For Quick Alerts
ALLOW NOTIFICATIONS  
For Daily Alerts

Guru Purnima 2021: ಗುರು ಪೂರ್ಣಿಮಾ ಯಾವಾಗ? ಈ ದಿನದ ಮಹತ್ವ ಹಾಗೂ ಪೂಜಾ ವಿಧಿಗಳೇನು?

|

ಗುರುವಿಲ್ಲದ ಬದುಕಿಗೆ ಗೊತ್ತು ಗುರಿಯೇ ಇರಲ್ಲ, ಮುಂದೆ ಗುರಿ ಹಿಂದೆ ಗುರು ಇರುವ ವ್ಯಕ್ತಿ ಮಹಾ ಸಾಧಕನಾಗುತ್ತಾನೆ. ಯಾವುದೇ ಕ್ಷೇತ್ರವಿರಲಿ ಒಬ್ಬ ಗುರು ಇದ್ದೇ ಇರುತ್ತಾರೆ, ನಮ್ಮ ಬದುಕಿನಲ್ಲಿ ಅವರಿಗೆ ಮಹತ್ವದ ಸ್ಥಾನವಿರುತ್ತದೆ. ಆ ಗುರುವಿಗೆ ಗೌರವ ಸಮರ್ಪಿಸುವ ದಿನವೇ ಗುರು ಪೂರ್ಣಿಮಾ.

ಹಿಂದೂ ಧರ್ಮದಲ್ಲಿ , ಬೌದ್ಧ ಧರ್ಮದಲ್ಲಿ ಹಾಗೂ ಜೈನಧರ್ಮದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ವಿಶೇಷ ಪೂಜಾವಿಧಿಗಳನ್ನು ಸಲ್ಲಿಸಲಾಗುವುದು. ಗುರು ಪೂರ್ಣಿಮಾ ಎಂಬುವುದು ಗುರು ವ್ಯಾಸರಾಯರನ್ನು ಸ್ಮರಿಸುವ ದಿನವಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ವೇದ ವ್ಯಾಸರು ವೇದಗಳನ್ನು4 ಭಾಗಗಳಾಗಿ ವಿಂಗಡಿಸಿ ಋಗ್ವೇದ,ಯಜುರ್ವೇದ, ಸಾಮವೇದ ಮತ್ತು ಅಥರ್ವೇದ ಎಂದು ಹೆಸರಿಸಿ ಬೋಧಿಸಿದವರು. ವೇದ ವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುವುದು. ಪ್ರತೀವರ್ಷ ಆಷಾಢ ಮಾಸದ ಪೂರ್ಣಿಮೆಯೆಂದು ಗುರು ಪೂರ್ಣಿಮಾ ಆಚರಿಸಲಾಗುವುದು.

ಈ ವರ್ಷ ಗುರು ಪೂರ್ಣಿಮಾ ಆಚರಣೆ ಯಾವಾಗ ಬಂದಿದೆ, ಗುರು ಪೂಜೆ ಮಾಡುವ ವಿಧಿ ವಿಧಾನಗಳೇನು, ಮಹತ್ವವೇನು ಎಂದು ನೋಡೋಣ ಬನ್ನಿ:

ಗುರು ಪೂರ್ಣಿಮಾ 2021

ಗುರು ಪೂರ್ಣಿಮಾ 2021

ಜುಲೈ 24, 2021ರಂದು ಗುರು ಪೂರ್ಣಿಮಾ ಆಚರಿಸಲಾಗುವುದು

ಗುರು ಪೂರ್ಣಿಮಾ ತಿಥಿ ಪ್ರಾರಂಭ ಜುಲೈ 23 ಬೆಳಗ್ಗೆ 10:43ಕ್ಕೆ

ಗುರು ಪೂರ್ಣಿಮಾ ತಿಥಿ ಮುಕ್ತಾಯ: ಜುಲೈ 24 ಬೆಳಗ್ಗೆ 08:06ಕ್ಕೆ

ಪೂಜಾ ವಿಧಿ

ಪೂಜಾ ವಿಧಿ

* ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಗಳನ್ನು ಧರಿಸಬೇಕು.

* ಅದಾದ ಬಳಿಕ ಹಿಂದೂಗಳು ವ್ಯಾಸ ಮಹರ್ಷಿಗಳ ಫೋಟೋಗೆ ಹೂಗಳಿಂದ ಅಲಂಕರಿಸುತ್ತಾರೆ. ಬೌದ್ಧರು ಬುದ್ಧನನ್ನು ಆರಾಧಿಸಿದರೆ, ಜೈನರು ಜೈನ ಮಹರ್ಷಿಳನ್ನು ಆರಾಧಿಸುತ್ತಾರೆ.

* ಪ್ರತಿಯೊಬ್ಬನ ಬದುಕಿನಲ್ಲಿ ತಾಯಿಯೇ ಮೊದಲ ಗುರು, ಆದ್ದರಿಂದ ತಾಯಿಯ ಆಶೀರ್ವಾದ ಪಡೆಯಿರಿ. ಬದುಕಿನ ದಾರಿ ತೋರಿಸುವವರು ತಂದೆ ಅವರ ಆಶೀರ್ವಾದ ಪಡೆಯಿರಿ.

* ಅದಾದ ಬಳಿಕ ನಿಮ್ಮ ಬದುಕಿನ ಗುರುಗಳನ್ನು ಭೇಟಿಯಾಗಬೇಕು. ಅವರನ್ನು ಒಂದು ಕುರ್ಚಿಯಲ್ಲಿ ಕೂರಿಸಿ ಹೂ, ಹಣ್ಣುಗಳನ್ನು ಅರ್ಪಿಸಿ ಅವರ ಪಾದಕ್ಕೆ ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆಯಿರಿ.

* ನಿಮ್ಮ ಹಿರಿಯರು, ಹಿರಿಯ ಸಹೋದರ, ಸಹೋದರಿಯ ಆಶೀರ್ವಾದ ಕೂಡ ಪಡೆಯಿರಿ.

ಕಲಿಕೆ ಪ್ರಾರಂಭಕ್ಕೆ ಸೂಕ್ತವಾದ ದಿನ

ಕಲಿಕೆ ಪ್ರಾರಂಭಕ್ಕೆ ಸೂಕ್ತವಾದ ದಿನ

ಗುರುಗಳಿಂದ ಮಂತ್ರಗಳನ್ನು ವಿದ್ಯೆಗಳನ್ನು ಕಲಿಯಲು ಆರಂಭಿಸಲು ಗುರು ಪೂರ್ಣಿಮಾ ಸೂಕ್ತವಾದ ದಿನವಾಗಿದೆ. ಕೆಲವು ಕಡೆ ಈ ದಿನದಂದು ಧರ್ಮೋಪದೇಶವನ್ನು ನೀಡುತ್ತಾರೆ. ಗೀತ, ನೃತ್ಯ, ಭಾರತೀಯ ಶಾಸ್ತ್ರೀಯ ಪ್ರಕಾರಗಳನ್ನು ಕಲಿಯುತ್ತಿರುವವರಲ್ಲಿ ಈ ಆಚರಣೆ ಪ್ರಾಮುಖ್ಯತೆಯನ್ನು ಪಡೆದಿದೆ.

ಗುರು ಪೂರ್ಣಿಮಾ ಇತಿಹಾಸ ಹಾಗೂ ಮಹತ್ವ

ಗುರು ಪೂರ್ಣಿಮಾ ಇತಿಹಾಸ ಹಾಗೂ ಮಹತ್ವ

* ಬುದ್ಧನು ಜ್ಞಾನೋದಯವಾದ ಬಳಿಕ ಉತ್ತರ ಪ್ರದೇಶದ ಸಾರನಾಥದಲ್ಲಿ ತಮ್ಮ ಮೊದಲ ಧರ್ಮೋಪದೇಶ (ಧರ್ಮಚಕ್ರ ಪ್ರವರ್ತನ ಸೂತ್ರ) ಮಾಡಿದರು. ಇದು ಆಷಾಢ ಪೂರ್ಣಿಮೆಯ ದಿನವಾಗಿತ್ತು.

* ವ್ಯಾಸ ಮಹರ್ಷಿಗಳ ಜನ್ಮದಿನ ಹಾಗೂ ಶಿವನು ಆಷಾಢ ಪೂರ್ಣಿಮೆಯಮದು ಸಪ್ತ ಋಷಿಗಳಿಗೆ ತನ್ನ ಯೋಗ ಜ್ಞಾನವನ್ನು ರವಾನಿಸಿ ಜಗತ್ತಿಗೆ ಬೋಧಿಸಲು ಹೇಳಿದನು ಎಂದು ಹೇಳಲಾಗುವುದು.

* ಜೈನ ಧರ್ಮದಲ್ಲಿ 24 ನೇ ತೀರ್ಥಂಕರರಾದ ಮಹಾವೀರನನ್ನು ಗೌರವಿಸಲು ಗುರು ಪೂರ್ಣಿಮಾ ಆಚರಿಸಲಾಗುವುದು. ಇದನು ತ್ರಿನೋಕ್ ಗುಹಾ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ದಿನ ಮಹಾವೀರನು ತನ್ನ ಮೊದಲ ಅನುಯಾಯಿ ಗೌತಮ್ ಸ್ವಾಮಿಯನ್ನು ಪಡೆದನೆಂದು ಜೈನ ಧರ್ಮದ ಅನುಯಾಯಿಗಳು ನಂಬುತ್ತಾರೆ.

English summary

Guru Purnima 2021: Date, time, Shubh Muhurat, Puja Vidhi and Significance in kannada

Guru Purnima 2021: Date, time, Shubh Muhurat, Puja Vidhi and Significance in kannada, Read on..
X
Desktop Bottom Promotion