For Quick Alerts
ALLOW NOTIFICATIONS  
For Daily Alerts

Kamada Ekadashi 2021 : ಏ.23ಕ್ಕೆ ಕಾಮದ ಏಕಾದಶಿ: ಶುಭ ಮುಹೂರ್ತ ಹಾಗೂ ಈ ಏಕಾದಶಿಯ ಮಹತ್ವ

|

ಪಂಚಾಂಗದ ಪ್ರಕಾರ ಏಪ್ರಿಲ್‌ 23ರಂದು ಕಾಮದ ಏಕಾದಶಿ ಆಚರಿಸಲಾಗುವುದು. ಚೈತ್ರಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿ ಹಿಂದೂ ಹೊಸ ವರ್ಷದ ಮೊದಲ ಏಕಾದಶಿಯಾಗಿದ್ದು ಇದನ್ನು ಕಾಮದ ಏಕಾದಶಿಯೆಂದು ಆಚರಿಸಲಾಗುವುದು. ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ದಿನ. ಈ ದಿನ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.

Kamada ekdashi 2021

ಒಂದೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಈ ದಿನ ವಿಷ್ಣುವನ್ನು ಆರಾಧನೆ ಮಾಡುವುದರಿಂದ ವಿಷ್ಣು ನಿಮ್ಮ ಎಲ್ಲಾ ಆಸೆ ಈಡೇರಿಸುತ್ತಾನೆ ಹಾಗೂ ಜೀವನದಲ್ಲಿ ಬರುವ ತೊಂದರೆಗಳನ್ನೂ ನಿವಾರಿಸುತ್ತಾನೆ ಎಂಬ ನಂಬಿಕೆ ವಿಷ್ಣು ಭಕ್ತರಲ್ಲಿದೆ. ಕಾಮದ ಏಕಾದಶಿಯು ಶುಭ ಕಾರ್ಯಕ್ಕೆ ಯೋಗ್ಯವಾದ ದಿನ ಎಂದು ಹೇಳಲಾಗುವುದು. ಕಾಮದ ಏಕಾದಶಿಯ ತಿಥಿ, ಶುಭ ಸಮಯ, ಪಾರಣ ಸಮಯ ಹಾಗೂ ಈ ಏಕಾದಶಿಯ ಮಹತ್ವದ ಬಗ್ಗೆ ಹೇಳಲಾಗಿದೆ ನೋಡಿ:

ಏಪ್ರಿಲ್ 23 ರಂದು ಅಂದ್ರೆ ಕಾಮದ ಏಕಾದಶಿಯಂದು ವಿಶೇಷ ಯೋಗವಿದೆ

ಏಪ್ರಿಲ್ 23 ರಂದು ಅಂದ್ರೆ ಕಾಮದ ಏಕಾದಶಿಯಂದು ವಿಶೇಷ ಯೋಗವಿದೆ

ಹಿಂದೂ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ 23 ರಂದು ವಿಶೇಷ ಯೋಗವಿದ್ದು ಅನೇಕ ಶುಭ ಯೋಗಗಳನ್ನು ಸಹ ನಿರ್ಮಿಸಲಾಗುತ್ತಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುವವರಿಗೆ ಈ ದಿನ ಒಳ್ಳೆಯದು. ಈ ದಿನ ಹೊಸ ಕಾರ್ಯ ಮಾಡಿದರೆ ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಕಾಮದ ಏಕಾದಶಿ ವೃದ್ಧಿ ಹಾಗೂ ಧ್ರುವ ಯೋಗದಲ್ಲಿ ಕಂಡು ಬರುತ್ತದೆ.

ವೃದ್ಧಿ ಯೋಗವು 02ರಿಂದ 40 ನಿಮಿಷಗಳವರೆಗೆ ಇರುತ್ತದೆ ಮತ್ತು ಇದರ ನಂತರ ಧ್ರುವ ಯೋಗ ಪ್ರಾರಂಭವಾಗುತ್ತದೆ. ಈ ಎರಡೂ ಯೋಗಗಳು ಶುಭ ಕೆಲಸಕ್ಕೆ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಕಾಮದ ಏಕಾದಶಿ ತಿಥಿ ಸಮಯ

ಕಾಮದ ಏಕಾದಶಿ ತಿಥಿ ಸಮಯ

ಕಾಮದ ಏಕಾದಶಿ 2021 ತಿಥಿ ಪ್ರಾರಂಭ: 22, ಗುರುವಾರ, ರಾತ್ರಿ 11:35ಕ್ಕೆ

ಕಾಮದ ಏಕಾದಶಿ 2021 ತಿಥಿ ಮುಕ್ತಾಯ: 23 ಶುಕ್ರವಾರ, ರಾತ್ರಿ 09:47ರವರೆಗೆ

ಏಕಾದಶಿ ತಿಥಿ ಪಾರಣ ಸಮಯ: ಏಪ್ರಿಲ್ 24, ಬೆಳಗ್ಗೆ 05:47ರಿಂದ 8:24ರವರೆಗೆ

ಕಾಮದ ಏಕಾದಶಿ ಉಪವಾಸ ವಿಧಾನ

ಕಾಮದ ಏಕಾದಶಿ ಉಪವಾಸ ವಿಧಾನ

ಏಪ್ರಿಲ್ 23 ರ ಬೆಳಿಗ್ಗೆ ಮುಂಜಾನೆ ಎದ್ದು ಸ್ನಾನ ಮಾಡಿ ಮುಡಿಯುಟ್ಟು ಉಪವಾಸವಿದ್ದು ವಿಷ್ಣುವನ್ನು ಆರಾಧಿಸಿ. ನೀರು, ಹಣ್ಣುಗಳು, ಹೂಗಳು, ಸಿಹಿ ತಿಂಡಿ ಇವುಗಳನ್ನು ಅರ್ಪಿಸಿ. ವಿಷ್ಣುವಿಗೆ ಹಳದಿ ಬಣ್ಣ ಹೆಚ್ಚು ಪ್ರಿಯವಾಗಿದೆ. ಆದ್ದರಿಂದ, ಪೂಜೆಯಲ್ಲಿ ಹಳದಿ ಹೂಗಳು, ಹಣ್ಣುಗಳು ಹಾಗೂ ತಿಂಡಿಗಳನ್ನು ಬಳಸಿ. ನಂತರ ವಿಷ್ಣುವಿನ ಮಂತ್ರವನ್ನು ಪಠಿಸಿ.

 ಕಾಮದ ಏಕಾದಶಿ ಮಹತ್ವ

ಕಾಮದ ಏಕಾದಶಿ ಮಹತ್ವ

ಈ ಏಕಾದಶಿ ವ್ರತ ಮಾಡುವುದರಿಂದ ಬಯಸಿದೆಲ್ಲಾ ನೆರವೇರುವುದು. ಆದ್ದರಿಂದ ಭಕ್ತರಿಗೆ ಈ ದಿನ ತುಂಬಾನೇ ವಿಶೇಷವಾದದ್ದು ಆಗಿದೆ. ಈ ದಿನ ಉಪವಾಸವ್ರತವಿದ್ದು ವಿಷ್ಣುವಿನ ಧ್ಯಾನ ಮಾಡಲಾಗುವುದು. ದಿನದ ಕೊನೆಯಲ್ಲಿ ಸತ್ಯ ನಾರಾಯಣ ಕತೆ ಓದಿ.

 ಕಾಮದ ಏಕಾದಶಿಯ ಇತಿಹಾಸ

ಕಾಮದ ಏಕಾದಶಿಯ ಇತಿಹಾಸ

ಕಾಮದ ಏಕಾದಶಿ ಕತೆಯನ್ನು ವರಹಾ ಪುರಾಣದಲ್ಲಿ ಹೇಳಲಾಗಿದೆ. ರತ್ನಪುರಾ ಎಂಬ ರಾಜ್ಯದಲ್ಲಿ ಲಲಿತ್ ಹಾಗೂ ಲಲಿತಾ ಎಂಬ ದಂಪತಿ ಇರುತ್ತಾರೆ. ಆ ರಾಜ್ಯವನ್ನು ಪುಂಡರಿಕ ಎಂಬ ರಾಜ ಆಳುತ್ತಿದ್ದ. ಲಲಿತ್‌ ಆಸ್ಥಾನದಲ್ಲಿ ಸಂಗೀತಗಾರನಾಗಿದ್ದರೆ ಲಿಲಿತಾ ಆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಳು.

ಒಂದು ದಿನ ಲಲಿತ್ ಸಂಗೀತ ನುಡಿಸುವಾಗ ಆತನ ಹೆಂಡತಿಯನ್ನು ಗಮನಿಸುತ್ತಾನೆ, ಏಕೋ ಅವಳು ಬೇಸರಿದಿಂದ ಇರುವಂತೆ ಕಾಣುತ್ತಾಳೆ, ಅವಳ ಬಗ್ಗೆ ಚಿಂತಿಸುತ್ತಾ ಸಂಗೀತದ ತಾಳ ತಪ್ಪಿಸುತ್ತಾನೆ. ಆಗ ಅಲ್ಲಿದ್ದ ಕಾರ್ಲೋಟಕ ಸರ್ಪ ರಾಜನಿಗೆ ಲಲಿತ್ ಬಗ್ಗೆ ದೂರು ನೀಡುತ್ತಾನೆ.

ನನಗಿಂತ ಹೆಂಡತಿಗೆ ಪ್ರಾಮುಖ್ಯತೆ ನೀಡಿದ್ದಕ್ಕೆ ರಾಜನು ನೀನೊಬ್ಬ ನರ ಭಕ್ಷಕನು ಆಗು ಎಂದು ಶಾಪ ನೀಡುತ್ತಾನೆ. ಲಲಿತಾ ಪತಿಯನ್ನು ಹುಡುಕು ಕಾಡಿನಲ್ಲಿ ಅಲಿಯುತ್ತಾ ಇರುವಾಗ ಆಕೆಗೆ ಶ್ರಿಂಘಿ ಋಷಿ ಸಿಗುತ್ತಾರೆ. ಅವರು ಆಕೆಗೆ ಕಾಮದ ಏಕಾದಶಿಯ ಮಹತ್ವ ಹೇಳಿ ಅದನ್ನು ಆಚರಿಸಲು ತಿಳಿಸುತ್ತಾರೆ. ಅದರಂತೆ ಆಕೆ ಭಕ್ತಿಯನ್ನು ವಿಷ್ಣುವನ್ನು ಆರಾಧಿಸಿ ಪತಿಯನ್ನು ಶಾಪ ವಿಮೋಚನೆಗೊಳಿಸುತ್ತಾಳೆ.

English summary

Kamada Ekadashi 2021 Date, Subh Muhurt And Significance in Hindi

Kamada ekadashi 2021 date, subh muhurt and significance, read on...
X
Desktop Bottom Promotion