For Quick Alerts
ALLOW NOTIFICATIONS  
For Daily Alerts

ಅನುರಾಧ ನಕ್ಷತ್ರಕ್ಕೆ ಕೇತು ಸಂಚಾರ: 12 ರಾಶಿಗಳ ಮೇಲೆ ಬೀರುವ ಪರಿಣಾಮವೇನು?

|

ಜ್ಯೋತಿಷ್ಯದಲ್ಲಿ ರಾಹು ಹಾಗೂ ಕೇತು ಗ್ರಹಗಳನ್ನು ಕ್ರೂರ ಗ್ರಹಗಳು ಎಂದು ಹೇಳಲಾಗುವುದು. ಈ ಎರಡೂ ಗ್ರಹಗಳು ಬರೀ ಅಶುಭ ಫಲಗಳನ್ನು ಮಾತ್ರ ನೀಡುವುದು ಎಂದು ನಂಬಲಾಗಿದೆ, ಒಂದು ವೇಳೆ ಈ ಗ್ರಹಗಳ ಉಚ್ಛ ಸ್ಥಿತಿಯಲ್ಲಿದ್ದರೆ ಶುಭ ಫಲಿತಾಂಶ ದೊರೆಯುವುದು, ಆದ್ದರಿಂದ ರಾಹು-ಕೇತು ಬರೀ ಕೆಡುಕೇ ಉಂಟು ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇನ್ನು ಕೇತು ಸಂಚಾರದ ಬಗ್ಗೆ ಹೇಳುವುದಾದರೆ ಇದು ಒಂದು ರಾಶಿಯಲ್ಲಿ 18 ತಿಂಗಳು ಇರಲಿದೆ. ಈ ವರ್ಷ ಕೇತು ಯಾವುದೇ ರಾಶಿಗೆ ಕೇತು ಸಂಚಾರವಿಲ್ಲ, ಆದರೆ ನಕ್ಷತ್ರಗಳನ್ನು ಬದಲಾಯಿಸುವುದು. ಜೂನ್‌ 2ಕ್ಕೆ ಜ್ಯೇಷ್ಠ ನಕ್ಷತ್ರದ ಮೊದಲನೇ ಹಂತದಿಂದ ಅನುರಾಧ ನಕ್ಷತ್ರದ ನಾಲ್ಕನೇ ಹಂತವನ್ನು ಪ್ರವೇಶಿಸಿದೆ,

ಕೇತು ಸಂಚಾರ 2021: ಸಾಮಾನ್ಯ ಪ್ರಭಾವ
ಕೇತು ಅನುರಾಧ ನಕ್ಷತ್ರಕ್ಕೆ ಸಂಚರಿಸಿದೆ. ಅನುರಾಧ ನಕ್ಷತ್ರದ ಅಧಿಪತಿ ಶನಿ. ಶನಿಯ ಕೆಲ ಗುಣಗಳು ಕೇತುವಿನಲ್ಲಿಯೂ ಇದೆ. ಇದರ ಪರಿಣಾಮವಾಗಿ ಈ ಸಂಚಾರ ವಿಶೇಷ ಫಲಿತಾಂಶ ನೀಡಲಿದೆ. ಕೇತು ಅಂದ್ರೆ ಧಾರ್ಮಿಕತೆ, ಅತೀಂದ್ರಿಯ ಜಗತ್ತು, ಏಕಾಂತತೆ. ಅನುರಾಧ ನಕ್ಷತ್ರ ಮನಸ್ಸಿನ ಬಯಕೆಯನ್ನು ಹೇಳುತ್ತದೆ.

ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ಈಡೇರದ ಆಸೆಗಳು ಈಡೇರುವುದು. ಸಂಶೋಧನೆ, ಧಾರ್ಮಿಕ ಕಾರ್ಯಗಳು, ಜ್ಯೋತಿಷ್ಯ ಸಂಬಂಧಿತ ಕಾರ್ಯಗಳಿಗೆ ಯಶಸ್ವಿ ಸಿಗುವುದು. ಆದರೆ ಸಂಬಂಧದಲ್ಲಿ ಸ್ವಲ್ಪ ಒತ್ತಡ ಸಾಧ್ಯ.

12 ರಾಶಿಗಳ ಮೇಲೆ ಇದರ ಪ್ರಭಾವ ನೋಡೋಣ:

ಮೇಷ ರಾಶಿ:

ಮೇಷ ರಾಶಿ:

ಮೇಷ ರಾಶಿಯವರಲ್ಲಿ ಕೇತು 8ನೇ ಸ್ಥಾನದಲ್ಲಿ ಇರುವುದರಿಂದ ಅಷ್ಟು ಅನುಕೂಲಕರವಲ್ಲ. ಇದರಿಂದಾಗಿ ಜೀವನದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಬಹುದು. ವೃತ್ತಿ ಜೀವನದಲ್ಲಿ ಏರಳಿತ ಉಂಟಾಗುವುದು. ಆರ್ಥಿಕ ದೃಷ್ಟಿಯಿಂದಲೂ ಸಮಯ ಸರಿಯಿಲ್ಲ. ಹಣ ಕಳೆದುಕೊಳ್ಖುವ ಸಾಧ್ಯತೆ ಇದೆ, ಇದರಿಂದ ಮಾನಸಿಕ ಒತ್ತಡ ಹೆಚ್ಚುವುದು. ಆದ್ದರಿಂದ ಹಣದ ವಿಷಯದಲ್ಲಿ ಎಚ್ಚರವಹಿಸಿ.

ಆರೋಗ್ಯದ ಬಗ್ಗೆ ಹೇಳುವುದಾದರೆ ಪೈಲ್ಸ್‌ನಂಥ ಸಮಸ್ಯೆ ಬರಬಹುದು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಇನ್ನು ವೈಯಕ್ತಿಕ ಬದುಕಿನಲ್ಲೂ ಕೆಲ ಸಮಸ್ಯೆ ಎದುರಾಗಬಹುದು. ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ. ಧಾರ್ಮಿಕತೆ ಕಡೆಗೆ ಒಲವು ಹೆಚ್ಚುವುದು.

ಪರಿಹಾರ: ಕೇತು ಬೀಜಿ ಮಂತ್ರ ಪಠಿಸಿ.

ವೃಷಭ ರಾಶಿ

ವೃಷಭ ರಾಶಿ

ಕೇತು ಈ ವರ್ಷ ವೃಷಭ ರಾಶಿಯವರಲ್ಲಿ 7ನೇ ಮನೆಯಲ್ಲಿರುತ್ತಾನೆ. ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ಮಿಶ್ರಫಲ. ಸಮಾಜದಲ್ಲಿ ಗೌರವ ಹೆಚ್ಚಾಗುವುದು, ಸಂಗಾತಿ ಕೂಡ ವೃತ್ತಿ ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಆದರೆ ಆರೋಗ್ಯದ ಬಗ್ಗೆ ತುಂಬಾ ಜಾಗೃತೆವಹಿಸಬೇಕು.

ಕೇತುವಿನ ಈ ಸಂಚಾರ ನಿಮ್ಮ ಹಾಗೂ ಸಂಗಾತಿ ನಡುವೆ ಮನಸ್ತಾಪ ತರಬಹುದು, ಇದು ನಿಮ್ಮ ಚಿಂತೆ ಹೆಚ್ಚಿಸುವುದು. ಸಂಬಂಧದಲ್ಲಿ ಸಮಸ್ಯೆ ಹೆಚ್ಚಾಗದಂತೆ ಎಚ್ಚರವಹಿಸಿ. ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಗಳಿಸಬಹುದು.

ಪರಿಹಾರ: ಶುಕ್ರವಾರದಿಂದ 43 ದಿನದವರೆಗೆ ದುರ್ಗಾ ಚಾಲೀಸ ಮಂತ್ರ ಪಠಿಸಿ.

 ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಕೇತು 6ನೇ ಮನೆಯಲ್ಲಿರುತ್ತಾನೆ. ಇದನ್ನು ಜಗಳ, ಸಾಲ, ಕಾಯಿಲೆ ಮನೆಯೆಂದು ಪರಿಗಣಿಸಲಾಗಿದೆ. ಈ ಸಂಚಾರ ಮಿಥುನರಾಶಿಯವರಿಗೆ ಸಾಮಾನ್ಯವಾಗಿದೆ. ನಿಮಗೆ ಸಾಲವಿದ್ದರೆ ಈ ಅವಧಿಯಲ್ಲಿ ಮರುಪಾವತಿ ಮಾಡಲು ಸಾಧ್ಯವಾಗುವುದು. ಆದರೆ ಆರೋಗ್ಯದ ದೃಷ್ಟಿಯಿಂದ ಈ ಸಮಯ ಅಷ್ಟು ಅನುಕೂಲಕರವಾಗಿಲ್ಲ. ಅಲ್ಲದೆ ಈ ಸಮಯದಲ್ಲಿ ಕೆಲದಲ್ಲಿ ಕೆಲವು ಅಡೆತಡೆ ಉಂಟಾಗಬಹುದು. ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನ ನೀಡಬೇಕು.

ಪರಿಹಾರ:ಮನೆ ಮೇಲೆ ಕೆಂಪು ಬಣ್ಣದ ಧ್ವಜ ನೆಡಿ.

 ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯಲ್ಲಿ ಕೇತು ಈ ವರ್ಷ 5ನೇ ಮನೆಯಲ್ಲಿರುವುದು. ಈ ಅವಧಿಯಲ್ಲಿ ಧಾರ್ಮಿಕತೆ ಕಡೆಗೆ ನಿಮ್ಮ ಒಲವು ಹೆಚ್ಚುವುದು. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಈ ಸಂಚಾರ ಅವಧಿಯಲ್ಲಿ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ, ವೃತ್ತಿ ಜೀವನದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು.

ಪರಿಹಾರ: ಬೀದಿ ನಾಯಿಗಳಿಗೆ ಆಹಾರ ನೀಡಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಕೇತು ಈ ವರ್ಷ 4ನೇ ಮನೆಯಲ್ಲಿರುವುದು. ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ಕುಟುಂಬದಲ್ಲಿ ಕೆಲ ಸಮಸ್ಯೆ ಉದ್ಭವವಾಗಬಹುದು. ಕುಟುಂಬದಲ್ಲಿ ಒತ್ತಡ ಹೆಚ್ಚುವುದು. ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡಬಹುದು. ವೃತ್ತಿ ಜೀವನದಲ್ಲಿ ಏರಳಿತ ಉಂಟಾಗಬಹುದು, ಮಾನಸಿಕ ಒತ್ತಡ ಹೆಚ್ಚಾಗುವುದು.

ಪರಿಹಾರ: ಕೇತು ಗ್ರಹದ ಮಂತ್ರ ದಿನಾ ಪಠಿಸಿ.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಕೇತು 3ನೇ ಮನೆಯಲ್ಲಿರುತ್ತಾನೆ. ಕೇತುವಿನ ಈ ಸಂಚಾರ ನಿಮಗೆ ಅದೃಷ್ಟವನ್ನು ತರಲಿದೆ. ವ್ಯವಹಾರಕ್ಕೆ ಸಂಬಂಧಿಸಿದ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಪ್ರೇಮಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ವಿದ್ಯಾರ್ಥಿಗಳೂ ಒಳ್ಳೆಯ ಫಲಿತಾಂಶ ನಿರೀಕ್ಷೆ ಮಾಡಬಹುದು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.

ಪರಿಹಾರ: ಕೇತು ಬೀಜಿ ಮಂತ್ರ ಹೇಳಿ ಹವನ ಮಾಡಿ.

 ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯಲ್ಲಿ ಕೇತು 2ನೇ ಮನೆಯಲ್ಲಿರುತ್ತಾನೆ. ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ಮಿಶ್ರಫಲ ಲಭಿಸಲಿದೆ. ಒಂದು ಕಡೆ ಆಸ್ತಿ ವಿಷಯದಲ್ಲಿ ಲಾಭ ಉಂಟಾಗುವುದು ಮತ್ತೊಂದೆಡೆ ವೃತ್ತಿ ಬದುಕಿನಲ್ಲಿ ಸಂವಹನದ ಸಮಸ್ಯೆಯಿಂದಾಗಿ ಸಮಸ್ಯೆ ಬರಬಹುದು. ವೈವಾಹಿಕ ಜೀವನದಲ್ಲಿ ಒತ್ತಡ ಕಂಡು ಬರಬಹುದು. ನಿಮ್ಮ ಆರೋಗ್ಯದ ಕಡೆ ಜಾಗ್ರತೆ. ವಿದ್ಯಾರ್ಥಿಗಳಿಗೆ ಈ ವಧಿ ಅನುಕೂಲಕರವಾಗಿದೆ.

ಪರಿಹಾರ: ಗಣೇಶನಿಗೆ ಗರಿಕೆ ಅರ್ಪಿಸಿ.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕೇತು ಈ ವರ್ಷ ವಶ್ಷಿಕ ರಾಶಿಯ ಮೊದಲನೇ ಮನೆಯಲ್ಲಿ ಇರಲಿದೆ. ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಜನರು ನಿಮ್ಮ ಮಾತನ್ನ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಇದರಿಂದ ನಿಮಗೆ ಗೊಂದಲ ಉಂಟಾಗುವುದು. ನಿಮ್ಮ ಕಠಿಣ ಪರಿಶ್ರಮದಿಂದಾಗಿ ವೃತ್ತಿ ಬದುಕಿನಲ್ಲಿ ಯಶಸ್ವಿ ಕಾಣುವಿರಿ. ಆರೋಗ್ಯದ ಕಡೆ ಗಮನ ಹರಿಸಿ, ಕೋಪವನ್ನು ನಿಯಂತ್ರಿಸಿ.

ಪರಿಹಾರ: ಕೇತು ಬೀಜಿ ಮಂತ್ರ ಪಠಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯಲ್ಲಿ ಕೇತು 12ನೇ ಮನೆಯಲ್ಲಿರುತ್ತಾನೆ. ಕೇತು ಅನುರಾಧ ನಕ್ಷತ್ರದಲ್ಲಿ ಇರುವುದರಿಂದ ಖರ್ಚು ಹೆಚ್ಚಾಗುವುದು. ನೀವು ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಆರೋಗ್ಯ ಹಾಗೂ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ವಿದೇಶಕ್ಕೆ ಹೋಗ ಬಯಸುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾದೀತು.

ಪರಿಹಾರ: ಕೇತು ಬೀಜಿ ಮಂತ್ರ ಪಠಿಸಿ.

 ಮಕರ ರಾಶಿ

ಮಕರ ರಾಶಿ

ಮಕರ ರಾಶಿಯಲ್ಲಿ ಕೇತು 11ನೇ ಮನೆಯಲ್ಲಿರುತ್ತಾನೆ. ಕೇತು ಅನುರಾಧ ನಕ್ಷತ್ರದಲ್ಲಿರುವುದು ಮಕರ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವುದು. ಇನ್ನು ಹೊಸ ವ್ಯವಹಾರಕ್ಕೆ ಕೈ ಹಾಕಲು ಕೂಡ ಈ ಸಮಯ ಅನುಕೂಲಕರವಾಗಿದೆ. ಒಟ್ಟಿನಲಲ್ಇ ಮಕರ ರಾಶಿಯವರಿಗೆ ಎಲ್ಲಾ ರೀತಿಯಿಂದಲೂ ಈ ಸಂಚಾರ ಅನುಕೂಲಕರವಾಗಿದೆ.

ಪರಿಹಾರ: ಕಂದು ಬಣ್ಣದ ನಾಯಿಗೆ ಆಹಾರ ನೀಡಿ.

ಕುಂಭ ರಾಶಿ

ಕುಂಭ ರಾಶಿ

ಕೇತು ಕುಂಭ ರಾಶಿಯಲ್ಲಿ 10ನೇ ಮನೆಯಲ್ಲಿರುತ್ತಾನೆ. ಕೇತು ಅನುರಾಧ ನಕ್ಷತ್ರದಲ್ಲಿರುವುದರಿಂದ ವೃತ್ತಿ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಆದರೆ ನೀವು ಕಠಿಣ ಪರಿಶ್ರಮದಿಂದ ಫಲ ಪಡೆಯಬಹುದು. ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಅನುಕೂಲಕರವಾಗಿದೆ. ಕೆಲಸದ ಒತ್ತಡದಿಂದ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಕುಟುಂಬ ಹಾಗೂ ಆರೋಗ್ಯ ಎರಡರ ಕಡೆಯೂ ಗಮನ ಹರಿಸಿ.

ಪರಿಹಾರ: ಮಂಗಳವಾರ ರಕ್ತದಾನ ಮಾಡಿ.

 ಮೀನ ರಾಶಿ

ಮೀನ ರಾಶಿ

ಮೀನ ರಾಶಿಯಲ್ಲಿ ಕೇತು 9ನೇ ಮನೆಯಲ್ಲಿದ್ದಾನೆ. ಮೀನ ರಾಶಿಯವರಿಗೆ ಕೇತು ಅನುರಾಧ ನಕ್ಷತ್ರಕ್ಕೆ ಸಂಚಾರ ಮಾಡಿರುವುದರಿಂದ ಅನುಕೂಲಕರವಾದ ಪರಿಸ್ಥಿತಿ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುವುದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗುವುದು. ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಕೆಲವೊಂದು ಸಮಸ್ಯೆ ಬರಬಹುದು. ನಿಮ್ಮ ಒಡ ಹುಟ್ಟಿದವರು ಆರೋಗ್ಯ ಹಾಗೂ ಆರ್ಥಿಕ ಸಂಬಂಧಿಸಿದ ಸಮಸ್ಯೆ ಎದುರಿಸಬಹುದು. ನಿಮ್ಮ ಮೇಲಾಧಿಕಾರಿಯೊಂದಿಗೆ ನಿಮ್ಮ ವರ್ತನೆ ಸರಿಯಾಗಿರಲಿ.

ಪರಿಹಾರ: ಪ್ರತಿದಿನ ಭೈರವ ಚಾಲೀಸ ಮಂತ್ರ ಪಠಿಸಿ.

English summary

Ketu Nakshatra Transit 2021 In Anuradha Nakshatra: Effects on all zodiac signs in kannada

Ketu Transit 2021 In Anuradha Nakshatra : Let us know each zodiac signs will be impacted majorly by this Ketu transit. Impact Of Ketu Transit On Zodiac Signs in kannada.
X
Desktop Bottom Promotion