For Quick Alerts
ALLOW NOTIFICATIONS  
For Daily Alerts

ಕುಂಭ ರಾಶಿಯಲ್ಲಿ ಗುರುವಿನ ವಕ್ರೀಯ ಚಲನೆ: 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

|

ಗುರು ಗ್ರಹವು ಕುಂಭ ರಾಶಿಯಲ್ಲಿ ಜೂನ್‌ 20ಕ್ಕೆ ಹಿಮ್ಮುಖವಾಗಿ ಚಲಿಸಲಿದೆ. ಸಾಮಾನ್ಯವಾಗಿ ನೇರವಾಗಿ ಸಂಚರಿಸುವ ಗ್ರಹ ಹಿಮ್ಮುಖ ದಿಕ್ಕಿನಲ್ಲಿ ಚಲಿಸಲಾರಂಭಿಸಿದಾಗ ಅದನ್ನು ವಕ್ರೀ ಚಲನೆ ಎಂದು ಕರೆಯಲಾಗುವುದು.

ಗುರು ಗ್ರಹವು ಪ್ರತೀ 13 ತಿಂಗಳಿಗೊಮ್ಮೆ ಹಿಮ್ಮುಖವಾಗಿ ಚಲಿಸುವುದು, ಈ ಚಲನೆ ಸೆಪ್ಟೆಂಬರ್ 13ರವರೆಗೆ ಇರಲಿದೆ. ಸೆಪ್ಟೆಂಬರ್ 14ರಂದು ಗುರುವು ಮಾರ್ಗಿಯಾಗಿ ಚಲಿಸಲಿದೆ.

ಗ್ರಹಗಳ ನೇರ ಸಂಚಾರ ಹಾಗೂ ವಕ್ರೀಯ ಚಲನೆ ಎರಡೂ ನಮ್ಮ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಗುರು ಗ್ರಹ ವಕ್ರೀಯ ಚಲನೆಯಲ್ಲಿದ್ದಾಗ ಅದೃಷ್ಟವು ಬದಲಾಗುವ ಸಾಧ್ಯತೆ ಇದೆ. ಕುಂಭದಲ್ಲಿ ಗುರುವಿನ ಈ ವಕ್ರೀ ಚಲನೆ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ ಗುರು ಹನ್ನೊಂದನೇ ಮನೆಯಲ್ಲಿ ವಕ್ರವಾಗಿ ಚಲಿಸಲಿದೆ. ಈ ಸಮಯದಲ್ಲಿ ನಿಮ್ಮ ಆಸೆಗಳು, ನಿರೀಕ್ಷೆಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸುವಲ್ಲಿ ಸ್ವಲ್ಪ ಕಷ್ಟವಾಗುತ್ತದೆ ಅಥವಾ ನೀವು ನಿರೀಕ್ಷಿಸಿದ ಫಲವನ್ನು ನೀವು ಪಡೆಯಲಾಗುವುದಿಲ್ಲ. ಅರ್ಥಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಹಾಗೂ ವೆಚ್ಚಗಳು ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ತಪ್ಪು ಗ್ರಹಿಕೆಯನ್ನು ತಪ್ಪಿಸಬಹುದು ಹಾಗೂ ಅವರಿಗಾಗಿ ಸ್ವಲ್ಪ ಸಮಯ ನೀಡಿ. ವಿವಾಹಿತ ಜನರು ತಮ್ಮ ಕುಟುಂಬವನ್ನು ವಿಸ್ತರಿಸಲು ಬಯಸುತ್ತಿದ್ದರೆ ಗುರುವು ಮಾರ್ಗಿಯಾಗುವವರೆಗೆ ಕಾಯಬೇಕು. ಅರೋಗ್ಯ ಚೆನ್ನಾಗಿರುತ್ತದೆ. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉಳಿಸಿಕೊಳ್ಳಲು ನಿಮಗೆ ಸೂಚಿಸಲಾಗಿದೆ.

ಪರಿಹಾರ - ಶ್ರೀ ರುದ್ರಂ ಪಠಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯಲ್ಲಿ ಗುರು 10ನೇ ಮನೆಗೆ ವಕ್ರವಾಗಿ ಸಂಚರಿಸಲಿದೆ. ಈ ಸಮಯದಲ್ಲಿ ಯಾವುದೇ ಕೆಲಸವನ್ನು ಮಾಡುವಾಗ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇದಲ್ಲದೆ ನಿಮ್ಮ ಮಾತಿನಲ್ಲಿ ಹಿಡಿತವಿರಲಿ ಹಾಗೂ ಎಲ್ಲರನ್ನು ಗೌರವಿಸಿ. ವ್ಯಾಪಾರಿಕ ಮತ್ತು ವೃತ್ತಿಪರ ಜೀವನದಲ್ಲಿ ಹೊಸ ಕೆಲಸಕ್ಕೆ ಕೈ ಹಾಕದಿರಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸಬೇಡಿ. ವ್ಯಾಪಾರಸ್ಥರು ಈ ಸಮಯದಲ್ಲಿ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆದರೆ ಲಾಭವನ್ನು ಪಡೆಯುವಲ್ಲಿ ವಿಳಂಬದದ ಸಾಧ್ಯಾತೆ ಇದೆ, ಕುಟುಂಬ ವಾತಾವರಣವು ನಿಮಗೆ ಆನುಕೂಲಕರವಾಗಿರುತ್ತದೆ.

ಪರಿಹಾರ - ಗುರುವಾರ ಉಪವಾಸ ಮಾಡುವುದರಿಂದ ಶುಭ ಫಲ ಉಂಟಾಗುವುದು.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಗುರು ಒಂಭತ್ತನೇ ಮನೆಗೆ ವಕ್ರವಾಗಿ ಚಲಿಸಲಿದೆ. ಆದ್ದರಿಂದ ಈ ಸಮಯ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಶಾಂತಿ ಸೃಷ್ಟಿಸುತ್ತದೆ. ಆದರೆ ಕ್ರಮೇಣ ಶಿಕ್ಷಣದ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ಕಾನೂನು ತೊಡಕುಗಳನ್ನು ಹೊಂದಿರಬಹುದು. ವೃತ್ತಿಪರ ಜೀವನದ ಬಗ್ಗೆ ಹೇಳುವುದಾದರೆ ನಿರುದ್ಯೋಗಿಗಳು ಹಾಗೂ ಉದ್ಯೋಗ ಬದಲಾವಣೆ ಬಯಸುತ್ತಿರುವವರು ಹೊಸ ಅವಕಾಶವನ್ನು ಪಡೆಯಬಹುದು ಆದರೆ ನೀವು ತಾಳ್ಮೆಯಿಂದಿರಲು ಸೂಚಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಕುಟುಂಬದ ಬೆಂಬಲ ನಿಮಗಿರುತ್ತದೆ. ಈ ಸಮಯದಲ್ಲಿ ಮಕ್ಕಳು ಮತ್ತು ಸಹೋದರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಮೂಲಕ ನಿಮ್ಮ ಅನೇಕ ಆಸೆಗಳನ್ನು ಪೂರೈಸಬಹುದು ಮತ್ತು ನೀವು ಮೊದಲು ಎದುರಿಸಿದ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ಗುರುವಾರ ಹಣೆಯ ಮೇಲೆ ಹಳದಿ ಅಥವಾ ಕೇಸರಿ ತಿಲಕವನ್ನು ಇಡಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಗುರು 8ನೇ ಮನೆಗೆ ವಕ್ರವಾಗಿ ಚಲಿಸಲಿದೆ. ಇದು ನಿಮಗೆ ಲಾಭದಾಯವಾಗಿದೆ ಆದರೆ ನೀವು ಸ್ವಲ್ಪ ಕಾಯಬೇಕಾದೀತು. ವಿಮಾ ಸೌಲಭ್ಯಗಳನ್ನು ಪಡೆಯಲು ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಿಮ್ಮ ಲೈಂಗಿಕ ಆಸೆಗಳ ಬಗ್ಗೆ ನೀವು ತುಂಬಾ ಸಕ್ರಿಯರಾಗಿರುತ್ತೀರಿ ಆದರೆ ಗುರುವಿನ ವಕ್ರೀ ಸ್ಥಿತಿಯ ಕಾರಣದಿಂದಾಗಿ ಲೈಂಗಿಕ ಜೀವನದಲ್ಲಿ ಕೆಲವು ಅಸಮಾಧಾನಗಳು ಉಂಟಾಗಬಹುದು. ಆಧ್ಯಾತ್ಮಿಕ ವಿಷಯಗಳ ಬಗ್ಗೆ ನಿಮ್ಮಲ್ಲಿ ಅಸಮಾಧಾನ ಕಾಣಬಹುದು. ಈ ಸಮಯದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮುನ್ನಡೆಯಲು ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ ಏಕೆಂದರೆ ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ -ಗುರು ಬೀಜ ಮಂತ್ರವನ್ನು ಜಪಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಗುರು ಏಳನೇ ಮನೆಯಲ್ಲಿ ವಕ್ರೀ ಚಲನೆ ನಡೆಸಲಿದೆ. ಸಿಂಹ ರಾಶಿಯವರು ಪ್ರೀತಿಯ ಸಂಬಂಧದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಾರೆ ಆದರೆ ಗುರುವಿನ ವಕ್ರೀ ಚಲನೆಯ ಸಮಯದಲ್ಲಿ ಪ್ರೀತಿಯ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು. ಈ ಸಮಯದಲ್ಲಿ ಎರಡನೇ ಮದುವೆಯಾಗ ಬಯಸುತ್ತಿರುವ ಸಿಂಹ ರಾಶಿಯವರಿಗೆ ಮದುವೆಯ ಯೋಗ ಕೂಡಿ ಬರುವುದು. ವೃತ್ತಿಪರವಾಗಿ ಈ ಸಮಯದಲ್ಲಿ ಉದ್ಯೋಗ ಬದಲಾಯಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅದು ನಿಮಗೆ ಪ್ರಯೋಜನಕಾರಿಯಲ್ಲ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಉಂಟಾಗುವುದು. ಆರ್ಥಿಕವಾಗಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು ಮತ್ತು ಹಣಕಾಸಿನ ವಹಿವಾಟಿನ ಮೂಲಕ ಲಾಭವಾಗುವ ಸಾಧ್ಯತೆ ಬಹಳ ಕಡಿಮೆಯಿದೆ.

ಪರಿಹಾರ - ಕೆಂಪು ನೀಲಮಣಿಯನ್ನು ಧರಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ ಆರನೇ ಮನೆಯಲ್ಲಿ ಗುರು ವಕ್ರಿಯಾಗಿ ಚಲಿಸಲಿದೆ. ಆರನೇ ಮನೆ ಸಂಘರ್ಷ, ಅಹಿತಕರ ಕೆಲಸ, ವಿಚ್ಛೇದನೆ, ಶತ್ರು ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಕನ್ಯಾ ರಾಶಿಯವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲವಾಗಿರುತ್ತಾರೆ. ನೀವು ನಿಮ್ಮ ಅಗತ್ಯಗಳನ್ನು ಪೂರೈಸುವಲ್ಲಿ ಸಮರ್ಥರಾಗುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವಿರಿ. ಗುರುವಿನ ವಕ್ರತೆಯು ನಿಮ್ಮ ಆರೋಗ್ಯದ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಮಧುಮೇಹಿಗಳು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕೆಲಸದ ಸ್ಥಳದಲ್ಲಿ ತುಂಬಾ ಹೆಚ್ಚು ಕೆಲಸ ಮಾಡಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲ ಇರುವುದಿಲ್ಲ ಹಾಗೂ ಅವರುಲಾಭವನ್ನು ಪಡೆದುಕೊಳ್ಳಲು ಬಯಸುತ್ತಾರೆ. ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದರೆ, ಅದರಲ್ಲಿ ಯಶಸ್ಸು ಪಡೆಯಲು ನೀವು ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ವಿವಾಹಿತರು ದಾಂಪತ್ಯ ಜೀವನದಲ್ಲಿ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಗುರು ಸ್ತೋತ್ರವನ್ನು ಪಠಿಸಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ ಗುರು 5ನೇ ಮನೆಗೆ ವಕ್ರವಾಗಿ ಚಲಿಸಲಿದೆ. ಇದು ಪ್ರಣಯ, ಹೂಡಿಕೆ, ಮಕ್ಕಳು, ಶಿಕ್ಷಣ, ಶೇರ್ ಮಾರ್ಕೆಟ್ ಇತ್ಯಾದಿಗಳ ಮನೆಯಾಗಿದೆ. ವಕ್ರ ಗುರುವಿನ ಸಂಚಾರದ ಸಮಯದಲ್ಲಿ ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯ ಪ್ರೇಮಿಗಳಿಗೂ ಸವಾಲು ತಂದೊಡ್ಡುವುದು. ಮದುವೆ ಕೂಡ ವಿಳಂಬವಾಗಬಹುದು. ಈ ವಕ್ರ ಸಂಚಾರದ ಸಮಯದಲ್ಲಿ ನೀವು ಬೆಟ್ಟಿಂಗ್ ನಿಂದ ದೂರವಿರಬೇಕು. ಶೇರ್ ಮಾರ್ಕೆಟ್ ನಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ಪ್ರಯೋಜನೆಗಳನ್ನು ಪಡೆಯುವ ಸಾಧ್ಯತೆ ಕಡಿಮೆ ಇದೆ.

ಪರಿಹಾರ - ಗುರುವಿಗೆ ಹಸುವಿಗೆ ಬೆಲ್ಲ ಮತ್ತು ಹಿಟ್ಟು ನೀಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ನಾಲ್ಕನೇ ಮನೆಗೆ ಗುರು ವಕ್ರವಾಗಿ ಸಂಚರಿಸಲಿದೆ. ಇದು ಸಂತೋಷ, ತಾಯಿ, ವಿಶ್ರಾಂತಿ, ವಾಹನ ಇತ್ಯಾದಿಗಳ ಮನೆಯಾಗಿದೆ. ಈ ಸಂಚಾರವು ನಿಮ್ಮಲ್ಲಿ ಅಹಂ ಹೆಚ್ಚಿಸುವುದು. ನಿಮ್ಮ ಮಾತುಗಳೇ ಶತ್ರುಗಳನ್ನು ಸೃಷ್ಟಿಸಬಹುದು. ಆರ್ಥಿಕವಾಗಿ ಈ ಸಮಯ ನಿಮಗೆ ಅದೃಷ್ಟವಾಗಿರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಮೂಲಕ ನೀವು ಯಶಸ್ಸು ಪಡೆಯುತ್ತೀರಿ. ತಾಯಿಯೊಂದಿಗಿನ ಸಂಬಂಧದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು. ನಿಮ್ಮ ಮಾನಸಿಕ ಶಾಂತಿ ಹದಗೆಡಬಹುದು. ಮತ್ತೊಂದೆಡೆ, ವಾಹನವನ್ನು ಹೊಂದಿದ್ದರೆ ಅದಕ್ಕೆ ದೋಷ ಉಂಟಾಗುವ ಸಾಧ್ಯತೆ ಇದೆ. ದೈಹಿಕವಾಗಿ ನೀವು ದುರ್ಬಲರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಜನರು ಗೌರವವನ್ನು ಪಡೆಯುತ್ತಾರೆ ಮತ್ತು ನಿಮ್ಮ ಕೆಲಸದಿಂದ ರಜೆ ತೆಗೆದುಕೊಂಡು ನೀವು ಕೆಲವು ವಿರಾಮ ಕ್ಷಣಗಳನ್ನು ಕಳೆಯಬಹುದು.

ಪರಿಹಾರ - ಪ್ರತಿ ಗುರುವಾರ ಅರಳಿ ಮರಕ್ಕೆ ನೀರು ಹಾಕಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಗುರು ಮೂರನೇ ರಾಶಿಗೆ ವಕ್ರವಾಗಿ ಚಲಿಸಲಿದೆ. ಮೂರನೇ ಮನೆಯು ನಿಮ್ಮ ಸಹೋದರ - ಸಹೋದರಿಯರು, ನೆರೆಹೊರೆಯವರು, ಸಂವಹನ, ಅಲ್ಪ- ದೂರದ ಪ್ರಯಾಣಗಳು, ಧೈರ್ಯ - ಸಾಹಸ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಒಡಹುಟ್ಟಿದವರೊಂದಿಗೆ ಸೈದ್ಧಾಂತಿಕ ಭಿನ್ನತೆಗಳು ಇರಬಹುದು. ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ನೀವುಗೌರವ ಪಡೆಯುತ್ತೀರಿ. ಆರ್ಥಿಕವಾಗಿ ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಬಹಳ ಮಹತ್ವಾಕಾಂಕ್ಷೆ ಹೊಂದಿರುತ್ತೀರಿ. ನಿಮ್ಮಲ್ಲಿ ಅಹಂಕಾರದ ಭಾವನೆ ಉಂಟಾಗಬಹುದು. ನಿಮ್ಮ ಅಹಂಕಾರವು ಮೇಲುಗೈ ಸಾಧಿಸಲು ಬಿಡಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಗುರುವಾರ ರುದ್ರ ಅಭಿಷೇಕಂ ಮಾಡಿ

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಗುರು ಎರಡನೇ ಮನೆಯಲ್ಲಿರುತ್ತಾನೆ. ಎರಡನೇ ಮನೆಯನ್ನುಕುಟುಂಬ, ಧ್ವನಿ, ಸಂವಹನ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ಕೆಲವು ಅನಗತ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ, ಹಣಕಾಸಿನ ಅಸಮತೋಲನದಿಂದಾಗಿ ಈ ಸಮಯದಲ್ಲಿ ನಿಮ್ಮ ಜೀವನ ಶೈಲಿಯೂ ಬದಲಾಗಬಹುದು. ಗುರುವಿನ ಈ ಸಂಚಾರದ ಸಮಯದಲ್ಲಿ ನೀವು ಪೂರ್ವಜರ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಆ ಆಸ್ತಿಯನ್ನು ಸರಿಯಾಗಿ ಬಳಸುವುದು ನಿಮಗೆ ಸರಿಯಾಗಿ ತಿಳಿಯದೇ ಹೋಗಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಸುರಕ್ಷತೆಯ ಬಗ್ಗೆ ನೀವು ಸೂಕ್ಷ್ಮವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬ ಮೌಲ್ಯಗಳ ಬಗ್ಗೆ ಖಂಡಿತವಾಗಿ ನೀವು ಯೋಚಿಸುವಿರಿ, ಆದರೆ ಅವುಗಳನ್ನು ಅನುಸರಿಸಲು ನೀವು ಬಯಸುವುದಿಲ್ಲ.

ಪರಿಹಾರ - ಗುರುವಾರ ಚಿತ್ರಾನ್ನ ಮಾಡಿ ಜನರಿಗೆ ಹಂಚಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯಲ್ಲಿ ಗುರುವಿನ ವಕ್ರೀಯ ಚಲನೆಯಾಗುತ್ತಿದೆ. ಗುರುವು ನಿಮ್ಮ ಆತ್ಮ, ಅರೋಗ್ಯ ಇತ್ಯಾದಿಗಳ ಮೊದಲನೇ ಮನೆಗೆ ವಕ್ರವಾಗಿ ಸಂಚರಿಸಲಿದೆ. ಗುರುವಿನ ಈ ಸಂಚಾರದ ಸಮಯದಲ್ಲಿ ನಿಮಗೆ ಅರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು. ಜ್ಯೋತಿಷ್ಯದಲ್ಲಿ ಗುರುವನ್ನು ಹೊಟ್ಟೆಯ ಅಂಶದ ಗ್ರಹವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ರಾಶಿಯವರು ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಹೊಂದಬಹುದು. ಏಕೆಂದರೆ ನೀವು ನಿಮ್ಮ ಸುತ್ತಮುತ್ತಲಿನ ಜನರನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಕೆಲವು ಜನರು ನಿಮಗೆ ಮೋಸ ಮಾಡಬಹುದು. ವಕ್ರೀ ಗುರುವು ನೀವು ಆಶಿಸುತ್ತಿದ್ದ ಎಲ್ಲಾ ಪ್ರಯೋಜನಗಳನ್ನು ಮತ್ತು ಸುರಕ್ಷತೆಯನ್ನು ನೀಡುವುದಿಲ್ಲ ಇದರಿಂದ ನಿರಾಸೆ ಉಂಟಾಗಬಹುದು. ಆದಾಗ್ಯೂ, ನಿಮ್ಮ ಮೊದಲನೇ ಮನೆಯಲ್ಲಿ ಗುರುವಿನ ವಕ್ರತೆಯಿಂದಾಗಿ ಬೌದ್ಧಿಕವಾಗಿ ನೀವು ಬಲಶಾಲಿಯಾಗಬಹುದು. ಇದು ನಿಮಗೆ ಉತ್ತಮ ಪ್ರಯೋಜನಗಳನ್ನು ಸಹ ನೀಡುತ್ತದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

ಪರಿಹಾರ - ಗುರುವಾರ ಬಡ ಮಕ್ಕಳಿಗೆ ಕಲಿಕೆಗೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಗುರು 12ನೇಯ ಮನೆಗೆ ವಕ್ರೀಯವಾಗಿ ಚಲಿಸಲಿದೆ. ಇದು ವಿದೇಶ ಪ್ರವಾಸಗಳು, ಹಾನಿ, ಪ್ರತ್ಯೇಕತೆ, ಆಸ್ಪತ್ರೆ ಇತ್ಯಾದಿಗಳ ಮನೆಯಾಗಿದೆ. ಹನ್ನೆರಡನೇ ಮನೆಯಲ್ಲಿ ಗುರು ಇರುವುದರಿಂದ ಧಾರ್ಮಿಕತೆ ಕಡೆಗೆ ಒಲವು ಹೆಚ್ಚುವುದು. ಸಂಶೋಧನೆಯಲ್ಲಿ ತೊಡಗಿರುವವರಿಗೆ ಯಶಸ್ಸು ದೊರೆಯುವುದು. ಈ ಸಮಯದಲ್ಲಿ ಮೀನ ರಾಶಿಯವರು ನಿರ್ಭಯರಾಗುತ್ತಾರೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಬಹುದು. ಕೆಲವೊಮ್ಮೆ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಬಯಸಬಹುದು. ಆದರೆ ಎಲ್ಲಾ ಫಲಿತಾಂಶಗಳನ್ನು ನೀವು ಬಯಸಿದಂತೆ ಪಡೆಯಲಾಗುವುದಿಲ್ಲ ಇದು ಅಸಮಧಾನನವನ್ನು ಉಂಟು ಮಾಡುವುದು.

ಪರಿಹಾರ - ಗುರು ಬೀಜ ಮಂತ್ರವನ್ನು ಜಪಿಸಿ.

English summary

Jupiter Transit in Aquarius On 20 June 2021 Effects on Zodiac Signs in kannada

Jupiter Transit in Aquarius Effects on Zodiac Signs in kannada : The Jupiter Transit in Aquarius will take place on 20 June 2021. Learn about remedies to perform in kannada.
X
Desktop Bottom Promotion