For Quick Alerts
ALLOW NOTIFICATIONS  
For Daily Alerts

12 ವರ್ಷಗಳ ಬಳಿಕ ಮೀನದಲ್ಲಿ ಗುರು-ಶುಕ್ರ ಸಂಯೋಗ : ದ್ವಾದಶ ರಾಶಿಗಳ ಮೇಲೆ ಪ್ರಭಾವವೇನು ಗೊತ್ತಾ?

|

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗಕ್ಕೆ ತುಂಬಾನೇ ಮಹತ್ವವಿದೆ. ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಸೇರುವುದನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುವುದು. ನವಗ್ರಹಗಳಿಗೆ ಜ್ಯೋತಿಷ್ಯದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಇದೆ. ಎರಡು ವಿಭಿನ್ನ ಗುಣಗಳ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಅದರ ಪ್ರಭಾವ ಕೂಡ ಭಿನ್ನವಾಗಿರುತ್ತೆ. ಎರಡು ಒಳ್ಳೆಯ ಗ್ರಹಗಳು ಒಂದಾದರೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ಗ್ರಹಗಳು ಒಂದಾದರೆ ಕೆಟ್ಟ ಪರಿಣಾಮ ಬೀರುವುದು.

ಈ ಪರಿಣಾಮಗಳು ರಾಶಿಗಳ ಮೇಲೆ ಅಷ್ಟೇ ದೇಶ, ಅಂತರಾಷ್ಟ್ರೀಯ ಮೇಲೂ ಪರಿಣಾಮ ಬೀರುವುದು. ಇದೀಗ ಏಪ್ರಿಲ್‌ನಲ್ಲಿ ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿ ಸಂಯೋಗವಾಗಲಿದೆ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ

ಜ್ಯೋತಿಷ್ಯ ಪ್ರಕಾರ ಗುರು ಮತ್ತು ಶುಕ್ರ ಅನೇಕ ಪ್ರತ್ಯೇಕಗಳನ್ನು ಹೊಂದಿದೆ.

ಗುರುಗ್ರಹ ಎಲ್ಲಾ ದೇವತೆಗಳ ಗುರುವಾದರೆ, ಶುಕ್ರ ಎಲ್ಲಾ ರಾಕ್ಷಸರ ಗುರುವಾಗಿದ್ದಾನೆ. ಗುರು ಪುರುಷ ಗ್ರಹವಾದರೆ ಶುಕ್ರ ಸ್ತ್ರೀ ಗ್ರಹವೆಂದು ಪರಿಗಣಿಸಲಾಗಿದೆ. ಗುರುವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಿದರೆ ಶುಕ್ರ ಗ್ರಹವನ್ನು ಮಹಾಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗಿದೆ.

ಈ ಎರಡೂ ಶುಭಗ್ರಹವಾದರೂ ಒಂದಕ್ಕೊಂದು ಶತ್ರು ಗ್ರಹಗಳಾಗಿವೆ. ಶುಕ್ರ ಗ್ರಹವನ್ನು ಲೌಕಿಕ ಆನಂದ ಹಾಗೂ ಐಷಾರಾಮಿಗಳ ಗ್ರಹವಾಗಿದೆ. ಅದೇ ಗುರುವನ್ನು ಅತೀಂದ್ರಿಯ ಮತ್ತು ಲೌಕಿಕ ಸಂತೋಷದ ಲಾಭದಾಯಕ ಗ್ರಹವಾಗಿದೆ.

ಇದೀಗ ಬರೋಬರಿ 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರ ಸಂಯೋಗವಾಗುತ್ತಿದೆ, ಈ ಸಂಯೋಗದ ಪ್ರಭಾವ ಹೇಗಿರಲಿದೆ ನೋಡಿ:

ಗುರು-ಶುಕ್ರ ಸಂಯೋಗ ಯಾವಾಗ?

ಗುರು ಮತ್ತು ಶುಕ್ರಏಪ್ರಿಲ್‌ 27, 2022ರಲ್ಲಿ ಮೀನ ರಾಶಿಯಲ್ಲಿ ಸಂಯೋಗವಾಗುತ್ತಿದೆ.

ಮೀನ ರಾಶಿಯಲ್ಲಿ ಗುರು-ಶುಕ್ರ ಸಂಯೋಗದ ಪ್ರಭಾವ

ಮೀನ ರಾಶಿಯಲ್ಲಿ ಗುರು-ಶುಕ್ರ ಸಂಯೋಗದ ಪ್ರಭಾವ

* 12 ವರ್ಷಗಳ ಬಳಿಕ ಗುರು-ಶುಕ್ರ ಮೀನ ರಾಶಿಯಲ್ಲಿ ಆಗುತ್ತಿದೆ.

* ಇದರಿಂದ ಮೀನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ.

* ನಿಮ್ಮ ವೈಯಕ್ತಿಕ ಹಾಗೂ ಆರ್ಥಿಕ ಬದುಕಿನಲ್ಲಿ ಪ್ರಗತಿ ಕಾಣುವಿರಿ.

* ಈ ಗುರು-ಶುಕ್ರ ಸಂಯೋಗ ನಿಮಗೆ ಅನುಕೂಲಕರವಾಗಿದೆ.

* ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಬಲವಾಗಿರುತ್ತೆ.

* ಈ ಸಮಯದಲ್ಲಿ ನಿಮ್ಮ ಜ್ಞಾನ ಹೆಚ್ಚುವುದು, ನಿಮ್ಮ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ.

ದೇಶ-ಅಂತರರಾಷ್ಟ್ರೀಯ ಮೇಲೆ ಬೀರಿರುವ ಪ್ರಭಾವ

ದೇಶ-ಅಂತರರಾಷ್ಟ್ರೀಯ ಮೇಲೆ ಬೀರಿರುವ ಪ್ರಭಾವ

* ಜನರಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಲಿದೆ.

* ರಾಜಕೀಯದಲ್ಲಿ ಮಹಿಳೆಯರ ಪ್ರಾಬಲ್ಯ ಹೆಚ್ಚಲಿದೆ.

* ದೇಶ ಹಾಗೂ ವಿದೇಶದಲ್ಲಿ ವಿಪತ್ತುಗಳು, ದುರಂತಗಳು ನಡೆಯುವ ಸಾಧ್ಯತೆ ಇದೆ.

* ಒಬೆಸಿಟಿ, ಮಧುಮೇಹ ಇರುವವರು ಈ ಸಮಯದಲ್ಲಿ ತುಂಬಾನೇ ಎಚ್ಚರದಿಂದ ಇರಬೇಕು.

ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವ

ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವ

ಮೇಷ ರಾಶಿ: ವೈವಾಹಿಕ ಸಂಬಂಧಿಸಿದ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಪರಿಹಾರ ಕಾಣುವಿರಿ. ವೈವಾಹಿಕ ಸಮಸ್ಯೆಗಳು ದೂರಾಗಿ ನಿಮ್ಮಿಬ್ಬರ ನಡುವೆ ಅನ್ಯೂನ್ಯತೆ ಬೆಳೆಯುವುದು.

ವೃಷಭ ರಾಶಿ: ನಿಮಗೆ ಆರ್ಥಿಕ ಲಾಭ ದೊರೆಯಲಿದೆ.

ಮಿಥುನ ರಾಶಿ: ನಿಮಗೆ ಮಕ್ಕಳ ವಿಷಯದಲ್ಲಿ ಖುಷಿ ಸಿಗಲಿದೆ. ಮಗುವನ್ನು ಬಯಸುತ್ತಿರುವವರು ಸಿಹಿ ಸುದ್ದಿ ಪಡೆಯಬಹುದು.

ಕರ್ಕ ರಾಶಿ: ಆಸ್ತಿ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ತುಂಬಾ ಸಂತೋಷವಾಗಿ ಇರುವಿರಿ.

ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಕೆಲ ಬದಲಾವಣೆಯಾಗಬಹುದು.

ಕನ್ಯಾ ರಾಶಿ: ನಿಮ್ಮ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ತುಲಾ ರಾಶಿ: ನಿಮ್ಮ ಖರ್ಚು ಹೆಚ್ಚಲಿದೆ. ಬಜೆಟ್‌ ಪ್ರಕಾರ ಖರ್ಚು ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ: ನಿಮ್ಮ ಯಶಸ್ಸು ಮತ್ತು ಕೀರ್ತಿ ಹೆಚ್ಚಲಿದೆ.

ಧನು ರಾಶಿ: ನೀವು ಈ ಅವಧಿಯಲ್ಲಿ ಮಾಡುವ ಪ್ರಯಾಣ ಲಾಭದಾಯಕವಾಗಲಿದೆ.

ಮಕರ ರಾಶಿ: ಆರ್ಥಿಕ ಲಾಭ ಸಿಗಲಿದೆ.

ಕುಂಭ ರಾಶಿ: ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಪ್ರೇಮಿಗಳು ವಿವಾಹವಾಗಲು ಬಯಸಿದರೆ ಯಾವುದೇ ಅಡೆತಡೆಯಿಲ್ಲದೆ ನೆರವೇರುವುದು.

ಮೀನ ರಾಶಿ: ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.

English summary

Jupiter Venus Conjunction: After 12 years Jupiter-Venus Conjunction In Pisces 2022 Effects on Zodiac Signs in Kannada

Jupiter Venus Conjunction Pisces 2022: After 12 Years Jupiter Transit 2022 In Pisces And Jupiter And Venus Conjunction In Pisces In April 2022 Know Effects on All Zodiac Signs in Kannada,
Story first published: Tuesday, April 19, 2022, 17:54 [IST]
X
Desktop Bottom Promotion