For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ನೇಹಿತರ ದಿನ 2021: ದಿನಾಂಕ, ಇತಿಹಾಸ ಹಾಗೂ ಈ ದಿನದ ಮಹತ್ವವೇನು?

|

ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ. ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷ ಆಗಸ್ಟ್ 1ರಂದು ಈ ದಿನ ಬಂದಿದೆ. ಬಾಂಗ್ಲಾದೇಶ, ಮಲೇಶಿಯಾ ಮತ್ತು ಯುಎಇಯಲ್ಲೂ ಮುಂದಿನ ಭಾನುವಾರ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಸ್ನೇಹಿತರ ದಿನ ಇತಿಹಾಸವನ್ನು ಜಾಲಾಡಿದರೆ ಆಗ ನಮಗೆ 1958ರಲ್ಲಿ ವಿಶ್ವ ಸ್ನೇಹಿತರ ದಿನಕ್ಕೆ ಪ್ರಸ್ತಾವನೆ ಮಾಡಿರುವುದು ತಿಳಿದು ಬರುತ್ತದೆ. ಬರ್ಲಿನ್, ಒಹಿಯೊ ಮೊದಲಾದ ಕಡೆಗಳಲ್ಲಿ ಸ್ನೇಹಿತರ ದಿನವನ್ನು ಏಪ್ರಿಲ್ 8ರಂದು ಆಚರಣೆ ಮಾಡಲಾಗುತ್ತದೆ. ಸ್ನೇಹಿತರ ದಿನಕ್ಕೆ ವಿಶೇಷ ಗೌರವ ಸಲ್ಲಿಸುವ ಅಂಗಾಗಿ 1998ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೊಫಿ ಅನ್ನನ್ ಅವರ ಪತ್ನಿ ನಾನೆ ಅನ್ನನ್ ಅವರು ಸ್ನೇಹಿತರ ದಿನದ ರಾಯಭಾರಿಯಾಗಿ ವಿನ್ನಿ ದ ಪೂವನ್ನು ಹೆಸರಿಸಿದರು.

Friendship Day

ಸ್ನೇಹಿತರ ದಿನವನ್ನು ವಿಶ್ವದೆಲ್ಲೆಡೆ ಯಾವಾಗ ಆಚರಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.

ಅರ್ಜೆಂಟೀನಾ: ಜುಲೈ 20
ಬೊಲಿವಿಯಾ: ಜುಲೈ 23
ಬ್ರೆಜಿಲ್: ಜುಲೈ 20
ಕೊಲಂಬಿಯಾ: ಮಾರ್ಚ್ ತಿಂಗಳ ಎರಡನೇ ಶನಿವಾರ
ಈಕ್ವಡೋರ್: ಜುಲೈ 14
ಈಸ್ಟೊನಿಯಾ: ಜುಲೈ 14
ಫಿನ್ ಲ್ಯಾಂಡ್: ಜುಲೈ 30
ಭಾರತ: ಆಗಸ್ಟ್ ತಿಂಗಳ ಮೊದಲ ಭಾನುವಾರ
ಮಲೇಶಿಯಾ: ಆಗಸ್ಟ್ ತಿಂಗಳ ಮೊದಲ ಭಾನುವಾರ
ಮೆಕ್ಸಿಕೋ: ಜುಲೈ 14
ಪಾಕಿಸ್ತಾನ: ಜುಲೈ 19
ಸ್ಪೇನ್: ಜುಲೈ 20
ಉರುಗ್ವೆ: ಜುಲೈ 20
ಅಮೆರಿಕ: ಫೆಬ್ರವರಿ 15
ವೆನೆಜುವೆಲ್: ಜುಲೈ 14

ಸ್ನೇಹಿತರ ದಿನ ಎಂದರೇನು?

ಈ ದಿನವನ್ನು ವಿಶ್ವದೆಲ್ಲೆಡೆಯಲ್ಲಿ ಸ್ನೇಹಿತರ ದಿನವಾಗಿ ಆಚರಿಸಲಾಗುತ್ತದೆ. ಹೆಚ್ಚಿನ ರಾಷ್ಟ್ರಗಳಲ್ಲಿ ಇದು ಆಚರಿಸಲ್ಪಡುತ್ತದೆ. ವಿವಿಧತೆಯಲ್ಲಿ ಏಕತೆಯೇ ಸ್ನೇಹದ ಸಂಕೇತ. ಇದು ಯಾವುದೇ ಪರಿಸ್ಥಿತಿಯಲ್ಲಿ ಎರಡು ಜೀವಗಳ ನಡುವಿನ ಭಾಂದವ್ಯವೆನ್ನಬಹುದು.

ಆಚರಣೆ ಹಿಂದಿನ ಇತಿಹಾಸವೇನು?

1930ರ ಬಳಿಕ ಸ್ನೇಹಿತರ ದಿನವೆನ್ನುವುದು ಆಚರಣೆಗೆ ಬಂದಿದೆ. ಮೊದಲ ವಿಶ್ವಯುದ್ಧದ ಬಳಿಕ ಶಾಂತಿ ಅಭಿಯಾನ ಮತ್ತು ಜನರು ಪರಸ್ಪರ ಬೆರೆಯುವುದು ಬೇಕಾಗಿತ್ತು. ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ ಜೊಯ್ಸ್ ಹಾಲ್ ಎಂಬವರು ಸ್ನೇಹಿತರ ದಿನ ಆರಂಭಿಸಿದರು. ಆಗಸ್ಟ್ 2ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. 1935ರಲ್ಲಿ ಅಮೆರಿಕಾದಲ್ಲಿ ಸ್ನೇಹಿತರ ದಿನ ಆಚರಣೆಯು ಆರಂಭವಾಯಿತು. ಅಗಸ್ಟ್ ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಬೇಕೆಂದು ಅಮೆರಿಕಾ ಕಾಂಗ್ರೆಸ್ ನಿರ್ಧರಿಸಿತು. ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು. ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು. ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು. 1958ರಲ್ಲಿ ಪರಾಗ್ವೆಯು ತನ್ನದೇ ಆಗಿರುವ ರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲು ಆರಂಭಿಸಿತು. ದಕ್ಷಿಣ ಏಶ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ನಲ್ಲಿ ಇದನ್ನು ಜುಲೈ 20ರಂದು ಆಚರಿಸಲ್ಪಡುವುದು. ಫಿನ್ ಲ್ಯಾಂಡ್ ಮತ್ತು ಇಸ್ಟೊನಿಯಾದಲ್ಲಿ ಸ್ನೇಹಿತರ ದಿನದಂದೇ ಪ್ರೇಮಿಗಳ ದಿನ ಕೂಡ ಆಚರಿಸಲಾಗುತ್ತದೆ.

ಪ್ರತಿಕ್ರಿಯೆ

ಈ ದಿನವನ್ನು ಸ್ನೇಹಿತರ ಮಧ್ಯೆ ಉಡುಗೊರೆ ಹಾಗೂ ಶುಭಾಶಯ ವಿನಿಯಮ ಮಾಡಿಕೊಳ್ಳುವ ಮೂಲಕ ಆಚರಣೆ ಮಾಡಲಾಗುತ್ತದೆ. ಸ್ನೇಹಿತರ ದಿನ ಆಚರಣೆ ಮಾಡಲು ಇವರು ಆ ದಿನವನ್ನು ವಿಶೇಷವಾಗಿ, ಎಲ್ಲಾದರೂ ಒಳ್ಳೆಯ ಜಾಗಕ್ಕೆ ಹೋಗಿ ಆಚರಣೆ ಮಾಡುವರು. ಸ್ನೇಹಿತರು ಪರಸ್ಪರ ಮಣಿಕಟ್ಟಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕೂಡ ಕಟ್ಟಿಕೊಳ್ಳುವರು ಮತ್ತು ಜೀವನದ ಉಳಿದ ಸಮಯದಲ್ಲಿ ನಾವು ಜತೆಯಾಗಿ ಪ್ರಯಾಣಿಸುವ ಎಂದು ಮಾತು ಕೊಡುವರು.

English summary

International Friendship Day 2021 Date, History and Significance in kannada

Friendship Day is celebrated in India on the first Sunday of August. This year, the day will be observed on August 4. Bangladesh, Malaysia and UAE will also celebrate Friendship Day on the coming Sunday. The history of Friendship Day dates back to 1958 when World Friendship Crusade proposed it. On April 27, 2011 the General Assembly of the United Nations declared July 30 as official International Friendship Day. However, India celebrates Friendship Day on the first Sunday of August. In Oberlin, Ohio, Friendship Day is celebrated on April 8 each year.
X
Desktop Bottom Promotion