For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರು ಹೇಗೇಗೆ ಸಹಾಯ ಕೇಳುತ್ತಾರೆ ಗೊತ್ತೆ?

|

ಮನುಷ್ಯನಿಗೆ ಏನಾದರೂ ಸಂಕಷ್ಟಗಳು ಬರುತ್ತಲೇ ಇರುವುದು. ಅದು ಆರ್ಥಿಕ ಹಾಗೂ ಇನ್ನಿತರ ರೂಪದಲ್ಲಿ ಇರಬಹುದು. ಇದನ್ನು ನಿವಾರಣೆ ಮಾಡಲು ಆತ ಕೆಲವೊಂದು ಸಂದರ್ಭದಲ್ಲಿ ಬೇರೆಯವರ ನೆರವು ಕೂಡ ಪಡೆಯಬಹುದು. ಆದರೆ ಬೇರೆಯವರ ನೆರವನ್ನು ಪಡೆಯುವುದು ತುಂಬಾ ಒಳ್ಳೆಯದೆಂದು ಅನಿಸುವುದಿಲ್ಲ. ಇದರಿಂದಾಗಿ ಕೆಲವು ಮಂದಿ ಸಮಸ್ಯೆಯಲ್ಲೇ ಸಿಲುಕಿಕೊಂಡು ಒದ್ದಾಡುತ್ತಿರುತ್ತಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕೆಲವರು ಯಾವುದೇ ರೂಪದಲ್ಲಿಯೂ ನೆರವು ಪಡೆಯುವುದಿಲ್ಲ. ನಮ್ಮದೇ ರೀತಿಯಲ್ಲಿ ಬೇರೆಯವರಿಂದ ನೆರವು ಕೇಳಬಹುದು. ಆದರೆ ನಮ್ಮ ರಾಶಿಚಕ್ರದ ಪ್ರಕಾರ ಕೆಲವು ಮಂದಿ ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ನೆರವು ಕೇಳುವರು. ಕೆಲವು ರಾಶಿಯವರು ತುಂಬಾ ಆಲೋಚನೆ ಮಾಡಿಕೊಂಡು ನೆರವು ಪಡೆಯುವರು. ಆದರೆ ಇನ್ನು ಕೆಲವರು ನೇರವಾಗಿ ನೆರವು ಕೇಳಿಬಿಡುವರು.

ತುಂಬಾ ಸ್ವಾಭಿಮಾನಿಗಳು ಎಲ್ಲವನ್ನು ತಾವೇ ನೋಡಿಕೊಳ್ಳಬೇಕು ಮತ್ತು ಯಾರ ನೆರವು ಪಡೆಯಬಾರದು ಎಂದು ಆಲೋಚಿಸುವರು. ಆದರೆ ನೆರವು ಕೇಳಲು ಪ್ರೌಢತೆ ಬೇಕು ಮತ್ತು ಬೇಡಿಕೆ ಸಲ್ಲಿಸಲು ಸಾಮರ್ಥ್ಯವು ಬೇಕು. ಕೆಲವೊಂದು ಸಂದರ್ಭದಲ್ಲಿ ನಾವು ನೆರವು ಕೇಳಿ ಪಡೆಯಬಹುದು. ಆದರೆ ಇನ್ನು ಕೆಲವು ಸಲ ಬೇರೆಯವರು ನಮ್ಮ ಕಷ್ಟವನ್ನು ನೋಡಿಕೊಂಡು ನೆರವು ನೀಡಲು ಮುಂದೆ ಬರಬಹುದು. ಜ್ಯೋತಿಶಾಸ್ತ್ರದ ಪ್ರಕಾರ ರಾಶಿ ಚಕ್ರಗಳಿಗೆ ಅನುಗುಣವಾಗಿ ಯಾವ ರಾಶಿಯವರು ಯಾವ ರೀತಿ ನೆರವನ್ನು ಪಡೆಯುತ್ತಾರೆ, ಯಾರು ನೆರವು ಪಡೆಯುತ್ತಾರೆ ಮತ್ತು ಯಾರು ನೆರವು ಪಡೆಯಲು ಹಿಂಜರಿಯುತ್ತಾರೆ ಎಂದು ನಾವು ತಿಳಿದುಕೊಳ್ಳುವ.

ಮೇಷ (ಮಾರ್ಚ್ 21-ಎಪ್ರಿಲ್19)

ಮೇಷ (ಮಾರ್ಚ್ 21-ಎಪ್ರಿಲ್19)

ಮೇಷ ರಾಶಿಯವರು ನೇರವಾಗಿ ನೆರವು ಕೇಳುವರು. ನೀವು ಮೇಷ ರಾಶಿಯಷ್ಟು ಸಾಹಸಿಯಾಗಿರಬೇಕು ಮತ್ತು ಸಂಕಷ್ಟದ ಸಮಯದಲ್ಲಿ ನಿಮ್ಮ ಗಡಿಯಿಂದ ನೀವೆ ಹೊರಬರಬೇಕು ಎಂದು ಬಯಸುವರು. ಮೇಷ ರಾಶಿಯವರು ಮೊದಲ ಸಲ ಪರ್ವತಾರೋಹಣ ಮಾಡುತ್ತಲಿದ್ದರೆ ಆಗ ಅವರು ತಜ್ಞರಿಂದ ಅಥವಾ ಈ ಕ್ಷೇತ್ರದಲ್ಲಿ ಹೆಚ್ಚು ನಿಪುಣರಾಗಿರುವವರಿಂದ ನೆರವು ಪಡೆಯುವರು. ಮೇಷ ರಾಶಿಯವರು ಯಾವುದೇ ನೆರವು ಕೇಳಿದರೆ ಅದರಲ್ಲಿ ಯಾವುದೇ ಅತಿರೇಕವಿರಲ್ಲ ಮತ್ತು ಅವರು ಮಾಹಿತಿ ಹಾಗೂ ಸಹಕಾರಕ್ಕೆ ಇದನ್ನು ಕೇಳುವರು.

ವೃಷಭ (ಎಪ್ರಿಲ್20-ಮೇ20)

ವೃಷಭ (ಎಪ್ರಿಲ್20-ಮೇ20)

ವೃಷಭ ರಾಶಿಯವರು ಯಾವಾಗಲೂ ನೆರವು ಪಡೆಯಲು ಹಿಂಜರಿಯುವರು. ಅವರು ನೆರವು ಪಡೆಯುವುದನ್ನು ತಪ್ಪಿಸುವುದು ಹೇಗೆ ಎಂದು ಪ್ರಯತ್ನಿಸುವರು. ಅಂತಿಮವಾಗಿ ನೆರವು ಪಡೆಯಲೇಬೇಕು ಎಂದು ಅನಿಸಿದ ವೇಳೆ ಅವರು ತಮಗೇನು ಬೇಕು ಎನ್ನುವ ಬಗ್ಗೆ ಸ್ಪಷ್ಟವಾಗಿರುವರು. ತಾವು ಸಿಲುಕಿರುವಂತಹ ಸಮಸ್ಯೆಯನ್ನು ಬೇರೆ ಯಾರಾದರೂ ಪರಿಹರಿಸಬೇಕು ಎಂದು ಅವರು ಪ್ರಲೋಭಿಸುವರು. ಇವರು ನೆರವು ಪಡೆಯುವರು ಮತ್ತು ತಾವು ಕೂಡ ವಿಶ್ರಾಂತಿ ಪಡೆಯುವುದಿಲ್ಲ.

ಮಿಥುನ (ಮೇ21-ಜೂನ್ 20)

ಮಿಥುನ (ಮೇ21-ಜೂನ್ 20)

ಮಿಥುನ ರಾಶಿಯವರು ನೆರವು ಕೇಳುವ ವೇಳೆ ತಮ್ಮ ಸಂವಹನ ಕೌಶಲ್ಯವನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುವರು ಮತ್ತು ಇದನ್ನು ಅವರು ಹಲವಾರು ವಿಧದಿಂದ ಮಾಡುವರು. ಇವರು ನೇರವಾಗಿ ನೆರವು ಕೇಳುವರು ಅಥವಾ ಬೇರೆಯವರು ನಿಮಗೆ ನೆರವು ಬೇಕೇ ಎಂದು ಕೇಳುವಂತೆ ಮಾಡುವರು. ಇವರು ಸಹಾಯ ಪಡೆಯುವಲ್ಲಿ ನಿಪುಣರು. ಅದೇ ರೀತಿಯಾಗಿ ಮಿಥುನ ರಾಶಿಯವರಿಗೆ ಬೇರೆಯವರಿಗೆ ನೆರವು ನೀಡುವಲ್ಲಿ ಮುಂದಿರುವರು. ಇದರಿಂದಾಗಿಯೇ ಅವರಿಗೆ ಕೂಡ ಸಹಾಯ ನೀಡಲು ಹಲವಾರು ಮಂದಿ ಮುಂದೆ ಬರುವರು.

ಕರ್ಕಾಟಕ (ಜೂನ್21-ಜುಲೈ22)

ಕರ್ಕಾಟಕ (ಜೂನ್21-ಜುಲೈ22)

ಜನರೊಂದಿಗೆ ತುಂಬಾ ಒಳ್ಳೆಯ ಭಾಂದವ್ಯ ಹೊಂದಿರುವಂತಹ ಕರ್ಕಾಟಕ ರಾಶಿಯವರಿಗೆ ನೆರವು ನೀಡಲು ಪ್ರತಿಯೊಬ್ಬರು ಮುಂದಾಗುವರು. ಕರ್ಕಾಟಕ ರಾಶಿಯವರು ಯಾವಾಗಲೂ ಹೃದಯದಿಂದ ಸಹಾಯ ಕೇಳುವರು ಮತ್ತು ಅವರ ಬೇಡಿಕೆಯು ತುಂಬಾ ಭಾವನಾತ್ಮಕವಾಗಿ ಇರುವುದು. ಇವರು ತಮಗೆ ನಿಕಟವಾಗಿರುವ ಜನರೊಂದಿಗೆ ಯಾವಾಗಲೂ ನೆರವನ್ನು ಕೇಳುತ್ತಿರಬಹುದು. ಅದಾಗ್ಯೂ, ಕರ್ಕಾಟಕ ರಾಶಿಯವರು ಸಹಾಯ ಪಡೆಯುತ್ತಾರಾದರೂ ಇವರು ನೆರವು ನೀಡುವಲ್ಲಿಯೂ ಮುಂದಿರುವರು.

ಸಿಂಹ (ಜುಲೈ23-ಆಗಸ್ಟ್22)

ಸಿಂಹ (ಜುಲೈ23-ಆಗಸ್ಟ್22)

ಸಿಂಹ ರಾಶಿಯವರು ನೆರವು ನೀಡುವ ಹಾಗೂ ಉದಾರ ಮನೋಭಾವದ ವ್ಯಕ್ತಿಗಳಾಗಿರುವರು. ಇವರಿಗೆ ಬೇರೆಯವರಿಗೆ ನೆರವು ಕೇಳುವುದು ಎಂದರೆ ಆಗದು. ಆದರೆ ತಮಗೆ ಯಾವಾಗ ನೆರವು ಬೇಕಾಗಿದೆ ಎಂದು ಅವರಿಗೆ ತಿಳಿದಿರುವುದು. ಹೆಚ್ಚಿನ ಜನರು ತಮಗೆ ನೆರವಾಗಲು ಮುಂದೆ ಬರುವರು ಎಂದು ಸಿಂಹ ರಾಶಿಯವರಿಗೆ ತಿಳಿದಿರುವುದು ಮತ್ತು ಇದರಿಂದಾಗಿ ಅವರು ನೆರವು ಕೇಳಲು ಹಿಂಜರಿಯಲ್ಲ. ಇವರು ನೆರವನ್ನು ಪಡೆದ ಬಳಿಕ ಅವರಿಗೆ ತುಂಬಾ ಅಭಾರಿಯಾಗಿರುವರು ಮತ್ತು ಹಲವಾರು ಬಾರಿ ಕೃತಜ್ಞತೆ ಸಲ್ಲಿಸುವರು. ತಮಗೆ ನೆರವು ನೀಡಿದವರಿಗೆ ಯಾವುದಾದರೂ ಉಡುಗೊರೆ ಮೂಲಕವು ಅವರು ಕೃತಜ್ಞತೆ ಸಲ್ಲಿಸುವರು.

ಕನ್ಯಾ (ಆಗಸ್ಟ್ 23-ಸಪ್ಟೆಂಬರ್ 22)

ಕನ್ಯಾ (ಆಗಸ್ಟ್ 23-ಸಪ್ಟೆಂಬರ್ 22)

ಕನ್ಯಾ ರಾಶಿಯವರು ನೆರವು ಕೇಳುವುದನ್ನು ದ್ವೇಷಿಸುವರು ಮತ್ತು ತಮ್ಮದೇ ಆಗಿರುವ ವಿಧಾನದಿಂದ ಈ ಸಂಕಷ್ಟದಿಂದ ಪಾರಾಗಲು ಬಯಸುವರು. ತಾವು ಏನು ಹೇಳಬೇಕು ಮತ್ತು ಇದನ್ನು ಹೇಗೆ ಹೇಳಬೇಕು ಎನ್ನುವುದನ್ನು ಅವರು ಸರಿಯಾಗಿ ಅಭ್ಯಾಸ ಮಾಡಿಕೊಳ್ಳುವರು ಮತ್ತು ಎದುರಿನ ವ್ಯಕ್ತಿಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎನ್ನುವುದಕ್ಕೂ ಅವರು ತಯಾರಾಗಿ ಇರುವರು. ಕನ್ಯಾ ರಾಶಿಯವರು ನಿಮಗೆ ನೆರವು ಬೇಕಿರುವ ವೇಳೆ ಯಾವಾಗಲೂ ಸಹಾಯಹಸ್ತ ಚಾಚುವರು ಮತ್ತು ಇದರಿಂದಾಗಿ ಜನರು ಅವರಿಗೆ ಮರಳಿ ನೆರವಾಗಲು ತುಂಬಾ ಸಂತೋಷಪಡುವರು.

ತುಲಾ (ಸಪ್ಟೆಂಬರ್23-ಅಕ್ಟೋಬರ್23)

ತುಲಾ (ಸಪ್ಟೆಂಬರ್23-ಅಕ್ಟೋಬರ್23)

ನೆರವು ಕೇಳುವರಲ್ಲಿ ತುಲಾ ರಾಶಿಯವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಯಾವಾಗ ಇದನ್ನು ಕೇಳಬೇಕು ಮತ್ತು ನಿರಾಕರಿಸಿದರೆ ಏನು ಮಾಡಬೇಕು ಎನ್ನುವುದಕ್ಕೆ ಅವರು ತಯಾರಾಗಿ ಇರುವುದಿಲ್ಲ. ನೆರವು ಕೇಳುವುದನ್ನು ಸರಿಯಾಗಿ ಅಭ್ಯಾಸ ಮಾಡಿಕೊಳ್ಳುವ ಬದಲು, ಇವರು `ಇಲ್ಲ' ಎನ್ನುವ ಪ್ರತಿಕ್ರಿಯೆಗೆ ತಯಾರಿ ಇರುವರು. ಇವರು ಇಲ್ಲ ಎನ್ನುವ ಪ್ರತಿಕ್ರಿಯೆ ಪಡೆಯುತ್ತೇವೆ ಎಂದೇ ಭಾವಿಸುವರು. ಆದರೆ ಸರಿ ಎನ್ನುವ ಉತ್ತರ ಬಂದರೆ ಆಗ ಅಚ್ಚರಿಗೊಳಗಾಗುವರು. ಜನರು ಪರಸ್ಪರ ನೆರವಾಗಬೇಕು ಎಂದು ತುಲಾ ರಾಶಿಯವರು ಭಾವಿಸುವರು. ಆದರೆ ಇದು ಸಿಗದೆ ಇದ್ದಾಗ ಅವರು ಆಘಾತಕ್ಕೆ ಒಳಗಾಗುವರು.

ವೃಶ್ಚಿಕ(ಅಕ್ಟೋಬರ್ 23-ನವೆಂಬರ್ 21)

ವೃಶ್ಚಿಕ(ಅಕ್ಟೋಬರ್ 23-ನವೆಂಬರ್ 21)

ವೃಶ್ಚಿಕ ರಾಶಿಯವರು ತುಂಬಾ ವ್ಯವಸ್ಥಿತ ರೀತಿಯಲ್ಲಿ ನೆರವು ಕೇಳುವರು ಮತ್ತು ಅವರು ಇದರ ಕಡೆ ಹೆಚ್ಚಿನ ಗಮನ ನೀಡುವರು. ಇವರು ಕೇಳುವ ನೆರವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ವೃಶ್ಚಿಕ ರಾಶಿಯವರು ತುಂಬಾ ಸಣ್ಣ, ಸುಲಭ ಬೇಡಿಕೆಗಳನ್ನು ಇಡುವರು ಮತ್ತು ಇಲ್ಲಿಂದ ಅವರು ಅದನ್ನು ಬೆಳೆಸಿಕೊಂಡು ಹೋಗುವರು. ಇದರಿಂದ ದೊಡ್ಡ ನೆರವು ಕೇಳಿದರೆ ಆಗ ಎದುರಿನವರಿಗೂ ಆಘಾತವಾಗದು. ಇವರು ಬೇಕಿರುವುದನ್ನು ಪಡೆಯುವಲ್ಲಿ ಜಾಣರು.

ಧನು(ನವೆಂಬರ್16-ಡಿಸೆಂಬರ್ 21)

ಧನು(ನವೆಂಬರ್16-ಡಿಸೆಂಬರ್ 21)

ಧನು ರಾಶಿಯವರು ಯಾವಾಗಲೂ ಬೇರೆಯವರಿಗೆ ನೆರವಾಗುತ್ತಾ ಇರುವರು ಮತ್ತು ಇದರಿಂದ ಅವರು ನೆರವು ಕೇಳಲು ಹಿಂಜರಿಯಲ್ಲ. ಯಾವುದೇ ಸಲಹೆ ಅಥವಾ ಬೇರೆ ರೀತಿಯ ನೆರವು ಬೇಕಿದ್ದರೆ ಆಗ ಬೇರೆಯವರು ನೀಡಿದ ಸಲಹೆ ಅಥವಾ ನೆರವನ್ನು ಯಾವ ರೀತಿಯಲ್ಲಿ ಬಳಸಿಕೊಂಡಿದ್ದೇವೆ ಎಂದು ಅವರು ತೋರಿಸಿಕೊಡುವರು. ಧನು ರಾಶಿಯವರು ಬೇರೆಯವರಿಗೆ ನೆರವು ನೀಡುವಲ್ಲಿ ಯಾವಾಗಲೂ ಮುಂದಿರುವರು. ಇದರಿಂದ ಬೇರೆಯವರು ಕೂಡ ಅವರಿಗೆ ನೆರವಾಗುವರು.

ಮಕರ (ಡಿಸೆಂಬರ್ 22-ಜನವರಿ 19)

ಮಕರ (ಡಿಸೆಂಬರ್ 22-ಜನವರಿ 19)

ತುಂಬಾ ಸ್ವಾವಲಂಬಿ ಆಗಿರುವ ಮಕರ ರಾಶಿಯವರು ಕೆಲವೊಂದು ಸಂದರ್ಭದಲ್ಲಿ ನೆರವು ಕೇಳುವರು. ಆದರೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಅವರು ನೆರವು ಯಾಚಿಸುವರು. ಇವರು ತಮ್ಮ ಬೇಡಿಕೆಯಲ್ಲಿ ತುಂಬಾ ಪ್ರಾಮಾಣಿಕತೆ ಮತ್ತು ನೈಜತೆ ತೋರಿಸುವರು. ಮಕರ ರಾಶಿಯವರು ಯಾವಾಗಲೂ ತಮ್ಮ ಬೇಡಿಕೆ ಬಗ್ಗೆ ತುಂಬಾ ನಿಖರವಾಗಿ ಇರುವರು ಮತ್ತು ಇದರಲ್ಲಿ ಯಾವುದೇ ಅಪಾರ್ಥ ಸಂಭವಿಸುವ ಸಾಧ್ಯತೆಯು ಇರುವುದಿಲ್ಲ.

ಕುಂಭ (ಜನವರಿ 20-ಫೆಬ್ರವರಿ 18)

ಕುಂಭ (ಜನವರಿ 20-ಫೆಬ್ರವರಿ 18)

ಎಲ್ಲವನ್ನೂ ತಮ್ಮಿಂದಲೇ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕುಂಭ ರಾಶಿಯವರಿಗೆ ತಿಳಿದಿರುವುದು. ಇವರು ಮನಸ್ಸಿಲ್ಲದೆ ನೆರವು ಕೇಳುವರು, ತಾವು ಕೇಳುವಂತಹ ನೆರವು ಬೇರೆಯವರಿಗೆ ಲಾಭವಾಗಲಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ಆಲೋಚಿಸದೆ ನೆರವು ಕೇಳಿಲ್ಲ. ಯಾವುದೇ ಸಮಾಜ ಸೇವೆ ಅಥವಾ ಬೀಚ್ ನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ನೆರವು ಕೇಳಬೇಕಿದ್ದರೆ ಆಗ ಇವರಿಗೆ ನೆರವು ಕೇಳಲು ಯಾವುದೇ ಸಮಸ್ಯೆ ಇರುವುದಿಲ್ಲ.

ಮೀನ (ಫೆಬ್ರವರಿ 19-ಮಾರ್ಚ 20)

ಮೀನ (ಫೆಬ್ರವರಿ 19-ಮಾರ್ಚ 20)

ಬೇರೆಯವರಿಗೆ ನೆರವು ಬೇಕಿದೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ಮೀನ ರಾಶಿಯವರು ತುಂಬಾ ಮುಂದಿರುವರು. ಆದರೆ ತಮಗೆ ನೆರವು ಬೇಕಾಗಿದೆ ಎಂದು ಮನವರಿಕೆ ಮಾಡಿಕೊಳ್ಳಲು ಇವರಿಂದ ಆಗಲ್ಲ. ಇವರು ತಮ್ಮದೇ ಲೋಕದಲ್ಲಿ ಮುಳುಗಿರುವರು ಮತ್ತು ನೆರವು ಬೇಕಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುವುದು. ಮೀನ ರಾಶಿಯವರು ಹೆಚ್ಚಾಗಿ ಕೆಟ್ಟ ವ್ಯಕ್ತಿಗಳ ಮೇಲೆ ನಂಬಿಕೆ ಇಡುವರು. ಇವರು ತಮ್ಮ ಸ್ವಾರ್ಥಕ್ಕಾಗಿ ಮೀನ ರಾಶಿಯ ನೆರವು ಪಡೆಯುವರು.

English summary

How Each Of The Zodiac Signs Asks For Help

It's not always easy to ask for help. Asking for help can be challenging for adults. When we’re kids, we have no problem, but when we get older, it depends on who we feel comfortable asking. Some people will do anything to avoid asking for advice or assistance of any kind. We all have our own methods in how to ask for help, and if we think about astrology, it rings true for the zodiac signs. How the zodiac signs ask for help all depends on their individual personality. For some, it may be something they consider for a long time and then work up to, while others may just blurt out a request.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more