For Quick Alerts
ALLOW NOTIFICATIONS  
For Daily Alerts

ಗುರು ಪೂರ್ಣಿಮಾ 2022: ಗುರುಗಳ ಕೃಪೆಗೆ ಪಾತ್ರರಾಗಲು ರಾಶಿಚಕ್ರದ ಪ್ರಕಾರ ಈ ಮಂತ್ರ ಪಠಿಸಿ

|

ಜೀವನಕ್ಕೆ ಗುರಿ ನಿಗದಿಗೊಳಿಸಿಕೊಳ್ಳಲು ಕಾರಣೀಭೂತರಾದ ನಮ್ಮ ಜೀವನದ ಪ್ರತ್ಯಕ್ಷ ದೈವ ಗುರು. ಗುರುಗಳು ನಮಗೆ ಶಿಕ್ಷಣ ನೀಡುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವ ರೂಪಿಸುತ್ತಾರೆ, ಸುಗಮ ಜೀವನಕ್ಕೆ ಅಡಿಪಾಯ ಹಾಕುತ್ತಾರೆ.

ಇಂಥಾ ಪ್ರತ್ಯಕ್ಷ ದೈವ ಗುರುಗಳನ್ನು ಪೂಜಿಸಲು, ಆರಾಧಿಸಲು, ಗೌರವಿಸಿ ನಮನಗಳನ್ನು ಸಲ್ಲಿಸಲು ಹಿಂದೂ ಸಂಪ್ರದಾಯದಲ್ಲಿ ಗುರು ಪೂರ್ಣಿಮಾವನ್ನು ಆಚರಿಸುತ್ತೇವೆ. ಈ ವರ್ಷ ಅಂದರೆ 2022ರಲ್ಲಿ ಜುಲೈ 13ರಂದು ಗುರು ಪೂರ್ಣಿಮಾ ಆಚರಿಸಲಾಗುತ್ತಿದೆ.

ಜ್ಯೋತಿಶಾಸ್ತ್ರದ ಪ್ರಕಾರ ಈ ವರ್ಷದ ಗುರು ಪೂರ್ಣಿಮೆಯಂದು ಯಾವ ರಾಶಿಯವರು ಯಾವ ಮಂತ್ರವನ್ನು ಹೇಳಿದರೆ ನಮಗೆ ಗುರುವಿನ ಆಶೀರ್ವಾದ ಸಿಗುತ್ತದೆ ಹಾಗೂ ಗುರುಗಳಿಗೆ ಯಾವ ಉಡುಗೊರೆ ಅಥವಾ ಯಾವ ಬಣ್ಣದ ವಸ್ತ್ರವನ್ನು ಅರ್ಪಿಸಿದರೆ ನಿಮಗೆ ಶುಭ ಪ್ರಾಪ್ತಿಯಾಗುತ್ತದೆ ಮುಂದೆ ತಿಳಿಸಲಿದ್ದೇವೆ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು "ಅವಯ್ಯ ನಮಃ" ಎಂದು ಪಠಿಸಿದರೆ ಒಳ್ಳೆಯದಾಗುತ್ತದೆ. ನಿಮ್ಮ ಗುರುಗಳಿಗೆ ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು 'ಓಂ ಜೀವಾಯ ನಮಃ'' ಎಂದು ಜಪಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ನಿಮ್ಮ ಶಿಕ್ಷಕರಿಗೆ ಬಿಳಿ ಬಣ್ಣದ ಬಟ್ಟೆಗಳನ್ನು ನೀಡಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು 'ಓಂ ಧೀವರಾಯ ನಮಃ' ಎಂದು ಜಪಿಸಿ, ಹಸಿರು ಬಣ್ಣದ ಬಟ್ಟೆಗಳನ್ನು ನಿಮ್ಮ ಮಾರ್ಗದರ್ಶಕರಿಗೆ ಉಡುಗೊರೆ ನೀಡಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು "ಓಂ ವರಿಷ್ಠಾಯ ನಮಃ" ಎಂದು ಜಪಿಸಿದರೆ ಶುಭ. ಗುರುಗಳಿಗೆ ಕೆನೆ ಬಣ್ಣದ ಬಟ್ಟೆಗಳನ್ನು ಅರ್ಪಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು "ಓಂ ಸ್ವರ್ಣಕಾಯಯ ನಮಃ" ಎಂದು ಜಪಿಸಿ. ಗುಲಾಬಿ ಬಣ್ಣದ ಬಟ್ಟೆಗಳನ್ನು ಗುರುಗಳಿಗೆ ಅರ್ಪಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು "ಓಂ ಹರಾಯ ನಮಃ" ಎಂದು ಜಪಿಸಿ. ಶಿಕ್ಷಕರಿಗೆ ಹಸಿರು ಮತ್ತು ಹಳದಿ ಮಿಶ್ರ ಬಣ್ಣದ ಬಟ್ಟೆಗಳನ್ನು ಉಡುಗೊರೆ ನೀಡಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ''ಓಂ ವಿವಿಕ್ತಾಯ ನಮಃ" ಎಂದು ಜಪಿಸಿದರೆ ಒಳ್ಳೆಯದಾಗಲಿದೆ. ಗುರುಗಳಿಗೆ ಖಾದಿ ಬಟ್ಟೆಗಳನ್ನು ಅರ್ಪಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಗುರುಗಳ ಆಶೀರ್ವಾದಕ್ಕಾಗಿ "ಓಂ ಜೀವಾಯ ನಮಃ" ಎಂದು ಪಠಿಸಿ ಮತ್ತು ನಿಮ್ಮ ಗುರುಗಳಿಗೆ ಧೋತಿಯನ್ನು ಗೌರವ ಪೂರ್ವಕವಾಗಿ ನೀಡಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಿಗೆ "ಓಂ ಜೆಟ್ರೆ ನಮಃ" ಎಂದು ಜಪಿಸಿ, ನಿಮ್ಮ ಗುರುಗಳಿಗೆ ದುಬಾರಿಯಾದರೂ ಚಿನ್ನವನ್ನು ಅರ್ಪಿಸಿದರೆ ನಿಮಗೆ ಶೈಕ್ಷಣಿಕ ಜೀವನ ಚೆನ್ನಾಗಿರಲಿದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು "ಓಂ ಗುಣಿಯೇ ನಮಃ" ಎಂದು ಜಪಿಸಿ. ಪಂಚಧಾತು ಮತ್ತು ಯಾವುದೇ ಬಟ್ಟೆಯನ್ನು ಗುರುಗಳಿಗೆ ಅರ್ಪಿಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು "ಓಂ ಧಿವರಾಯ ನಮಃ" ಎಂದು ಜಪಿಸಿದರೆ ಉತ್ತಮವಾಗಲಿದೆ. ಉಣ್ಣೆಯ ಬಟ್ಟೆಗಳನ್ನು ಶಿಕ್ಷಕರಿಗೆ ಉಡುಗೊರೆ ನೀಡಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರು "ಓಂ ದಯಾಸರಾಯ ನಮಃ" ಎಂದು ಜಪಿಸಿ ಮತ್ತು ನಿಮ್ಮ ಗುರುಗಳಿಗೆ ನೀಲಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ.

English summary

Guru Purnima: Chant these mantras according to your zodiac sign on Guru Purnima

Here we are discussing about Guru Purnima 2021: Chant theese mantras according to your zodiac sign on Guru Purnima. Read more.
X
Desktop Bottom Promotion