For Quick Alerts
ALLOW NOTIFICATIONS  
For Daily Alerts

ಜ್ಯೇಷ್ಠ ಪೂರ್ಣಿಮಾ ವ್ರತ 2021: ಪೂಜಾ ವಿಧಿ ಹಾಗೂ ಈ ದಿನದ ವಿಶೇಷವೇನು?

|

ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸವೇ ತುಂಬಾ ವಿಶೇಷವಾದದ್ದು. ಈ ತಿಂಗಳಿನಲ್ಲಿ ಗಂಗಾ ದಸರಾ, ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ, ಅದರಲ್ಲೊಂದು ಜ್ಯೇಷ್ಠ ಪೂರ್ಣಿಮಾ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ಜೂನ್‌ 24ರಂದು ಬಂದಿದೆ. ಜ್ಯೇಷ್ಠ ಪೂರ್ಣಿಮಾ ದಿನ ವಿಷ್ಣು ಹಾಗೂ ಶಿವನನ್ನು ಪೂಜಿಸಲಾಗುವುದು. ಈ ದಿನ ಪವಿತ್ರ ನದಿಯಲ್ಲಿ ಅಥವಾ ಸ್ನಾನದ ನೀರಿನಲ್ಲಿ ಗಂಗಾಜಲ ಹಾಕಿ ಸ್ನಾನ ಮಾಡಿ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.

ಈ ದಿನದ ವಿಶೇಷತೆ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೋಡಿ.

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ

ಪೂರ್ಣಿಮಾ ಪ್ರಾರಂಭ: ಜೂನ್ 23, ಮುಂಜಾನೆ 02:02ಕ್ಕೆ

ಪೂರ್ಣಿಮಾ ಮುಕ್ತಾಯ: ಜೂನ್ 24 ಮಧ್ಯಾಹ್ನ 10:39ರವರೆಗೆ

ಸೂರ್ಯೋದಯ: ಬೆಳಗ್ಗೆ 06:25ಕ್ಕೆ

ಸೂರ್ಯಾಸ್ತ: ಸಂಜೆ 06:16ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ

ಬ್ರಹ್ಮ ಮುಹೂರ್ತ ಬೆಳಗ್ಗೆ 04:48ರಿಂದ 05:36ರವರೆಗೆ

ಅಭಿಜಿತ್ ಮುಹೂರ್ತ ಬೆಳಗ್ಗೆ 11:57ರಿಂದ ಮಧ್ಯಾಹ್ನ 12:44ರವರೆಗೆ

ಗೋಧೂಳಿ ಮುಹೂರ್ತ ಸಂಜೆ 06:05ರವರೆಗೆ 06:29ರವರೆಗೆ

ಅಮೃತ ಕಾಲ ರಾತ್ರಿ 11:26ರಿಂದ 12:52ರವರೆಗೆ

ರವಿ ಯೋಗ ಜೂನ್ 25, 06:25ರಿಂದ 7:41ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ

ಇದು ತುಂಬಾ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಹಾಗೂ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಉಂಟಾಗುವುದು ಹಾಗೂ ಪಾಪಗಳಿಂದ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ. ಈ ದಿನ ಅಗ್ಯತವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಪೂಜಾ ವಿಧಿ

ಪೂಜಾ ವಿಧಿ

* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.

* ವಿಷ್ಣು ಹಾಗೂ ಶಿವನನ್ನು ಆರಾಧಿಸಬೇಕು.

* ವಿಷ್ಣುವಿಗೆ ತುಳಸಿಯನ್ನು ಶಿವನಿಗೆ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು.

* ಕೆಲವರು ಉಪವಾಸ ಮಾಡಿದರೆ, ಇನ್ನು ಕೆಲವರು ಈ ದಿನದಂದು ಸಾತ್ವಿಕ ಆಹರಗಳನ್ನಷ್ಟೇ ಸೇವಿಸುತ್ತಾರೆ.

* ಚಂದ್ರನಿಗೆ ಹಾಲು ಮತ್ತು ಜೇನಿನಿಂದ ಆರ್ಘ್ಯ ಸಲ್ಲಿಸಬೇಕು.

* ವಿಷ್ಣು ಲಕ್ಷ್ಮಿ ಜೊತೆಗೆ ಆಲದ ಮರದಲ್ಲಿ ನೆಲೆಸಿರುತ್ತಾನೆ ನಂಬಿಕೆ ಇದೆ, ಆದ್ದರಿಂದ ಈ ದಿನ ಆಲದ ಮರಕ್ಕೆ ನೀರು ಹಾಗೂ ಹಾಲು ಅರ್ಪಿಸಲಾಗುವುದು.

ಈ ರೀತಿ ಜ್ಯೇಷ್ಠ ಪೂರ್ಣಿಮಾ ಆಚರಿಸಿದರೆ ಅವರ ಬದುಕಿನಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದು.

English summary

Jyeshtha Purnima Vrat 2021:Date, Time, Importance, Vrat Rituals, Puja Vidhi And More About The Day

Jyeshtha Purnima Vrat 2021:date, time, importance, vrat rituals and more about the day, read on,
X
Desktop Bottom Promotion