For Quick Alerts
ALLOW NOTIFICATIONS  
For Daily Alerts

ಜುಲೈ 28ಕ್ಕೆ ಗುರುಪುಷ್ಯಾಮೃತ ಯೋಗ: ಮಕ್ಕಳ ವಿದ್ಯಾರಂಭಕ್ಕೆ, ಈ ವಸ್ತುಗಳ ಖರೀದಿಗೆ ತುಂಬಾ ಶ್ರೇಷ್ಠ ದಿನವಿದು

|

ಜುಲೈ 28ಕ್ಕೆ ಗುರುಪುಷ್ಯಾಮೃತ ಯೋಗ ಕೂಡಿ ಬಂದಿದೆ. ಇದು ತುಂಬಾ ಮಹತ್ವವಾದ ಯೋಗವಾಗಿದೆ. 2022ರಲ್ಲಿ 3 ಬಾರಿಯಷ್ಟೇ ಈ ರೀತಿ ಯೋಗ ಕೂಡಿ ಬಂದಿದೆ. ಅದರಲ್ಲೊಂದು ಜುಲೈ 1ಕ್ಕೆ ಕಳೆದಿದೆ. ಮತ್ತೆರಡು ಯೋಗ ಈ ದಿನಗಳಲ್ಲಿ ಬರಲಿದೆ.

ಜುಲೈ 28, 2022, ಗುರುವಾರ
ಶುಭ ಮುಹೂರ್ತ ಜುಲೈ 07:05ರಿಂ ಜುಲೈ 29 ಬೆಳಗ್ಗೆ 05:41ರವರೆಗೆ ಇರಲಿದೆ

ಜುಲೈ 25, 2022 ಗುರುವಾರ
ಶುಭ ಮುಹೂರ್ತ ಬೆಳಗ್ಗೆ 05:55ರಿಂದ ಸಂಜೆ 04: 16ರವರೆಗೆ

ಯಾವುದೇ ಸಾಧನೆಗೆ ತುಂಬಾ ಶ್ರೇಷ್ಠವಾದ ಮುಹೂರ್ತ

ಯಾವುದೇ ಸಾಧನೆಗೆ ತುಂಬಾ ಶ್ರೇಷ್ಠವಾದ ಮುಹೂರ್ತ

ಈ ದಿನಕ್ಕಾಗಿ ಋಷಿ ಮುನಿಗಳು ಕೂಡ ಕಾಯುತ್ತಿದ್ದರಂತೆ, ಯಾವುದಾದರೂ ಸಾಧನೆಗೆ ಮುಂದಾಗುವಾಗ ಈ ಗುರುಪುಷ್ಯಾಮೃತ ಯೋಗದಲ್ಲಿ ಮಾಡಿದರೆ ತುಂಬಾ ಒಳ್ಳೆಯದಾಗುವುದು ಎಂಬ ನಂಬಿಕೆ. ಸಾಧನೆಗೆ ಎಲ್ಲಾ ಶುಭ ಮುಹೂರ್ತಕ್ಕಿಂತ ಇದು ಸಾವಿರ ಪಟ್ಟು ಶುಭ ಮುಹೂರ್ತವಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಮಕ್ಕಳ ಜ್ಞಾನ ಸಂಪಾದನೆಗೆ ತುಂಬಾ ಶುಭ ಮುಹರ್ತ

ಮಕ್ಕಳ ಜ್ಞಾನ ಸಂಪಾದನೆಗೆ ತುಂಬಾ ಶುಭ ಮುಹರ್ತ

ಮಕ್ಕಳ ಜ್ಞಾನ ಸಂಪಾದನೆಗೆ ಈ ಮುಹೂರ್ತ ತುಂಬಾ ಶುಭ ಸಮಯವಾಗಿದೆ. ಮಗುವಿಗೆ ಅಕ್ಷರಾಭ್ಯಾಸ ಮಾಡಿಸುವುದಾದರೆ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಅಪ್ಲಿಕೇಷನ್ ಹಾಕಲು ಹೀಗೆ ಯಾವುದೇ ಸಾಧನೆ ಈ ಗುರುಪುಷ್ಯಾಮೃತ ಯೋಗ ತುಂಬಾ ಮಹತ್ವವಾಗಿದೆ.

28ನೇ ತಾರೀಕು ಸೂರ್ಯೋದಯ ಸಮಯದಲ್ಲಿ ಪುನರ್ವಸು ನಕ್ಷತ್ರ ಇದ್ದರೂ ನಂತರ ಆ ದಿನ ಪುಷ್ಯ ನಕ್ಷತ್ರ ಬಂದಿರುವುದರಿಂದ ಆ ದಿನ ಗುರುಪುಷ್ಯಾಮೃತ ಯೋಗ ಏರ್ಪಟ್ಟಿದೆ.

ಮಕ್ಕಳಿಗೆ ಈ ಮಂತ್ರ ಹೇಳಿ ಕೊಡಿ

ಮಕ್ಕಳಿಗೆ ಈ ಮಂತ್ರ ಹೇಳಿ ಕೊಡಿ

ಮನೆಯ ಎದುರಿನಲ್ಲಿ ತುಪ್ಪದ ದೀಪವನ್ನು ಹಚ್ಚಿ ಇಟ್ಟು ನಿಮ್ಮ ಮಕ್ಕಳಿಂದ ಈ ಒಂದು ಸ್ತೋತ್ರವನ್ನು 11 ಬಾರಿ ನಿಮ್ಮ ಹೇಳಿಸಿ ಹೀಗೆ ಮಾಡುವುದರಿಂದ ಪೂರ್ಣ ಚಂದ್ರನ ಬಲ ಇರುತ್ತದೆ.

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಳಗಿನನ್ದನಃ, ಸ್ಮನ್ದಃ ಕುಮಾರಃ ಸೇನಾನೀ ಸ್ವಾಮೀ ಶಂಕರಸಮ್ಭವಃ, ಗಾಂಗೇಯಸ್ತಾಮ್ರಚೂಡ ಬ್ರಹ್ಮಚಾರೀ ಶಿಖಿಧ್ವಜಃ, ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ, ಶಬ್ದಬ್ರಹ್ಮಸಮುದ್ರ ಸಿದ್ಧಃ ಸಾರಸ್ವತೋ ಗುಹಃ, ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ, ಶರಜನ್ಮಾಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್, ಸರ್ವಾಗಮಪ್ರಣೀತಾ ಚ ವಾಂಛಿತಾರ್ಥಪ್ರದರ್ಶನಃ, ಅಷ್ಟಾವಿಂಶತಿನಾಮಾನಿ ಮದೀಯಾನೀತಿಯಃ ಪಠೇತ್, ಪ್ರಕ್ಯೂಷಂ ಶ್ರದ್ಧೆಯಾ ಯುಕ್ತ ಮೂಕೋ ವಾಚಸ್ಪ ಮಹಾಮನ ಮಯಾತಿ ಮಮ ಜಮಾನನಮ್, ಮಹಾಪ್ರಧಾಮವಾಸ್ತೋತಿ ಮಾತ್ರ ಕಾರ್ಯಾ ವಿಚಾರಣಾ ಇತಿ ಶ್ರೀರುದ್ರಯಾಮಲೇ ಪ್ರಭಾವಿ ವರ್ಧನಾಟ್ಯಂ, ಶ್ರೀಮತ್ಯಾರ್ತಿಕೇಯಸ್ತೋತ್ರಂ ಸಮೂರ್ಣಮ್.

ಈ ಒಂದು ಸ್ತೋತ್ರಗಳನ್ನು ನೀವು ನಿಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದೆ ಆದಲ್ಲಿ ಅವರ ಬುದ್ಧಿಶಕ್ತಿ ಹೆಚ್ಚಾಗುತ್ತದೆ.

ಗುರುಪುಷ್ಯಾಮೃತ ಯೋಗ ದಿನ ಏನು ಮಾಡಬೇಕು?

ಗುರುಪುಷ್ಯಾಮೃತ ಯೋಗ ದಿನ ಏನು ಮಾಡಬೇಕು?

* ಈ ದಿನ ಗಣೇಶ, ವಿಷ್ಣು, ಲಕ್ಷ್ಮಿ, ಕುಬೇರ, ಬೃಹಸ್ಪತಿಯನ್ನು ಪೂಜಿಸಬೇಕು.

* ಈ ದಿನ ಹಳದಿ ಬಟ್ಟೆಯನ್ನು ಧರಿಸಬೇಕು

* ದೇವರಿಗೆ ಪೂಜೆ ಮಾಡುವಾಗ ಹಳದಿ ಹೂಗಳನ್ನು ಅರ್ಪಿಸಿ

* ಹಳದಿ ಹಣ್ಣುಗಳನ್ನು ದೇವರಿಗೆ ಅರ್ಪಿಸಿ (ಬಾಳೆ ಹಣ್ಣು ಮುಂತಾದವು)

* ದೇವರಿಗೆ ನೈವೇದ್ಯವನ್ನು ಅರ್ಪಿಸಿ.

ಗುರುಪುಷ್ಯಾಮೃತ ಯೋಗ ಈ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ

ಗುರುಪುಷ್ಯಾಮೃತ ಯೋಗ ಈ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ

ಮುಹೂರ್ತವಾಗಿದೆ

* ವಾಹನ ಖರೀದಿಸಲು

* ಒಳ್ಳೆಯ ಉದ್ಯೋಗಕ್ಕೆ ಹೋಗಲು

* ಹಣ ಹಾಗೂ ಆರೋಗ್ಯ ಗಳಿಸಲು

* ಯಂತ್ರ ಸಿದ್ಧಿಗೆ

* ಚಿನ್ನ ಖರೀದಿಸಲು

* ಕೆಲಸದಲ್ಲಿ ಉಂಟಾದ ಅಡೆತಡೆ ದೂರಾಗುವುದು

* ಏನಾದರೂ ವಸ್ತುಗಳನ್ನು ಖರೀದಿಲು ಶುಭ ಸಮಯ

* ಈ ದಿನ ಬಿಳಿ ಬಣ್ಣದ ವಸ್ತುಗಳು ಅಂದರೆ ಸಕ್ಕರೆ, ಅಕ್ಕಿ ಇವುಗಳನ್ನು ಖರೀದಿಸಿ.

English summary

Gurupushyamrut Yoga 2022 in July : Date, Timing, Benefits, and Importance in Kannada

Gurupushyamrut Yoga 2022 in July, Here is significance and importance of gurupushyamrut yoga, read on...
X
Desktop Bottom Promotion