾಗಿ ಬೆರೆತಿದೆ ಅಲ್ಲವೆ. ಕಾರಣ ಬಹಳ ಜಾಣ್ಮೆಯಿಂದ ನಮ್ಮೆಲ್ಲಾ ಮಾತುಗಳನ್ನು ಆಲಿಸುತ್ತದೆ. ಅದಕ್ಕೆ ಅನುಗುಣವಾಗಿ ವರ್ತಿಸುತ್ತದೆ. ನಾವೂ ಸಹ ಉತ್ತಮ ಕೇಳುಗರಾಗೋಣ, ಹಲವು ಸಂದರ್ಭದಲ್ಲಿ ನಮ್ಮ ಕಿವಿಯೇ ನಮಗೆ ಅಸ್ತ್ರವಾಗಲೂ ಬಹುದು.

6. ಸ್ವಂತ ನಂಬಿಕೆ

6. ಸ್ವಂತ ನಂಬಿಕೆ

ಪಗ್, ಸ್ಪಿಟ್ಸ್ ಎಷ್ಟು ಸಣ್ಣ ತಳಿಯ ನಾಯಿಗಳು, ಆದರೆ ಇದು ಬಹುದೊಡ್ಡ ತಳಿಯ ನಾಯಿಗಳನ್ನು ಸಹ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಭಯ ಎಂಬುದು ನಮ್ಮ ಮನಸ್ಸು, ತಲೆಯಲ್ಲಿದೆ. ಇದನ್ನು ಹೊಡೆದೋಡಿಸಿದರೆ ನಾವೂ ಸಹ ಎಂಥಾ ಸಂದರ್ಭದಲ್ಲೂ ಧೈರ್ಯಗೆಡದೆ ಎದುರಿಸಬಹುದು.

7. ಹೊಸತನ್ನು ಪ್ರಯತ್ನಿಸು

7. ಹೊಸತನ್ನು ಪ್ರಯತ್ನಿಸು

ನಾಯಿ ಎಂದಿಗೂ ಹೊಸ ವಸ್ತುವನ್ನು ಸ್ಪರ್ಶಿಸಲು ಹೆದರುವುದೇ ಇಲ್ಲ. ಅವಕಾಶ ಕೊಟ್ಟರೆ ಆ ವಸ್ತು ಯಾವುದೇ ಆಗಿರಲಿ ಕಚ್ಚಿ ಬಿಸಾಡುತ್ತದೆ. ಹಾಗೆಯೇ ನಾವೂ ಸಹ ಹಲವು ಬಾರಿ ನಮಗೆ ಬಹುತೇಕ ವಿಷಗಳು ತಿಳಿದಿದ್ದರೂ ಕೂಡ ಮುಂದಿನ ಹೆಜ್ಜೆ ಹಾಕಲು ಹೆದರುತ್ತೇವೆ. ಇಂತಹ ಭಯವನ್ನು ಬಿಟ್ಟು ಮುನ್ನುಗ್ಗಬೇಕಷ್ಟೇ.

8. ಪ್ರೀತಿ ತೋರಿಸಿ

8. ಪ್ರೀತಿ ತೋರಿಸಿ

ನೀವು ಹೊರಗಿನಿಂದ ಮನೆಗೆ ಹೋಗುತ್ತಲೇ ಬಾಲ ಅಲ್ಲಾಡಿಸುತ್ತಾ ನಿಮ್ಮ ಓಡಿ ಬರುವುದು ಮುದ್ದಾದ ನಾಯಿ. ಅದೆಷ್ಟು ನಿಸ್ವಾರ್ಥ ಪ್ರೀತಿ ತೋರುತ್ತದೆ ಎಂದರೆ ನಿಮ್ಮ ಎಲ್ಲಾ ನೋವನ್ನು ಮರೆಸುತ್ತದೆ. ಯೋಚನೆ ಮಾಡಿ ನೀವು ಸಹ ಇದೇ ರೀತಿ ಸಂಬಂಧ ಸ್ನೇಹದಲ್ಲಿ ಎಲ್ಲವನ್ನು ಮರೆತು ಪ್ರೀತಿ, ಕಾಳಜಿ ತೋರಿದರೆ ಎಷ್ಟು ಅಂದವಾಗಿರುತ್ತದೆ ಪ್ರಪಂಚ.

9. ನಿಯತ್ತಿಗೆ ಮತ್ತೊಂದು ಹೆಸರು

9. ನಿಯತ್ತಿಗೆ ಮತ್ತೊಂದು ಹೆಸರು

ನಾಯಿ ನಿಯತ್ತಿಗೆ ಮತ್ತೊಂದು ಹೆಸರು. ಜನರು ನಿಮಗೆ ಎಷ್ಟೇ ಮೋಸ, ದ್ರೋಹ ಮಾಡಬಹುದು ಆದರೆ ನಾಯಿ ಎಂದಿಗೂ ನಿಮಗೆ ದ್ರೋಹ ಬಗೆಯುವ ಮಾತೇ ಇಲ್ಲ. ನೀವು ಅದಕ್ಕೆ ತೊಂದರೆ ನೀಡಿದರೂ ಸಹ ಅದು ಎಂದಿಗೂ ನಿಮ್ಮ ಸಹಾಯ, ನೀಡಿರುವ ಪ್ರೀತಿಯನ್ನು ಮರೆಯುವುದಿಲ್ಲ.

ನಾವೂ ಏಕೆ ಇಂತಹ ಕೆಲವು ಸದ್ಗುಣಗಳನ್ನು ಅಳವಡಿಸಿಕೊಳ್ಳಬಾರದು. ಮಾತು ಬಾರದ ನಾಯಿ ಎಷ್ಟೆಲ್ಲಾ ಉತ್ತಮ ಗುಣಗಳನ್ನು ಹೊಂದಿದೆ ಆದರೆ, ಮಾತನಾಡುವ, ಬುದ್ದಿಶಕ್ತಿ ಹೊಂದಿರುವ, ನಿತ್ಯ ಜನರನ್ನು ಭೇಟಿ ಮಾಡುವ, ವ್ಯವಹರಿಸುವ ನಮಗೆ ಇಂತಹ ಗುಣಗಳು ಅವಶ್ಯವಲ್ಲವೆ?!.

English summary

Life Lessons We Can learn from dog

Life is as simple as the Zen teaching above. But we, as human beings, are complicated creatures. If you have a pet though, it’s easy to see, from close quarters, how little they need to stay happy. Here are some simple things have learnt from my dog.
Story first published: Saturday, September 21, 2019, 10:42 [IST]
X
Desktop Bottom Promotion