For Quick Alerts
ALLOW NOTIFICATIONS  
For Daily Alerts

ಅಮ್ಮಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ಹೃದಯಸ್ಪರ್ಶಿ ಕೋಟ್ಸ್

|

ಮೇ 9. ತಾಯಂದಿರ ದಿನ. ಅಮ್ಮಾ.... ಪ್ರೀತಿ, ಕರುಣೆ, ತ್ಯಾಗ ಇವು ಎಲ್ಲದರ ಸಾಕಾರ ಮೂರ್ತಿ. ನಮ್ಮನ್ನು ಸದಾ ನೆನೆಸುವ ಒಂದು ಜೀವವೆಂದರೆ ಅದು ಅಮ್ಮ. ನಾವು ಬೆಳೆದು ಎಷ್ಟೇ ದೊಡ್ಡವರಾದರೂ ನಮ್ಮ ತಾಯಿಗೆ ಮಾತ್ರ ನಾವು ಮಗುವೇ.

ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಸುದಿನವೇ ತಾಯಂದಿರ ದಿನ. ನಾವಿಲ್ಲಿ ತಾಯಂದಿರ ದಿನಕ್ಕೆ ಅಮ್ಮನಿಗೆ ಕಳುಹಿಸಲು ಅಥವಾ ಹೇಳಲು ಹೃದಯಸ್ಪರ್ಶಿ ಸಂದೇಶ ನೀಡಿದ್ದೇವೆ ನೋಡಿ.

ಶಾಶ್ವತ

ಶಾಶ್ವತ

"ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ."

1.

1.

ಅಮ್ಮಾ....

ಪದಗಳಿಗೆ ಮೀರಿದ ಸಂವೇದನೆ, 9 ತಿಂಗಳು ತನ್ನ ಗರ್ಭದಲ್ಲಿ ಹೊತ್ತರೆ, ಉಳಿದ ಜೀವಮಾನ ಪೂರ್ತಿ ಮಕ್ಕಳನ್ನು ಎದೆಯಲ್ಲಿ ಹೊತ್ತು ಮರೆಯುವವಳೇ ಅಮ್ಮಾ...

ನಿನ್ನ ಪ್ರೀತಿಗೆ ಸಾಟಿಯಿಲ್ಲ..

ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು

2.

2.

ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರೆಂದು ಅದು ಅಮ್ಮ..

ನನ್ನ ಪಾಲಿನ ಶಕ್ತಿ ದೇವತೆಗೆ

ಅಮ್ಮಂದಿರ ದಿನದ ಶುಭಾಶಯಗಳು

3.

3.

ಕಷ್ಟವೆಲ್ಲಾ ನನಗಿರಲಿ, ಸುಖವೆಲ್ಲಾ ನಿನಗಿರಲಿ

ಎಂದು ನಮ್ಮನ್ನು ಆಶೀರ್ವದಿಸುವ ಜೀವ ಅಮ್ಮ...

ಅಮ್ಮ.... ನೀನು ನನ್ನ ತಾಯಿಯಾಗಿರುವುದೇ ನನ್ನ ಅದೃಷ್ಟ.

ಅಮ್ಮಂದಿರ ದಿನದ ಶುಭಾಶಯಗಳು

4.

4.

ಒಂದು ಜೀವಕ್ಕಾಗಿ ತನ್ನ ಒಡಲಿನಲ್ಲೇ 9 ತಿಂಗಳು ನೀಡಿ

ಆ ಜೀವಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿ ಇಡುವವಳೇ ಅಮ್ಮಾ...

ಅವರ ಋಣ ತೀರಿಸಲು ಈ ಜನ್ಮ ಸಾಲದು

ಅಮ್ಮಂದಿರ ದಿನದ ಶುಭಾಶಯಗಳು

5.

5.

ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ

ಮಮಕಾರದಲ್ಲಿ ಕಡಲು ನನ್ನ ತಾಯಿ...

ಅಮ್ಮ ನಿನಗೆ ಅಮ್ಮಂದಿರ ದಿನದ ಶುಭಾಶಯಗಳು

6.

6.

ಭೂಮಿಗೆ ಬರಬೇಕಾಂದಾಗ ಒಡಲಿನಲ್ಲಿ ಜಾಗ ಕೊಟ್ಟೆ

ಹಸಿವು ಎಂದು ಅತ್ತಾಗ ಎದೆ ಹಾಲುಣಿಸಿದೆ

ನಿದ್ದೆ ಬಂದಾಗ ಮಡಲಿನಲ್ಲಿ ಮಲಗಿಸಿ ಜೋಗುಳಾ ಹಾಡಿದೆ

ನಾನು ಬೆಳೆಯುವ ಪ್ರತಿ ಹಂತದಲ್ಲೂ ಜೊತೆಯಾದೆ

ನಿನ್ನ ಪಡೆದ ನಾನು ತುಂಬಾನೇ ಅದೃಷ್ಟಶಾಲಿ

ಅಮ್ಮಂದಿರ ದಿನದ ಶುಭಾಶಯಗಳು

7.

7.

ಅಮ್ಮಾ... ನಿನಗೆ ಏಕಿಷ್ಟು ಪ್ರೀತಿ, ಕಾಳಜಿ

ಸದಾ ನಮ್ಮ ಬಗೆಯೇ ನಿನ್ನ ಯೋಚನೆ ಅಲ್ಲವೇ ಎಂದು ಯೋಚಿಸುತ್ತಿದ್ದ ನನಗೆ

ನಾನು ಹೆರಿಗೆಯಾದಾಗ ಉತ್ತರ ಸಿಕ್ಕಿತ್ತು..

ಅಮ್ಮಾ...ನೀನೊಂದು ಅದ್ಭುತ ಶಕ್ತಿಯಮ್ಮಾ

ಅಮ್ಮಂದಿರ ದಿನದ ಶುಭಾಶಯಗಳು

ಶುದ್ಧ ಪ್ರೀತಿ

ಶುದ್ಧ ಪ್ರೀತಿ

"ನಿಮ್ಮ ತಾಯಿಯಲ್ಲಿ ಮಾತ್ರ ಶುದ್ಧ ಪ್ರೀತಿಯನ್ನು ಕಾಣಲು ಸಾಧ್ಯ."

ಹೃದಯ

ಹೃದಯ

"ತಾಯಿ ಮನೆಯ ಹೃದಯ ಬಡಿತ, ಆಕೆ ಇಲ್ಲದೆ ಇದ್ದರೆ ಮನೆಯ ಹೃದಯವೇ ಇಲ್ಲದಂತೆ ಭಾಸವಾಗುತ್ತದೆ."

English summary

Happy Mother's Day Wishes, Greetings, Images, Quotes, Whatsapp and Facebook Status Messages for Your Mom in Kannada

Here we are going to tell you Best Mothers Day Quotes In Kannada. Mother’s Day falls on Sunday, May 10 this year, and if you can’t seem to find the right words to express how much you love yours, we’ve got you covered. Read more.
X