For Quick Alerts
ALLOW NOTIFICATIONS  
For Daily Alerts

ಮಹಿಳೆಯರ ದಿನ: ಡೂಡಲ್‌ನಲ್ಲಿ ನೀಡಿದ ಈ ಸಂದೇಶ ಗಮನಿಸಿದ್ದೀರಾ?

|

ಮಾರ್ಚ್ 8, ಈ ದಿನ ಮಹಿಳೆಯರ ಪಾಲಿಗೆ ಬಲು ವಿಶೇಷವಾದ, ಇದು ಅವಳ ದಿನ. ಈ ದಿನಕ್ಕೆ ಗೂಗಲ್‌ ಕೂಡ ಡೂಡಲ್ ಮೂಲಕ ವಿಶೇಷ ನಮನ ಸಲ್ಲಿಸಿದೆ.ಅಲ್ಲದೆ ಮಹಿಳಾ ದಿನದ ಅರ್ಥವನ್ನು ವೀಡಿಯೋ ಮೂಲಕ ಬಹು ಅರ್ಥ ಪೂರ್ಣವಾಗಿ ನೀಡಲಾಗಿದೆ.

Google Doodle

ಮಹಿಳೆ ಬಾಹ್ಯಾಕಾಶ್ಯಕ್ಕೆ ತೆರಳಿ ಸಾಧನೆ ಮಾಡಿದ್ದಾಳೆ, ಅಲ್ಲದೆ ಸಾಹಿತ್ಯ, ಕಾನೂನು, ರಾಜಕೀಯ, ಪೈಲೆಟ್, ಸೈನ್ಯ ಹೀಗೆ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮಾಡಿದ್ದಾಳೆ. ಇವೆಲ್ಲವನ್ನೂ ಆ ವೀಡಿಯೋದಲ್ಲಿ ತೋರಿಸಲಾಗಿದೆ.

ಆದರೆ ಆ ವೀಡಿಯೋದಲ್ಲಿ ಒಂದು ಅಂಶವನ್ನು ನೀವು ಗಮನಿಸಿರಬಹುದು. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ.

ಹೌದು ಒಬ್ಬ ಮಹಿಳೆಗೆ ಮತ್ತೊಂದು ಮಹಿಳೆ ಸ್ಪೂರ್ತಿಯಾಗುತ್ತಾಳೆ. ಒಂದು ಕುಟುಂಬದಲ್ಲಿ ಒಂದು ಹೆಣ್ಣು ಸಾಧನೆಯನ್ನು ಮಾಡಿದರೆ ಆ ಮನೆಯ ಇತರ ಹೆಣ್ಣು ಮಕ್ಕಳಿಗೂ ಆಕೆ ಸ್ಪೂರ್ತಿಯಾಗುತ್ತಾಳೆ.

ಮಹಿಳೆಯ ಸಬಲೀಕರಣದ ಉದ್ದೇಶದಿಂದ 1911ರಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಆಚರಣೆ ಮಾಡಲಾರಂಭಿಸಿ ಶತಕಗಳೇ ಕಳೆದರು ಇಂದೂ ಆಕೆಯ ಮೇಲಾಗುತ್ತಿರುವ ಶೋಷಣೆ ತಪ್ಪಿಲ್ಲ, ಇವೆಲ್ಲಾ ತಪ್ಪಬೇಕೆಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೆಯಾಗಬೇಕು.

ಪ್ರತಿಯೊಬ್ಬ ಮನೆಯಲ್ಲಿ ಹೆಣ್ಣು ಇದ್ದೇ ಇರುತ್ತದೆ. ಅವಳ ಕನಸ್ಸುಗಳನ್ನು ಕಟ್ಟುಪಾಡುಗಳ ಹೆಸರಿನಲ್ಲಿ ಕಟ್ಟಿ ಹಾಕದೇ ಇರೋಣ. ಆಗ ಮಾತ್ರ ಆಕೆಗೆ ತನ್ನ ಕನಸಿನ ಗುರಿ ಮುಟ್ಟಲು ಸಾಧ್ಯವಾಗುವುದು.

English summary

Google Doodle Celebrates Women's Firsts On International Women's Day

The Google doodle on the occasion of International Women’s Day 2021 is celebrating the firsts in women’s history. Read on.
Story first published: Monday, March 8, 2021, 15:57 [IST]
X
Desktop Bottom Promotion